ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Astro Tips: ಕೈಗೊಂಡ ಕೆಲಸ ಸಂಪೂರ್ಣ ಸಕ್ಸಸ್‌ ಆಗಲು ಶನಿವಾರ ಈ ಕೆಲಸ ಮಾಡಿ..!

Pooja Tips for Anjaneya: ಪ್ರತಿ ಶನಿವಾರ ಹನುಮಂತನನ್ನು ಪೂಜಿಸಿ ಕೆಲವು ವಿಶೇಷ ಕೆಲಸಗಳನ್ನು ಕೈಗೊಂಡರೆ ನಿಮ್ಮ ಜೀವನದಲ್ಲಿನ ಕಷ್ಟಗಳು ದೂರವಾಗುತ್ತವೆ. ಶನಿವಾರ ಕೆಲ ವಸ್ತುಗಳನ್ನು ಹನುಮಂತನಿಗೆ ಅರ್ಪಿಸಿದ್ರೆ ನಿಮ್ಮ ಜೀವನದಲ್ಲಿನ ತೊಂದರೆಗಳು ಶೀಘ್ರವಾಗಿ ಮಾಯವಾಗುತ್ತವೆ. ಈ ಕುರಿತು ಇಲ್ಲಿದೆ ಮಾಹಿತಿ.

ಆಂಜನೇಯ

ಬೆಂಗಳೂರು: ಹಿಂದೂ (Hindu Religion) ಧರ್ಮದಲ್ಲಿ ಹನುಮಂತನ ಪೂಜೆ (Hanuman Pooje) ಗೆ ವಿಶೇಷ ಮಹತ್ವವಿದೆ. ಆಂಜನೇಯನ ಪೂಜೆಯಿಂದ ಭಕ್ತರ ಎಲ್ಲಾ ತೊಂದರೆಗಳು ಮತ್ತು ಅಡೆತಡೆಗಳು ನಿಮಿಷಗಳಲ್ಲಿ ದೂರವಾಗುತ್ತವೆ. ಪವನಸುತನನ್ನು ಪೂಜಿಸುವುದರಿಂದ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಎನ್ನುವ ನಂಬಿಕೆಯಿದೆ. ಶನಿವಾರ (Saturday) ದ ಶುಭ ದಿನವನ್ನು ಹನುಮಂತನಿಗೆ ಸಮರ್ಪಿಸಲಾಗಿದೆ (Astro Tips).

ಅಂದಹಾಗೆ, ಹನುಮಂತನನ್ನು ಯಾವುದೇ ಸಮಯದಲ್ಲಿ ಗೌರವದಿಂದ ಪೂಜಿಸಬಹುದು ಮತ್ತು ಯಾವುದೇ ಓರ್ವ ಭಕ್ತನು ಹನುಮಂತನನ್ನು ನಿಜವಾದ ಹೃದಯದಿಂದ ನೆನಪಿಸಿಕೊಂಡಾಗ ಅವನು ತನ್ನ ಭಕ್ತನ ಬಳಿ ಓಡಿ ಬರುತ್ತಾನೆ ಎನ್ನುವ ನಂಬಿಕೆಯಿದೆ. ಅದರಲ್ಲೂ ಶನಿವಾರದಂದು ವಿಶೇಷ ಕ್ರಮಗಳನ್ನು ಪಾಲಿಸಿದರೆ ಹನುಮನ ವಿಶೇಷ ಅನುಗ್ರಹ ಪ್ರಾಪ್ತವಾಗುತ್ತದೆ. ಹನುಮಂತನ ಆರಾಧನೆಗಾಗಿ, ಇಷ್ಟಾರ್ಥಗಳ ಈಡೇರಿಕೆಗಾಗಿ ಶನಿವಾರದ ದಿನವು ಹೆಚ್ಚು ಪರಿಣಾಮಕಾರಿಯೆಂದು ಹೇಳಲಾಗುತ್ತದೆ. ಅದರಲ್ಲೂ ಶನಿವಾರ ಕೆಲ ವಸ್ತುಗಳನ್ನು ಆಂಜನೇಯನಿಗೆ ಆರ್ಪಿಸುವುದರಿಂದ ಶುಭ ಫಲಗಳು ಸಿಗಲಿದ್ದು, ಆ ವಸ್ತುಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ಅರಳಿ ಎಲೆ:
ಶನಿವಾರ ಮುಂಜಾನೆ ಎದ್ದು, ನಿತ್ಯ ಕರ್ಮಗಳನ್ನು ಮುಗಿಸಿದ ಬಳಿಕ ಶುದ್ಧವಾಗಿ, ಮಡಿ ಬಟ್ಟೆ ಧರಿಸಿ. ನಂತರ 11 ಅರಳಿ ಎಲೆಗಳನ್ನು ಕಿತ್ತಿ, ಆ ಎಲೆಗಳನ್ನು ಗಂಗಾಜಲದಿಂದ ಸ್ವಚ್ಛಗೊಳಿಸಿ. ಬಳಿಕ ಅದರ ಮೇಲ್ಬಾಗದಲ್ಲಿ ಕುಂಕುಮ ಅಥವಾ ಶ್ರೀಗಂಧದಿಂದ ಶ್ರೀರಾಮ ಎಂದು ಬರೆಯಿರಿ. ನಂತರ ಈ ಎಲೆಗಳಿಂದ ಮಾಲೆಯನ್ನು ಮಾಡಿ ಹನುಮಂತನಿಗೆ ಅರ್ಪಿಸಿ. ಹೀಗೆ ಮಾಡುವುದರಿಂದ ಶೀಘ್ರದಲ್ಲಿ ಆರ್ಥಿಕ ಸಮಸ್ಯೆ ಪರಿಹರಗೊಳ್ಳುತ್ತದೆ.

ಈ ಸುದ್ದಿಯನ್ನು ಓದಿ: Vastu Tips: ಮನೆಯಲ್ಲಿ ಲಾಫಿಂಗ್ ಬುದ್ಧನ ವಿಗ್ರಹ ಇದ್ದರೆ ಎಷ್ಟೆಲ್ಲ ಲಾಭ ಗೊತ್ತೆ?


ಎಲೆ ಮತ್ತು ಅಡಿಕೆ:
ಬಹಳ ಕಾಲದಿಂದ ನೀವು ಅಂದುಕೊಂಡಿದ ಕೆಲಸ ಕಾರ್ಯಗಳು ಪೂರ್ಣಗೊಳ್ಳದೇ ನೀವು ಸಮಸ್ಯೆ ಎದುರಿಸುತ್ತಿದ್ದರೆ ನೀವು ಶನಿವಾರ ಆಂಜನೇಯ ಸ್ವಾಮಿಗೆ ಎಲೆ ಮತ್ತು ಅಡಿಕೆ ಅರ್ಪಿಸಬಹುದು. ಹೌದು ನೀವು ಅಂದುಕೊಂಡ ಕೆಲಸ ಸರಿಯಾದ ಸಮಯಕ್ಕೆ ಪೂರ್ಣಗೊಳ್ಳದಿದ್ದರೆ, ನೀವು ಆ ಕೆಲಸಕ್ಕೆ ಹೋಗುವ ಮೊದಲು, ಶನಿವಾರ ಹನುಮಂತನಿಗೆ ವೀಳ್ಯದೆಲೆ ಅನ್ನು ಅರ್ಪಿಸಿ. ಇದರಿಂದ ಪ್ರತಿ ಕೆಲಸದಲ್ಲೂ ಯಶಸ್ಸು ಸಿಗುತ್ತದೆ ಎನ್ನುವ ನಂಬಿಕೆಯಿದೆ. ಇದು ನಿಮ್ಮ ಪ್ರಗತಿಗೆ ಪೂರಕವಾಗಿರುತ್ತದೆ.

ಮಲ್ಲಿಗೆ ಎಣ್ಣೆ:
ಪ್ರತಿ ಶನಿವಾರ ಹನುಮಾನ್ ದೇವರಿಗೆ ಮಲ್ಲಿಗೆ ಎಣ್ಣೆಯ ದೀಪವನ್ನು ಹಚ್ಚಿ, ಮಲ್ಲಿಗೆ ಹೂವುಗಳನ್ನು ಅರ್ಪಿಸಿದ್ದರೆ ನೀವು ಬಜರಂಗ ಬಲಿಯ ಕೃಪೆಗೆ ಪಾತ್ರರಾಗುತ್ತೀರಾ. ಇದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿಯೂ ನೆಲೆಸುತ್ತದೆ. ಇದು ನಿಮಗೆ ಹನುಮಂತನ ಅನುಗ್ರಹವನ್ನು ಪಡೆಯುವಲ್ಲಿ ಸಹಕರಿಸುತ್ತದೆ.

ಮಂಗಳವಾರದ ದಿನದಂದು ಈ ಮೇಲಿನ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಹನುಮಂತನ ಕೃಪೆಯು ದೊರೆಯುತ್ತದೆ ಮತ್ತು ಈ ಪರಿಹಾರಗಳು ನಮ್ಮ ಜೀವನದಲ್ಲಿನ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ನೀವೂ ಕೂಡ ಹನುಮಂತನಿಗೆ ಈ ಮೇಲಿನ ವಸ್ತುಗಳನ್ನು ಅರ್ಪಿಸುವುದರಿಂದ ನಿಮ್ಮ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು.