ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Astro Tips: ಹೊಸ ವರ್ಷ 2026 ನೇ ದಿನ ಈ ರೀತಿ ಪ್ರಾರಂಭ ಮಾಡಿ; ಲಕ್ಷ್ಮೀ ದೇವಿ ನಿಮ್ಮ ಮನೆಯಲ್ಲಿಯೇ ನೆಲೆಸುತ್ತಾಳೆ

ದೇವರ ಕೃಪೆಯೊಂದಿಗೆ ಹೊಸ ವರ್ಷದ ಆರಂಭ ಮಾಡಿದರೆ, ಶುಭಫಲಗಳು ಲಭಿಸುತ್ತವೆ ಹಾಗೂ ಲಕ್ಷ್ಮೀ ದೇವಿಯ ಅನುಗ್ರಹ ಸದಾ ನಿಮ್ಮ ಮೇಲೆ ಇರುತ್ತದೆ ಎಂಬ ನಂಬಿಕೆ ನಮ್ಮ ಪೂರ್ವಜರ ಕಾಲದಿಂದಲೂ ಇದೆ. ನಿಮ್ಮ ಎಲ್ಲಾ ಆಸೆಗಳು ಈಡೇರಬೇಕು ಹಾಗೂ ಹೊಸ ವರ್ಷ 2026 ಸಂಪತ್ತು–ಸಂತೋಷದಿಂದ ತುಂಬಿರಬೇಕೆಂದರೆ, ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖ ಆಗಿರುವ ಈ ಸರಳ ಕ್ರಮಗಳನ್ನು ಅನುಸರಿಸಿ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಹೊಸ ವರ್ಷವು(New Year) ಜೀವನಕ್ಕೆ ಹೊಸ ಉತ್ಸಾಹ, ಹೊಸ ಆಶಾವಾದ ಮತ್ತು ಅಪಾರ ಸಂತೋಷವನ್ನು ತರಲಿ ಎಂಬ ಮನದಾಸೆ ಎಲ್ಲರಿಗೂ ಇದೇ ಇರುತ್ತದೆ. ಆದ್ದರಿಂದಲ್ಲೇ ವರ್ಷಾರಂಭದ ದಿನದಂದು ಭಕ್ತಿಭಾವದಿಂದ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುವ ಮೂಲಕ ಆ ದಿನವನ್ನು ಆರಂಭಿಸುತ್ತಾರೆ. ದೇವರ ಕೃಪೆಯೊಂದಿಗೆ ಹೊಸ ವರ್ಷದ ಆರಂಭ ಮಾಡಿದರೆ, ಶುಭಫಲಗಳು ಲಭಿಸುತ್ತವೆ ಹಾಗೂ ಲಕ್ಷ್ಮೀ ದೇವಿಯ ಅನುಗ್ರಹ ಸದಾ ನಿಮ್ಮ ಮೇಲೆ ಇರುತ್ತದೆ ಎಂಬ ನಂಬಿಕೆ ನಮ್ಮ ಪೂರ್ವಜರ ಕಾಲದಿಂದಲೂ ಇದೆ. ನಿಮ್ಮ ಎಲ್ಲಾ ಆಸೆಗಳು ಈಡೇರಬೇಕು ಹಾಗೂ ಹೊಸ ವರ್ಷ 2026 ಸಂಪತ್ತು–ಸಂತೋಷದಿಂದ ತುಂಬಿರಬೇಕೆಂದರೆ,
ಜ್ಯೋತಿಷ್ಯ ಶಾಸ್ತ್ರದಲ್ಲಿ(Astro Tips) ಉಲ್ಲೇಖ ಆಗಿರುವ ಈ ಸರಳ ಕ್ರಮಗಳನ್ನು ಅನುಸರಿಸಿ. ಇದರಿಂದ ನಿಮ್ಮ ಸಕಲ ಇಷ್ಟಾರ್ಥಗಳು ನೆರವೇರಲಿದೆ.

ಐಶ್ವರ್ಯ ಮತ್ತು ಮನಶಾಂತಿಗಾಗಿ
ವರ್ಷದ ಮೊದಲ ದಿನ ಬೆಳಗ್ಗೆ ಸೂರ್ಯ ದೇವರಿಗೆ ಅರ್ಘ್ಯ ಅರ್ಪಿಸುವುದರಿಂದ ದಿನದ ಶುಭಾರಂಭವಾಗುತ್ತದೆ. ನಂತರ ಗುರುರಾಯರ ಪೂಜೆ ಮಾಡಿ ಅವರಿಗೆ ತುಳಸಿ ಹಾರವನ್ನು ಅರ್ಪಿಸಿ. 2026ರ ಜನವರಿ 1 ಗುರುವಾರವಾಗಿರುವುದರಿಂದ ಈ ದಿನ ರಾಯರ ಆರಾಧನೆಗೆ ಅತ್ಯಂತ ಶ್ರೇಷ್ಠವಾಗಿದೆ. ಈ ವೇಳೆ “ಓಂ ರಾಘವೇಂದ್ರಯ ನಮಃ” ಮಂತ್ರವನ್ನು ಜಪಿಸುವುದರಿಂದ ವರ್ಷಪೂರ್ತಿ ನೆಮ್ಮದಿ ಸುಖ ಶಾಂತಿ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಬಿಲ್ವಪತ್ರೆ ಗಿಡಕ್ಕೆ ವಿಶೇಷ ಮಹತ್ವ
ಬಿಲ್ವಪತ್ರೆ ಗಿಡವಿರುವ ಮನೆಗೆ ಶಿವನ ಆಶೀರ್ವಾದ ಸದಾ ಇರುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ. ಅಂಥ ಮನೆಯಲ್ಲಿ ಧನಲಕ್ಷ್ಮಿಯ ವಾಸವೂ ಇರುತ್ತದೆ ಎಂದು ನಂಬಲಾಗುತ್ತದೆ. ಹೀಗಾಗಿ 2026ರ ಮೊದಲ ದಿನ ಮನೆಯ ಉತ್ತರ ದಿಕ್ಕಿನಲ್ಲಿ ಬಿಲ್ವಪತ್ರೆ ಗಿಡವನ್ನು ನೆಟ್ಟರೆ, ನಕಾರಾತ್ಮಕ ಶಕ್ತಿಗಳು ಮನೆಯೊಳಗೆ ಪ್ರವೇಶಿಸುವುದಿಲ್ಲ ಎಂದು ಹೇಳಲಾಗುತ್ತದೆ.

Vastu Tips: ಮನೆಯಲ್ಲಿ ಈ ವಸ್ತುಗಳು ಖಾಲಿಯಾದ್ರೆ ಆರ್ಥಿಕ ಸಂಕಷ್ಟ ಪಕ್ಕಾ!

ಹಳದಿ ಸಾಸಿವೆಯಿಂದ ಲಕ್ಷ್ಮೀ ದೇವಿಯ ಕೃಪೆ
ಹೊಸ ವರ್ಷದ ಮೊದಲ ದಿನ ಹಳದಿ ಸಾಸಿವೆ, ಕೆಲ ಧಾನ್ಯಗಳು ಹಾಗೂ ಕರ್ಪೂರವನ್ನು ಬೆಳ್ಳಿ ಅಥವಾ ಸ್ಟೀಲ್ ಪಾತ್ರೆಯಲ್ಲಿ ಹಾಕಿ ಸುಡಬೇಕು. ಜೊತೆಗೆ ದೇವರ ಪೂಜೆಯ ಸಂದರ್ಭದಲ್ಲಿ ಹಸುವಿನ ಸಗಣಿಯಲ್ಲಿ ಹಳದಿ ಸಾಸಿವೆಯನ್ನು ಹಾಕಿ ಸುಟ್ಟು ಅದರ ಹೊಗೆಯನ್ನು ಮನೆಯೊಳಗೆ ಹಾಕುವುದು ಶುಭಕರ. ಈ ಪರಿಹಾರವನ್ನು ಮಾಡುವುದರಿಂದ ಲಕ್ಷ್ಮೀ ದೇವಿಯು ಸಂತುಷ್ಟಗೊಂಡು ವೃತ್ತಿಜೀವನದಲ್ಲಿ ಪ್ರಗತಿ ಹಾಗೂ ಬಡ್ತಿಗೆ ದಾರಿ ಮಾಡಿಕೊಡುತ್ತದೆ ಎಂದು ನಂಬಲಾಗಿದೆ.

ಶುಭ ಫಲಕ್ಕಾಗಿ ಈ ವಸ್ತುಗಳನ್ನು ಮನೆಗೆ ತನ್ನಿ
ಹೊಸ ವರ್ಷದ ಮೊದಲ ದಿನ ಅಥವಾ ಆರಂಭಿಕ ದಿನಗಳಲ್ಲಿ ದಕ್ಷಿಣಾವರ್ತಿ ಶಂಖ, ಏಕಾಕ್ಷಿ ತೆಂಗಿನಕಾಯಿ ಹಾಗೂ ಹಿತ್ತಾಳೆಯ ಆನೆಯನ್ನು ಮನೆಗೆ ತರಬೇಕು. ಇವುಗಳನ್ನು ಮನೆಯಲ್ಲಿಯೂ ಅಥವಾ ಕೆಲಸದ ಸ್ಥಳದಲ್ಲಿಯೂ ಇಡಬಹುದು. ಇವುಗಳ ಪ್ರಭಾವದಿಂದ ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭವಾಗುತ್ತದೆ, ಪ್ರಗತಿಗೆ ಅಡ್ಡಿಯಾಗುವ ಅಡೆತಡೆಗಳು ದೂರವಾಗುತ್ತವೆ. ಜೊತೆಗೆ ಗ್ರಹದೋಷಗಳೂ ಶಮನವಾಗುತ್ತವೆ.
ಈ ಎಲ್ಲಾ ಕ್ರಮಗಳನ್ನು ಹೊಸ ವರ್ಷದ ಮೊದಲ ದಿನ ಶ್ರದ್ಧೆಯಿಂದ ಪಾಲಿಸಿದರೆ, ನಿಮ್ಮ ಜೀವನದಲ್ಲಿ ಸಂತೋಷ, ಸಂಪತ್ತು ಮತ್ತು ಸಮೃದ್ಧಿ ನಿರಂತರವಾಗಿ ನೆಲೆಸುವುದು ಖಂಡಿತ…!