ಬೆಂಗಳೂರು: ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ಅಪಾರ ಬುದ್ಧಿವಂತಿಕೆ, ತೀಕ್ಷ್ಣ ಚಿಂತನೆ ಮತ್ತು ಜೀವನಪಾಠಗಳಿಂದ ಇಂದಿಗೂ ಜನಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಚಾಣಕ್ಯ ನೀತಿಯನ್ನು(Chanakya Niti) ಜೀವನದಲ್ಲಿ ಅಳವಡಿಸಿಕೊಂಡರೆ ವ್ಯಕ್ತಿಯು ಯಶಸ್ಸಿನ ದಾರಿಯಲ್ಲಿ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದು ನಂಬಲಾಗುತ್ತದೆ. ಹಣಕಾಸು, ಆರೋಗ್ಯ, ವ್ಯಾಪಾರ, ಕುಟುಂಬ ಮತ್ತು ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಅನೇಕ ಸೂಕ್ಷ್ಮ ವಿಚಾರಗಳನ್ನು ಚಾಣಕ್ಯರು ತಮ್ಮ ನೀತಿಯಲ್ಲಿ ವಿವರಿಸಿದ್ದಾರೆ. ಇಂದಿನ ಕಾಲದಲ್ಲಿಯೂ ಅವರ ಉಪದೇಶಗಳು ಪ್ರಚಲಿವಾಗಿದ್ದು, ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ನೆಮ್ಮದಿ ಜೀವನ ನಡೆಸಬಹುದು.
ಚಾಣಕ್ಯರ ಪ್ರಕಾರ, ನಿಮ್ಮ ಜೀವನದಲ್ಲಿ ನಡೆಯುವ ಕೆಲವು ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳಬಾರದು ಎಂದು ಹೇಳುತ್ತಾರೆ. ಅವುಗಳನ್ನು ರಹಸ್ಯವಾಗಿಟ್ಟುಕೊಳ್ಳುವಂತೆ ಸೂಚನೆ ನೀಡುತ್ತಾರೆ. ಒಂದು ವೇಳೆ ನೀವು ನಿಮ್ಮ ಜೀವನಕ್ಕೆ ಸಂಬಂಧಪಟ್ಟ ಆ ವಿಷಗಳನ್ನು ಬಹಿರಂಗಗೊಳಿಸಿದ್ತೆ ಆಪತ್ತು ಕಟ್ಟಿಟ್ಟಬುತ್ತಿ ಎನ್ನುತ್ತಾರೆ. ಹಾಗಾದರೆ, ಯಾವ ವಿಚಾರಗಳನ್ನು ಇತರರೊಂದಿಗೆ ಹಂಚಿಕೊಳ್ಳಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ವಯಸ್ಸಿನ ಮಾಹಿತಿ:
ಚಾಣಕ್ಯ ನೀತಿಯಂತೆ, ವ್ಯಕ್ತಿಯು ತನ್ನ ವಯಸ್ಸಿನ ಕುರಿತು ಎಲ್ಲರ ಮುಂದೆ ಮಾತನಾಡಬಾರದು. ವಯಸ್ಸಿನ ವಿವರವನ್ನು ಬಹಿರಂಗಪಡಿಸುವುದರಿಂದ ಶತ್ರುಗಳು ಅಥವಾ ಅಸೂಯೆಪಡುವವರು ಅದನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ವಯಸ್ಸನ್ನು ವೈಯಕ್ತಿಕ ವಿಷಯವಾಗಿಯೇ ಇಟ್ಟುಕೊಳ್ಳುವುದು ಉತ್ತಮ.
Chanakya Niti: ಪತಿಯಿಂದ ಪತ್ನಿ ಬಯಸೋದು ಈ ಗುಣಗಳನ್ನು ಮಾತ್ರ
ದಾನ ಮಾಡಿದ್ದನ್ನು ಹೇಳಿಕೊಳ್ಳಬೇಡಿ:
ದಾನವು ಪುಣ್ಯದ ಕಾರ್ಯವಾದರೂ ಅದನ್ನು ಜಗಜ್ಜಾಹೀರಾಗಿ ಪ್ರಚಾರ ಮಾಡುವುದು ಸೂಕ್ತವಲ್ಲ. ಧಾರ್ಮಿಕ ಕಾರ್ಯಗಳಿಗೆ ನೀಡಿದ ದಾನವನ್ನು ರಹಸ್ಯವಾಗಿಟ್ಟುಕೊಳ್ಳುವುದರಿಂದ ಮಾತ್ರ ಅದರ ಪೂರ್ಣ ಪುಣ್ಯ ಫಲ ದೊರೆಯುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ.
ವೈವಾಹಿಕ ಜೀವನದ ರಹಸ್ಯಗಳು:
ವೈವಾಹಿಕ ಜೀವನದಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಹಾಗೆಯೇ ಕೆಲವೊಮ್ಮೆ ಭಿನ್ನಾಭಿಪ್ರಾಯಗಳು ಸಹ ಸಹಜ. ಆದರೆ ಈ ಎಲ್ಲಾ ವಿಷಯಗಳು ಪತಿ–ಪತ್ನಿಯ ನಡುವೆ ಮಾತ್ರ ಇರಬೇಕು. ಅವುಗಳನ್ನು ಮೂರನೇ ವ್ಯಕ್ತಿಯೊಂದಿಗೆ ಹಂಚಿಕೊಂಡರೆ ತಪ್ಪು ಅರ್ಥಗಳು ಮೂಡಿ, ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಕೆಲವರು ಇದನ್ನು ತಪ್ಪಾಗಿ ಬಳಸಿಕೊಂಡು ಟೀಕೆ ಮಾಡುವ ಸಂದರ್ಭವೂ ಎದುರಾಗಬಹುದು.
ಸಂಪತ್ತು ಮತ್ತು ಆದಾಯ:
ಚಾಣಕ್ಯರ ಸಲಹೆಯಂತೆ, ವ್ಯಕ್ತಿಯು ತನ್ನ ಸಂಪತ್ತು ಮತ್ತು ಗಳಿಕೆಯ ವಿವರವನ್ನು ಯಾರಿಗೂ ಬಹಿರಂಗಪಡಿಸಬಾರದು. ಹಣದ ಬಗ್ಗೆ ಹೆಚ್ಚು ಹೇಳಿಕೊಂಡರೆ ಅಸೂಯೆ, ಶತ್ರುತ್ವ ಮತ್ತು ಅನಗತ್ಯ ತೊಂದರೆಗಳು ಎದುರಾಗಬಹುದು. ಆದ್ದರಿಂದ ಗಳಿಕೆಯನ್ನು ರಹಸ್ಯವಾಗಿ ಇಟ್ಟುಕೊಳ್ಳುವುದು ಬುದ್ಧಿವಂತಿಕೆಯಾಗಿದೆ.
ಆಚಾರ್ಯ ಚಾಣಕ್ಯರು ಸೂಚಿಸಿದ ಈ ಎಲ್ಲಾ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳದೇ ರಹಸ್ಯವಾಗಿ ಇಟ್ಟುಕೊಂಡರೆ, ಅನೇಕ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದು. ಇಲ್ಲವಾದರೆ, ಅನಗತ್ಯ ಕೋಪ, ಅಸಮಾಧಾನ ಮತ್ತು ನೆಮ್ಮದಿ ರಹಿತ ಜೀವನ ಅಥವಾ ಖುಷಿ ಇಲ್ಲದೇ ಇರುವ ಪರಿಸ್ಥಿತಿ ಎದುರಿಸಬೇಕಾಗಬಹುದು ಎಂಬುದನ್ನು ಮನದಲ್ಲಿಟ್ಟುಕೊಳ್ಳಬೇಕು.