ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Astro Tips: ಬುಧವಾರ ಈ ಮಂತ್ರ ಪಠಿಸಿದರೆ ನಿಮ್ಮಾಸೆಗಳೆಲ್ಲವೂ ಈಡೇರುತ್ತದೆ

ಬುಧವಾರವನ್ನು ಗಣೇಶ ಹಾಗೂ ಬುಧನಿಗೆ ಸಮರ್ಪಣೆ ಮಾಡಲಾಗಿದೆ. ಈ ದಿನ ನಾವು ವಿಘ್ನನಿವಾರಕ ಹಾಗೂ ಬುಧನನ್ನು ಮೆಚ್ಚಿಸಲು ಕೆಲ ಶ್ಲೋಕಗಳನ್ನ ಹೇಳಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಹಾಗಾದರೆ ಬುಧವಾರ ಯಾವ ಮಂತ್ರವನ್ನ ಪಠಿಸಬೇಕು ಎಂಬುದರ ಮಾಹಿತಿ ಇಲ್ಲಿದೆ.

ಸಾಂಧರ್ಬಿಕ ಚಿತ್ರ

ಬೆಂಗಳೂರು: ಹಿಂದೂ ಧರ್ಮದ ಪ್ರಮುಖ ದೇವತೆಗಳಲ್ಲಿ ಅಗ್ರಜ ಸ್ಥಾನ ಪಡೆದಿರುವ ವಿಘ್ನ ನಿವಾರಕ ವಿನಾಯಕನಿಗೆ (Ganesha Lord) ಮೊದಲ ಪೂಜೆ ಸಲ್ಲುತ್ತದೆ. ಯಾವುದೇ ಹೊಸ ಕೆಲಸ ಪ್ರಾರಂಭ ಮಾಡುವ ಮುನ್ನ ಮಂಗಳ ಮೂರ್ತಿಯಾಗಿರುವ ಗಣೇಶನನ್ನು ಪ್ರಾರ್ಥಿಸಲಾಗುತ್ತದೆ. ಅವನನ್ನು ಆರಾಧಿಸಿ ಮುನ್ನಡೆದರೆ ಸಕಲ ಸಂಕಷ್ಟಗಳು ನಿವಾರಣೆಗೊಂಡು ಕೈ ಹಿಡಿದ ಕೆಲಸಗಳಲ್ಲಿ ಯಶ ಸಿಗುತ್ತದೆ ಎನ್ನಲಾಗುತ್ತಿದೆ. ಅದರಲ್ಲೂ ಬುಧವಾರ ಗಣೇಶನ ಆರಾಧನೆಗೆ ಶ್ರೇಷ್ಠವಾಗಿದ್ದು, ಈ ದಿನ ಗಣಪನನ್ನು ಪೂಜಿಸುವುದರಿಂದ ವಿಶೇಷ ಪೂಜಾ ಫಲ ಸಿಗುತ್ತದೆ ಎಂಬ ನಂಬಿಕೆಯಿದೆ. ಬುಧವಾರ ಮೂಷಿಕನನ್ನು ಪೂಜಿಸುವ ಭಕ್ತರ ಎಲ್ಲ ಆಸೆ ಈಡೇರಿಸಲಾಗುತ್ತದೆ. ಇದರೊಂದಿಗೆ ಗಣೇಶನು ಭಕ್ತರ ಎಲ್ಲ ತೊಂದರೆಗಳನ್ನು ನಿವಾರಿಸುತ್ತಾನೆ. ಪ್ರಥಮ ಪೂಜಿತನೆಂದು ಪರಿಗಣಿಸಲಾಗುವ ಗಣಪತಿಯನ್ನು ನೆನೆಯುವುದರಿಂದ ಮಂಗಳಕರ ಲಾಭ ದೊರೆಯುತ್ತದೆ ಎಂದು ನಂಬಲಾಗಿದೆ. ಅಲ್ಲದೇ ಸುಖ, ಶಾಂತಿ, ಸಮೃದ್ಧಿಯ ಪ್ರಾಪ್ತಿಯೊಂದಿಗೆ ಬುಧ ದೋಷಗಳು ನಿವಾರಣೆಯಾಗುತ್ತದೆ. ಹಾಗೇ ಈ ದಿನದಂದು ಗಣೇಶನ ಕೆಲ ಮಂತ್ರಗಳನ್ನು ಪಠಿಸುವುದರಿಂದ ಅವನ ಆಶೀರ್ವಾದವನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಹಾಗಾದರೆ ಜ್ಯೋತಿಷ್ಯ ಶಾಸ್ತ್ರ ಪ್ರಕಾರ (Astro Tips) ಗಣೇಶನ ಕೃಪೆ ಪಡೆಯಲು ಯಾವ ಮಂತ್ರ (Ganesha Manthra) ಪಠಿಸಬೇಕು? ವಕ್ರತುಂಡನ ಮಂತ್ರಗಳನ್ನು ಜಪಿಸುವುದರಿಂದ ಸಿಗುವ ಪ್ರಯೋಜನಗಳೇನು? ಎಂಬ ಮಾಹಿತಿ ಇಲ್ಲಿದೆ.

'ಓಂ ಗಣ ಗಣಪತಯೇ ನಮಃ'

ಗಣೇಶನನ್ನು ಪೂಜಿಸಿ ಈ ಮಂತ್ರವನ್ನು ಪಠಿಸುವುದರಿಂದ ಸಂತೋಷ ಮತ್ತು ಅದೃಷ್ಟ ಹೆಚ್ಚುತ್ತದೆ ಮತ್ತು ಜೀವನದಲ್ಲಿ ಎದುರಾಗುವ ಎಲ್ಲ ರೀತಿಯ ಅಡೆತಡೆಗಳು ದೂರವಾಗುತ್ತವೆ. ನೀವು ನಿಮ್ಮ ಬದುಕಿನಲ್ಲಿ ಖುಷಿಯಾಗಿ ಇರಬೇಕೆಂದರೆ ತಪ್ಪದೇ ಬುಧವಾರ ಗಣೇಶನ ಪೂಜೆಯ ವೇಳೆ ಈ ಮಂತ್ರಗಳನ್ನು 108 ಬಾರಿ ಜಪಿಸಿ. ಇದು ನಿಮ್ಮ ಎಲ್ಲ ಕೆಲಸಗಳಲ್ಲಿ ಯಶಸ್ಸನ್ನು ತಂದುಕೊಡಲಿದ್ದು, ನಿಮ್ಮ ಆಸೆಗಳು ಈಡೇರುವಂತೆ ಮಾಡುತ್ತದೆ.

ಈ ಸುದ್ದಿಯನ್ನು ಓದಿ: Vastu Tips: ತಪ್ಪಿಯೂ ಮನೆಯ ಮುಖ್ಯ ದ್ವಾರದ ಮುಂದೆ ಈ ಮೂರು ವಸ್ತುಗಳು ಇರದಂತೆ ನೋಡಿಕೊಳ್ಳಿ..!

'ಓಂ ನಮೋ ಭಗವತೇ ಗಜಾನನಾಯ'

ಇದು ವಿಘ್ನ ನಿವಾರಕನ ಅತ್ಯಂತ ಪರಿಣಾಮಕಾರಿ ಮಂತ್ರವಾಗಿದ್ದು, ಇದನ್ನು ಪಠಿಸುವುದರಿಂದ ಹೆಚ್ಚು ಪ್ರಯೋಜನವನ್ನು ಪಡೆದುಕೊಳ್ಳಬಹುದು. ಇದನ್ನು ಪಠಿಸುವುದರಿಂದ ಆರ್ಥಿಕ ಸಂಕಷ್ಟಗಳು ನಿವಾರಣೆಗೊಳ್ಳಲಿದ್ದು, ಗಣಪನ ಕೃಪೆ ದೊರೆತು ಹಣದ ಸಮಸ್ಯೆ ಬರುವುದಿಲ್ಲ ಎಂಬ ನಂಬಿಕೆ ಇದೆ. ಹಾಗಾಗಿ ಬುಧವಾರ ಗಣೇಶನನ್ನು ಪೂಜಿಸಿದ ಬಳಿಕ ಈ ಮಂತ್ರವನ್ನು ಕನಿಷ್ಠ 11 ಬಾರಿಯಾದರೂ ಪಠಿಸಬೇಕು.

‘ಓಂ ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ

ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ’

ಈ ಗಣೇಶ ಮಂತ್ರವು ಅತ್ಯಂತ ಪ್ರಸಿದ್ಧ ಹಾಗೂ ಶಕ್ತಿಶಾಲಿ ಮಂತ್ರಗಳಲ್ಲಿ ಒಂದಾಗಿದೆ. ಈ ಮಂತ್ರವನ್ನು ಭಕ್ತಿಯಿಂದ ಜಪಿಸಿದರೆ ಜೀವನದ ಎಲ್ಲ ಕಾರ್ಯಗಳಲ್ಲಿ ಅಡೆತಡೆಗಳು ದೂರವಾಗಿ, ಕಾರ್ಯಗಳು ಸುಗಮವಾಗಿ ನೆರವೇರುತ್ತವೆ. ಇದರಿಂದ ಮನಸ್ಸಿಗೆ ಶಾಂತಿ ದೊರೆಯುವುದರ ಜತೆಗೆ, ನಿಮ್ಮ ಇಷ್ಟಾರ್ಥಗಳು ಪೂರ್ಣಗೊಳ್ಳಲು ಸಹಾಯ ಮಾಡುತ್ತದೆ.

ಬುಧವಾರದ ದಿನದಂದು ನೀವು ಈ ಮೇಲಿನ ಗಣೇಶ ಮಂತ್ರಗಳನ್ನು ಪಠಿಸುವುದರಿಂದ ಹಣದ ಸಮಸ್ಯೆಗಳಿಂದಲೂ ಮುಕ್ತಿ ಪಡೆದುಕೊಳ್ಳುತ್ತೀರಿ. ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೂ, ಜೀವನದ ಪ್ರತಿಯೊಂದು ಅಡೆತಡೆಗಳಿಗೂ ಇದು ಪರಿಹಾರ ನೀಡುತ್ತದೆ.