ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Astro Tips: ಬದುಕಿನಲ್ಲಿ ಯಶಸ್ಸು ಪಡೆಯಲು ಶನಿವಾರ ಸಂಜೆ ಈ ಮಂತ್ರ ಪಠಿಸಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿವಾರದ ವಾಯುಪುತ್ರ ಹನುಮಾನ್ ದೇವನನ್ನು ಪೂಜಿಸುವುದರಿಂದ ಜೀವನದಲ್ಲಿ ಎದುರುರಾಗುವ ಸಮಸ್ಯೆಗಳು ಪರಿಹಾರವಾಗುತ್ತವೆ. ಇದರೊಂದಿಗೆ ಶನಿಯ ಅನುಗ್ರಹ ನಿಮಗೆ ದೊರೆಯುತ್ತದೆ. ಇದರ ಜತೆ ಆಂಜನೇಯ ಸ್ವಾಮಿಯನ್ನು ಪೂಜಿಸುವ ವೇಳೆ ನೀವು ಈ ಆಂಜನೇಯನ ಮಂತ್ರಗಳನ್ನು ಜಪಿಸುವುದರಿಂದ ನಿಮ್ಮೆಲ್ಲ ಸಂಕಷ್ಟಗಳು ನಿವಾರಣೆ ಆಗಲಿದ್ದು, ಎಲ್ಲ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ. ಶನಿವಾರ ಆಂಜನೇಯ ಸ್ವಾಮಿಯನ್ನು ಪೂಜಿಸುವಾಗ ನಾವು ಯಾವ ಮಂತ್ರಗಳನ್ನು ಪಠಿಸಬೇಕು? ಆ ಮಂತ್ರಗಳನ್ನು ಪಠಣ ಮಾಡುವುದರಿಂದ ಏನೆಲ್ಲ ಪ್ರಯೋಜನ ಆಗಲಿದೆ? ಎಂಬುದನ್ನು ನೋಡೋಣ.

ಶನಿವಾರ ಯಾವ ಮಂತ್ರ ಪಠಿಸಬೇಕು?

ಆಂಜನೇಯ ಸ್ವಾಮಿ -

Profile
Sushmitha Jain Dec 27, 2025 6:00 AM

ಬೆಂಗಳೂರು, ಡಿ. 27: ಶನಿವಾರದ (Saturday) ದಿನ ಆಂಜನೇಯ ಸ್ವಾಮಿಯನ್ನು(Anjaneya) ಪೂಜಿಸುವುದರಿಂದ ಶನಿ ದೋಷಗಳಿಂದ ಪರಿಹಾರ ಆಗುತ್ತದೆ ಎಂಬ ನಂಬಿಕೆ ನಮ್ಮ ಹಿರಿಯರ ಕಾಲದಿಂದಲೂ ಜನಜನಿತವಾಗಿ ಬಂದಿದೆ. ವಿಶೇಷವಾಗಿ ಶನಿವಾರದ ಸಂಜೆ ಸಮಯದಲ್ಲಿ ಆಂಜನೇಯ ಸ್ವಾಮಿಯ ಆರಾಧನೆ ಮಾಡಿದರೆ ಶನಿಯ ವಕ್ರ ದೃಷ್ಟಿ, ನಕಾರಾತ್ಮಕ ಪರಿಣಾಮಗಳು ಹಾಗೂ ಅಶುಭ ಫಲಗಳು ಕಡಿಮೆಯಾಗುತ್ತವೆ. ಈ ಪೂಜಾ ಕಾರ್ಯಗಳೊಂದಿಗೆ ಆಂಜನೇಯ ಸ್ವಾಮಿಗೆ ಸಂಬಂಧಿಸಿದ ಮಂತ್ರಗಳನ್ನು(Manthra) ಪಠಿಸುವುದು ಅತ್ಯಂತ ಫಲಪ್ರದವಾಗಿದ್ದು, ಶನಿ ಸಾಡೇಸಾತಿ ಸಮಸ್ಯೆಯು ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.

ಹೌದು, ಜ್ಯೋತಿಷ್ಯ ಶಾಸ್ತ್ರದ (Astro Tips) ಪ್ರಕಾರ ಶನಿವಾರ ವಾಯುಪುತ್ರ ಹನುಮಾನ್ ದೇವನನ್ನು ಪೂಜಿಸುವುದರಿಂದ ಜೀವನದಲ್ಲಿ ಎದುರುರಾಗುವ ಸಮಸ್ಯೆಗಳು ಪರಿಹಾರವಾಗುತ್ತದೆ. ಇದರೊಂದಿಗೆ ಶನಿಯ ಅನುಗ್ರಹವೂ ನಿಮೆಗೆ ದೊರೆಯಲಿದೆ. ಜತೆಗೆ ಆಂಜನೇಯ ಸ್ವಾಮಿಯನ್ನು ಪೂಜಿಸುವ ವೇಳೆಯಲ್ಲಿ ನೀವು ಈ ಆಂಜನೇಯನ ಮಂತ್ರಗಳನ್ನು ಜಪಿಸುವುದರಿಂದ ನಿಮ್ಮೆಲ್ಲ ಸಂಕಷ್ಟಗಳು ನಿವಾರಣೆ ಆಗಲಿದೆ. ಹಾಗಾದರೆ ಬನ್ನಿ ಶನಿವಾರ ಆಂಜನೇಯ ಸ್ವಾಮಿಯನ್ನು ಪೂಜಿಸುವಾಗ ನಾವು ಯಾವ ಮಂತ್ರಗಳನ್ನು ಪಠಿಸಬೇಕು? ಆ ಮಂತ್ರಗಳನ್ನು ಪಠಣ ಮಾಡುವುದರಿಂದ ಏನೆಲ್ಲ ಪ್ರಯೋಜನ ಸಿಗಲಿದೆ? ಎಂಬುದನ್ನು ನೋಡೋಣ.

ಶನಿ ದೋಷ ನಿವಾರಣೆಗೆ ಹನುಮಾನ್ ಮಂತ್ರ ಪಠಣ

ಆಂಜನೇಯ ಸ್ವಾಮಿಯ ಶಕ್ತಿಶಾಲಿ ಮಂತ್ರಗಳನ್ನು ಪಠಿಸುವುದರಿಂದ ಶನಿಯ ಕೆಟ್ಟ ದೃಷ್ಟಿ ದೂರವಾಗಿ, ಭಕ್ತರಿಗೆ ರಕ್ಷಣೆ, ಧೈರ್ಯ ಹಾಗೂ ಆತ್ಮಬಲ ಲಭಿಸುತ್ತದೆ. ಈ ಮಂತ್ರ ಜಪವು ಖ್ಯಾತಿ, ಸಂಪತ್ತು ಹಾಗೂ ಶತ್ರುಭಾಧೆ ನಿವಾರಣೆಗೆ ಸಹಕಾರಿಯಾಗುತ್ತದೆ ಎಂದು ನಂಬಲಾಗುತ್ತದೆ.

ಹೊಸ ವರ್ಷ ಈ ರೀತಿ ಪ್ರಾರಂಭ ಮಾಡಿ

ಖ್ಯಾತಿ ಮತ್ತು ಅದೃಷ್ಟಕ್ಕಾಗಿ ಹನುಮಾನ್ ಮಂತ್ರ

ಓಂ ನಮೋ ಹನುಮತೇ ರುದ್ರಾವತಾರಾಯ ವಿಶ್ವರೂಪಾಯ ಅಮಿತವಿಕ್ರಮಾಯ

ಪ್ರಕಟ ಪರಾಕ್ರಮಾಯ ಮಹಾಬಲಾಯ

ಸೂರ್ಯಕೋಟಿಸಮಪ್ರಭಾಯ ರಾಮದೂತಾಯ ಸ್ವಾಹಾ

ಸಂಪತ್ತು ವೃದ್ಧಿಗಾಗಿ ಹನುಮಾನ್ ಮಂತ್ರ

ಓಂ ನಮೋ ಹನುಮತೇ ರುದ್ರಾವತಾರಾಯ ಭಕ್ತಜನಮನಃ ಕಲ್ಪನಕಲ್ಪದ್ರುಮಾಯಂ

ಪ್ರಭಂಜನಪ್ರಾಣಪ್ರಿಯಾಯ ಮಹಾಬಲಪರಾಕ್ರಮಾಯ

ಮಹಾವಿಪತ್ತಿನಿವಾರಣಾಯ

ಪುತ್ರಪೌತ್ರಧನಧಾನ್ಯಾದಿವಿಸಂಪತ್ಪ್ರದಾಯ ರಾಮದೂತಾಯ ಸ್ವಾಹಾ

ಶತ್ರು ನಾಶ ಹಾಗೂ ರಕ್ಷಣೆಗೆ ಮಂತ್ರ

ಓಂ ನಮೋ ಹನುಮತೇ ರುದ್ರಾವತಾರಾಯ ರಾಮಸೇವಕಾಯ

ರಾಮಭಕ್ತಿತಾತ್ಪರಾಯ ರಾಮಹೃದಯಾಯ

ಸಕಲಶತ್ರುಸಂಹಾರಕಾಯ ರಾಮದೂತಾಯ ಸ್ವಾಹಾ

ನಕಾರಾತ್ಮಕ ಶಕ್ತಿಯಿಂದ ಮುಕ್ತಿ ನೀಡುವ ಮಂತ್ರಗಳು

ಓಂ ಹಂ ಹನುಮತೇ ನಮೋ ನಮಃ

ಶ್ರೀ ಹನುಮತೇ ನಮೋ ನಮಃ

ಜೈ ಜೈ ಹನುಮತೇ ನಮೋ ನಮಃ

ಶ್ರೀ ರಾಮದೂತಾಯ ನಮೋ ನಮಃ

ಪೂಜಾ ವಿಧಾನ

ಶನಿವಾರ ಸಂಜೆ ಸ್ನಾನ ಮಾಡಿ ಕೆಂಪು ಬಟ್ಟೆ ಧರಿಸಿ, ಆಂಜನೇಯ ಸ್ವಾಮಿಯ ಫೋಟೊ ಅಥವಾ ವಿಗ್ರಹದ ಮುಂದೆ ಕುಳಿತು ಸಿಂದೂರ, ಕೆಂಪು ಹೂವು, ಮಲ್ಲಿಗೆ ಎಣ್ಣೆ ಹಾಗೂ ಬೂಂದಿ ಲಡ್ಡುಗಳನ್ನು ಅರ್ಪಿಸಬೇಕು. ನಂತರ ಹನುಮಾನ್ ಚಾಲೀಸಾ ಮತ್ತು ಸುಂದರಕಾಂಡವನ್ನು ಶುದ್ಧ ಮನಸ್ಸಿನಿಂದ ಪಠಿಸಿ, ಅಗತ್ಯವಿರುವ ಮಂತ್ರಗಳನ್ನು ಜಪಿಸಬೇಕು. ಹೀಗೆ ಭಕ್ತಿ ಭಾವದಿಂದ ಮಾಡಿದ ಈ ಆರಾಧನೆಯಿಂದ ಶೀಘ್ರದಲ್ಲೇ ಶುಭ ಫಲಿತಾಂಶಗಳು ದೊರೆಯುತ್ತವೆ ಎಂಬ ನಂಬಿಕೆ ಇದೆ.