ಬೆಂಗಳೂರು: ಕೆಲವೊಮ್ಮೆ ಎಷ್ಟೇ ದೇವರ ಪೂಜೆ ಮಾಡಿ, ದೇವಸ್ಥಾನ ಸುತ್ತಿದ್ದರೂ ನಿರಂತರವಾಗಿ ಮನೆಯಲ್ಲಿ ಸಮಸ್ಯೆಗಳು ಎದುರಾಗುತ್ತಲೇ ಇರುತ್ತದೆ. ಎಷ್ಟೇ ಪ್ರಯತ್ನಿಸಿದರೂ, ಒದ್ದಾಡಿದ್ದರೂ ಹಾಗೂ ನಮ್ಮ ಶಕ್ತಿ ಮೀರಿ ಯತ್ನಿಸಿದರೂ, ಕಷ್ಟಗಳು ಪರಿಹಾರ ಆಗುವುದೇ ಇಲ್ಲ. ಒಮ್ಮೊಮ್ಮೆ ಯಾರಾದರ ಕೆಟ್ಟ ದೃಷ್ಟಿ ಬಿದ್ದರೆ ಅಥವಾ ದುಷ್ಟ ಕಣ್ಣು (evil eye) ತಗ್ಗಿದ್ದರೆ ಇಂತಹ ಸಂಕಷ್ಟಗಳು ಎದುರಾಗುತ್ತವೆ. ದುಷ್ಟ ಕಣ್ಣು ನಿಮ್ಮ ವ್ಯವಹಾರ, ವ್ಯಾಪಾರ ಅಥವಾ ಆರ್ಥಿಕ ಸ್ಥಿತಿಗತಿ ಮೇಲೆ ಪರಿಣಾಮ ಬೀರಲಿದ್ದು, ಕೆಲವೊಮ್ಮೆ ಈ ಕೆಟ್ಟ ದೃಷ್ಟಿಯಿಂದ ಸಂಬಂಧಗಳಲ್ಲಿಯೂ ಬಿರುಕು ಮೂಡುತ್ತದೆ. ನೀವು ಜೀವನದಲ್ಲಿ ವಿಶೇಷ ಯಶಸ್ಸನ್ನು ಸಾಧಿಸಿದಾಗ ಅಥವಾ ಹೊಸ ಮನೆ, ಅಂಗಡಿ, ವಾಹನವನ್ನು ಖರೀದಿಸಿದಾಗ, ನಿಮ್ಮ ಏಳಿಗೆಯನ್ನು ಸಹಿಸದ ಜನರ ಮನಸ್ಸಿನಲ್ಲಿ ನಕಾರಾತ್ಮಕ ಭಾವನೆ ಮೂಡುತ್ತದೆ, ಇದನ್ನೆ ಕೆಟ್ಟ ದೃಷ್ಟಿ ಎನ್ನಲಾಗುವುದು. ಒಬ್ಬರ ದುಷ್ಟ ಕಣ್ಣು ಯಾವುದರ ಮೇಲಾದರೂ ಇದ್ದಾಗ, ಆ ವ್ಯಕ್ತಿಗೆ ಕೆಟ್ಟದಾಗುತ್ತಾ ಹೋಗುತ್ತದೆ. ಈ ಕೆಟ್ಟ ದೃಷ್ಟಿಗೆ ಎಷ್ಟು ಶಕ್ತಿ ಇದೆ ಎಂದರೆ, ನಿಮ್ಮನ್ನು ಸಂಪೂರ್ಣವಾಗಿ ಕಷ್ಟದಲ್ಲಿ ಮುಳುಗಿಸಲಿದ್ದು, ನಿಮ್ಮ ಅವನತಿಗೂ ಕಾರಣವಾಗುತ್ತದೆ.
ಅದರಲ್ಲೂ ಈ ಮಕ್ಕಳ ಮೇಲೆ ಕೆಟ್ಟ ದೃಷ್ಟಿ ಬೀಳುವ ಸಾಧ್ಯತೆಗಳು ಹೆಚ್ಚಿದ್ದು, ಕಾರಣವಿಲ್ಲದೇ ಅಳುವುದು, ಹಠ ಮಾಡುವುದು. ರಚ್ಚೆ ಹಿಡಿಯುವುದು ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆಗಳು ಕಾಡುತ್ತವೆ. ನಮಗೆ ಕಷ್ಟ ಬಂದರೆ ಸಹಿಸಬಹುದು, ಆದ್ರೆ ಈ ಮಕ್ಕಳಿಗೆ ಹಿಂಸೆಯಾದರೇ ಅದನ್ನು ಅರಗಿಸಿಕೊಳ್ಳುವ ಶಕ್ತಿ ಹೆತ್ತವರಿಗೆ ಇರುವುದಿಲ್ಲ. ಅಲ್ಲದೇ ಕೆಟ್ಟ ಕಣ್ಣಿನ ದೃಷ್ಟಿ ಬಿದ್ದರೆ ಮಕ್ಕಳು ಮಂಕು ಆಗುವ ಸಾಧ್ಯತೆ ಇರಲಿದ್ದು, ಎಲ್ಲದರಲ್ಲೂ ಆಸಕ್ತಿ ಕಳೆದುಕೊಳ್ಳುತ್ತಾರೆ.
ಇಂತಹ ಸಂದರ್ಭದಲ್ಲಿ ಜ್ಯೋತಿಷ್ಯ ಶಾಸ್ತ್ರದಲ್ಲಿ(Astro Tips) ಉಲ್ಲೇಖವಾಗಿರುವ ಕೆಲ ಪರಿಹಾರಗಳನ್ನು ಅನುಸರಿಸುವ ಮೂಲಕ ಇದರಿಂದ ಹೊರ ಬರಬಹುದಾಗಿದ್ದು, ನೀವು, ನಿಮ್ಮ ಮಗು ಕೆಟ್ಟ ಕಣ್ಣುಗಳ ಕಾರಣದಿಂದ ಬಹಳ ಸಮಸ್ಯೆಗೆ ಒಳಗಾಗಿದ್ದರೆ ಕೆಲವೇ ಕೆಲವು ಕ್ರಮಗಳನ್ನು ಮಾಡುವುದರಿಂದ ತೊಂದರೆಗಳಿಂದ ಮುಕ್ತಿ ಪಡೆಯಬಹುದು. ಆ ಪರಿಹಾರಗಳೇನು ಎಂಬುದು ಇಲ್ಲಿದೆ.
ದುಷ್ಟ ಕಣ್ಣಿನ ಹುಟ್ಟಡಾಗಿಸುವ ಹಿಟ್ಟಿನ ದೀಪ
ಮಗುವಿನ ಮೇಲೆ ಬಿದ್ದ ಕೆಟ್ಟ ದೃಷ್ಟಿಯ ಹುಟ್ಟಡಾಗಿಸುವ ಶಕ್ತಿ ಹಿಟ್ಟಿನ ದೀಪಕ್ಕಿದ್ದು, ದೃಷ್ಟಿ
ತೆಗೆಯಲು ಹಿಟ್ಟಿನ ದೀಪವನ್ನು ಮಾಡಬೇಕು, ನಂತರ ಆ ದೀಪದಲ್ಲಿ ನಾಲ್ಕು ಬತ್ತಿಗಳನ್ನು ಇಟ್ಟು ಎಳ್ಳೆಣ್ಣೆಯನ್ನು ಹಾಕಬೇಕು. ಬಳಿಯ ದೀಪವನ್ನು ಹಚ್ಚಿ, ನಿಮ್ಮ ಮಗುವಿನ ತಲೆಯಿಂದ ಪಾದದವರೆಗೂ 21 ಬಾರಿ ನಿವಾಳಿಸಿ, ಅದನ್ನು ಮೂರು ರಸ್ತೆ ಕೂಡುವ ಮಾರ್ಗದಲ್ಲಿ ಹಾಕಬೇಕು ಹೀಗೆ ಮಾಡುವುದರಿಂದ ಕೆಟ್ಟ ದೃಷ್ಟಿ ನಿವಾರಣೆಯಾಗುತ್ತದೆ.
Astro Tips: ಹೊಸ ವರ್ಷ 2026 ನೇ ದಿನ ಈ ರೀತಿ ಪ್ರಾರಂಭ ಮಾಡಿ; ಲಕ್ಷ್ಮೀ ದೇವಿ ನಿಮ್ಮ ಮನೆಯಲ್ಲಿಯೇ ನೆಲೆಸುತ್ತಾಳೆ
ದುಷ್ಟ ಕಣ್ಣಿಗೆ ಈ ಅಡುಗೆಮನೆಯ ವಸ್ತುಗಳು ಮದ್ದು
ನಿಮ್ಮ ಮಗುವಿನ ಯಾರಾದರ ಕೆಟ್ಟ ದೃಷ್ಟಿ ಬಿದಿದ್ದರೆ, ಏಳು ಮೆಣಸಿನಕಾಯಿಗಳು, ಸ್ವಲ್ಪ ಉಪ್ಪು ಮತ್ತು ಅರಿಶಿನವನ್ನು ತೆಗೆದುಕೊಂಡು ಮಗುವಿನ ತಲೆ ಸುತ್ತ ಏಳು ಬಾರಿ ನಿವಾಳಿಸಿ ಬೆಂಕಿಗೆ ಅರ್ಪಿಸಿ. ದೇವರ ದಯೆಯಿಂದ ನಿಮ್ಮ ಮಕ್ಕಳ ಮೇಲೆ ಬಿದ್ದಿರುವ ಕೆಟ್ಟ ದೃಷ್ಟಿ ಹೋಗುತ್ತದೆ ಇದರ ಹೊರತಾಗಿ ಮಕ್ಕಳಿಗೆ ಪಂಚಮುಖಿ ಹನುಮಂತನ ಪದಕ ಇರುವ ಸರವನ್ನು ಮಗುವಿನ ಕತ್ತಿಗೆ ಹಾಕುವುದರಿಂದ ಕೆಟ್ಟ ದೃಷ್ಟಿಯ ಪರಿಣಾಮಗಳು ಯಾವುದೇ ರೀತಿ ಪ್ರಭಾವ ಬೀರುವುದಿಲ್ಲ ಮತ್ತು ಯಾರ ಕೆಟ್ಟ ಕಣ್ಣುಗಳನ್ನು ಸುಲಭವಾಗಿ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗುತ್ತದೆ.
ಇನ್ನು ದೊಡ್ಡವರ ಮೇಲೆ ದುಷ್ಟ ಕಣ್ಣು ಬಿದ್ದಾಗ ಅವರು, ಕಷ್ಟಗಳ ವಿಮೋಚಕನಾಗಿರುವ ನುಮಂತನನ್ನು ತೊಂದರೆಗಳ ವಿಮೋಚಕ ಎಂದು ಪರಿಗಣಿಸಲಾಗುತ್ತದೆ. ಅವನು ಎಲ್ಲಾ ತೊಂದರೆಗಳನ್ನು ನಾಶಮಾಡುವವನು. ಆದ್ದರಿಂದ, ಪ್ರತಿದಿನ ನಿಮ್ಮ ಮಗುವನ್ನು ಕೂರಿಸಿಕೊಂಡು ಬಜರಂಗ್ ಬಾನ್ ಪಠಣವನ್ನು ಪಠಿಸಬೇಕು. ಇದಲ್ಲದೇ ಪ್ರತಿನಿತ್ಯ ಹನುಮಾನ್ ಚಾಲೀಸಾ ಪಠಣ ಮಾಡಿ. ಇದು ನಿಮ್ಮ ಮನೆಗೆ ಬರುವ ಎಲ್ಲಾ ಅಡೆತಡೆಗಳನ್ನು ಸ್ವಯಂಚಾಲಿತವಾಗಿ ತೆಗೆದುಹಾಕುತ್ತದೆ.ಕೆಟ್ಟ ಕಣ್ಣು ಇರುವವರು ಶನಿವಾರದಂದು ಭೈರವ ದೇವಸ್ಥಾನಕ್ಕೆ ಹೋಗಿ ಅಲ್ಲಿ ಕಪ್ಪು ದಾರವನ್ನು ಧರಿಸಬೇಕು. ಇದು ದುಷ್ಟ ಕಣ್ಣಿನ ಪರಿಣಾಮಗಳನ್ನು ನಿವಾರಿಸುತ್ತದೆ