ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Astro Tips: ಸೋಮವಾರ ಈ ವಸ್ತುಗಳನ್ನು ಶಿವನಿಗೆ ಅರ್ಪಿಸಿದರೆ ಮನೆಯಲ್ಲಿ ಹಣದ ಮಳೆಯೇ ಸುರಿಯುತ್ತದೆ!

ಸೋಮವಾರ ಶಿವನನ್ನು ಪೂಜಿಸುವುದರ ಜತೆಗೆ ಆತನಿಗೆ ಪ್ರಿಯವಾದ ಕೆಲ ವಸ್ತುಗಳನ್ನು ಅರ್ಪಿಸುವುದರಿಂದ ಮನೆಯಲ್ಲಿ ಸುಖ - ಶಾಂತಿ ನೆಲೆಸುತ್ತದೆ. ಅಲ್ಲದೆ ಹಣದ ಮಳೆಯೇ ಸುರಿಯುತ್ತದೆ. ಶಿವಲಿಂಗಕ್ಕೆ ನೀವು ಸೋಮವಾರ ತಪ್ಪದೇ ಅರ್ಪಿಸಬೇಕಾಗಿರವ ವಸ್ತು ಯಾವುದು ಎನ್ನುವ ವಿವರ ಇಲ್ಲಿದೆ.

ಶಿವ

ಬೆಂಗಳೂರು: ಶಿವನನ್ನು (Lord Shiva) ಶ್ರದ್ಧೆ - ಭಕ್ತಿಯಿಂದ ಆರಾಧಿಸುವುದರಿಂದ ಅದೃಷ್ಟ ಹುಡುಕಿಕೊಂಡು ಬರುತ್ತದೆ ಎನ್ನಲಾಗುತ್ತದೆ. ಅಲ್ಲದೇ ಉದ್ಯೋಗ ಕ್ಷೇತ್ರದಲ್ಲಿ ಅಭಿವೃದಿ ದೊರೆಯುವುದರ ಜತೆಗೆ ಒಳ್ಳೆಯ ಹೆಸರು ಹಾಗೂ ಯಶಸ್ಸು ಪಡೆದುಕೊಳ್ಳಬಹುದು. ಕುಟುಂಬದ ಸಂತೋಷಕ್ಕೆ, ಪತಿಯ ದೀರ್ಘಾಯುಷ್ಯಕ್ಕೆ ಮತ್ತು ಅವಿವಾಹಿತ ಮಹಿಳೆಯರು ಉತ್ತಮ ಪತಿಯನ್ನು ಪಡೆಯಲು ಶಿವ ಪೂಜೆಯನ್ನು ಮಾಡುತ್ತಾರೆ. ಅದರಲ್ಲೂ ಸೋಮವಾರ (Monday) ಮಾಡುವ
ಶಿವಪೂಜೆ (Shiva Pooje) ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಶಿವನನ್ನು ಪೂಜಿಸುವುದರಿಂದ ಶುಭ ಫಲವನ್ನು ಪಡೆದುಕೊಳ್ಳಬಹುದು.

ಹಿಂದೂ ಧರ್ಮದಲ್ಲಿ(Hindu Religion) ಸೋಮವಾರವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಜ್ಯೋತಿ ಶಾಸ್ತ್ರಗಳ ಪ್ರಕಾರ, ಇದು ಶಿವನಿಗೆ ಬಹಳ ಪ್ರಿಯವಾದ ದಿನ. ಈ ದಿನದಂದು ಈಶ್ವರನನ್ನು ಪೂಜಿಸುವುದರಿಂದ ಮತ್ತು ಪ್ರಾಮಾಣಿಕ ಹೃದಯದಿಂದ ಆತನನ್ನು ಸ್ಮರಿಸುವುದರಿಂದ ಭಕ್ತರ ಎಲ್ಲ ತೊಂದರೆಗಳು ಶೀಘ್ರದಲ್ಲೇ ದೂರವಾಗುತ್ತವೆ ಎಂದು ನಂಬಲಾಗಿದೆ. ಇದರೊಂದಿಗೆ ಅವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ ಎನ್ನುವ ನಂಬಿಕೆಯಿದೆ.

ಹಾಗೇ ಈ ದಿನದಂದು ಅರ್ಧನಾರೀಶ್ವರನಿಗೆ ಕೆಲ ವಸ್ತುಗಳನ್ನು ಅರ್ಪಿಸುವುದರಿಂದ ಶೀಘ್ರದಲ್ಲೇ ಜೀವನದಲ್ಲಿ ಆರ್ಥಿಕ ಲಾಭವನ್ನು ಪಡೆದುಕೊಳ್ಳಬಹುದಾಗಿದ್ದು, ಆರೋಗ್ಯ ಸಂಬಂಧಿ ಸಮಸ್ಯೆಯೂ ಪರಿಹಾರವಾಗಲಿದೆ. ಅಲ್ಲದೇ ಭಕ್ತರ ಎಲ್ಲ ಆಸೆಗಳನ್ನು ಈಡೇರಿಸುತ್ತಾನೆ ಮತ್ತು ಜೀವನದಲ್ಲಿ ಎಲ್ಲ ತೊಂದರೆಗಳನ್ನು ಶಾಶ್ವತವಾಗಿ ನಿವಾರಣೆ ಮಾಡುತ್ತಾನೆ ಎನ್ನುವ ನಂಬಿಕೆ ಇದೆ. ಹಾಗಾಗಿ ಸೋಮವಾರ ಈ ವಸ್ತುಗಳನ್ನು ಅರ್ಪಿಸಿ ಶಿವನ ಅನುಗ್ರಹ ಪಡೆದುಕೊಳ್ಳಿ.

ರುದ್ರಾಕ್ಷ

ರುದ್ರಾಕ್ಷವು ಶಿವನಿಗೆ ಬಹಳ ವಿಶೇಷವಾದದ್ದು. ಇದು ಶಿವನ ಕಣ್ಣೀರಿನಿಂದ ತಯಾರಾಗಿದೆ ಎಂದು ಹೇಳಲಾಗುತ್ತದೆ. ಕೊನೆಯ ಸೋಮವಾರದಂದು ನೀವು ಶಿವಲಿಂಗಕ್ಕೆ ರುದ್ರಾಕ್ಷ ಅಥವಾ ರುದ್ರಾಕ್ಷದ ಹಾರವನ್ನು ಅರ್ಪಿಸಿದರೆ, ಮಹಾದೇವನು ಪ್ರಸನ್ನನಾಗುತ್ತಾನೆ. ವ್ಯಕ್ತಿಯ ಜೀವನದಲ್ಲಿ ಆರ್ಥಿಕ ಪ್ರಗತಿಯ ಸಾಧ್ಯತೆ ಇರುತ್ತದೆ. ಇದು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.

ವಾಸ್ತು ಪ್ರಕಾರ, ಮನೆಯೊಳಗೆ ಏಳು ಕುದುರೆ ಫೋಟೋ ಹಾಕಲು ಸೂಕ್ತ ಸ್ಥಳ ಯಾವುದು?

ಕಪ್ಪು ಎಳ್ಳು

ಸೋಮವಾರದಂದು ಶಿವಲಿಂಗಕ್ಕೆ ಒಂದು ಮುಷ್ಟಿ ಕಪ್ಪು ಎಳ್ಳನ್ನು ಅರ್ಪಿಸಿದರೆ, ಮನೆಯ ಸಮಸ್ಯೆಗಳು ಕೊನೆಗೊಳ್ಳುತ್ತವೆ ಎಂದು ನಂಬಲಾಗಿದೆ. ಅಷ್ಟು ಮಾತ್ರವಲ್ಲ, ಇದು ಮಾನಸಿಕ ಒತ್ತಡದಿಂದ ಮುಕ್ತಿ ಸಿಗುವಂತೆ ಮಾಡುತ್ತದೆ.

ಅಕ್ಕಿ

ಸೋಮವಾರ ಈಶ್ವರನಿಗೆ ಒಂದು ಮುಷ್ಟಿ ಅಕ್ಕಿಯನ್ನು ಪೂರ್ಣ ಭಕ್ತಿಯಿಂದ ಅರ್ಪಿಸಿದರೆ, ಅವನು ಸಂತುಷ್ಟನಾಗಿ ವರವನ್ನು ನೀಡುತ್ತಾನೆ. ಶಿವನಿಗೆ ಅಕ್ಕಿಯನ್ನು ಪೂರ್ಣ ಭಕ್ತಿಯಿಂದ ಅರ್ಪಿಸಬೇಕು. ಇದರಿಂದ ನೀವು ಬೇಡಿದ ವರವನ್ನು ಪಡೆದುಕೊಳ್ಳಬಹುದು.

ಬಿಲ್ವ ಪತ್ರೆ

ಶಿವನಿಗೆ ಅತ್ಯಂತ ಪ್ರಿಯವಾದ ವಸ್ತುಗಳಲ್ಲಿ ಬಿಲ್ವ ಪತ್ರೆ ಎಲೆಯು ಅತ್ಯಂತ ಪ್ರಮುಖವಾದುದ್ದು. ಶ್ರಾವಣ ಸೋಮವಾರ ಶಿವನನ್ನು ಪೂಜಿಸುವಾಗ ಆತನಿಗೆ ಬಿಲ್ವ ಪತ್ರೆಯನ್ನು ಅರ್ಪಿಸಿದರೆ ನಾವು ಬಯಸಿದ ವರವನ್ನು ಪಡೆದುಕೊಳ್ಳಬಹುದು. ಭೋಲೇನಾಥನಿಗೆ ಬಿಲ್ವ ಪತ್ರೆಯನ್ನು ಅರ್ಪಿಸುವಾಗ ಮಂತ್ರವಾದ

ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಿಧಾಯುತಂ|

ತ್ರಿಜನ್ಮಪಾಪಸಂಹಾರಂ ಬಿಲ್ವಪತ್ರಂ ಶಿವಾರ್ಪಣಂ|

ಈ ಮಂತ್ರವನ್ನು ಪಠಿಸಿ. ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಜೀವನದಲ್ಲಿ ಸಂತೋಷವನ್ನು ಹೊಂದಬಹುದು. ಮತ್ತು ಕುಟುಂಬದಲ್ಲಿ ಎಂದಿಗೂ ತೊಂದರೆ ಇರುವುದಿಲ್ಲ.