ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karnataka Winter Session: ಹೊಸ ಕೈಗಾರಿಕಾ ನೀತಿಯಿಂದ ರಾಜ್ಯದಲ್ಲಿ 93,925 ಉದ್ಯೋಗ ಸೃಷ್ಟಿ: ಎಂ.ಬಿ.ಪಾಟೀಲ್

MB Patil: ಹೊಸ ಕೈಗಾರಿಕಾ ನೀತಿ 2025–2030ರ ಜಾರಿಗೆ ತಂದ ನಂತರ 93 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ 5,50,805 ಕೋಟಿ ಬಂಡವಾಳ ಹೂಡಿಕೆ ಮತ್ತು 8,76,233 ಉದ್ಯೋಗಾವಕಾಶಗಳ ನಿರೀಕ್ಷೆ ಇದೆ ಎಂದು ವಿಧಾನಪರಿಷತ್‌ನಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಮಾಹಿತಿ ನೀಡಿದ್ದಾರೆ.

ಹೊಸ ಕೈಗಾರಿಕಾ ನೀತಿಯಿಂದ ರಾಜ್ಯದಲ್ಲಿ 93,925 ಉದ್ಯೋಗ ಸೃಷ್ಟಿ: ಎಂಬಿಪಿ

ಸಚಿವ ಎಂ.ಬಿ. ಪಾಟೀಲ್‌ (ಸಂಗ್ರಹ ಚಿತ್ರ) -

Profile
Siddalinga Swamy Dec 10, 2025 6:35 PM

ಬೆಳಗಾವಿ, ಡಿ.10: ಹೊಸ ಕೈಗಾರಿಕಾ ನೀತಿಯಿಂದ ರಾಜ್ಯದಲ್ಲಿ 93,925 ಉದ್ಯೋಗ ಸೃಷ್ಟಿಯಾಗಿದೆ. ಕಳೆದ ಎರಡೂವರೆ ವರ್ಷಗಳಲ್ಲಿ 1,91,454 ಕೋಟಿ ರೂ. ವಿದೇಶಿ ಬಂಡವಾಳ ಹೂಡಿಕೆಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ (MB Patil) ತಿಳಿಸಿದರು. ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ಮೂರು ವರ್ಷಗಳಲ್ಲಿ (2022-23 ರಿಂದ 2025 ಅಕ್ಟೋಬರ್ ವರೆಗೆ) 1886 ಯೋಜನೆಗಳಿಂದ 6,92,545 ಉದ್ಯೋಗಾವಕಾಶಗಳನ್ನು ನಿರೀಕ್ಷಿಸಲಾಗಿದೆ. ಇವುಗಳಲ್ಲಿ 67 ಯೋಜನೆಗಳು ಅನುಷ್ಠಾನಗೊಂಡಿದ್ದು, 93,925 ಉದ್ಯೋಗ ಸೃಜನೆಯಾಗಿದೆ ಎಂದು ಉತ್ತರಿಸಿದರು.

ಹೊಸ ಕೈಗಾರಿಕಾ ನೀತಿ 2025–2030ರ ಜಾರಿಗೆ ತಂದ ನಂತರ 93 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ₹5,50,805 ಕೋಟಿ ಬಂಡವಾಳ ಹೂಡಿಕೆ ಮತ್ತು 8,76,233 ಉದ್ಯೋಗಾವಕಾಶಗಳ ನಿರೀಕ್ಷೆ ಇದೆ. 2025–30 ಕೈಗಾರಿಕಾ ನೀತಿಯು, ರಾಜ್ಯದ ಸಮಗ್ರ ಅಭಿವೃದ್ಧಿಯೊಂದಿಗೆ ಕೈಗಾರಿಕಾ ವಿಕಾಸದ ಯೋಜನೆಗಳನ್ನು ರೂಪಿಸಲಾಗಿದೆ. ಬೆಂಗಳೂರಿನಿಂದ ಹೊರಗಡೆ, ಕೈಗಾರಿಕಾ ಹಿಂದುಳಿದ ಪ್ರದೇಶವನ್ನು ಉತ್ತೇಜಿಸುವ ಗುರಿ ಹೊಂದಿದೆ ಎಂದು ಹೇಳಿದರು.

ರಾಜ್ಯದ ಎಲ್ಲಾ ಜಿಲ್ಲಾ ಪ್ರದೇಶಗಳಿಗೂ ಗಣನೀಯ ಪ್ರಮಾಣದಲ್ಲಿ ಕೈಗಾರಿಕೆಗಳ ವಿಸ್ತರಣೆ ಮಾಡುವ ಗುರಿ ಹೊಂದಲಾಗಿದೆ. ಹಿಂದುಳಿದ ತಾಲೂಕುಗಳಲ್ಲಿ ಹೂಡಿಕೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮೂರು ವಲಯಗಳನ್ನಾಗಿ ವರ್ಗಿಕರಿಸಿದೆ. ಕೈಗಾರಿಕೆಯಲ್ಲಿ ಹಿಂದುಳಿದ ಜಿಲ್ಲೆ ಅಥವಾ ತಾಲೂಕುಗಳನ್ನು ವಲಯ-1 ಮತ್ತು ವಲಯ-2ರಲ್ಲಿ ಹಾಗೂ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು ವಲಯ-3ರಲ್ಲಿ ವರ್ಗೀಕರಿಸಲಾಗಿದೆ ಎಂದರು.

ಕೈಗಾರಿಕಾ ನೀತಿ 2025-30ರ ಅಡಿಯಲ್ಲಿ ಪ್ರೋತ್ಸಾಹ ಮತ್ತು ರಿಯಾಯಿತಿ ಪಡೆಯುವ ಕೈಗಾರಿಕೆಗಳು ಒಟ್ಟು ಕನಿಷ್ಠ 70% ಉದ್ಯೋಗಾವಕಾಶ ಹಾಗೂ ಗ್ರೂಪ್ ಡಿ ಉದ್ಯೋಗಗಳನ್ನು 100% ಕನ್ನಡಿಗರಿಗೆ ನೀಡಬೇಕೆಂದು ಷರತ್ತು ವಿಧಿಸಲಾಗುತ್ತಿದೆ.

2018–19ರಿಂದ 2022–23ರವರೆಗೆ 1878 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇವುಗಳಿಂದ 456841.90 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆ ಮತ್ತು 800482 ಉದ್ಯೋಗಾವಕಾಶಗಳನ್ನು ನಿರೀಕ್ಷಿಸಲಾಗಿದೆ. ಇವುಗಳ ಪೈಕಿ 260 ಯೋಜನೆಗಳು ಅನುಷ್ಠಾನಗೊಂಡಿದ್ದು, ಇವುಗಳಿಂದ 98662.7 ಕೋಟಿ ಮೊತ್ತದ ಬಂಡವಾಳ ಹೂಡಿಕೆಯಾಗಿದೆ. 1,97,208 ಉದ್ಯೋಗ ಸೃಜನೆಯಾಗಿದೆ ಎಂದು ತಿಳಿಸಿದರು.‌

ದ್ವೇಷ ಭಾಷಣ ಮಾಡಿದ್ರೆ ಗರಿಷ್ಠ 10 ವರ್ಷ ಜೈಲು, 1 ಲಕ್ಷ ದಂಡ

ಕಳೆದ ಎರಡೂವರು ವರ್ಷಗಳಲ್ಲಿ 1,91,454 ಕೋಟಿ ರೂ. ವಿದೇಶಿ ಬಂಡವಾಳ ಹೂಡಿಕೆಯಾಗಿದೆ. 2023–24ರಲ್ಲಿ 54,427 ಕೋಟಿ ರೂ., 2024–25ರಲ್ಲಿ 56,030 ಕೋಟಿ ರೂ., 2025–26 (ಏಪ್ರಿಲ್–ಸೆಪ್ಟೆಂಬರ್) 80,997 ಕೋಟಿ ರೂ. ವಿದೇಶಿ ಬಂಡವಾಳ ಹೂಡಿಕೆಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಉತ್ತರಿಸಿದ್ದಾರೆ.