Chanakya Niti: ಪರಿಪೂರ್ಣ ಜೀವನಕ್ಕೆ ಪಾಲಿಸಿ ಆಚಾರ್ಯ ಚಾಣಕ್ಯರ ಈ ನಾಲ್ಕು ತತ್ವಗಳು!
ರಾಜಕೀಯ ನೀತಿಗಳು ಮಾತ್ರವಲ್ಲದೆ ಮನುಷ್ಯನ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ಉಪಯುಕ್ತ ವಿಚಾರಗಳ ಬಗ್ಗೆ ಚಾಣಕ್ಯ ತಮ್ಮ ನೀತಿಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ಜೀವನದ ಎಲ್ಲಾ ದುಃಖವನ್ನು ಹೋಗಲಾಡಿಸಿ ಸಂತೋಷದಿಂದ ಬಾಳ್ವೆ ನಡೆಸಲು ನಾಲ್ಕು ಅಭ್ಯಾಸಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕು ಎಂದು ಆಚಾರ್ಯರು ಹೇಳಿದ್ದು, ಆ ನಾಲ್ಕು ಉತ್ತಮ ಅಭ್ಯಾಸಗಳ ಬಗ್ಗೆ ನಾವಿಂದು ತಿಳಿದುಕೊಳ್ಳೋಣ.
ಚಾಣಕ್ಯ -
ಬೆಂಗಳೂರು: ಪ್ರಾಚೀನ ಭಾರತದ ಮಹಾನ್ ತತ್ವಜ್ಞಾನಿ, ವಿದ್ವಾಂಸ ಮತ್ತು ರಾಜಕೀಯ ತಜ್ಞರೆಂದೇ ಹೆಸರಾಗಿದ್ದ ಆಚಾರ್ಯ ಚಾಣಕ್ಯರು (Acharya Chanakya) ನೀಡಿರುವ ಮಾರ್ಗದರ್ಶನಗಳು ಇಂದಿನ ಕಾಲಕ್ಕೂ ಪ್ರಸ್ತುತವಾಗಿರುವುದು ಅವರ ವಿಚಾರಗಳಿಗಿರುವ ಮುನ್ನೋಟಕ್ಕೆ ಸಾಕ್ಷಿಯಾಗಿದೆ. ಜೀವನದಲ್ಲಿ ನಾವು ಹೇಗಿರಬೇಕು? ಮತ್ತು ಹೇಗಿರಬಾರದು? ಎಂಬುದನ್ನು ನೂರಾರು ವರ್ಷಗಳ ಹಿಂದೆಯೇ ಆಚಾರ್ಯ ಚಾಣಕ್ಯರು ನಮಗೆ ತಿಳಿಸಿಕೊಟ್ಟಿದ್ದರು. ರಾಜಕೀಯ ನೀತಿಗಳು ಮಾತ್ರವಲ್ಲದೆ ಮನುಷ್ಯನ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ಉಪಯುಕ್ತ ವಿಚಾರಗಳ ಬಗ್ಗೆ ಚಾಣಕ್ಯ ತಮ್ಮ ನೀತಿಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ಜೀವನದ ಎಲ್ಲಾ ದುಃಖವನ್ನು ಹೋಗಲಾಡಿಸಿ ಸಂತೋಷದಿಂದ ಬಾಳ್ವೆ ನಡೆಸಲು ಚಾಣಕ್ಯ ನೀತಿಯ(Chanakya Niti) ನಾಲ್ಕು ಅಭ್ಯಾಸಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕು ಎಂದು ಆಚಾರ್ಯರು ಹೇಳಿದ್ದು, ಆ ನಾಲ್ಕು ಉತ್ತಮ ಅಭ್ಯಾಸಗಳ ಬಗ್ಗೆ ನಾವಿಂದು ತಿಳಿದುಕೊಳ್ಳೋಣ.
ದಾನ ಮಾಡುವುದು:
ದಾನವನ್ನು ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಹಾಗೆಯೇ ಆಚಾರ್ಯ ಚಾಣಕ್ಯರು ಸಹ ದಾನಕ್ಕೆ ಜೀವನದಲ್ಲಿ ಪ್ರಾಮುಖ್ಯತೆಯನ್ನು ಕೊಡಬೇಕೆಂದು ಒತ್ತಿ ಹೇಳಿದ್ದಾರೆ. ನಿಯಮಿತವಾಗಿ ದಾನ ಮಾಡುವ ವ್ಯಕ್ತಿಯ ಮನೆಯಿಂದ ಬಡತನ ದೂರವಾಗುತ್ತದೆ ಮತ್ತು ಆತನಿಗೆ ಲಕ್ಷ್ಮಿ ದೇವಿಯ ಆಶೀರ್ವಾದ ಲಭಿಸುತ್ತದೆ. ಕೇವಲ ಹಣವನ್ನು ದಾನ ಮಾಡುವುದು ಮಾತ್ರವಲ್ಲದೇ, ಆಹಾರ, ಜ್ಞಾನ, ಸಮಯ ಮತ್ತು ಇತರ ಸೇವೆಗಳ ಮೂಲಕವೂ ನಾವು ದಾನದ ಮಹತ್ವವನ್ನು ಕಂಡುಕೊಳ್ಳಬಹುದಾಗಿದೆ. ಹೀಗೆ ಇತರರಿಗೆ ಸಹಾಯ ಮಾಡುವ ವ್ಯಕ್ತಿಯ ಜೀವನದಲ್ಲಿ ಸಮೃದ್ಧಿ ಮತ್ತು ಗೌರವ ಎರಡೂ ಹೆಚ್ಚಾಗುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ.
Chanakya Niti: ಚಾಣಕ್ಯರ ಪ್ರಕಾರ ಗಂಡನ ಮುಂದೆ ತಪ್ಪಿಯೂ ಇಂತಹ ಮಾತುಗಳನ್ನು ಆಡಬೇಡಿ, ಸಂಬಂಧ ದೂರ ಆಗೋದು ಪಕ್ಕಾ!
ಉತ್ತಮ ನಡವಳಿಕೆ:
ಉತ್ತಮ ನಡವಳಿಕೆ, ನೈತಿಕತೆ ಮತ್ತು ಉತ್ತಮ ಮೌಲ್ಯಗಳನ್ನು ಹೊಂದಿರುವ ಸದ್ಗುಣಶೀಲ ವ್ಯಕ್ತಿ ಸಮಾಜದಲ್ಲಿ ಎಂದಿಗೂ ತಲೆತಗ್ಗಿಸಿ ಬದುಕುವುದಿಲ್ಲ ಎಂಬುದು ಚಾಣಕ್ಯರ ದೃಢ ನುಡಿ. ಈ ಸದ್ಗುಣಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಗೌರವ ಸಿಕ್ಕಿ, ಜೀವನದಲ್ಲಿ ಮೇಲೆ ಬರಲುಅವಕಾಶಗಳು ಸಿಗುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ.
ಜ್ಞಾನ :
ನಮ್ಮ ಸರ್ವತೋಮುಖ ಬೆಳವಣಿಗೆಗೆ ಅಜ್ಞಾನವೇ ದೊಡ್ಡ ಅಡಚಣೆ ಎಂದು ಚಾಣಕ್ಯರು ಹೇಳುತ್ತಾರೆ. ಪ್ರಜ್ಞಾ, ಅಂದರೆ ಸರಿಯಾದ ವಿವೇಚನೆ ಮತ್ತು ಆಳವಾದ ಜ್ಞಾನವು ನಮ್ಮನ್ನು ಕತ್ತಲೆಯಿಂದ ಹೊರತಂದು ಬೆಳಕಿನ ಕಡೆಗೆ ಕರೆದೊಯ್ಯುತ್ತದೆ. ನಿರಂತರವಾಗಿ ಕಲಿಯುವ, ಅನುಭವಗಳಿಂದ ಜ್ಞಾನವನ್ನು ಪಡೆಯುವ ಮತ್ತು ವಿವೇಚನೆಯಿಂದ ನಡೆದುಕೊಳ್ಳುವ ವ್ಯಕ್ತಿ ಜೀವನದಲ್ಲಿ ಎಂದಿಗೂ ಹಿಂದುಳಿಯುವುದಿಲ್ಲ ಎಂಬುದು ಆಚಾರ್ಯ ಚಾಣಕ್ಯರ ನುಡಿ.
ದೇವರ ಮೇಲೆ ನಂಬಿಕೆ:
ಸರ್ವಶಕ್ತನಾದ ದೇವರಲ್ಲಿ ನಂಬಿಕೆ, ಸಕಾರಾತ್ಮಕ ಚಿಂತನೆ ಮತ್ತು ಭಕ್ತಿಯು ವ್ಯಕ್ತಿಯೊಳಗಿನ ಎಲ್ಲಾ ರೀತಿಯ ಭಯಗಳನ್ನು ನಿವಾರಿಸುತ್ತದೆ. ಭಕ್ತಿ ಮತ್ತು ನಿಜವಾದ ಭಾವನೆಗಳೊಂದಿಗೆ ತನ್ನ ಜೀವನವನ್ನು ನಡೆಸುವ ವ್ಯಕ್ತಿಯು ಮಾನಸಿಕ ಶಾಂತಿ ಮತ್ತು ಆತ್ಮವಿಶ್ವಾಸಗಳೆರಡನ್ನೂ ಪಡೆದು ಪ್ರಜ್ವಲಿಸುತ್ತಾನೆ ಎನ್ನುತ್ತಾರೆ ಆಚಾರ್ಯ ಚಾಣಕ್ಯ.
ಹಿಗೆ, ಆಚಾರ್ಯ ಚಾಣಕ್ಯರು ಹೇಳಿರುವ ಈ ನಾಲ್ಕು ಅಭ್ಯಾಸಗಳು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮಗೊಂದು ಪರಿಪೂರ್ಣ ವ್ಯಕ್ತಿತ್ವನ್ನು ಮತ್ತು ಅಂತಃಶಕ್ತಿಯನ್ನು ನೀಡುವ ಮೂಲಕ ನಮ್ಮನ್ನು ಸಜ್ಜನ ಮನುಷ್ಯರನ್ನಾಗಿಸುವುದರ ಜೊತೆಗೆ, ನಮ್ಮನ್ನು ಯಶಸ್ವಿ, ಸಂತೋಷಭರಿತ ನಿರ್ಭೀತ ಜೀವನದತ್ತ ಕೊಂಡೊಯ್ಯುವುದರಲ್ಲಿ ಸಂಶಯವಿಲ್ಲ.