ಬೆಂಗಳೂರು: ಬಂಧುಗಳು, ಸ್ನೇಹಿತರು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಹಬ್ಬ-ಹರಿದಿನಗಳು, ಶುಭ-ಸಮಾರಂಭಗಳಲ್ಲಿ ಎಲ್ಲರನ್ನೂ ಆಮಂತ್ರಿಸಿ ಸಂತೋಷದ ಕ್ಷಣವನ್ನು ಬಂಧು-ಬಾಂಧವರೊಂದಿಗೆ ಹಂಚಿಕೊಳ್ಳಬೇಕು ಅಂತ ಎಲ್ಲರೂ ಬಯಸುತ್ತಾರೆ. ಆದರೆ, ಜೀವನದಲ್ಲಿ ಉಂಟಾಗಬಹುದಾದ ಕೆಲ ಅಪಾಯಗಳನ್ನು ತಪ್ಪಿಸಲು ಕೆಲವರಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಚಾಣಕ್ಯ(Acharya Chanakya) ಹೇಳಿದ್ದಾರೆ.
ಹೌದು ಜೀವನಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ಆಚಾರ್ಯ ಚಾಣಕ್ಯರು ತಿಳಿಸಿಕೊಟ್ಟಿದ್ದಾರೆ. ಅವರ ಈ ಸಲಹೆಗಳನ್ನು ಪಾಲಿಸಿದರೆ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು. ಶುಭ-ಸಮಾರಂಭಗಳಲ್ಲಿ, ಹಬ್ಬ-ಹರಿದಿನಗಳಲ್ಲಿ ಎಲ್ಲರನ್ನೂ ಮನೆಗೆ ಆಹ್ವಾನಿಸುವುದು ಉತ್ತಮವಲ್ಲ ಎಂದು ಚಾಣಕ್ಯರು ಹೇಳಿದ್ದಾರೆ. ಕೆಲವರು ನಮ್ಮ ಒಳೆತನ್ನು ಬಯಸುವವರು ಇದ್ದರೆ ಮತ್ತೆ ಕೆಲವರು ತಮ್ಮೊಂದಿಗೆ ವಿನಾಶವನ್ನು ಹೊತ್ತು ತಂದಿರುತ್ತಾರೆ.
ಹಾಗದರೆ ಚಾಣಕ್ಯ ನೀತಿ(Chanakya Niti) ಪ್ರಕಾರ ಯಾವ ರೀತಿಯ ಜನರಿಂದ ದೂರವಿರಬೇಕು, ಯಾರನ್ನ ಮನೆಗೆ ಆಹ್ವಾನಿಸಬಾರದು ಎಂಬುವುದನ್ನು ಇಲ್ಲಿ ತಿಳಿಯೋಣ.
ಈ ರೀತಿಯ ಜನರನ್ನು ಎಂದಿಗೂ ಆಹ್ವಾನಿಸಬೇಡಿ
ಸ್ವಾರ್ಥಿಗಳು:
ಕೇವಲ ತಮ್ಮ ಹಿತವನ್ನು ಮಾತ್ರ ಬಯಸುವ ಸ್ವಾರ್ಥಿಗಳನ್ನು ಎಂದಿಗೂ ನಿಮ್ಮ ಮನೆಗೆ ಆಹ್ವಾನಿಸಬೇಡಿ. ಅಂತಹ ಜನರು ನಿಮ್ಮ ಯೋಗಕ್ಷೇಮದ ಬಗ್ಗೆ ಎಂದಿಗೂ ಯೋಚಿಸುವುದಿಲ್ಲ. ಅಂತಹವರಿಂದ ಅಪಾಯಗಳು ಎದುರಾಗುವ ಸಾಧ್ಯತೆ ಹೆಚ್ಚು ಎಂದು ಚಾಣಕ್ಯ ಹೇಳುತ್ತಾರೆ.
ಎರಡು ಮುಖ ಹೊತ್ತವರು:
ದ್ವಿಮುಖ ಸ್ವಭಾವದ ವ್ಯಕ್ತಿಯನ್ನು ನಿಮ್ಮ ಮನೆಗೆ ಆಹ್ವಾನಿಸುವ ಮೊದಲು ನೂರು ಬಾರಿ ಯೋಚಿಸಬೇಕು. ಅಂತಹ ಜನರು ನಿಮ್ಮ ಮುಂದೆ ಒಂದು ಮಾತನಾಡುತ್ತಾರೆ, ನಿಮ್ಮ ಬೆನ್ನ ಹಿಂದೆ ಕೆಡಕನ್ನು ಬಯಸುತ್ತಿರುತ್ತಾರೆ. ಇವರಿಂದ ನಿಮಗೆ ನೆರವಿಗಿಂತ ಅಪಾಯವೇ ಹೆಚ್ಚು ಎಂದು ಚಾಣಕ್ಯರು ಹೇಳಿದ್ದಾರೆ.
Chanakya Niti: ಚಾಣಕ್ಯ ನೀತಿ; ಶತ್ರುಗಳನ್ನು ಸೋಲಿಸಿ ಜೀವನದಲ್ಲಿ ಮುನ್ನಡೆಯಲು ಅನುಸರಿಸಬೇಕಾದ ಸೂತ್ರಗಳು ಇವು
ಇತರರ ನೋವಲ್ಲಿ ಆನಂದಿಸುವವರು:
ಜೊತೆಯಲ್ಲಿದ್ದವರನ್ನೇ ನೋಯಿಸಿ ಆನಂದ ಪಡುವವರನ್ನು ಎಂದಿಗೂ ಆಹ್ವಾನಿಸಬೇಡಿ ಎಂದು ಚಾಣಕ್ಯ ಹೇಳಿದ್ದಾರೆ. ಏಕೆಂದರೆ ಅವರ ಕೆಟ್ಟ ಮನಸ್ಥಿತಿಯಿಂದ ನಿಮಗೆ ಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಅಸೂಯೆ ಪಡುವ ಜನ:
ಇನ್ನೊಬ್ಬರ ಯಶಸ್ಸನ್ನು ಕಂಡು ಅಸೂಯೆ ಪಡುವವರನ್ನು ಎಂದಿಗೂ ನಿಮಗೆ ಒಳ್ಳೆಯದನ್ನು ಬಯಸುವುದಿಲ್ಲ. ಅಂತವರನ್ನು ನೀವು ಮನೆಗೆ ಕರೆದರೆ, ನಿಮ್ಮ ಏಳಿಗೆಯನ್ನೂ ಸಹಿಸದೇ ಅಸೂಯೆ ಅಸೂಯೆ ಪಡುತ್ತಾರೆ. ಅಂತಹ ವ್ಯಕ್ತಿಗಳಿಂದ ಸಾಧ್ಯವಾದಷ್ಟು ದೂರವಿರಬೇಕು ಎಂದು ಚಾಣಕ್ಯ ಹೇಳಿದ್ದಾರೆ.
ನಕಾರಾತ್ಮಕ ಜನ:
ಯಾವಗಲೂ ನೆಗೆಟಿವ್ ಆಗಿ ಮಾತನಾಡುವ ಜನರಿಂದ ಸಾಧ್ಯವಾದಷ್ಟು ದೂರವಿರಿ, ಏಕೆಂದರೆ ಅವರು ನಿಮ್ಮಲ್ಲಿರುವ ಸಕಾರಾತ್ಮಕತೆಯನ್ನು ತುಳಿದು ನಕಾರಾತ್ಮಕತೆಯನ್ನೇ ತುಂಬಬಹುದು ಮತ್ತು ನಿಮ್ಮ ಮನೆಯ ಸಂತೋಷದ ವಾತಾವರಣವನ್ನೂ ಹಾಳು ಮಾಡಬಹುದು ಎಂದು ಚಾಣಕ್ಯರು ತಿಳಿಸಿದ್ದಾರೆ.
ಸುಳ್ಳುಗಾರರು:
ಈ ಸುಳ್ಳು ಹೇಳುವವರನ್ನು ತಪ್ಪಿಯೂ ನಿಮ್ಮ ಮನೆಗೆ ಆಹ್ವಾನಿಸಬೇಡಿ. ಇವರಿಂದ ಸಮಸ್ಯೆಗಳು ಉಂಟಾಗುವುದಲ್ಲದೇ ನಿಮ್ಮ ಖ್ಯಾತಿಗೂ ಹಾನಿಯಾಗುತ್ತದೆ.
ಅಪ್ರಾಮಾಣಿಕರು:
ಭ್ರಷ್ಟರು, ಅಪ್ರಾಮಾಣಿಕರಿಂದ ಸದಾ ದೂರವಿರಿ. ಇವರು ತಮ್ಮ ಹಿತಾಸಕ್ತಿಗಾಗಿ ಮತ್ತೊಬ್ಬರ ಮನೆಯಲ್ಲಿ ನಡೆಯವ ಯಾವುದೇ ಘಟನೆಗಳನ್ನು ತಿರುಚಿ ಪ್ರಚಾರ ಮಾಡುವ ಗುಣ ಹೊಂದಿರುತ್ತಾರೆ ಎಂದು ಚಾಣಕ್ಕರು ಹೇಳಿದ್ದಾರೆ.