ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pralhad Joshi: ರಾಜ್ಯ ಕಾಂಗ್ರೆಸ್‌ ಸರ್ಕಾರ ʼಭೀಮ ಹೆಜ್ಜೆʼ ಸಂಭ್ರಮ ಆಚರಿಸದೆ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ಗೆ ಅವಮಾನಿಸಿದೆ: ಜೋಶಿ ಆರೋಪ

Pralhad Joshi: ಮಹಾತ್ಮ ಗಾಂಧಿ ಅವರು ಬೆಳಗಾವಿಗೆ ಬಂದು ಹೋದ ಕಾರಣಕ್ಕೆ ʼನೂರು ವರ್ಷದ ಸಂಭ್ರಮʼ ಎಂಬ ನೆಪದಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್‌ ಪಕ್ಷ ತನ್ನ ಅಧಿವೇಶನ ನಡೆಸಿಕೊಂಡಿತು. ಆದರೆ, ಅದೇ ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಸಂವಿಧಾನ ಶಿಲ್ಪಿ, ದಲಿತ ನಾಯಕ ಡಾ.ಅಂಬೇಡ್ಕರ್‌ ಅವರು ಬಂದು ಹೋದ ಸವಿ ನೆನಪಿಗೆ ʼಭೀಮ ಹೆಜ್ಜೆʼ ಶತಮಾನದ ಸಂಭ್ರಮ ನಡೆಸಲು ಮುಂದಾಗಲಿಲ್ಲ ಏಕೆ? ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಪ್ರಶ್ನಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ

ʼಭೀಮ ಹೆಜ್ಜೆʼ ಸಂಭ್ರಮ ಆಚರಿಸದೆ ಡಾ.ಅಂಬೇಡ್ಕರ್‌ಗೆ ಅವಮಾನ: ಜೋಶಿ ಆರೋಪ

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ.

Profile Siddalinga Swamy Apr 11, 2025 2:05 PM

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ʼಭೀಮ ಹೆಜ್ಜೆʼ ಶತಮಾನ ಸಂಭ್ರಮ ಕಾರ್ಯಕ್ರಮ ಆಚರಿಸದೆ ಅವಮಾನಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಗಂಭೀರ ಆರೋಪ ಮಾಡಿದರು. ಬೆಂಗಳೂರಿನಲ್ಲಿ ಇಂದು ʼಭೀಮ ಹೆಜ್ಜೆʼ ಶತಮಾನ ಸಂಭ್ರಮ ನಿಮಿತ್ತ ನಿಪ್ಪಾಣಿವರೆಗೆ ಏರ್ಪಡಿಸಿದ್ದ ಬೈಕ್‌ ಜಾಥಾಕ್ಕೆ ಚಾಲನೆ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಶಾಸಕಿ ಶಶಿಕಲಾ ಜೊಲ್ಲೆ ಅವರು ಸರ್ಕಾರದ ಗಮನ ಸೆಳೆದರೂ ರಾಜ್ಯ ಸರ್ಕಾರ ʼಭೀಮ ಹೆಜ್ಜೆʼ ಶತಮಾನ ಸಂಭ್ರಮ ಆಚರಣೆಗೆ ಅನಾದಾರ ತೋರಿದೆ. ಅಂಬೇಡ್ಕರ್‌ ಮತ್ತು ದಲಿತರ ಮೇಲೆ ಕಾಂಗ್ರೆಸ್ಸಿಗರಿಗೆ ನಿಜವಾದ ಗೌರವವೇ ಇಲ್ಲ. ಮೊನ್ನೆ ಕಾಂಗ್ರೆಸ್‌ ಸಮಾವೇಶದಲ್ಲಿ ದಲಿತ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೇಗೆ ನಡೆಸಿಕೊಂಡಿದೆ ಎಂಬುದನ್ನು ದೇಶದ ಜನ ಗಮನಿಸಿದ್ದಾರೆ ಎಂದು ಚಾಟಿ ಬೀಸಿದರು.

ಮಹಾತ್ಮ ಗಾಂಧಿ ಅವರು ಬೆಳಗಾವಿಗೆ ಬಂದು ಹೋದ ಕಾರಣಕ್ಕೆ ʼನೂರು ವರ್ಷದ ಸಂಭ್ರಮʼ ಎಂಬ ನೆಪದಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್‌ ಪಕ್ಷ ತನ್ನ ಅಧಿವೇಶನ ನಡೆಸಿಕೊಂಡಿತು. ಆದರೆ, ಅದೇ ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಸಂವಿಧಾನ ಶಿಲ್ಪಿ, ದಲಿತ ನಾಯಕ ಡಾ.ಅಂಬೇಡ್ಕರ್‌ ಅವರು ಬಂದು ಹೋದ ಸವಿ ನೆನಪಿಗೆ ʼಭೀಮ ಹೆಜ್ಜೆʼ ಶತಮಾನದ ಸಂಭ್ರಮ ನಡೆಸಲು ಮುಂದಾಗಲಿಲ್ಲ ಏಕೆ? ಎಂದು ಸಚಿವ ಪ್ರಲ್ಹಾದ್‌ ಜೋಶಿ ಪ್ರಶ್ನಿಸಿದರು.‌

ಈ ಸುದ್ದಿಯನ್ನೂ ಓದಿ | NGEL Recruitment 2025: ಎಂಜಿನಿಯರಿಂಗ್‌ ಪದವೀಧರರಿಗೆ ಗುಡ್‌ನ್ಯೂಸ್‌; NGELನಲ್ಲಿದೆ 182 ಹುದ್ದೆ

ಮಹಾತ್ಮ ಗಾಂಧಿ ಶತಮಾನ ಸಂಭ್ರಮ ಸಮಾರಂಭವನ್ನೂ ಸರ್ಕಾರ ಅಚ್ಚುಕಟ್ಟಾಗಿ ಆಚರಿಸಲಿಲ್ಲ. ಬದಲಾಗಿ ಕಾಂಗ್ರೆಸ್‌ ಪಕ್ಷದ್ದೊಂದು ಅಧಿವೇಶನದ ರೀತಿ ನಡೆಸಿತು. ಈಗ ನೋಡಿದರೆ ಅದೇ ನಿಪ್ಪಾಣಿಗೆ ಅಂಬೇಡ್ಕರ್‌ ಬಂದು ಹೋದ ಸವಿನೆನಪಿಗೆ ʼಭೀಮ ಹೆಜ್ಜೆʼ ಶತಮಾನ ಸಂಭ್ರಮ ಸಮಾರಂಭ ಆಯೋಜಿಸದೆ ಇಡೀ ದಲಿತ ಸಮುದಾಯವನ್ನೇ ಅವಮಾನಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದರು.