ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಮತಾ ಬ್ಯಾನರ್ಜಿ ಕಣ್ಣೆದುರೇ ಇಬ್ಭಾಗವಾಗುತ್ತಿದೆ ಹೋರಾಟದ ಮೂಲಕ ಕಟ್ಟಿದ ಪಕ್ಷ; ಟಿಎಂಸಿ ಒಡಕಿಗೆ ಕಾರಣವಾದ ಆ 5 ಅಂಶಗಳಿವು

ಪಕ್ಷದ ನಾಯಕತ್ವ ವಿಚಾರವಾಗಿ 28 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ತೃಣ ಮೂಲ ಕಾಂಗ್ರೆಸ್ ಪಕ್ಷದಲ್ಲಿ ವಿಭಜನೆಯಾಗಿದೆ. ಮಮತಾ ಬ್ಯಾನರ್ಜಿಯವರ ಉತ್ತರಾಧಿಕಾರಿಯಾಗಿ ಅಭಿಷೇಕ್ ಬ್ಯಾನರ್ಜಿ ಅವರನ್ನು ನೋಡುತ್ತಿರುವುದು ಮೇಲ್ನೋಟಕ್ಕೆ ಇದಕ್ಕೆ ಮುಖ್ಯ ಕಾರಣವಾದರೂ ಕೂಡ ಇಲ್ಲಿ ಟಿಎಂಸಿ ಬಿಕ್ಕಟ್ಟಿಗೆ ಕಾರಣವಾದ ಐದು ಪ್ರಮುಖ ಅಂಶಗಳಿವೆ. ಅವು ಯಾವುದು ಇಲ್ಲಿದೆ ಸಂಪೂರ್ಣ ಮಾಹಿತಿ.

ಟಿಎಂಸಿಯಲ್ಲಿ ಒಡಕಿಗೆ ಕಾರಣವೇನು ?

ಸಂಗ್ರಹ ಚಿತ್ರ -

ಕೋಲ್ಕತ್ತಾ: ಪಶ್ಚಿಮ ಬಂಗಾಳದ (west bengal) ವಿಧಾನ ಸಭಾ ಚುನಾವಣೆ (assembly election) ಸೋಲಿನ ಬಳಿಕ ಸಾಕಷ್ಟು ಸವಾಲುಗಳು ತೃಣಮೂಲ ಕಾಂಗ್ರೆಸ್ ಪಕ್ಷವನ್ನು (Trinamool Congress party) ಸುತ್ತುವರಿದಿದೆ. ಇದರಲ್ಲಿ ಮುಖ್ಯವಾಗಿ ಇದೀಗ ಉಂಟಾಗಿರುವ ಪಕ್ಷದೊಳಗಿನ ವಿಭಜನೆ. ತೃಣಮೂಲ ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಾಭಿಪ್ರಾಯ ಬಹಿರಂಗಗೊಂಡು ಪಕ್ಷದಲ್ಲಿ ವಿಭಜನೆ ಉಂಟಾಗಿದೆ. ಪಕ್ಷದ ನಾಯಕತ್ವ ವಿಚಾರವಾಗಿ ಎದ್ದಿರುವ ಉದ್ವಿಗ್ನತೆ ಸ್ಪೋಟಗೊಂಡ ಪರಿಣಾಮ 28 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಒಡಕು ಸೃಷ್ಟಿಯಾಗಿದೆ.

ಕಾಂಗ್ರೆಸ್ ನಿಂದ ಬೇರ್ಪಟ್ಟ ಮೇಲೆ 1998ರ ಜನವರಿ 1ರಂದು ಮಮತಾ ಬ್ಯಾನರ್ಜಿ ಸ್ಥಾಪಿಸಿದ ತೃಣ ಮೂಲ ಕಾಂಗ್ರೆಸ್ ಪಕ್ಷದಲ್ಲಿ ಇದೀಗ ಮಮತಾ ಬ್ಯಾನರ್ಜಿಯವರ ಉತ್ತರಾಧಿಕಾರಿಯಾಗಿ ಅಭಿಷೇಕ್ ಬ್ಯಾನರ್ಜಿ ಅವರನ್ನು ನೋಡುತ್ತಿರುವುದು ಪಕ್ಷದ ಒಡಕಿಗೆ ಮುಖ್ಯ ಕಾರಣ ಎಂದು ಕಂಡುಬಂದರೂ ಕೂಡ ಇನ್ನು ಹಲವಾರು ಅಂಶಗಳಿವೆ. ಅದರಲ್ಲಿ ಮುಖ್ಯವಾದದ್ದು ಈ ಐದು ಕಾರಣಗಳು.

ಸುಲಿಗೆ ಬೆದರಿಕೆ: ಪಶ್ಚಿಮ ಬಂಗಾಳದಲ್ಲಿ ಮತ್ತೋರ್ವ ತೃಣಮೂಲ ಕಾಂಗ್ರೆಸ್ ನಾಯಕನ ಬಂಧನ

  1. ಚುನಾವಣಾ ಸೋಲು

ಇತ್ತೀಚೆಗೆ ನಡೆದ ಚುನಾವಣೆಯಲ್ಲಿನ ಸೋಲು ತೃಣ ಮೂಲ ಕಾಂಗ್ರೆಸ್ ಪಕ್ಷವನ್ನು ವಿಭಜಿಸಿದೆ. ಇದು ಆಂತರಿಕ ಬಿಕ್ಕಟ್ಟು ಬಹಿರಂಗವಾಗುವಂತೆ ಮಾಡಿತು. ಹಲವಾರು ನಾಯಕರು ಮತ್ತು ಶಾಸಕರು ಪಕ್ಷದ ಕಾರ್ಯತಂತ್ರ ಮತ್ತು ನಾಯಕತ್ವದ ನಿರ್ಧಾರಗಳನ್ನು ಪ್ರಶ್ನಿಸತೊಡಗಿದರು. ಇದು ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು.

2. ಉತ್ತರಾಧಿಕಾರಿ ಪ್ರಶ್ನೆ

ಮಮತಾ ಬ್ಯಾನರ್ಜಿ ಬಳಿಕ ಪಕ್ಷದ ಉತ್ತರಾಧಿಕಾರಿಯಾಗಿ ಅಭಿಷೇಕ್ ಬ್ಯಾನರ್ಜಿ ಗುರುತಿಸಿಕೊಂಡಿದ್ದು, ಇದು ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಯಿತು. ಪಕ್ಷಕ್ಕಾಗಿ ಅವರ ಕೊಡುಗೆ ಬಗ್ಗೆ ಪಕ್ಷದ ಕೆಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದರು. ಹಿರಿಯ ನಾಯಕರು, ದೀರ್ಘಕಾಲದ ತಳಮಟ್ಟದ ಕಾರ್ಯಕರ್ತರನ್ನು ಬದಿಗಿಡುವ ಕಾರ್ಪೊರೇಟ್ ಶೈಲಿಯಲ್ಲಿ ಪಕ್ಷ ಬೆಳೆಯುತ್ತಿದೆ ಎಂದು ಬಂಡಾಯ ಶಾಸಕರು ಆರೋಪಿಸಿದರು.

3. ದೆಹಲಿ ಸಭೆ

ಬಂಡಾಯ ಶಾಸಕರಾದ ಋತಬ್ರತ ಬ್ಯಾನರ್ಜಿ ಮತ್ತು ಸಂದೀಪನ್ ಸಹಾ ಅವರು ಪಕ್ಷದ ನಾಯಕತ್ವದ ಕುರಿತು ಬಹಿರಂಗವಾಗಿ ಪ್ರಶ್ನಿಸತೊಡಗಿದರು. ಇದರ ಪರಿಣಾಮ ಪಕ್ಷದೊಳಗಿನ ಭಿನ್ನಾಭಿಪ್ರಾಯ ಮೊದಲ ಬಾರಿಗೆ ಮೇ 19 ರಂದು ಕಾಣಿಸಿಕೊಂಡವು. ಆರಂಭದಲ್ಲಿ ಟೀಕೆ ಎಂದು ಕಾಣುತ್ತಿದ್ದ ಈ ಪ್ರಶ್ನೆಗಳು ನಾಯಕತ್ವದ ವಿಚಾರದಲ್ಲಿ ಬದಲಾವಣೆಯಾಗಿ ರೂಪುಗೊಂಡಿತು.

4. ನಕಲಿ ಸಹಿ ಆರೋಪ

ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ವಿಚಾರದಲ್ಲಿ ಹಿರಿಯ ನಾಯಕ ಸೋಭಾಂದೇಬ್ ಚಟ್ಟೋಪಾಧ್ಯಾಯ ಅವರನ್ನು ಬೆಂಬಲಿಸಿ ಪತ್ರ ಸಲ್ಲಿಸಿದ ಬಳಿಕ ಶಾಸಕರಾದ ಋತಬ್ರತ ಬ್ಯಾನರ್ಜಿ ಮತ್ತು ಸಂದೀಪನ್ ಸಹಾ ಅವರು ದಾಖಲೆಯಲ್ಲಿ ತಮ್ಮ ಸಹಿಗಳನ್ನು ನಕಲಿ ಮಾಡಲಾಗಿದೆ ಎಂದು ಆರೋಪಿಸಿ ಇದಕ್ಕಾಗಿ ಅಭಿಷೇಕ್ ಬ್ಯಾನರ್ಜಿ ಅವರನ್ನು ದೂಷಿಸಿದರು. ಇದು ವಿವಾದ ಮತ್ತಷ್ಟು ಹೆಚ್ಚಾಗಲು ಕಾರಣವಾಯಿತು.

5. ಉಚ್ಚಾಟನೆ ನಿರ್ಧಾರ

ಉದ್ವಿಗ್ನತೆಯ ನಡುವೆ ಋತಬ್ರತ ಬ್ಯಾನರ್ಜಿ ಮತ್ತು ಸಂದೀಪನ್ ಸಹಾ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಅವರನ್ನು ಟಿಎಂಸಿಯಿಂದ ಉಚ್ಚಾಟಿಸುವ ನಿರ್ಧಾರ ಕೈಗೊಂಡಿದ್ದರಿಂದ 80 ಶಾಸಕರಲ್ಲಿ ಸುಮಾರು 60 ಮಂದಿ ಮಮತಾ ಬ್ಯಾನರ್ಜಿ ಕರೆದ ಸಭೆಗಳನ್ನು ಬಹಿಷ್ಕರಿಸಿದರು.

ದೇಶದ ವಾಯು ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲ: ರಷ್ಯಾದ ಎಸ್-400 ಟ್ರಿಯುಂಫ್ ಸ್ವೀಕರಿಸಿದ ಭಾರತ

ಜೂನ್ 3 ರಂದು 58 ಬಂಡಾಯ ಶಾಸಕರು ವಿಧಾನಸಭಾ ಸ್ಪೀಕರ್ ರತೀಂದ್ರ ಬೋಸ್ ಅವರನ್ನು ಭೇಟಿ ಮಾಡಿ ಋತಬ್ರತ ಬ್ಯಾನರ್ಜಿ ಅವರನ್ನು ತಮ್ಮ ಶಾಸಕಾಂಗ ಗುಂಪಿನ ನಾಯಕರಾಗಿ ಬೆಂಬಲಿಸುವ ಪತ್ರಗಳನ್ನು ಸಲ್ಲಿಸಿದರು. ಇದಕ್ಕೆ ಅವರು ಒಪ್ಪಿಕೊಂಡಿದ್ದರಿಂದ ತೃಣಮೂಲ ಕಾಂಗ್ರೆಸ್ ಶಾಸಕಾಂಗ ಪಕ್ಷವು ಎರಡು ಬಣಗಳಾಗಿ ವಿಭಜನೆಯಾಯಿತು. ಇದರಿಂದ ಪಕ್ಷವು ಈಗ ಪಶ್ಚಿಮ ಬಂಗಾಳದಾದ್ಯಂತ ಎಲ್ಲಾ ಸಮಿತಿಗಳನ್ನು ವಿಸರ್ಜಿಸಿ ಹೊಸದಾಗಿ ರಚನೆ ಮಾಡುವುದಾಗಿ ಘೋಷಿಸಿದೆ.