ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಶಬರಿಮಲೆ ಚಿನ್ನ ಕದ್ದ ಅಪರಾಧಿಗಳನ್ನು ಜೈಲಿಗೆ ಅಟ್ಟುತ್ತೇವೆ; ಕೇರಳದ ಜನತೆಗೆ ಪ್ರಧಾನಿ ಮೋದಿ ಗ್ಯಾರಂಟಿ

ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಚಿನ್ನ ಕದ್ದಿರುವ ಅಪರಾಧಿಗಳನ್ನು ಜೈಲಿಗೆ ಹಾಕುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ತಿರುವನಂತಪುರದಲ್ಲಿ ಶುಕ್ರವಾರ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು “ಇದು ಮೋದಿ ಅವರ ಗ್ಯಾರಂಟಿ” ಎಂದು ಹೇಳಿದರು.

ಸಂಗ್ರಹ ಚಿತ್ರ

ತಿರುವನಂತಪುರ: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ (Sabarimala Sri Ayyappa Swamy Temple) ಚಿನ್ನ ಕದ್ದಿರುವ ಅಪರಾಧಿಗಳನ್ನು ಜೈಲಿಗೆ ಕಳುಹಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಭರವಸೆ ನೀಡಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಅವರು ಕೇರಳದ ಜನತೆಗೆ ನೀಡಿರುವ ಅತೀ ದೊಡ್ಡ ಭರವಸೆ ಇದಾಗಿದೆ. ಮುಂದಿನ ಏಪ್ರಿಲ್ ನಲ್ಲಿ ಕೇರಳ ವಿಧಾನ ಸಭಾ ಚುನಾವಣೆ (Kerala Assembly Elections) ನಡೆಯಲಿದ್ದು, ಇದಕ್ಕೂ ಮುನ್ನ ಕೇರಳಕ್ಕೆ ಆಗಮಿಸಿರುವ ಪ್ರಧಾನಿ ಮೋದಿ ಶುಕ್ರವಾರ ತಿರುವನಂತಪುರದಲ್ಲಿ ಹೊಸ ರೈಲು ಸೇವೆಗಳು, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮುಂದಿನ ವಿಧಾನ ಸಭಾ ಚುನಾವಣೆ ಕುರಿತು ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಶಬರಿಮಲೆ ದೇವಸ್ಥಾನದಲ್ಲಿ ಆಗಿರುವ ಚಿನ್ನ ಕಳ್ಳತನದ ಬಗ್ಗೆ ತನಿಖೆ ನಡೆಸಿ ಅಪರಾಧಿಗಳನ್ನು ಜೈಲಿಗೆ ಹಾಕಲಾಗುವುದು. ಇದು ಮೋದಿ ಅವರ ಗ್ಯಾರಂಟಿ ಎಂದು ಹೇಳಿದರು.

ಸ್ವಾನಿಧಿ ಕ್ರೆಡಿಟ್ ಕಾರ್ಡ್ ಯೋಜನೆ, ಅಮೃತ ಭಾರತ್ ರೈಲುಗಳಿಗೆ ಕೇರಳದಲ್ಲಿ ಚಾಲನೆ ನೀಡಿದ ಪ್ರಧಾನಿ ಮೋದಿ

ಸಂಪೂರ್ಣ ದೇಶವೇ ಇಲ್ಲಿನ ಅಯ್ಯಪ್ಪ ಸ್ವಾಮಿ ಮೇಲೆ ಅಚಲ ನಂಬಿಕೆಯನ್ನಿಟ್ಟಿದೆ. ಆದರೂ ಎಲ್‌ಡಿಎಫ್ ಸರ್ಕಾರವು ಶಬರಿಮಲೆ ದೇವಾಲಯದ ಸಂಪ್ರದಾಯಗಳಿಗೆ ಹಾನಿ ಮಾಡಿದೆ. ಇಲ್ಲಿ ನಡೆದಿದೆ ಎನ್ನಲಾದ ಚಿನ್ನ ಕಳ್ಳತನದ ಬಗ್ಗೆ ಬಿಜೆಪಿ ಸರ್ಕಾರ ರಚನೆಯಾದ ಕ್ಷಣವೇ ಸಂಪೂರ್ಣ ತನಿಖೆ ನಡೆಸಿ ಅಪರಾಧಿಗಳನ್ನು ಜೈಲಿಗೆ ಕಳುಹಿಸುತ್ತದೆ ಎಂದು ಹೇಳಿದರು.

ಎಲ್‌ಡಿಎಫ್ ಮತ್ತು ಯುಡಿಎಫ್ ರಾಜ್ಯವನ್ನು ನಾಶಪಡಿಸಿದೆ ಎಂದ ಅವರು, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ರಾಜ್ಯದಲ್ಲಿ ಉತ್ತಮ ಆಡಳಿತವನ್ನು ಪರಿಚಯಿಸಲಿದೆ. ಮುಂಬರುವ ಚುನಾವಣೆಗಳು ಕೇರಳದ ಸ್ಥಿತಿ ಮತ್ತು ದಿಕ್ಕನ್ನು ಬದಲಾಯಿಸುವ ಚುನಾವಣೆಗಳಾಗಿವೆ ಎಂದು ಹೇಳಿದರು.

ಈವರೆಗೆ ಇಲ್ಲಿನ ಜನರು ಕೇವಲ ಎಲ್‌ಡಿಎಫ್ ಮತ್ತು ಯುಡಿಎಫ್ ಕಡೆ ಮಾತ್ರ ನೋಡಿದ್ದಾರೆ. ಇವೆರಡೂ ಕೇರಳವನ್ನು ನಾಶಪಡಿಸಿವೆ. ಆದರೆ ಇನ್ನೊಂದು ಬದಿಯೂ ಇದ್ದು, ಇದು ಅಭಿವೃದ್ಧಿ, ಉತ್ತಮ ಆಡಳಿತ ಭರವಸೆ ನೀಡುತ್ತದೆ. ಅದುವೇ ಬಿಜೆಪಿ-ಎನ್‌ಡಿಎಯ ಎಂದರು.

ʼʼತುಂಬ ಹೊತ್ತಿನಿಂದ ನಿಂತಿದ್ದಿ, ಸುಸ್ತಾಗಿರುತ್ತೆ....ʼʼ; ಅರ್ಧಕ್ಕೆ ಭಾಷಣ ನಿಲ್ಲಿಸಿ ಪೈಟಿಂಗ್‌ ಹಿಡಿದ ಬಾಲಕನ ಜತೆ ಮಾತನಾಡಿದ ಪ್ರಧಾನಿ ಮೋದಿ

ಶಬರಿಮಲೆ ದೇವಾಲಯದ ಗರ್ಭಗುಡಿಯ ಬಾಗಿಲಿನ ಚೌಕಟ್ಟುಗಳು ಮತ್ತು ದ್ವಾರಪಾಲಕ ಮೂರ್ತಿಗಳ ಮೇಲಿನ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ರಾಜ್ಯ ಹೈಕೋರ್ಟ್‌ನ ಆದೇಶದ ಮೇರೆಗೆ ಕೇರಳ ಪೊಲೀಸರ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದೆ. ಈಗಾಗಲೇ ರಾಜಕೀಯ ವಿವಾದವಾಗಿರುವ ಶಬರಿಮಲೆ ಚಿನ್ನ ಕಳ್ಳತನ ಪ್ರಕರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಎಂಟ್ರಿ ದೊಡ್ಡ ಮಟ್ಟದ ಸುದ್ದಿಯಾಗುವಂತೆ ಮಾಡಿದೆ.

ವಿದ್ಯಾ ಇರ್ವತ್ತೂರು

View all posts by this author