ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶಿರದೃತು, ಮಘೆ ಮಾಸೆ, ಕೃಷ್ಣೆ ಪಕ್ಷದ, ವಿಶಾಖ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಇಂದು ವಿಶಾಖ ನಕ್ಷತ್ರ ಇದ್ದು ಅಧಿಪತಿ ವಕ್ರಿ ಗುರು ಆಗಿದ್ದಾನೆ. ಹಾಗಾಗಿ ಹೆಚ್ಚಿನವರಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಮಧ್ಯಾಹ್ನವರೆಗೂ ನೆಮ್ಮದಿ ಪ್ರಾಪ್ತಿ. ಮಧ್ಯಾಹ್ನ ಬಳಿಕ ಮನಸ್ಸಿಗೆ ಬೇಸರವಾಗುವ ಸಾಧ್ಯತೆ ಇರುತ್ತದೆ .ಆದ್ದರಿಂದ ಮುಖ್ಯ ನಿರ್ಧಾರಗಳು ಯಾವುದೇ ಬೇಡ.
ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಉತ್ತಮವಾದ ದಿನವಾಗಿದ್ದು ಶುಭಕರವಾದ ಯೋಗ ಇದೆ. ಬೇರೆಯವರಿಂದ ಉತ್ತಮ ಸಹಕಾರ ನಿಮಗೆ ಪ್ರಾಪ್ತಿ ಯಾಗುತ್ತದೆ. ಶತ್ರುಗಳನ್ನು ಕೂಡ ಹಿಮ್ಮೆಟ್ಟಬಹುದು.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಮಧ್ಯಾಹ್ನ ಕಷ್ಟಕರವಾದ ದಿನವಾಗಿದೆ. ಮಧ್ಯಾಹ್ನ ಬಳಿಕ ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಬೇರೆಯವರಿಂದ ಸಹಕಾರ ಪ್ರಾಪ್ತಿ ಯಾಗುತ್ತದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ನಾನಾ ರೀತಿಯ ಸಮಸ್ಯೆಗಳು ಕಾಡಬಹುದು. ಮಧ್ಯಾಹ್ನ ಬಳಿಕ ಹಣ ಕಾಸಿನ ತೊಂದರೆಗಳು ಜಾಸ್ತಿಯೇ ಕಾಡಬಹುದು.
ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಮಧ್ಯಾಹ್ನವರೆಗೂ ನೀವು ಹೇಳಿದಂತೆ ಎಲ್ಲವೂ ನಡೆಯುತ್ತದೆ. ಮಧ್ಯಾಹ್ನ ಬಳಿಕ ಮನಸ್ಸಿಗೆ ನೋವು ಆಗುವ ಸಂದರ್ಭ ಬರಬಹುದು. ಬಹಳಷ್ಟು ಭಾವುಕತೆಯಿಂದ ಎಲ್ಲವನ್ನು ಎದುರಿಸಬೇಕಾದ ಸಂದರ್ಭ ಬರಬಹುದು.
Vastu Tips: ಕುಬೇರ ದಿಕ್ಕು ಅಥವಾ ಅಗ್ನಿ ಮೂಲೆ- ಅಡುಗೆ ಮನೆ ಎಲ್ಲಿದ್ದರೆ ಒಳ್ಳೆಯದು? ಇಲ್ಲಿದೆ ಉತ್ತರ
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಮಧ್ಯಾಹ್ನವರೆಗೂ ಮನೆಯ ಜವಾಬ್ದಾರಿ ಜಾಸ್ತಿಯಾಗಬಹುದು. ಮಧ್ಯಾಹ್ನ ಬಳಿಕ ನಿಮ್ಮ ಬಂಧು ಮಿತ್ರರ ಜೊತೆ ಸಿಹಿಯಾದ ಸಮಯ ಕಳೆಯುವ ಸಂದರ್ಭ ನಿಮ್ಮದು ಆಗುತ್ತದೆ.
ತುಲಾ ರಾಶಿ: ತುಲಾ ರಾಶಿಗೆ ಮಧ್ಯಾಹ್ನವರೆಗೂ ನಿಮ್ಮ ರಾಶಿಗೆ ನೆಮ್ಮದಿ ಇರುತ್ತದೆ. ಮಧ್ಯಾಹ್ನ ಬಳಿಕ ಅದೇ ಖುಷಿ, ಸಂತೋಷ ವನ್ನು ಕುಟುಂಬದ ಜೊತೆ ಕಳೆಯುತ್ತೀರಿ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಮಧ್ಯಾಹ್ನವರೆಗೂ ನಾನಾ ರೀತಿಯ ಯೋಚನೆಗಳು, ಭಯ ಕಾಡಬಹುದು. ಯಾರ ಸಹಕಾರ ನಿಮಗೆ ಸಿಗುವುದಿಲ್ಲ ಎನ್ನುವ ಭಯ ಕಾಡಬಹುದು. ಮಧ್ಯಾಹ್ನ ಬಳಿಕ ಎಲ್ಲವೂ ಬಗೆಹರಿದು ಮಾರ್ಗದರ್ಶನ ಪ್ರಾಪ್ತಿ ಯಾಗುತ್ತದೆ.
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಮಧ್ಯಾಹ್ನ ವರೆಗೂ ಉತ್ತಮವಾದ ದಿನವಾಗಿದೆ.ಮಧ್ಯಾಹ್ನ ಬಳಿಕ ಮುಖ್ಯವಾದ ವಿಚಾರದಲ್ಲಿ ತೊಂದರೆಗಳು ಕಾಡಬಹುದು. ಪಾರ್ಟ್ನರ್ಸ್ ಶೀಪ್ ವ್ಯವಹಾರ ದಲ್ಲೂ ಒಡಕು ಕಾಣಬಹುದು.
ಮಕರ ರಾಶಿ: ಮಕರ ರಾಶಿಯವರಿಗೆ ಮಧ್ಯಾಹ್ನ ವರೆಗೂ ಕಾರ್ಯಕ್ಷೇತ್ರದ ಜವಾಬ್ದಾರಿ ಕಾಡಬಹುದು. ಮಧ್ಯಾಹ್ನ ಬಳಿಕ ಸ್ನೇಹಿತರ ಜೊತೆ ಉತ್ತಮ ರೀತಿಯಲ್ಲಿ ಸಮಯ ಕಳೆಯುತ್ತೀರಿ.
ಕುಂಭರಾಶಿ: ಈ ರಾಶಿಯವರಿಗೆ ಮಧ್ಯಾಹ್ನವರೆಗೂ ಸ್ವಲ್ಪ ಅದೃಷ್ಟ ಪರೀಕ್ಷೆ ನಡೆಯುತ್ತಿರುತ್ತದೆ. ಮಧ್ಯಾಹ್ನ ಬಳಿಕ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸು ಕಾಣುತ್ತದೆ.
ಮೀನ ರಾಶಿ: ಮೀನ ರಾಶಿ ಮಧ್ಯಾಹ್ನವರೆಗೂ ಮನಸ್ಸಿಗೆ ಕಿರಿ ಕಿರಿ ಆಗಲಿದೆ. ಮಧ್ಯಾಹ್ನ ನಂತರ ಭಾಗ್ಯೋದಯವಾದ ದಿನ ವಾಗಲಿದ್ದು ನಿಮ್ಮ ಆತ್ಮವಿಶ್ವಾಸ ಜಾಸ್ತಿಯಾಗಲಿದೆ. ಅದೆ ರೀತಿ ಭಗವಂತನ ಅನುಗ್ರಹ ಕೂಡ ಇಂದು ನಿಮಗೆ ಮುಖ್ಯವಾಗುತ್ತದೆ.