ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gold smuggling case: ಸದನದಲ್ಲಿ ಸದ್ದು ಮಾಡಿದ ರನ್ಯಾ ರಾವ್‌ ಪ್ರಕರಣ; ಇಬ್ಬರು ಪ್ರಭಾವಿ ಸಚಿವರ ನಂಟು ಆರೋಪ

Gold smuggling case: ಶೂನ್ಯ ವೇಳೆಯಲ್ಲಿ ಬಿಜೆಪಿ ಶಾಸಕ ಸುನೀಲ್ ಕುಮಾರ್ ಈ ಪ್ರಕರಣದ ಬಗ್ಗೆ ಪ್ರಸ್ತಾಪ ಮಾಡಿ, ರಾಜ್ಯ ಸರ್ಕಾರ ಯಾರನ್ನೋ ರಕ್ಷಣೆ ಮಾಡುವ ಪ್ರಯತ್ನ ನಡೆಸುತ್ತಿದೆ. ಇದೊಂದು ಅಂತಾರಾಷ್ಟ್ರೀಯ ಚಿನ್ನ ಸಾಗಾಟ ಪ್ರಕರಣವಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ಚಿನ್ನ ಸಾಗಾಟ ಆಗಿದ್ದು ಗೃಹ ಸಚಿವರಿಗೆ ಗೊತ್ತಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಸದನದಲ್ಲಿ ಸದ್ದು ಮಾಡಿದ ರನ್ಯಾ ರಾವ್‌ ಪ್ರಕರಣ

Profile Prabhakara R Mar 10, 2025 3:47 PM

ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ (Gold smuggling case) ಬಂಧನವಾಗಿರುವ ನಟಿ ರನ್ಯಾ ರಾವ್‌ (actress Ranya Rao) ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಕೋರ್ಟ್‌ಗೆ ಹಾಜರುಪಡಿಸಲು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಈ ನಡುವೆ ಚಿತ್ರನಟಿ ರನ್ಯಾ ರಾವ್ ಪ್ರಕರಣ ಸದನದಲ್ಲಿ ಸದ್ದು ಮಾಡಿದ್ದು, ಕೇಸ್‌ನಲ್ಲಿ ಇಬ್ಬರು ಪ್ರಭಾವಿ ಸಚಿವರು ಕೈವಾಡವಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದೆ. ಇಷ್ಟೊಂದು ಪ್ರಮಾಣದಲ್ಲಿ ಚಿನ್ನ ಸಾಗಾಟ ಆಗಿದ್ದು ಗೃಹ ಸಚಿವರಿಗೆ ಗೊತ್ತಿಲ್ಲ ಎಂದರೆ ಹೇಗೆ? ಇದರ ಹಿಂದೆ ಯಾರನ್ನು ರಕ್ಷಣೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಪ್ರಶ್ನಿಸಿದ್ದಾರೆ.

ಶೂನ್ಯ ವೇಳೆಯಲ್ಲಿ ಬಿಜೆಪಿ ಶಾಸಕ ಸುನೀಲ್ ಕುಮಾರ್ ಈ ಪ್ರಕರಣದ ಬಗ್ಗೆ ಪ್ರಸ್ತಾಪ ಮಾಡಿ, ರಾಜ್ಯ ಸರ್ಕಾರ ಯಾರನ್ನೋ ರಕ್ಷಣೆ ಮಾಡುವ ಪ್ರಯತ್ನ ನಡೆಸುತ್ತಿದೆ. ಇದೊಂದು ಅಂತಾರಾಷ್ಟ್ರೀಯ ಚಿನ್ನ ಸಾಗಾಟ ಪ್ರಕರಣವಾಗಿದೆ. 14 ಕೆಜಿ ಚಿನ್ನ ವಶಕ್ಕೆ ಪಡೆಯಲಾಗಿದೆ. ಇದರ ಹಿಂದೆ ದೊಡ್ಡ ಮಾಫಿಯಾ ಇದೆ, ಹವಾಲ ದಂಧೆ ಇದೆ ಎಂಬ ಅನುಮಾನ ಇದೆ. ಬೇರೆ ಬೇರೆ ರಾಜ್ಯಗಳಿಗೆ ಅಕ್ರಮ ಚಿನ್ನ ಸಾಗಾಟದಲ್ಲಿ ಬೆಂಗಳೂರು ಕೇಂದ್ರ ಆಗಿದ್ಯಾ ಎಂದು ಆತಂಕ ವ್ಯಕ್ತಪಡಿಸಿದರು.

ರನ್ಯಾ ರಾವ್‌ ಕೇಸ್‌ ಬಗ್ಗೆ ಸುನೀಲ್‌ ಕುಮಾರ್‌ ಮಾತನಾಡಿದ ವಿಡಿಯೊ



ಈ ಪ್ರಕರಣದಲ್ಲಿ ಸಚಿವರ ಕೈವಾಡ ಇದೆ ಎಂಬ ಆರೋಪ ಇದೆ. ಪ್ರಭಾವಿ ವ್ಯಕ್ತಿಗಳು ಯಾರು, ಅಧಿಕಾರಿಗಳು ಯಾರು? ಸಚಿವರು ಯಾರು ಎಂಬುದು ಬಹಿರಂಗವಾಗಲಿ ಎಂದು ಆಗ್ರಹಿಸಿದ ಅವರು, ಇಂತಹ ಮಾಫಿಯಾ ಮಟ್ಟ ಹಾಕಬೇಕು. ಯಾರು ಪ್ರಭಾವಿಗಳಿದ್ದಾರೆ ಎಂಬುದು ಬಹಿರಂಗವಾಗಲಿ. ಇದಕ್ಕಾಗಿ ಸರ್ಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಲಿ ಎಂದು ಸುನೀಲ್ ಕುಮಾರ್ ಆಗ್ರಹಿಸಿದರು.

ಹಿರಿಯ ಅಧಿಕಾರಿಗೆ ಪೊಲೀಸರು ಸಹಾಯಕ್ಕೆ ಬರುವುದು ಸರಿ.‌ ಆದರೆ ಪೊಲೀಸ್ ಅಧಿಕಾರಿಯ ಪುತ್ರಿಗೆ ಪೊಲೀಸರು ಹೇಗೆ ಪ್ರೊಟೋಕಾಲ್ ಕೊಡುತ್ತಾರೆ. ಪೊಲೀಸ್ ಜೀಪ್ ಹೇಗೆ ಬಳಸುತ್ತಾರೆ ಎಂದು ಪ್ರಶ್ನಿಸಿರುವ ಅವರು, ಇಷ್ಟೊಂದು ಪ್ರಮಾಣದಲ್ಲಿ ಚಿನ್ನ ಸಾಗಾಟ ಆಗಿದ್ದು ಗೃಹ ಸಚಿವರಿಗೆ ಗೊತ್ತಿಲ್ಲ ಎಂದರೆ ಹೇಗೆ? ಇದರ ಹಿಂದೆ ಯಾರನ್ನು ರಕ್ಷಣೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಕೇಳಿದ್ದಾರೆ. ಇದಕ್ಕೆ ಧ್ವನಿ ಗೂಡಿಸಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ನಮ್ಮ ಪೊಲೀಸರು ರಕ್ಷಣೆ ಹೇಗೆ ಕೊಟ್ಟರು? ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಗೃಹ ಸಚಿವ ಪರಮೇಶ್ವರ್‌ ಪ್ರತಿಕ್ರಿಯಿಸಿದ ವಿಡಿಯೊ



ಗೃಹ ಸಚಿವರ ಉತ್ತರ ಏನು?

ಸುನೀಲ್ ಕುಮಾರ್ ಆರೋಪಕ್ಕೆ ಗೃಹ ಸಚಿವ ಪರಮೇಶ್ವರ್ ಉತ್ತರ ನೀಡಿ, ವಿಮಾನ ನಿಲ್ದಾಣದಲ್ಲಿ ನಡೆಯುವ ಆಡಳಿತ ನಮ್ಮ ವ್ಯಾಪ್ತಿಗೆ ಬರಲ್ಲ. ರಾಜ್ಯ ಸರ್ಕಾರಕ್ಕೆ ಯಾವುದೇ ಮಾಹಿತಿ ಇಲ್ಲ. ಚಿನ್ನ ಅಕ್ರಮ ಸಾಗಾಟ ಆಗಿಲ್ಲ ಎಂದು ನಾವು ಹೇಳಲ್ಲ. ಪತ್ರಿಕೆಯ ಮಾಹಿತಿಯಷ್ಟೇ ಮಾತ್ರ ನಮಗೆ ಗೊತ್ತಿದೆ ಎಂದರು.

ಈ ಸುದ್ದಿಯನ್ನೂ ಓದಿ | Ranya Rao: ನಟಿ ರನ್ಯಾ ರಾವ್ ಕೇಸ್‌ನಲ್ಲಿ ಉದ್ಯಮಿಯ ಪುತ್ರನೂ ಆರೆಸ್ಟ್‌

ಸಿಬಿಐ ಕೊಟ್ಟಿರುವುದು ನಮಗೆ ಗೊತ್ತಿಲ್ಲ. ರನ್ಯಾ ರಾವ್ ತಂದೆ ಡಿಜಿಪಿ ಆಗಿದ್ದಾರೆ. ಅವರು ಸಹಾಯ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ಆಗಲಿ. ಸಚಿವರ ಪಾತ್ರದ ಬಗ್ಗೆ ಇರುವ ಆರೋಪಗಳ ಬಗ್ಗೆ ಸಿಬಿಐ ತನಿಖೆ ಮಾಡಲಿ ಎಂದಿದ್ದಾರೆ.