ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ, ಮೇ 13, 2026: ವ್ಯವಹಾರದಲ್ಲಿ ತೊಂದರೆ, ದಾಂಪತ್ಯದಲ್ಲಿ ಕಲಹ; ಇಂದು ಅಳೆದೂ ತೂಗಿ ಮಾತನಾಡಿ

Horoscope Today May 13th 2026: ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣಪಕ್ಷ, ಏಕಾದಶಿ ತಿಥಿ, ಉತ್ತರ ಭಾದ್ರಪದ ನಕ್ಷತ್ರದ ಮೇ 13ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

ಇಂಟರ್‌ನೆಟ್ ಚಿತ್ರ

ಬೆಂಗಳೂರು, ಮೇ 13: ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲಪಕ್ಷ, ಏಕಾದಶಿ ತಿಥಿ, ಉತ್ತರ ಭಾದ್ರಪದ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿಗಳ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಮೇಷ ರಾಶಿ: ಈ ರಾಶಿಗೆ ಇಂದು ಸ್ವಲ್ಪ ಕಷ್ಟದ ದಿನವಾಗಲಿದೆ. ಮುಖ್ಯವಾದ ನಿರ್ಧಾರ ತೆಗೆದುಕೊಳ್ಳಲು ಹೋಗಬೇಡಿ. ಯಾವುದೇ ಕೆಲಸ ಇಂದು ನಿಮ್ಮ ಪರವಾಗಿ ನಡೆಯುವುದಿಲ್ಲ.

ವೃಷಭ ರಾಶಿ: ಈ ರಾಶಿಗೆ ಇಂದು ಅದೃಷ್ಟದ ದಿನವಾಗಲಿದೆ. ಎಲ್ಲ ಕೆಲಸದಲ್ಲಿ ಜಯ ಪ್ರಾಪ್ತಿಯಾಗುತ್ತದೆ. ಅದೇ ರೀತಿ ಧನ ಆಗಮನದ ಸೂಚನೆ ಕೂಡ ಇದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಕಾರ್ಯ ಕ್ಷೇತ್ರದ ಜವಾಬ್ದಾರಿ ಹೆಚ್ಚಾಗಿರುತ್ತದೆ. ಆದ್ದರಿಂದ ಮನೆಯ ಯೋಚನೆಗಳನ್ನು ಕಡಿಮೆ ಮಾಡಿ ಕೆಲಸ ಕಾರ್ಯದಲ್ಲಿ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಿ.

ಕಟಕ ರಾಶಿ: ಕಟಕ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಆದರೆ ವೈಯಕ್ತಿಕವಾಗಿ ಕೆಲವು ಟೀಕೆಯನ್ನು ನೀವು ಕೇಳಬೇಕಾಗಿ ಬರಬಹುದು. ಹಾಗಾಗಿ ವಿನಯದಿಂದ ವರ್ತಿಸುವುದನ್ನು ರೂಢಿಸಿಕೊಳ್ಳಿ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಕಷ್ಟದ ದಿನವಾಗಲಿದೆ. ಮನಸ್ಸಿಗೆ ಕ್ಷೇಶ ಉಂಟಾಗಲಿದ್ದು, ಮುಖ್ಯ ನಿರ್ಧಾರ ತೆಗೆದುಕೊಳ್ಳಲು ಹೋಗಬೇಡಿ. ಮನಸ್ಸಿಗೆ ಬೇಸರ ಉಂಟಾಗುವ ಸಾಧ್ಯತೆ ಇದೆ.

ಶೌಚಾಲಯ ಮನೆಯ ಯಾವ ದಿಕ್ಕಿನಲ್ಲಿ ಇರಬೇಕು? ವಾಸ್ತು ನಿಯಮ ತಪ್ಪಿದ್ರೆ ಸಮಸ್ಯೆಗಳು ಖಂಡಿತಾ!

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಉತ್ತಮವಾದ ದಿನವಾಗಲಿದೆ. ಎಲ್ಲ ಕೆಲಸ ಕಾರ್ಯದಲ್ಲಿ ಹೆಚ್ಚು ಯಶಸ್ಸು ಸಿಗುತ್ತದೆ. ಬೇರೆಯವರ ಸಹಕಾರದಿಂದ ಇಂದು ನೀವು ಯಶಸ್ಸು ಕಾಣಬಹುದು.

ತುಲಾ ರಾಶಿ: ತುಲಾ ರಾಶಿಯವರಿಗೆ ಉತ್ತಮ ದಿನವಾಗಲಿದೆ. ‌ಶತ್ರುಗಳನ್ನು ನೀವಿಂದು ಹಿಮ್ಮೆಟ್ಟಿಸಬಹುದು. ಕೆಲಸ ಕಾರ್ಯದಲ್ಲೂ ಯಶಸ್ಸು ನಿಮ್ಮದಾಗಲಿದೆ.

ವೃಶ್ಚಿಕ ರಾಶಿ: ಈ ರಾಶಿಗೆ ಪಂಚಮ ಸ್ಥಾನದಲ್ಲಿ ಚಂದ್ರ ಬಂದಿರುವುದರಿಂದ ಸ್ವಲ್ಪ ಮನಸ್ಸಿಗೆ ಕ್ಷೇಶ ಇರುತ್ತದೆ. ವ್ಯವಹಾರದಲ್ಲಿ ತೊಂದರೆ ಎದುರಾಗುತ್ತದೆ. ದಾಂಪತ್ಯದಲ್ಲೂ ಕಲಹ ಉಂಟಾಗಬಹುದು.

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಇಂದು ಕಷ್ಟದ ದಿನವಾಗಲಿದೆ. ಯಾವುದೇ ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗುವುದಿಲ್ಲ. ಮನೆಯಲ್ಲಿ ಕಲಹ ಉಂಟಾಗುವ ಸಾಧ್ಯತೆ ಇದೆ.

ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಮನೆಯಲ್ಲಿ ನೆಮ್ಮದಿ ಇದ್ದು ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಆತ್ಮವಿಶ್ವಾಸ ಹೆಚ್ಚಾಗುವ ಸಾಧ್ಯತೆ ಕೂಡ ಇದೆ.

ಕುಂಭ ರಾಶಿ: ಈ ರಾಶಿಯವರಿಗೆ ಇಂದು ನೆಮ್ಮದಿ ಕಂಡುಬರುವ ದಿನವಾಗಲಿದೆ. ಸುಖ ಸ್ಥಾನದಲ್ಲಿ ಚಂದ್ರ ಬಂದಿರುವುದರಿಂದ ನೆಮ್ಮದಿ ಕಾಣುತ್ತೀರಿ.

ಮೀನ ರಾಶಿ: ಮೀನ ರಾಶಿಯವರಿಗೆ ಹಿಂದಿನ ಎರಡು ಮೂರು ದಿನದಲ್ಲಿ ಇದ್ದ ಮನಸ್ಸಿನ ಕಸಿವಿಸಿ ಕಡಿಮೆಯಾಗುತ್ತದೆ. ಉತ್ತಮ ಮಾರ್ಗದರ್ಶನ ಕೂಡ ಪ್ರಾಪ್ತಿಯಾಗುತ್ತದೆ.