ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Varsha Bhavishya 2026: ಕರ್ಕಾಟಕ ರಾಶಿಯವರಿಗೆ ಈ ಹೊಸ ವರ್ಷ ಶನಿಯ ಉಪಟಳವಿದೆಯಾ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2026 ದ್ವಾದಶ ರಾಶಿಯವರ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ತರಲಿರುವ ವರ್ಷ. ಈ ಅವಧಿಯಲ್ಲಿ ಗುರು ಗ್ರಹ ಎರಡು ಬಾರಿ ರಾಶಿ ಪರಿವರ್ತನೆ ಮಾಡಲಿದ್ದು, ಶನಿ ಗ್ರಹವು ಸಂಪೂರ್ಣ ವರ್ಷ ಮೀನ ರಾಶಿಯಲ್ಲೇ ಸಂಚರಿಸಲಿದೆ. ಗುರು–ಶನಿ ಸಂಯೋಗದ ಪರಿಣಾಮವಾಗಿ ಕೆಲವು ರಾಶಿಯವರಿಗೆ ವಿಶೇಷ ಲಾಭ, ಪ್ರಗತಿ ಮತ್ತು ಅವಕಾಶಗಳು ದೊರಕುವ ಸಾಧ್ಯತೆ ಇದೆ. ಈ ಪೈಕಿ ಕರ್ಕಾಟಕ ರಾಶಿಯವರು 2026ರಲ್ಲಿ ಶನಿಯ ಪ್ರಭಾವಕ್ಕೆ ಒಳಗಾಗುವರೆ? ಗ್ರಹಗಳ ಸಂಚಾರವು ಅವರ ಉದ್ಯೋಗ, ಜೀವನಶೈಲಿ ಮತ್ತು ಭವಿಷ್ಯಕ್ಕೆ ಪರಿಣಾಮ ಬೀರುತ್ತಾ ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ. ಇದಕ್ಕೆಲ್ಲ ಉತ್ತರ ಇಲ್ಲಿದೆ.

ಕರ್ಕಾಟಕ ರಾಶಿಯವರಿಗೆ ಅದೃಷ್ಟ ತರಲಿದೆ 2026

ವಿಜ್ಞಾನ ಸಂಶೋಧಕ ಮಹಾಬಲಮೂರ್ತಿ ಕೊಡ್ಲೆಕೆರೆ ಮತ್ತು ಸ್ವಾತಿ ಕೃಷ್ಣ -

Profile
Sushmitha Jain Jan 8, 2026 7:00 PM

ಬೆಂಗಳೂರು, ಜ. 8: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2026ರಲ್ಲಿ ದ್ವಾದಶ ರಾಶಿಗಳಿಗೆ ಸೇರಿದ ಜನರ ಅದೃಷ್ಟವೇ ಬದಲಾಗುವ ಯೋಗ ರೂಪಗೊಳ್ಳಲಿದೆ. ಈ ವರ್ಷ ಗುರು ಎರಡು ಬಾರಿ ತನ್ನ ರಾಶಿಯನ್ನು ಬದಲಾಯಿಸಿದರೆ, ಶನಿ ವರ್ಷ ಪೂರ್ತಿ ಮೀನ ರಾಶಿಯಲ್ಲಿ ತನ್ನ ಚಲನೆಯನ್ನು ಮಾಡಲಿದ್ದಾನೆ. ಈ ಅವಧಿಯಲ್ಲಿ ಗುರು ಮತ್ತು ಶನಿಯು ಒಟ್ಟಾಗಿ ಸಂಯೋಗಗೊಳ್ಳುವುದರಿಂದ ಕೆಲವು ರಾಶಿಯವರಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ. ದ್ವಾದಶ ರಾಶಿಗಳಲ್ಲಿ ವಿಶೇಷವಾಗಿರುವ ಕರ್ಕಾಟಕ ರಾಶಿಯವರಿಗೆ ಈ ಹೊಸ ವರ್ಷದಲ್ಲಿ ಶನಿಯ ಉಪಟಳವಿದೆಯಾ? ಗ್ರಹಗಳ ಚಲನವಲನಗಳು ಇವರ ಮೇಲೆ ಹೇಗೆ ಪರಿಣಾಮ ಬೀರದಲಿದೆ ಎಂಬವುದನ್ನು ತಿಳಿಯೋಣ.

ಭಾರತೀಯ ಜೋತಿಷಿ ಹಾಗೂ ವಿಜ್ಞಾನ ಸಂಶೋಧಕರಾದ ಮಹಾಬಲಮೂರ್ತಿ ಕೊಡ್ಲೆಕೆರೆ ವಿಶ್ವವಾಣಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಪ್ರಕಾರ, 2026 ಕರ್ಕಾಟಕ ರಾಶಿಯವರಿಗೆ ಜೀವನದ ದಿಕ್ಕು, ವ್ಯಕ್ತಿತ್ವ ಹಾಗೂ ಭವಿಷ್ಯದ ಸ್ಥಿರತೆಯನ್ನು ನಿರ್ಧರಿಸುವ ಅತ್ಯಂತ ಮಹತ್ವದ ವರ್ಷವಾಗಿದೆ.

ಗುರುವಿನಿಂದ ವಿಶೇಷ ಶಕ್ತಿ ಪ್ರಾಪ್ತಿ

ಈ ರಾಶಿಯವರಲ್ಲಿ ಪೂನರ್ವಸು ನಕ್ಷತ್ರದ ಭಾಗವೂ ಇರುವುದರಿಂದ, ಗುರುವಿನ ಮೂಲಕ ಇವರಿಗೆ ಅದ್ಭುತ ಶಕ್ತಿ ಪ್ರಾಪ್ತಿಯಾಗಲಿದೆ. 2026ರಲ್ಲಿ ಈ ರಾಶಿಯವರಿಗೆ ಗುರುಬಲ ಇಲ್ಲದಿದ್ದರೂ, ಜೂನ್ 2ರ ನಂತರ ಕರ್ಕಾಟಕ ರಾಶಿಗೆ ಗುರು ಬಂದಾಗ ಶನೈಶ್ಚರನನ್ನು ನಿಯಂತ್ರಿಸುವ ಶಕ್ತಿಯನ್ನು ಪ್ರಧಾನ ಮಾಡಲಿದ್ದಾನೆ. ಗುರುವಿನ ಶಕ್ತಿಯಿಂದಾಗಿ ಮತ್ತು ಗುರುವಿನ ದೃಷ್ಟಿ ಶನೈಶ್ಚರನ ಮೇಲೆ ನೇರವಾಗಿ ಬಿದ್ದಿರುವುದರಿಂದ ಉಳಿದ ಗ್ರಹಗಳು ಈ ರಾಶಿಯವರಿಗೆ ನೀಡವ ಶಕ್ತಿಯನ್ನು ತಡೆಯುವುದಿಲ್ಲ.

ವಿಡಿಯೊ ಇಲ್ಲಿದೆ:



ಶನಿ ಕಾಟದಿಂದ ಮುಕ್ತಿ

2026ರಲ್ಲಿ ಕರ್ಕಾಟಕ ರಾಶಿಯವರಿಗೆ ಯಾವುದೇ ಶನೈಶ್ಚರನ ಕಾಟ ಇರುವುದಿಲ್ಲ. ಶನೈಶ್ಚರನಿಂದ ನೆರವು ಸಿಗಲಿದೆಯೇ ಹೊರತು ಕೆಟ್ಟದ್ದಂತು ಆಗಲು ಸಾಧ್ಯವೇ ಇಲ್ಲ ಎಂದು ಮಹಾಬಲಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ. ಆದರೆ ಗುರು ಇವರ ರಾಶಿಯನ್ನು ಪ್ರವೇಶಿಸುವುದರಿಂದ ಗುರುಬಲ ಇಲ್ಲದಿದ್ದರೂ ಮಕ್ಕಳ ಬಗೆಗಾಗಿನ ಒಳಿತುಗಳನ್ನು ನಿರೀಕ್ಷೆ ಮಾಡಬಹುದಾಗಿದೆ.

ಮಿಥುನ ರಾಶಿಯವರ ದಾಂಪತ್ಯ ಜೀವನದಲ್ಲಿ ಬಿರುಗಾಳಿ, ಗುರುಬಲವಿದ್ದರೂ ತೊಂದರೆ ತಪ್ಪಿದ್ದಲ್ಲ

ದಾಂಪತ್ಯದಲ್ಲಿ ಜೀವನದಲ್ಲಿ ಅನ್ಯೋನ್ಯತೆ

ಗುರುವಿನ ಮೂಲಕವಾಗಿ ಸಾಂಸಾರಿಕ ಜೀವನಕ್ಕೆ ಅದ್ಭುತ ಚೈತನ್ಯ ದೊರೆಯಲಿದೆ. ಅಲ್ಲದೆ ದಾಂಪತ್ಯದಲ್ಲೂ ಅನ್ಯೋನ್ಯತೆ ಪ್ರದರ್ಶಿಸುವ ಸಿದ್ಧಿಯನ್ನು ಗುರು ಈ ರಾಶಿಯವರಿಗೆ ಕರುಣಿಸಲಿದ್ದಾನೆ.

ವ್ಯಾಪಾರದಲ್ಲಿ ಲಾಭ

ಮತ್ಸ್ಯೋದ್ಯಮ, ಸಾಗರೋತ್ಪನ್ನಗಳು, ಐಸ್‌ಕ್ಯಾಂಡಿ, ಹಾಲಿನಿಂದ ಸಿದ್ಧವಾಗುವ ವಸ್ತುಗಳ ವ್ಯಾಪಾರ, ಹೋಟಲ್, ಆಮದು ಮತ್ತು ರಫ್ತು ಮುಂತಾದ ವ್ಯಾಪಾರದಲ್ಲಿ ಗುರುವಿನ ಪ್ರವೇಶದಿಂದಾಗಿ ಈ ಕರ್ಕಾಟಕ ರಾಶಿಯವರಿಗೆ ಯಶಸ್ಸು ದೊರೆಯಲಿದೆ.

ಹಣಕಾಸಿನ ವಿಚಾರದಲ್ಲಿ ಎಚ್ಚರವಿರಲಿ

2026ರಲ್ಲಿ ಕರ್ಕಾಟಕ ರಾಶಿಯವರು ವಿಶೇಷವಾಗಿ ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಎಚ್ಚರಿಕೆವಹಿಸುವುದು ಅತ್ಯವಶ್ಯ. ಈ ರಾಶಿಯವರ ಜಾತಕದಲ್ಲಿ ಶನಿಯು ಭಾಗ್ಯದಲ್ಲಿ ಕುಳಿತಿರುವುದರಿಂದ, ಶನಿ ಕಾಟದ ದಿನಗಳಲ್ಲದಿದ್ದರೂ ಶನೈಶ್ಚರನಿಂದ ತೊಂದರೆಗೊಳಗಾಗುವ ಸಾಧ್ಯತೆಗಳಿವೆ.

ಚಂದ್ರನ ಕ್ಷೀಣತ್ವದಿಂದ ತೊಂದರೆ

2026ರಲ್ಲಿ ಕರ್ಕಾಟಕ ರಾಶಿಯವರಿಗೆ ವಿಶೇಷವಾದ ತೊಂದರೆಗಳಿಲ್ಲ. ಆದರೆ ಈ ರಾಶಿಯವರ ಜಾತಕದಲ್ಲಿ ಚಂದ್ರನ ಕ್ಷೀಣತ್ವ ಇದ್ದಲ್ಲಿ ಕೊಂಚ ತೊಂದರೆಗಳು ಉಂಟಾಗುವ ಸಾಧ್ಯತೆ ಇದೆ. ಚಂದ್ರನ ಕ್ಷೀಣತ್ವ ಇದ್ದಲ್ಲಿ ಒಂದು ವರ್ಷಗಳ ಕಾಲ ಅಘೋರ ಗಣಪತಿ ಶಕ್ತಿಯಂತ್ರವನ್ನು ಈ ರಾಶಿಯವರ ಧರಿಸುವುದು ಉತ್ತಮ.