ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Astro Tips: ಮಂಗಳವಾರ ಈ ಕೆಲಸಗಳನ್ನು ಮರೆತು ಮಾಡಿದರೂ ವೈವಾಹಿಕ ಜೀವನದಲ್ಲಿ ಸಮಸ್ಯೆ ತಪ್ಪಿದ್ದಲ್ಲ ಎಚ್ಚರ..!

ವಾರದ ಪ್ರತಿ ದಿನದ ಮಹತ್ವವನ್ನು ಹಿಂದೂ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಇದರೊಂದಿಗೆ ಯಾವ ದಿನದಂದು ನಾವು ಏನು ಮಾಡಬೇಕು, ಏನು ಮಾಡಬಾರದು ಎಂಬ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಅದರಲ್ಲಿ ಮಂಗಳವಾರವೂ ಒಂದಾಗಿದ್ದು, ಇಂದು ಮಾಡಬಾರದ ಕೆಲಸಗಳು ಯಾವುವು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ..

ಸಾಂದರ್ಭಿಕ ಚಿತ್ರ

ಬೆಂಗಳೂರು: ಹಿಂದೂ ಧರ್ಮದ ಪ್ರಕಾರ ವಾರದ ಏಳು ದಿನಗಳಲ್ಲಿ ಒಂದೊಂದು ದಿನವೂ ಒಂದೊಂದು ದೇವರಿಗೆ ಸಮರ್ಪಿತ ಆಗಿದೆ. ಸೋಮವಾರ ಶಿವನಿಗೆ, ಮಂಗಳವಾರ (Tuesday) ಹನುಮಂತ (Hanumanta) ಬುಧವಾರ ವೆಂಕಟೇಶ್ವರ, ಗುರುವಾರ ಸಾಯಿಬಾಬಾ ಮತ್ತು ರಾಘವೇಂದ್ರ ಸ್ವಾಮಿ, ಶುಕ್ರವಾರ ಮಹಾಲಕ್ಷ್ಮೀ ಹಾಗೂ ಶನಿವಾರ ಶನೀಶ್ವರನನ್ನು ಪೂಜಿಸಲಾಗುತ್ತದೆ. ಆಯಾಯ ದಿನಕ್ಕನುಗುಣವಾಗಿ ದೇವರ ಪೂಜೆ ಹಾಗೂ ವೃತವನ್ನು ಕೈಗೊಳ್ಳಲಾಗುತ್ತದೆ. ಹಾಗಾಗಿ ವಾರದ ಮೂರನೇ ದಿನ ಮಂಗಳವಾರ ಹನುಮಂತನ ದಿನವನ್ನಾಗಿ ಪರಿಗಣಿಸಲಾಗುತ್ತದೆ. ಮಂಗಳವಾರದ ದಿನ ಹನುಮನನ್ನು ಧ್ಯಾನಿಸಿದರೆ, ಅದರಲ್ಲೂ ಮುಂಜಾನೆ ಹನುಮನ ಪೂಜೆ (Hanuman Pooje) ಮಾಡಿದರೆ ಫಲ ನೀಡುತ್ತದೆ ಎನ್ನಲಾಗುತ್ತದೆ.

ಪೂಜೆ-ಆರಾಧನೆಯ ಜೊತೆ ಕೆಲವೊಂದು ಕೆಲಸಗಳನ್ನು ಮಂಗಳವಾರ ಮಾಡುವುದು ಅಮಂಗಳಕರ ಅಥವಾ ಅಶುಭವೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದ್ದು, ವಾರದ ಪ್ರತಿ ದಿನದ ಮಹತ್ವವನ್ನು ಹಿಂದೂ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಇದರೊಂದಿಗೆ ಯಾವ ದಿನದಂದು ನಾವು ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ಉಲ್ಲೇಖಿಸಲಾಗಿದ್ದು, ಮಂಗಳವಾರ ಮಾಡಬಾರದ ಆ ಕೆಲಸಗಳಾವುವು..? ಯಾವ ಕೆಲಸ ಮಾಡಿದರೆ ಸಮಸ್ಯೆಗಳು ಎದುರಾಗುತ್ತದೆ..? ಎಂಬ ಮಾಹಿತಿ ಇಲ್ಲಿದೆ.
ಅಲಂಕಾರ ವಸ್ತುಗಳನ್ನು ಖರೀದಿಸಬೇಡಿ
ಸೌಂದರ್ಯ ವರ್ಧಕಗಳನ್ನು ಮಂಗಳವಾರ ಖರೀದಿಸಬಾರದು ಸೌಂದರ್ಯ ಮತ್ತು ಮೇಕ್ಅಪ್ಗೆ ಸಂಬಂಧಿಸಿದ ಉತ್ಪನ್ನಗಳನ್ನು ಮಂಗಳವಾರ ಖರೀದಿಸಬಾರದು. ಇದು ವೈವಾಹಿಕ ಜೀವನದಲ್ಲಿ ಅಶಾಂತಿಯನ್ನು ಮೂಡಿಸುತ್ತದೆ. ನೀವು ಸೌಂದರ್ಯ ಉತ್ಪನ್ನಗಳನ್ನು ಖರೀದಿಸಲು ಬಯಸಿದರೆ, ಸೋಮವಾರ ಮತ್ತು ಶುಕ್ರವಾರ ಇದಕ್ಕೆ ಉತ್ತಮ ದಿನಗಳು.

ಈ ಸುದ್ದಿಯನ್ನು ಓದಿ: Astro Tips: ಶನಿವಾರ ಆಂಜನೇಯನಿಗೆ ಈ ವಸ್ತುಗಳನ್ನು ಅರ್ಪಿಸಿ, ನಿಮ್ಮ ಕಷ್ಟಗಳೆಲ್ಲ ಪರಿಹಾರಗೊಳ್ಳುತ್ತವೆ!


ಹೆಣ್ಣುಮಕ್ಕಳು ಗಂಡನ ಮನೆ/ ತವರು ಮನೆ ಬಿಟ್ಟು ಹೋಗಬಾರದು
ಶಾಸ್ತ್ರಗಳ ಪ್ರಕಾರ, ಹೆಣ್ಣುಮಕ್ಕಳು ಮಂಗಳವಾರ ತವರಿನಿಂದ - ಗಂಡನ ಮನೆಗೆ, ಹಾಗೇ ಗಂಡನ ಮನೆಯಿಂದ ತವರು ಮನೆಗೆ ಹೋಗುವುದನ್ನು ನಿಷೇಧಿಸಲಾಗಿದ್ದು, ಹೆಂಗಸರು ಅಂದು ಮನೆ ಬಿಟ್ಟು ಹೊರಡುವುದರಿಂದ ಅನೇಕ ರೀತಿಯ ಸಮಸ್ಯೆಗಳನ್ನು ಅಥವಾ ಹಾನಿಯನ್ನು ಎದುರಿಸಬೇಕಾಗುತ್ತದೆ ಎಂದು ಶಾಸ್ತ್ರವು ಹೇಳುತ್ತದೆ. ಅಲ್ಲದೇ ಈ ನಿಯಮವನ್ನು ಪಾಲಿಸದೇ ಮುಂದುವರೆದ್ದರೆ ಕೌಟುಂಬಿಕವಾಗಿಯೂ ಅಡೆತಡೆಗಳನ್ನು ಬರಲಿವೆ.

ಕಪ್ಪು ಬಟ್ಟೆ ಧರಿಸುವುದು ನಿಷಿದ್ಧ
ಮಂಗಳವಾರದಂದು ಕೆಂಪು ವಸ್ತ್ರಗಳನ್ನು ಧರಿಸಬೇಕು ಮತ್ತು ಕೆಂಪು ವಸ್ತ್ರಗಳನ್ನು ದಾನ ಮಾಡಬೇಕು ಎಂಬ ನಿಯಮ ಇದೆ. ಹಾಗೇ ಮಂಗಳವಾರ ಕಪ್ಪು ಬಟ್ಟೆಯನ್ನು ಧರಿಸಬಾರದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿದ್ದು, ಹೀಗೆ ಮಾಡುವುದರಿಂದ ಶನಿಯ ಪ್ರಭಾವ ಹೆಚ್ಚಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳ ಮತ್ತು ಶನಿ ಗ್ರಹಗಳ ನಡುವೆ ಪ್ರತಿಕೂಲ ಸಂಬಂಧವಿದೆ. ಶನಿ ಮತ್ತು ಮಂಗಳನ ಸಂಯೋಗವನ್ನು ಯಾವಾಗಲೂ ತೊಂದರೆ ಎಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಮಾನಸಿಕ ಮತ್ತು ದೈಹಿಕ ಸಂಕಟ ಹೆಚ್ಚುತ್ತದೆ.

ಕೂದಲು ಕತ್ತರಿಸಬಾರದು
ಹೆಣ್ಣುಮಕ್ಕಳಿಗೆ ಕೂದಲು ಶೋಭೆ ಎನ್ನುತ್ತಾರೆ. ಹಾಗಾಗಿ ಹೆಣ್ಣುಮಕ್ಕಳ ಕೂದಲಿಗೆ ಕತ್ತರಿ ಹಾಕುವಾಗ ಶುಭಕರವಲ್ಲ ಎಂಬ ನಂಬಿಕೆ ಇದೆ. ಈ ಕಾರಣದಿಂದ ಮಂಗಳವಾರ ಕೂದಲು ಅಥವಾ ಉಗುರುಗಳನ್ನು ಕತ್ತರಿಸದಿರುವುದು ಉತ್ತಮ.