Protest: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜ.20ರಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕೋಲಾರದಿಂದ ಚಿಕ್ಕಬಳ್ಳಾಪುರವು ಬೇರ್ಪಟ್ಟು ಪ್ರತ್ಯೇಕ ಜಿಲ್ಲಾಕೇಂದ್ರವಾದ ಬಳಿಕ ಬಡವರ ಸಮಸ್ಯೆಗಳು ಈಡೇರಲಿವೆ ಎಂಬ ಭರವಸೆಯಿತ್ತು
Source : Chikkaballapur Reporter
ಚಿಕ್ಕಬಳ್ಳಾಪುರ : ಬಡವರಿಗೆ ಸಮಸ್ಯೆಗಳನ್ನು ಈಡೇರಿಸುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಮನವಿಗಳನ್ನು ಕಸದಬುಟ್ಟಿಗೆ ಎಸೆಯುತ್ತಿದ್ದು, ಈ ನಿಟ್ಟಿನಲ್ಲಿ ತಮ್ಮ ನ್ಯಾಯಯುತ ಬೇಡಿಕೆ ಈಡೇರುವವರೆಗೆ ಜಿಲ್ಲಾಕೇಂದ್ರವು ಸೇರಿ ಎಲ್ಲ ತಾಲೂಕು ಗಳಲ್ಲಿ ದಸಂಸದಿಂದ ಜ.20ರಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದಸಂಸ ಮುಖಂಡ ಕೆ.ಸಿ.ರಾಜಾಕಾಂತ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕೋಲಾರದಿಂದ ಚಿಕ್ಕಬಳ್ಳಾಪುರವು ಬೇರ್ಪಟ್ಟು ಪ್ರತ್ಯೇಕ ಜಿಲ್ಲಾಕೇಂದ್ರವಾದ ಬಳಿಕ ಬಡವರ ಸಮಸ್ಯೆಗಳು ಈಡೇರಲಿವೆ ಎಂಬ ಭರವಸೆಯಿತ್ತು. ಆದರೆ ಜಿಲ್ಲೆಗೆ ಬಂದಿರುವ ಅಧಿಕಾರಿಗಳು ಬಡವರ ಸಮಸ್ಯೆಗಳನ್ನು ನಿರ್ಲಕ್ಷಿಸಿ ಹುಸಿ ಭರವಸೆ ನೀಡುತ್ತಿರುವುದರಿಂದ ಮತ್ತಷ್ಟು ಉಲ್ಬಣಗೊಂಡಿವೆಯೇ ಹೊರತು ಈಡೇರುವ ಆಶಾಭಾವನೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಡವರಿಗಿಲ್ಲ ನಿವೇಶನ ಭಾಗ್ಯ!
ಕಳೆದ 1993ರಲ್ಲಿ ಅಂದಿನ ಸಚಿವೆ ರೇಣುಕಾರಾಜೇಂದ್ರನ್ ಅವರ ಕಾಲದಲ್ಲಿ ನಲ್ಲಕದಿರೇನ ಹಳ್ಳಿಯ ನಿವೇಶನರಹಿತರಿಗೆ ೩ ಎಕರೆ ಜಮೀಜು ಮಂಜೂರು ಮಾಡಿದ್ದರು. ಅಲ್ಲದೆ ಗುಡಿಬಂಡೆಯ ರಸ್ತೆ ಅಗಲೀಕರಣ ವೇಳೆ ಮನೆಗಳನ್ನು ಕಳೆದುಕೊಂಡ ಕಡೇಹಳ್ಳಿಯ ಗ್ರಾಮಸ್ಥರಿಗಾಗಿ ಸಂಬAಧಪಟ್ಟ ಇಲಾಖೆಯಿಂದ ಜಮೀನು ಮಂಜೂರಾಗಿದೆ. ಆದರೆ ಇಂದಿಗೂ ಬಡಾವಣೆಗಳನ್ನು ನಿರ್ಮಿಸಿ ನಿವೇಶನ ನೀಡಲು ಮುಂದಾಗಿರುವುದು ಅಧಿಕಾರಿ ಗಳ ನಿರ್ಲಕ್ಷö??ಕ್ಕೆ ಹಿಡಿದಕೈಗನ್ನಡಿಯಾಗಿದೆ ಎಂದು ಕಿಡಿಕಾರಿದರು.
ನ್ಯಾಯ ಕೇಳಿದರೆ ಕೇಸು ಹಾಕ್ತಾರೆ!
ನಿವೇಶನಗಳನ್ನು ವಿತರಣೆ ಮಾಡುವಂತೆ ಗ್ರಾಮಸ್ಥರು ಪ್ರತಿಭಟನೆಯನ್ನು ನಡೆಸಿದ ವೇಳೆ ಖುದ್ದು ಜಿಲ್ಲಾಧಿಕಾರಿಯೇ ವಾರದೊಳಗೆ ಸಮಸ್ಯೆಯನ್ನು ಬಗೆಹರಿಸುವಂತೆ ಸಂಬಂಧ ಪಟ್ಟ ತಾಲೂಕು ಅಧಿಕಾರಿಗಳಿಗೆ ಸೂಚನೆ ನೀಡಿದರೂ ಅವರ ಮಾತಿಗೆ ಕವಡೆಕಾಸಿನ ಕಿಮ್ಮತ್ತು ನೀಡದ ಅಧಿಕಾರಿಗಳು, ನ್ಯಾಯ ಕೇಳುವ ಬಡವರ ಮೇಲೆ ಮೊಕದ್ದಮೆಗಳನ್ನು ದಾಖಲಿಸಿ ಧಮನಿತರ ಸದ್ದನ್ನು ಹತ್ತಿಕ್ಕುವ ಕಾರ್ಯಕ್ಕೆ ಮುಂದಾಗುವರೆಂದು ಟೀಕಿಸಿದರು.
ಇನ್ನೂ ಸಮಿತಿಗಳನ್ನೇ ರಚಿಸಿಲ್ಲ!
ಕಳೆದ ಹಲವು ದಶಕಗಳಿಂದ ಕೃಷಿ ಚಟುವಟಿಕೆಯನ್ನೇ ನೆಚ್ಚಿಕೊಂಡು ಜೀವನ ನಡೆಸು ತ್ತಿರುವ ಬಡರೈತರು ಸಾಗುವಳಿ ಚೀಟಿಗಳಿಗಾಗಿ ಅರ್ಜಿ ಸಲ್ಲಿಸಿ ದಶಕಗಳೇ ಕಳೆದರೂ ಮಂಜೂರಾತಿ ಮಾತ್ರ ಇಲ್ಲವಾಗಿದೆ. ಅಲ್ಲದೆ ಇನ್ನೂ ಕೆಲ ತಾಲೂಕುಗಳಲ್ಲಿಲ ಬಗರ್ ಹುಕುಂ ಸಮಿತಿಗಳನ್ನೇ ರಚಿಸಿಲ್ಲ, ರಚನೆಯಾಗಿದ್ದರೂ ಬಡವರಿಗೆ ಸಾಗುವಳಿ ಚೀಟಿ ವಿತರಿಸುವ ಕಾರ್ಯಕ್ಕೆ ಮುಂದಾಗದೆ ರೈತ ವಿರೋಧಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.
ಐದಾರು ಹಾಸ್ಟೆಲ್‌ಗೆ ಒಬ್ಬರೇ ವಾರ್ಡನ್!
ಬಡಮಕ್ಕಳೇ ಹೆಚ್ಚಾಗಿ ವ್ಯಾಸಂಗ ಮಾಡುವ ಪರಿಶಿಷ್ಟರ ಹಾಸ್ಟೆಲ್‌ಗಳಲ್ಲಿ ಸಿಬ್ಬಂದಿಯ ಕೊರತೆ ಎದ್ದು ಕಾಣುತ್ತಿದ್ದು, ಐದಾರು ಹಾಸ್ಟೆಲ್‌ಗಳ ಜವಾಬ್ದಾರಿ ಓರ್ವ ವಾರ್ಡನ್ ವಹಿಸುವ ಮೂಲಕ ಬಡ ಮಕ್ಕಳ ಶೈಕ್ಷಣಿಕ ಜೀವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಬಡವರ ಮಕ್ಕಳ ಕುರಿತು ಪುಂಖಾನುಪುAಖವಾಗಿ ಭಾಷಣ ಮಾಡುವವರು ಈ ಕುರಿತು ತಲೆಕೆಡಿಸಿಕೊಳ್ಳುತ್ತಿಲ್ಲ. ಅಲ್ಲದೆ ಬಡವರಿಗೆ ನೀಡುತ್ತಿದ್ದ ಕುರಿ, ಮೇಕೆ, ಹಸು ವಿತರಣೆ, ಗಂಗಾಕಲ್ಯಾಣ ಯೋಜನೆ ಸೇರಿ ಇನ್ನಿತರೆ ಯೋಜನೆಗಳನ್ನು ನಿಲ್ಲಿಸಲಾಗಿದೆ ಎಂದು ಆರೋಪಿಸಿದರು.
ಬಿ.ವಿ.ವೆಂಕಟರಮಣ ಮಾತನಾಡಿ, ಸ್ವಾತಂತ್ರö್ಯ ಲಭಿಸಿ ೭ ದಶಕಗಳೇ ಕಳೆದರೂ ಬಡವರು ಸ್ವಂತ ಸೂರು ಹಾಗೂ ಮೂಲಸೌಕರ್ಯಗಳಿಗೆ ಹೋರಾಟ ಮಾಡುವ ಹೀನ ಸ್ಥಿತಿಯಿದೆ. ಪರಿಶಿಷ್ಟರ ನಿಗಮಗಳಿಂದ ಕಳೆದ ೫ ವರ್ಷಗಳಿಂದ ಗಂಗಾಕಲ್ಯಾಣ ಯೋಜನೆ ಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಎಸ್‌ಸಿಪಿ, ಎಸ್‌ಟಿಪಿ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ಸಿ.ಜಿ.ಗಂಗಪ್ಪ, ಗುರಪ್ಪ, ನರಸಿಂಹಮೂರ್ತಿ, ಪರಮೇಶ್, ಕರಗಪ್ಪ ಇದ್ದರು.
ಇದನ್ನೂ ಓದಿ: ಇನ್ನೂ ಅಲ್ಪಸಂಖ್ಯಾತರಾಗಿಯೇ ಇರುವ ಮಹಿಳಾ ರಾಜಕಾರಣಿಗಳು!