ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sonia Gandhi: ಪೌರತ್ವ ಸಿಗೋ ಮೊದಲೇ ವೋಟರ್‌ ಲಿಸ್ಟ್‌ನಲ್ಲಿ ಸೋನಿಯಾ ಗಾಂಧಿ ಹೆಸರು ಸೇರ್ಪಡೆ ಆಗಿತ್ತಾ?

BJP MP Anurag Thakur: ಇಂದು ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ಸಂಸದ ಅನುರಾಗ್ ಠಾಕೂರ್(Anurag Thakur) ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್‌ ಆರೋಪಕ್ಕೆ ತಿರುಗೇಟಿ ನೀಡಿದ್ದಾರೆ. ಕಾಂಗ್ರೆಸ್‌ ಅಧಿಕಾರದಲ್ಲಿರುವಾಗ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಗ(Sonia Gandhi) ಭಾರತೀಯ ಪೌರತ್ವ ಪಡೆಯುವ ಮೂರು ವರ್ಷಗಳ ಮೊದಲೇ ಮತದಾರರ ಪಟ್ಟಿಯಲ್ಲಿ ಅವರ ಹೆಸರನ್ನು ಸೇರ್ಪಡೆ ಮಾಡಲಾಗಿತ್ತು ಎಂದು ಆರೋಪಿಸಿದ್ದಾರೆ.

ಪೌರತ್ವ ಸಿಗೋ ಮೊದಲೇ ಸೋನಿಯಾ ಗಾಂಧಿಗೆ ವೋಟರ್‌ ಐಡಿ?

Rakshita Karkera Rakshita Karkera Aug 13, 2025 3:36 PM

ನವದೆಹಲಿ: ಕಳೆದ ಲೋಕಸಭೆ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಆರೋಪಕ್ಕೆ ಬಿಜೆಪಿ ಸರಿಯಾಗಿ ಟಾಂಗ್‌ ಕೊಟ್ಟಿದೆ. ಇಂದು ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ಸಂಸದ ಅನುರಾಗ್ ಠಾಕೂರ್(Anurag Thakur) ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್‌ ಆರೋಪಕ್ಕೆ ತಿರುಗೇಟಿ ನೀಡಿದ್ದಾರೆ. ಕಾಂಗ್ರೆಸ್‌ ಅಧಿಕಾರದಲ್ಲಿರುವಾಗ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಗ(Sonia Gandhi) ಭಾರತೀಯ ಪೌರತ್ವ ಪಡೆಯುವ ಮೂರು ವರ್ಷಗಳ ಮೊದಲೇ ಮತದಾರರ ಪಟ್ಟಿಯಲ್ಲಿ ಅವರ ಹೆಸರನ್ನು ಸೇರ್ಪಡೆ ಮಾಡಲಾಗಿತ್ತು ಎಂದು ಆರೋಪಿಸಿದ್ದಾರೆ.

ಇಟಲಿಯಲ್ಲಿ ಜನಿಸಿದ ಸೋನಿಯಾ ಗಾಂಧಿ ಅವರನ್ನು ಭಾರತೀಯ ಪೌರತ್ವ ಪಡೆಯುವ ಮೂರು ವರ್ಷಗಳ ಮೊದಲು 1980 ರಲ್ಲಿ ಮತದಾರರ ಪಟ್ಟಿಗೆ ಸೇರಿಸಲಾಗಿದೆ. 1980ರಲ್ಲಿ ನವದೆಹಲಿ ಕ್ಷೇತ್ರದ ಮತಗಟ್ಟೆಯ ಮತದಾರರ ಪಟ್ಟಿಯ ಫೋಟೋವನ್ನು ಹಂಚಿಕೊಂಡ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರ ಹೇಳಿಕೆಗಳನ್ನು ಠಾಕೂರ್ ಪ್ರಸ್ತಾಪಿಸಿದರು.

ಈ ಸುದ್ದಿಯನ್ನೂ ಓದಿ: Viral Video: ಸಾವಿರಾರು ಜನ ಓಡಾಡೋ ಹೈವೇಯಲ್ಲಿ ನೇತಾಡುತ್ತಿದೆ ಅಪಾಯಕಾರಿ ಕೇಬಲ್‌ ವೈರ್‌! ವಿಡಿಯೊ ಫುಲ್‌ ವೈರಲ್‌

ಸಫ್ದರ್ಜಂಗ್ ರಸ್ತೆಯಲ್ಲಿರುವ 145 ನೇ ಮತಗಟ್ಟೆಯ ಮತದಾರರ ಪಟ್ಟಿಯಲ್ಲಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸಂಜಯ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಮೇನಕಾ ಗಾಂಧಿ ಅವರ ಹೆಸರುಗಳಿದ್ದವು. ಆ ಸಮಯದಲ್ಲಿ ಸೋನಿಯಾ ಇನ್ನೂ ಇಟಾಲಿಯನ್ ಪೌರತ್ವವನ್ನು ಹೊಂದಿದ್ದರು ಎಂದು ಮಾಳವಿಯಾ ಹೇಳಿಕೊಂಡಿದ್ದಾರೆ. ಭಾರತದ ಮತದಾರರ ಪಟ್ಟಿಯಲ್ಲಿ ಸೋನಿಯಾ ಗಾಂಧಿಯ ಹೆಸರು ಮೊದಲೇ ಸೇರ್ಪಡೆಗೊಂಡಿರುವುದು ಕಾನೂನು ಉಲ್ಲಂಘನೆ ಅಲ್ಲವೇ? ಇದು ಬಹುಶಃ ರಾಹುಲ್ ಗಾಂಧಿಯವರ ಅಕ್ರಮ ಮತದಾರರನ್ನು ಕ್ರಮಬದ್ಧಗೊಳಿಸುವ ಒಲವು ಮತ್ತು SIR ಗೆ ಅವರ ವಿರೋಧವನ್ನು ವಿವರಿಸುತ್ತದೆ ಎಂದು ಮಾಳವಿಯಾ ಟ್ವೀಟ್ ಮಾಡಿದ್ದರು.

ಸೋನಿಯಾ ಗಾಂಧಿ ಚುನಾವಣಾ ನೋಂದಣಿಗೆ ಅರ್ಹತಾ ದಿನಾಂಕ 1983ರ ಜನವರಿ 1ರಂದು ಇದ್ದು, 1983ರ ಏಪ್ರಿಲ್ 30 ರಂದು ಭಾರತೀಯ ಪೌರತ್ವ ನೀಡಲಾಯಿತು. 1980 ರಲ್ಲಿ ನವದೆಹಲಿ ಸಂಸದೀಯ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಿಸಲಾಯಿತು ಮತ್ತು ಆಗ ಸೋನಿಯಾ ಹೆಸರನ್ನು ಪಟ್ಟಿಗೆ ಸೇರಿಸಲಾಯಿತು. ಇದರ ಬೆನ್ನಲ್ಲೇ 1982 ರಲ್ಲಿ ವ್ಯಾಪಕ ಆಕ್ರೋಶದ ನಂತರ ಸೋನಿಯಾ ಹೆಸರನ್ನು ಪಟ್ಟಿಯಿಂದ ಅಳಿಸಲಾಯಿತು. ಆದರೆ 1983 ರಲ್ಲಿ ಮಾತ್ರ ಮತ್ತೆ ಸೇರಿಸಲಾಯಿತು. ಆ ವರ್ಷ ಮತದಾರರ ಪಟ್ಟಿಯ ಹೊಸ ಪರಿಷ್ಕರಣೆಯಲ್ಲಿ, ಸೋನಿಯಾ ಗಾಂಧಿಯವರ ಹೆಸರನ್ನು ಮತಗಟ್ಟೆ 140 ರಲ್ಲಿ ಕ್ರಮ ಸಂಖ್ಯೆ 236 ರಲ್ಲಿ ಪಟ್ಟಿ ಮಾಡಲಾಗಿದೆ ಎಂದು ಮಾಳವಿಯಾ ಆರೋಪ ಮಾಡಿದ್ದಾರೆ.