ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chanakya Niti: ಸುಖ ದಾಂಪತ್ಯಕ್ಕೆ ಚಾಣಕ್ಯ ಸೂತ್ರ: ಈ 4 ಗುಣಗಳು ಇದ್ದರೆ ಜೀವನ ಸುಖಮಯ

ಆಚಾರ್ಯ ಚಾಣಕ್ಯನು ತನ್ನ ಚಾಣಕ್ಯ ನೀತಿಯಲ್ಲಿ ಸಂತೋಷದ ದಾಂಪತ್ಯ ಜೀವನಕ್ಕೆ ನಾಲ್ಕು ಮುಖ್ಯ ಗುಣಗಳನ್ನು ಸೂಚಿಸಿದ್ದಾನೆ. ಚಾಣಕ್ಯ ನೀತಿಯ ಸಂದೇಶ ಸ್ಪಷ್ಟ — ಪ್ರೀತಿ, ವಿಶ್ವಾಸ, ಸಹಕಾರ ಮತ್ತು ತಾಳ್ಮೆ ಇದ್ದರೆ ದಾಂಪತ್ಯ ಜೀವನ ಸುಖಮಯವಾಗುತ್ತದೆ. ಪತಿ-ಪತ್ನಿಯರು ಪರಸ್ಪರ ಬೆಂಬಲವಾಗಿ ನಡೆದುಕೊಂಡರೆ ಅವರ ಸಂಬಂಧದಲ್ಲಿ ಕಹಿಗೆ ಅವಕಾಶವೇ ಇರುವುದಿಲ್ಲ ಎಂಬುದು ಚಾಣಕ್ಯನ ಸಲಹೆಯಾಗಿದೆ.

ಸಂತೋಷದ ದಾಂಪತ್ಯಕ್ಕೆ ಚಾಣಕ್ಯ ಹೇಳಿದ 4 ಗುಟ್ಟುಗಳು

ಚಾಣಕ್ಯ ನೀತಿ -

Profile
Sushmitha Jain Feb 24, 2026 9:28 AM

ಬೆಂಗಳೂರು: ಪ್ರಾಚೀನ ಭಾರತದ ಮಹಾನ್ ರಾಜನೀತಿಜ್ಞ ಹಾಗೂ ತತ್ವಜ್ಞಾನಿ ಆಚಾರ್ಯ ಚಾಣಕ್ಯ ತಮ್ಮ ಅಮೂಲ್ಯ ಕೃತಿ ಚಾಣಕ್ಯ ನೀತಿಯಲ್ಲಿ ಜೀವನದ ಪ್ರತಿಯೊಂದು ಅಂಶದ ಕುರಿತು ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ಉದ್ಯೋಗ, ಶಿಕ್ಷಣ, ಸ್ನೇಹ ಮತ್ತು ಸಂಪತ್ತಿನ ಜೊತೆಗೆ ವೈವಾಹಿಕ ಜೀವನದ ಬಗ್ಗೆಯೂ ಅವರು ಸ್ಪಷ್ಟವಾದ ತತ್ವಗಳನ್ನು ವಿವರಿಸಿದ್ದಾರೆ. ಚಾಣಕ್ಯನ ಪ್ರಕಾರ, ಪತಿ-ಪತ್ನಿಯರು ಪರಸ್ಪರ ಪೂರಕವಾಗಿದ್ದು, ಒಬ್ಬರ ಬಲ ಮತ್ತೊಬ್ಬರ ಬೆಂಬಲವಾಗಿರಬೇಕು. ದಾಂಪತ್ಯ ಜೀವನವು ಸಂತೋಷಕರವಾಗಿರಬೇಕು ಎಂದರೆ ಚಾಣಕ್ಯ ನೀತಿಯ(Chanakya Niti) ಈ ನಾಲ್ಕು ಪ್ರಮುಖ ಅಂಶಗಳು ಇರಬೇಕು.

ಪತಿ-ಪತ್ನಿಯರ ಮಧ್ಯೆ ಸ್ಪರ್ಧೆ ಅಲ್ಲ, ಸಹಬಾಳ್ವೆ ಇರಬೇಕು

ಪತಿ-ಪತ್ನಿಯರು ಪರಸ್ಪರ ಸ್ಪರ್ಧಿಗಳು ಅಲ್ಲ, ಜೀವನಯಾತ್ರೆಯ ಸಂಗಾತಿಗಳು. ಒಬ್ಬರ ಸಾಧನೆ ಮತ್ತೊಬ್ಬರಿಗೆ ಹೆಮ್ಮೆ ಆಗಬೇಕು. ಒಬ್ಬರನ್ನು ಮೀರಲು ಯತ್ನಿಸುವ ಮನೋಭಾವ ಸಂಬಂಧದಲ್ಲಿ ಅಂತರ ಮೂಡಿಸಬಹುದು. ಸಮಸ್ಯೆಗಳು ಬಂದಾಗ ಒಟ್ಟಾಗಿ ಪರಿಹಾರ ಕಂಡುಕೊಳ್ಳಬೇಕು ಎಂಬುದು ಚಾಣಕ್ಯನ ಸಲಹೆ.

ನಂಬಿಕೆ ಮತ್ತು ಗೌಪ್ಯತೆ

ಸಂಬಂಧದ ಬಲ ನಂಬಿಕೆಯಲ್ಲಿ ಇದೆ. ಪತಿ-ಪತ್ನಿಯರ ನಡುವೆ ನಡೆಯುವ ವೈಯಕ್ತಿಕ ವಿಚಾರಗಳನ್ನು ಮೂರನೇ ವ್ಯಕ್ತಿಗೆ ಹಂಚಿಕೊಳ್ಳಬಾರದು. ಗೌಪ್ಯತೆ ಕಾಪಾಡಿಕೊಳ್ಳುವುದರಿಂದ ಪರಸ್ಪರ ವಿಶ್ವಾಸ ಹೆಚ್ಚುತ್ತದೆ. ಚಾಣಕ್ಯನ ಪ್ರಕಾರ, ರಹಸ್ಯ ಭಂಗವಾದರೆ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ ಹೆಚ್ಚು.

ಭಾವನೆಗಳಿಗೆ ಗೌರವ

ಒಬ್ಬರ ಅಗತ್ಯತೆ, ಕನಸು ಮತ್ತು ಭಾವನೆಗಳನ್ನು ಮತ್ತೊಬ್ಬರು ಅರಿತುಕೊಳ್ಳಬೇಕು. ಪರಸ್ಪರ ಆಲಿಸುವ ಗುಣ, ಬೆಂಬಲ ಮತ್ತು ಪ್ರೋತ್ಸಾಹ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ದಾಂಪತ್ಯದಲ್ಲಿ ಕೇವಲ ಮಾತು ಮಾತ್ರವಲ್ಲ, ಅರ್ಥಮಾಡಿಕೊಳ್ಳುವ ಮನಸ್ಸು ಮುಖ್ಯ.

ತಾಳ್ಮೆ ಮತ್ತು ಸಮಾಧಾನ

ಜೀವನದಲ್ಲಿ ಏರುಪೇರುಗಳು ಸಹಜ. ಕೋಪ, ಅಸಹನೆ ಮತ್ತು ತುರ್ತು ನಿರ್ಧಾರಗಳು ಸಂಬಂಧದಲ್ಲಿ ಕಹಿ ಉಂಟುಮಾಡಬಹುದು. ತಾಳ್ಮೆಯಿಂದ ಮಾತನಾಡಿ, ಸಮಾಧಾನದಿಂದ ಸಮಸ್ಯೆ ಪರಿಹರಿಸುವುದು ದಾಂಪತ್ಯದ ಯಶಸ್ಸಿಗೆ ಕೀಲುಕೈ ಎಂದು ಚಾಣಕ್ಯ ಹೇಳಿದ್ದಾರೆ.

ಇನ್ನು ಚಾಣಕ್ಯನ ಈ ತತ್ವಗಳು ಇಂದಿನ ಕಾಲಕ್ಕೂ ಅನ್ವಯಿಸುತ್ತವೆ. ವೇಗದ ಜೀವನಶೈಲಿಯಲ್ಲಿ ಸಂಬಂಧಗಳನ್ನು ಉಳಿಸಿಕೊಳ್ಳಲು ಪರಸ್ಪರ ಗೌರವ, ಸಂಭಾಷಣೆ ಮತ್ತು ಸಹಕಾರ ಅತ್ಯಗತ್ಯ.
ಚಾಣಕ್ಯ ನೀತಿಯ ಸಂದೇಶ ಸ್ಪಷ್ಟ — ಪ್ರೀತಿ, ವಿಶ್ವಾಸ, ಸಹಕಾರ ಮತ್ತು ತಾಳ್ಮೆ ಇದ್ದರೆ ದಾಂಪತ್ಯ ಜೀವನ ಸುಖಮಯವಾಗುತ್ತದೆ. ಪತಿ-ಪತ್ನಿಯರು ಪರಸ್ಪರ ಬೆಂಬಲವಾಗಿ ನಡೆದುಕೊಂಡರೆ ಅವರ ಸಂಬಂಧದಲ್ಲಿ ಕಹಿಗೆ ಅವಕಾಶವೇ ಇರುವುದಿಲ್ಲ ಎಂಬುದು ಚಾಣಕ್ಯನ ಬೋಧನೆ.