ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Astro Tips: ಆರ್ಥಿಕ ಕಷ್ಟಗಳಿಂದ ಬಳಲ್ತಿದ್ದೀರಾ? ಹಾಗಾದ್ರೆ ಸೋಮವಾರದಂದು ಈ ಸರಳ ಕ್ರಮಗಳನ್ನು ಅನುಸರಿಸಿ

ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಹಣಕಾಸಿನ ಸಮಸ್ಯೆಗಳಿಂದ ಬಳಲುತ್ತಿರುವವರು ಅಥವಾ ದೀರ್ಘಕಾಲದಿಂದ ಕಳೆದುಕೊಂಡ ಹಣ ಮರಳಿ ಸಿಗದೆ ಸಂಕಷ್ಟದಲ್ಲಿರುವವರು ಸೋಮವಾರ ಶಿವನ ಆರಾಧನೆಯೊಂದಿಗೆ ಕೆಲವು ನಿರ್ದಿಷ್ಟ ಕಾರ್ಯಗಳನ್ನು ಮಾಡುವುದರಿಂದ ಲಾಭ ಪಡೆಯಬಹುದು ಎನ್ನಲಾಗುತ್ತದೆ. ಹಾಗಾದ್ರೆ ಸೋಮವಾರ ಏನೆಲ್ಲ ಕ್ರಮ ಪಾಲಿಸಬೇಕು ಎಂಬ ಮಾಹಿತಿ ಇಲ್ಲಿದೆ.

ಸೋಮವಾರ ಶಿವನ ಹೀಗೆ ಪೂಜಿಸಿದರೆ ಈ ಪ್ರಯೋಜನ ಖಚಿತ!

ಶಿವ -

Profile
Sushmitha Jain Dec 22, 2025 8:16 AM

ಬೆಂಗಳೂರು: ಸನಾತನ ಧರ್ಮದಲ್ಲಿ (Santhana Dharma) ಸೋಮವಾರವನ್ನು (Monday) ದೇವಾಧಿದೇವ ಮಹಾದೇವ ಶಿವನ (Shiva Puja) ಆರಾಧನೆಗೆ ಅತ್ಯಂತ ಪವಿತ್ರ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಶಿವನಿಗೆ ವಿಶೇಷವಾಗಿ ಜಲಾಭಿಷೇಕ ಮಾಡುವ ಪದ್ಧತಿ ಇದೆ. ಶಾಸ್ತ್ರಗಳ ಪ್ರಕಾರ ಶಿವನ ಕೃಪೆ ಪಾತ್ರವಾದ ವ್ಯಕ್ತಿಯ ಜೀವನದಲ್ಲಿ ದುಃಖ, ಸಂಕಷ್ಟ ಹಾಗೂ ಅಡೆತಡೆಗಳು ದೂರವಾಗುತ್ತವೆ ಎನ್ನುವ ನಂಬಿಕೆ ಇದೆ. ಈ ಕಾರಣದಿಂದಲೇ ಶಿವನ ಅನುಗ್ರಹಕ್ಕಾಗಿ ಅನೇಕ ಭಕ್ತರು ಸೋಮವಾರ ಉಪವಾಸ ವ್ರತ ಮತ್ತು ವಿಶೇಷ ಪೂಜೆಗಳನ್ನು ಆಚರಿಸುತ್ತಾರೆ.

ಧಾರ್ಮಿಕ ಗ್ರಂಥಗಳ ಪ್ರಕಾರ, ಸೋಮವಾರದ ವ್ರತ ಹಾಗೂ ಶಿವ ಪೂಜೆ ಅತ್ಯಂತ ಫಲಪ್ರದವಾಗಿದೆ. ಈ ದಿನ ಭಕ್ತಿಯಿಂದ ಶಿವನನ್ನು ಪೂಜಿಸುವುದರಿಂದ ಸಂತೋಷ, ಸಮೃದ್ಧಿ, ಅದೃಷ್ಟ ಮತ್ತು ಆರ್ಥಿಕ ಸ್ಥಿರತೆ ದೊರೆಯುತ್ತದೆ ಎಂದು ನಂಬಲಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರ(Astro Tips) ಪ್ರಕಾರ ಹಣಕಾಸಿನ ಸಮಸ್ಯೆಗಳಿಂದ ಬಳಲುತ್ತಿರುವವರು ಅಥವಾ ದೀರ್ಘಕಾಲದಿಂದ ಕಳೆದುಕೊಂಡ ಹಣ ಮರಳಿ ಸಿಗದೆ ಸಂಕಷ್ಟದಲ್ಲಿರುವವರು ಸೋಮವಾರ ಶಿವನ ಆರಾಧನೆಯೊಂದಿಗೆ ಕೆಲವು ನಿರ್ದಿಷ್ಟ ಕಾರ್ಯಗಳನ್ನು ಮಾಡುವುದರಿಂದ ಲಾಭ ಪಡೆಯಬಹುದು ಎನ್ನಲಾಗುತ್ತದೆ.

Vastu Tips: ಮನೆಯಲ್ಲಿ ಈ ವಸ್ತುಗಳು ಖಾಲಿಯಾದ್ರೆ ಆರ್ಥಿಕ ಸಂಕಷ್ಟ ಪಕ್ಕಾ!

ಸೋಮವಾರ ಮಾಡಬೇಕಾದ ಪ್ರಮುಖ ಕಾರ್ಯಗಳು:

ಶಿವ ಚಾಲೀಸ ಪಠಣ:

ಶಾಸ್ತ್ರಾನುಸಾರ ಸೋಮವಾರ ಶಿವನನ್ನು ವಿಧಿವಿಧಾನಗಳೊಂದಿಗೆ ಪೂಜಿಸಬೇಕು. ಪೂಜೆಯ ವೇಳೆ ಶಿವನಿಗೆ ಪ್ರಿಯವಾದ ಶಿವ ಚಾಲೀಸವನ್ನು ಪಠಿಸುವುದರಿಂದ ಭಕ್ತರ ಮೇಲೆ ಶಿವನ ಕೃಪೆ ಲಭಿಸಿ, ಜೀವನದಲ್ಲಿ ಸುಖ ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ ಎನ್ನಲಾಗುತ್ತದೆ.

41 ಸೋಮವಾರಗಳ ವಿಶೇಷ ವ್ರತ:

ಎಷ್ಟೇ ಶ್ರಮಪಟ್ಟರೂ ಹಣ ಉಳಿಯದೆ ಸಂಕಷ್ಟ ಎದುರಿಸುತ್ತಿರುವವರು ಸೋಮವಾರ ರಾತ್ರಿ ಶಿವನ ದೇವಸ್ಥಾನಕ್ಕೆ ತೆರಳಿ ಶಿವಲಿಂಗದ ಮುಂದೆ ತುಪ್ಪದ ದೀಪ ಹಚ್ಚಿ ಮನದಾಳದ ಸಮಸ್ಯೆಗಳನ್ನು ಶಿವನಿಗೆ ಅರ್ಪಿಸಬೇಕು. ಈ ರೀತಿಯಾಗಿ ನಿರಂತರವಾಗಿ 41 ಸೋಮವಾರಗಳವರೆಗೆ ಮಾಡಿದರೆ, ಶಿವನ ಅನುಗ್ರಹದಿಂದ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ ಹಾಗೂ ಕಳೆದುಕೊಂಡ ಹಣ ಮರಳಿ ಸಿಗುವ ಸಾಧ್ಯತೆ ಇದೆ ಎಂದು ನಂಬಲಾಗಿದೆ.

ಶಿವಲಿಂಗಕ್ಕೆ ವಿಶೇಷ ಅರ್ಪಣೆ:

ಶಿವಪುರಾಣದ ಪ್ರಕಾರ ಶಿವಪೂಜೆಯಲ್ಲಿ ಬಿಲ್ವಪತ್ರೆ, ಧಾತುರ, ಹಾಲು, ನೀರು ಹಾಗೂ ಶಮಿ ಎಲೆಗಳನ್ನು ಅರ್ಪಿಸುವುದು ಶುಭಕರ. ಜೊತೆಗೆ ಸೋಮವಾರ ಶಿವಲಿಂಗಕ್ಕೆ ಜೇನುತುಪ್ಪ ಅರ್ಪಿಸುವುದರಿಂದ ಉದ್ಯೋಗ ಮತ್ತು ವ್ಯವಹಾರದಲ್ಲಿ ಎದುರಾಗುವ ಅಡೆತಡೆಗಳು ನಿವಾರಣೆಯಾಗುತ್ತವೆ ಹಾಗೂ ಪ್ರಗತಿಗೆ ದಾರಿ ತೆರೆಯುತ್ತದೆ ಎನ್ನಲಾಗುತ್ತದೆ.

ಸೋಮವಾರ ದಾನ ಮಹತ್ವ:

ಜಾತಕದಲ್ಲಿ ಪಿತೃ ದೋಷವಿದ್ದರೆ ಜೀವನದಲ್ಲಿ ಅನೇಕ ಅಡ್ಡಿಪಡಿಗಳು ಎದುರಾಗುತ್ತವೆ ಎನ್ನುವ ನಂಬಿಕೆ ಇದೆ. ಇಂತಹವರು ಸೋಮವಾರದಂದು ನಿರ್ಗತಿಕರಿಗೆ ಅಕ್ಕಿ ಮತ್ತು ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ಪಿತೃ ದೋಷ ಶಮನವಾಗುತ್ತದೆ ಎಂದು ಧಾರ್ಮಿಕ ಗ್ರಂಥಗಳು ಸೂಚಿಸುತ್ತವೆ.

ಒಟ್ಟಾರೆ, ಸೋಮವಾರದಂದು ಶಿವಪೂಜೆಯೊಂದಿಗೆ ಈ ಧಾರ್ಮಿಕ ಕ್ರಮಗಳನ್ನು ಅನುಸರಿಸಿದರೆ ಹಣಕಾಸಿನ ಸಮಸ್ಯೆಗಳು ದೂರವಾಗಿ, ಜೀವನದಲ್ಲಿ ಶಾಂತಿ ಹಾಗೂ ಸುಖಸಮೃದ್ಧಿ ನೆಲೆಸುತ್ತದೆ ಎನ್ನಲಾಗುತ್ತದೆ. ಹೀಗಾಗಿ ಭಕ್ತರು ಸೋಮವಾರ ಈ ಕಾರ್ಯಗಳನ್ನು ತಪ್ಪದೇ ಪಾಲಿಸುವುದು ಶುಭಕರವೆಂದು ಶಾಸ್ತ್ರಗಳು ತಿಳಿಸುತ್ತವೆ.