ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bidadi township: ಬಿಡದಿಯಲ್ಲಿ ರೈತರನ್ನು ಒಕ್ಕಲೆಬ್ಬಿಸಲು ಬಿಜೆಪಿ ಬಿಡಲ್ಲ; ಶೀಘ್ರದಲ್ಲೇ ಹೋರಾಟ ಎಂದ ವಿಜಯೇಂದ್ರ

BY Vijayendra: ಜನವಿರೋಧಿ, ಬಡವರ ವಿರೋಧಿ, ರೈತರ ವಿರೋಧಿ, ಯುವಕರ ವಿರೋಧಿ ದುಷ್ಟ ಕಾಂಗ್ರೆಸ್ ಸರ್ಕಾರವನ್ನು ಮುಂಬರುವ ದಿನಗಳಲ್ಲಿ ಬುಡಸಮೇತ ಕಿತ್ತು ಹಾಕುವ ಕೆಲಸವು ನಮ್ಮೆಲ್ಲ ಬಿಜೆಪಿ ಕಾರ್ಯಕರ್ತರ ಶ್ರಮದಿಂದ ಆಗಲಿದೆ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಬಿಡದಿಯಲ್ಲಿ ರೈತರನ್ನು ಒಕ್ಕಲೆಬ್ಬಿಸಲು ಬಿಜೆಪಿ ಬಿಡಲ್ಲ: ವಿಜಯೇಂದ್ರ

ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (ಸಂಗ್ರಹ ಚಿತ್ರ) -

Profile
Siddalinga Swamy Jun 26, 2026 5:23 PM

ಮಂಗಳೂರು, ಜೂ.26: ರಾಜ್ಯದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಬಿಜೆಪಿ ಹೋರಾಟ ನಡೆಸಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಮುಖವಾಡವನ್ನು ಬಿಚ್ಚಿಡುವ ಕೆಲಸವನ್ನು ನಮ್ಮೆಲ್ಲ ಮುಖಂಡರ, ಕಾರ್ಯಕರ್ತರ ನೇತೃತ್ವದಲ್ಲಿ ಆಗಬೇಕಿದೆ. ಬಿಡದಿ ಟೌನ್ ಶಿಪ್ ಸಂಬಂಧ ರೈತರ ಪರವಾಗಿ ಹೋರಾಟ ಮಾಡಲಾಗುವುದು. ರೈತರನ್ನು ಒಕ್ಕಲೆಬ್ಬಿಸಲು ಬಿಜೆಪಿ ಬಿಡಲ್ಲ. ನಮ್ಮ ಹೋರಾಟದ ಬಗ್ಗೆ ಬೆಂಗಳೂರಿನಲ್ಲಿ ಘೋಷಣೆ ಮಾಡಲಾಗುವುದು ಎಂದು ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡಿದರು. ಪಕ್ಷದ ಸಂಘಟನೆ, ಲಕ್ಷಾಂತರ ಕಾರ್ಯಕರ್ತರ ಶಕ್ತಿಯ ಬಗ್ಗೆ ನನಗೆ ವಿಶ್ವಾಸವಿದೆ. ಜನವಿರೋಧಿ, ಬಡವರ ವಿರೋಧಿ, ರೈತರ ವಿರೋಧಿ, ಯುವಕರ ವಿರೋಧಿ ದುಷ್ಟ ಕಾಂಗ್ರೆಸ್ ಸರ್ಕಾರವನ್ನು ಮುಂಬರುವ ದಿನಗಳಲ್ಲಿ ಬುಡಸಮೇತ ಕಿತ್ತು ಹಾಕುವ ಕೆಲಸವು ನಮ್ಮೆಲ್ಲ ಕಾರ್ಯಕರ್ತರ ಶ್ರಮದಿಂದ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆ ಸಂಬಂಧ ಅನೇಕ ಶಾಸಕರು ದೂರವಾಣಿ ಕರೆ ಮಾಡಿದ್ದಾರೆ. ಹಿಂದಿನ ಸಿದ್ದರಾಮಯ್ಯ ಅವರ ಸರ್ಕಾರ 5 ವರ್ಷ ಕಾಲ ಆಡಳಿತ ನಡೆಸಿತ್ತು. ಆಗ ರಾಜ್ಯದಲ್ಲಿ 18ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಬರ್ಬರ ಹತ್ಯೆ ಆಗಿತ್ತೆಂಬುದನ್ನು ಈಶ್ವರಪ್ಪ ಅವರು ಮರೆತಿರಬಹುದು ಎಂದು ತಿಳಿಸಿದರು. ಸಾವಿರಾರು ಕಾರ್ಯಕರ್ತರ ಮೇಲೆ, ಹಿಂದೂ ಕಾರ್ಯಕರ್ತರ ವಿರುದ್ಧ ಮೊಕದ್ದಮೆ ಹಾಕಿ ಅವರನ್ನು ಕುಗ್ಗಿಸುವ ಷಡ್ಯಂತ್ರವೂ ಅಂದಿನ ಕಾಂಗ್ರೆಸ್ ಸರ್ಕಾರದಲ್ಲಿ ನಡೆದಿತ್ತು ಎಂದು ಆರೋಪಿಸಿದರು.

ಅಂಥ ಸಂದರ್ಭದಲ್ಲಿ ಆ 17 ಶಾಸಕರು ನಮ್ಮ ಜತೆ ಕೈಜೋಡಿಸಿದ್ದರಿಂದ ಒಳ್ಳೆಯ ಆಡಳಿತವನ್ನು ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ನೀಡಲು ಸಾಧ್ಯವಾಗಿದೆ. ನೂರಾರು- ಸಾವಿರಾರು ಕಾರ್ಯಕರ್ತರಿಗೆ ವಿವಿಧ ನಿಗಮಗಳಲ್ಲಿ ಅವಕಾಶ ಲಭಿಸಿದೆ ಎಂದು ವಿವರಿಸಿದರು. ಈಶ್ವರಪ್ಪ ಅವರು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. ಏನು ಕೆಲಸ ಮಾಡಿದರೆಂದು ಚರ್ಚಿಸಲು ಹೋಗುವುದಿಲ್ಲ. ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡರು.; ಅವೆಲ್ಲ ಪ್ರಸ್ತುತವಲ್ಲ ಎಂದರು. ಎಂಜಾಯ್ ಮಾಡಿದ್ದನ್ನು ಮರೆತರೆಂದು ಕಾಣುತ್ತದೆ ಎಂದು ಟೀಕಿಸಿದರು.

ಅಡ್ಡ ಮತದಾನ ಮಾಡಿ ಪಕ್ಷಕ್ಕೆ ದ್ರೋಹ ಮಾಡಿದವರ ಬಗ್ಗೆ ಪಕ್ಷದ ವರಿಷ್ಠರು ಗಮನಿಸುತ್ತಿದ್ದಾರೆ. ಸತ್ಯ ಇಂದಲ್ಲ ನಾಳೆ ಹೊರಕ್ಕೆ ಬರಲಿದೆ. ಅಡ್ಡ ಮತದಾನದ ಚರ್ಚೆಗೆ ಇವತ್ತಿಗೆ ಇತಿಶ್ರೀ ಹಾಡೋಣ ಎಂದು ಹೇಳಿದರು. ರಾಜ್ಯದಾದ್ಯಂತ ಪ್ರವಾಸ ಮಾಡಿ ಸಂಘಟನೆ ಬಲಪಡಿಸಲಾಗುವುದು. ರಾಜ್ಯದ ಮುಖ್ಯಮಂತ್ರಿಗಳು ಎಷ್ಟೇ ಬಲಿಷ್ಠವಾಗಿದ್ದರೂ ಹೆದರಲ್ಲ. ಸಿಎಂ ಆರ್ಭಟ ಏನೇ ಇರಲಿ ಮುಂದಿನ ಬಾರಿ ನಮ್ಮ ಪಕ್ಷವೇ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಒಳ್ಳೆಯ ಆಡಳಿತ ಕೊಡುತ್ತೇವೆ ಎಂಬ ವಿಶ್ವಾಸ ಇದೆ. ಮುಂದಿನ ಎರಡು ವರ್ಷ ಸಂಘಟನೆಗೆ ಶಕ್ತಿ ತುಂಬುತ್ತೇನೆ ಎಂದರು.

ಅಡ್ಡ ಮತದಾನ, ಸತ್ಯ ತಿಳಿಯಲಿದೆ‌

ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿರುವ ಅಡ್ಡ ಮತದಾನದ ಬಗ್ಗೆ ಗೊತ್ತಾಗಲಿದೆ. ಗೌಪ್ಯ ಮತದಾನ ತಿಳಿಯುವುದಿಲ್ಲ ಎಂದು ನಮ್ಮ ಶಾಸಕರು ಬಯಸಿದರೆ ಸುಳ್ಳು. ಎಲ್ಲಾ ಮಾಹಿತಿಯನ್ನು ಕೇಂದ್ರದ ವರಿಷ್ಠರಿಗೆ ತಿಳಿಸಿದ್ದೇನೆ. ಪಕ್ಷಕ್ಕೆ ಯಾರೇ ದ್ರೋಹ ಬಗೆದಿದ್ದರೂ ಬಿಡುವುದಿಲ್ಲ. ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿ ಎಲ್ಲಾ ಮಾಹಿತಿ ನೀಡಿದ್ದೇನೆ. ಎಸ್.ಟಿ ಸೋಮಶೇಖರ್ ಅವರು ನಮ್ಮ ಪಕ್ಷದ ಮೂವರು ಶಾಸಕರ ಜತೆ ಸಂಪರ್ಕ ಮಾಹಿತಿ ಇದೆ. ಯಾರನ್ನೂ ರಕ್ಷಿಸುವ ಮಾತೇ ಇಲ್ಲ. ಸತ್ಯ ಏನು ಎಂದು ಮುಂದಿನ ದಿನಗಳಲ್ಲಿ ತಿಳಿಯಲಿದೆ ಎಂದರು.

ಗೃಹಲಕ್ಷ್ಮಿ ಅಕ್ರಮ

ಗೃಹಲಕ್ಷ್ಮಿ ಹಣದಲ್ಲಿ ಅಕ್ರಮ ನಡೆದಿದೆ ಎಂದು ಸಿಎಜಿ ವರದಿ ಬಂದಿದೆ. ರಾಜ್ಯಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದವರೆಗೆ ಗ್ಯಾರಂಟಿ ಅನುಷ್ಠಾನ ಸಮಿತಿಗಳು ಇವೆ. ಸಮಿತಿಗಾಗಿ ಕೋಟಿಗಟ್ಟಲೆ ಜನರ ಹಣವನ್ನು ಖರ್ಚು ಮಾಡಲಾಗುತ್ತಿದೆ. ಇಷ್ಟೆಲ್ಲ ಅಕ್ರಮ ನಡೆಯುತ್ತಿದ್ದರೂ ಸಮಿತಿಗಳು ಏನು ಮಾಡುತ್ತಿದ್ದವು. ಗ್ಯಾರಂಟಿ ಅಧ್ಯಕ್ಷರನ್ನು ಮನೆಗೆ ಕಳುಹಿಸಿ, ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಿ ಎಂದರು.

ಕಾಂಗ್ರೆಸ್ ಸರ್ಕಾರದ ಕೈಗೊಂಬೆಯಾದ ರಾಜ್ಯ ಚುನಾವಣಾ ಆಯೋಗ: ಛಲವಾದಿ ನಾರಾಯಣಸ್ವಾಮಿ ಆರೋಪ

ಎಸ್‍ಐಆರ್ ಅಪಪ್ರಚಾರ

ಎಸ್‍ಐಆರ್ ಸಂಬಂಧ ಕಾಂಗ್ರೆಸ್ ಅಪಪ್ರಚಾರ ಮಾಡ್ತಾ ಇದೆ. ಎಸ್‍ಐಆರ್ ಕುರಿತು ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಅರಿವು ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ. ಕಾರ್ಯಕರ್ತರಿಗೆ ಜವಾಬ್ದಾರಿ ನೀಡಿದ್ದೇವೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.