ಬೆಂಗಳೂರು, ಜ. 9: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2026ರಲ್ಲಿ ಶನಿಯು ತನ್ನ ರಾಶಿಯನ್ನು ಬದಲಿಸದೇ ಇದ್ದರೂ, ಸೂರ್ಯ, ಮಂಗಳ, ಬುಧ ಸೇರಿದಂತೆ ಪ್ರಮುಖ ಗ್ರಹಗಳ ಸ್ಥಾನ ಪಲ್ಲಟವಾಗಲಿದೆ. ಗ್ರಹಗಳ ಈ ಸಂಚಾರದಿಂದಾಗಿ ಎಲ್ಲ ರಾಶಿ ಚಕ್ರದ ಜನರ ಮೇಲೆ ವಿಶೇಷ ಪರಿಣಾಮ ಬೀರುವ ಸಾಧ್ಯತೆ ಇದೆ. ದ್ವಾದಶ ರಾಶಿಗಳಲ್ಲಿ ಬೆಂಕಿಯ ತತ್ವ ಹೊಂದಿರುವ ಸಿಂಹ ರಾಶಿಯವರ ಜೀವನದಲ್ಲಿ ಈ ಹೊಸ ವರ್ಷದಲ್ಲಿ ಶನಿಯ ಕಾಟ ಇದೆಯಾ? ಹಣ ಹೂಡಿಕೆ ಮಾಡಲು ಸೂಕ್ತ ಸಮಯವೇ? ಲಾಭ-ನಷ್ಟಗಳೇನು? ನಿಮ್ಮೆಲ್ಲ ಪ್ರಶ್ನೆಗಳಿಗೆ ಇಲ್ಲಿದ ಉತ್ತರ.
ಭಾರತೀಯ ಜ್ಯೋತಿಷ್ಯ ಹಾಗೂ ವಿಜ್ಞಾನ ಸಂಶೋಧಕ ಮಹಾಬಲಮೂರ್ತಿ ಕೊಡ್ಲೆಕೆರೆ ಅವರ ಪ್ರಕಾರ, 2026ರಲ್ಲಿ ಶನಿಯ ಸಂಚಾರದಿಂದಾಗಿ ಸಿಂಹ ರಾಶಿಯವರಿಗೆ ಕೆಲವು ಸವಾಲುಗಳು ಎದುರಾಗುವ ಸಾಧ್ಯತೆಗಳಿವೆ. ಶನಿಯ ಅಶುಭ ಪ್ರಭಾವವು ನಿಮ್ಮ ಮೇಲಿರಬಹುದು. ಅಲ್ಲದೇ ಈ ವರ್ಷ ಶನಿಯು ನಿಮಗೆ ಹೆಚ್ಚಿನ ಪರೀಕ್ಷೆಯನ್ನು ಒಡ್ಡಲಿದ್ದಾನೆ.
ವಿಡಿಯೊ ಇಲ್ಲಿದೆ:
ಗುರುಬಲ ಇಲ್ಲ
ಜೂನ್ 2ರಿಂದ ಗುರುವು ಕರ್ಕಾಟಕ ರಾಶಿಗೆ ಪ್ರವೇಶಿಸಲಿದ್ದು, ಸಿಂಹ ರಾಶಿಯವರಿಗೆ ಗುರುಬಲ ತಪ್ಪಲಿದೆ. ಬಳಿಕ ವಕ್ರವಾದ ಚಲನವಲನಗಳ ಸ್ವರೂಪದಲ್ಲಿ ಸಿಂಹ ರಾಶಿಗೆ ಬಂದರೂ ಕೂಡ ಇವರಿಗೆ ಗುರುಬಲ ಇರುವುದಿಲ್ಲ.
ವ್ಯಾಪಾರ-ವ್ಯವಹಾರದಲ್ಲಿ ಅವಸರದ ನಿರ್ಣಯ ಬೇಡ
ಸಿಂಹ, ಬೆಂಕಿಯ ತತ್ವ ಹೊಂದಿರುವ ರಾಶಿಯಾಗಿದ್ದು, ಈ ರಾಶಿಯವರಿಗೆ ಧೈರ್ಯ ಹೆಚ್ಚಾಗಿರುತ್ತದೆ. ಸಿಂಹ ರಾಶಿಯವರು ಕೋಪ, ಅವಸರ ಅಥವಾ ವಿಳಂಬದ ನಿರ್ಣಗಳನ್ನು ತೆಗೆದುಕೊಳ್ಳುತ್ತಾರೆ. ಆದ್ದರಿಂದ ಇವರು ವ್ಯಾಪಾರದಲ್ಲಿ ಅನವಶ್ಯಕ ಅಪಾಯವನ್ನು ಎದುರಿಸಬಾರದು ಹಾಗೂ ಸ್ವಭಾವದಲ್ಲಿ ತಮ್ಮನ್ನ ಸುಧಾರಿಸಿಕೊಳ್ಳವ ಆವಶ್ಯಕತೆ ಇದೆ.
ಕರ್ಕಾಟಕ ರಾಶಿಯವರಿಗೆ ಈ ಹೊಸ ವರ್ಷ ಶನಿಯ ಉಪಟಳವಿದೆಯಾ?
ಅಷ್ಟಮ ಶನಿ ಕಾಟ
ಈ 2026ರಲ್ಲಿ ಸೂರ್ಯನ ಯಜಮಾನತ್ವದ ಸಿಂಹ ರಾಶಿಯವರಿಗೆ ಅಷ್ಟಮ ಶನಿ ಕಾಟವಿದೆ. ಇವರಿಗೆ ಶನೈಶ್ಚರ ಎಲ್ಲ ತರಹದ ಅಡಚಣೆಗಳನ್ನು ತಂದೊಡ್ಡುವ ದೀಕ್ಷೆಯನ್ನು ಹೊತ್ತವನಾಗಿದ್ದಾನೆ. ಹಾಗಾಗಿ ಶನೈಶ್ಚರನನ್ನು ಎದರಿಸುವಂತ ಧೈರ್ಯ, ಜಾಣ್ಮೆ ಹೊಂದುವುದು ಅಗತ್ಯ. ಸರಿಯಾದ ಯೋಜನೆ, ಶಿಸ್ತು, ನಿರ್ಧಾರಗಳಿಂದ ಶನೈಶ್ಚರನ ಬಹುತೇತ ತೊಂದರೆಗಳು ನಿವಾರಣೆಯಾಗುತ್ತವೆ.
ಶಿಸ್ತು ಇದ್ದರೆ ಶನೈಶ್ಚರನ ಬೆಂಬಲ
ಯಾವುದೇ ವಿಚಾರದಲ್ಲಿ ಹೆಜ್ಜೆ ಇಡುವ ಮುನ್ನ ಅಲ್ಲಿ ಏನಾದರೂ ತೊಂದರೆಗಳಿವೆಯಾ ಎಂಬುವುದನ್ನು ಗಮನಿಸಿ ತದೇಕಚಿತ್ತದಿಂದ ಮುಂದೆ ಸಾಗುವ ಶಿಸ್ತು ಹೊಂದಿದ್ದಲ್ಲಿ ಶನೈಶ್ಚರನ ಬೆಂಬಲವೂ ಈ ರಾಶಿಯವರಿಗೆ ಸಿಗಲಿದೆ. 2026ರ ಅವಧಿಯಲ್ಲಿ ಗುರುವು ಕಾರ್ಕಾಟಕ ಮತ್ತು ಸಿಂಹ ರಾಶಿ ಎರಡರಲ್ಲೂ ಇರುವುದರಿಂದ ಸಿಂಹ ರಾಶಿಯವರಿಗೆ ನಷ್ಟವಾಗಲು ಬಿಡುವುದಿಲ್ಲ. ಹಾಗೆಯೇ ಗುರುವು ಸಿಂಹ ರಾಶಿಗೆ ಬಂದಾಗ ವ್ಯಕ್ತಿತ್ವದ ಸಂವರ್ಧನೆಗೆ ಅವಕಾಶ ಕಲ್ಪಿಸುವ ಮತ್ತು ನಷ್ಟವನ್ನು ತಪ್ಪಿಸುವ ಹೊಣೆಯನ್ನು ಹೊತ್ತಿರುತ್ತಾನೆ.
ಇನ್ನೂ 2026ರಲ್ಲಿ ಈ ಸಿಂಹ ರಾಶಿಯವರು ಭೂವರಾಹ ಯಂತ್ರವನ್ನು ಧರಿಸುವುದರಿಂದ ರಿಯಲ್ ಎಸ್ಟೇಟ್, ಇನ್ನಯಾವುದೇ ವ್ಯವಹಾರಕ್ಕೆ ಮುಂದಾದರೆ ಅವರಿಗೆ ಅನುಕೂಲವಾಗಲಿದೆ.