ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Horoscope Today November 14th: ರವಿಯಿಂದ ಈ ರಾಶಿಗೆ ಯಶಸ್ಸಿನ ಯೋಗ- ಸಂಸಾರದಲ್ಲೂ ನೆಮ್ಮದಿ!

ನಿತ್ಯ ಭವಿಷ್ಯ ನವೆಂಬರ್‌ 14, 2025: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಶರದೃತು ಕಾರ್ತಿಕ ಮಾಸೆ ಕೃಷ್ಣ ಪಕ್ಷ, ದಶಮಿ ತಿಥಿ, ಪೂರ್ವ ಪಾಲ್ಗುಣಿ ನಕ್ಷತ್ರದ ನವೆಂಬರ್ 14ನೇ ತಾರೀಖಿನ ಶುಕ್ರವಾರದ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ.

ದಿನ ಭವಿಷ್ಯ

ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಶರದೃತು ಕಾರ್ತಿಕ ಮಾಸೆ, ಕೃಷ್ಣ ಪಕ್ಷದ ದಶಮಿ ತಿಥಿ, ಪೂರ್ವ ಪಾಲ್ಗುಣಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಪೂರ್ವ ಪಾಲ್ಗುಣಿ ನಕ್ಷತ್ರದ ಅಧಿಪತಿ ರವಿ ಆಗಿದ್ದಾನೆ.‌ ಇದರಿಂದ ಎಲ್ಲ ರಾಶಿಗೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಇಂದು ಅತ್ಯುತ್ತಮ ದಿನವಾಗಿದೆ‌. ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಬುದ್ದಿ ಕೌಶಲ್ಯದಿಂದ ಒಳಿತು ಆಗಲಿದೆ. ಆದರೆ ಬಿಸೆನೆಸ್ ವ್ಯವ ಹಾರಕ್ಕೆ ಇಂದು ಉತ್ತಮ ದಿನ ಅಲ್ಲ.

ವೃಷಭ ರಾಶಿ: ವೃಷಭ ರಾಶಿ ಅವರಿಗೆ ಮನೆಯ ಬಗ್ಗೆ ಆಸ್ತಿ ಪಾಸ್ತಿ ವಿಚಾರ ತಾಯಿಯ ಆರೋಗ್ಯ ಬಗ್ಗೆ ಹೆಚ್ಚು ಗಮನ ವಹಿಸ ಬೇಕಾಗುತ್ತದೆ..ಹಾಗಾಗಿ ಮನೆ ಹಾಗೂ ಕೆಲಸ ಕಾರ್ಯಗಳನ್ನು ಸರಿ ಯಾಗಿ ನಿಭಾಯಿಸಬೇಕಾಗುತ್ತದೆ.

‌ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಸಾಮಾಜಿಕ ವ್ಯವಹಾರದಲ್ಲಿ ಮುನ್ನಡೆ ಪ್ರಾಪ್ತಿ ಯಾಗುತ್ತದೆ. ಮಾಸ್ ಮೀಡಿಯಾ ರೇಡಿಯೊ, ಟಿವಿ, ಜಾಹೀರಾತಿನಲ್ಲಿ ಕೆಲಸ ಮಾಡೋರಿಗೆ ಅತೀ ಹೆಚ್ಚಿನ ಯಶಸ್ಸು ಸಿಗುವ ದಿನವಾಗಿದೆ.

ಕಟಕ ರಾಶಿ: ಕಟಕ ರಾಶಿ ಅವರು ಸಂಸಾರದ ಸುಭದ್ರತೆ ಬಗ್ಗೆ ಹೆಚ್ಚಿನ ಜವಾಬ್ದಾರಿಯನ್ನು ತೆಗೆದು ಕೊಳ್ಳಬೇಕಾಗುತ್ತದೆ. ಮನೆಯ ಬಗ್ಗೆ ಹೆಚ್ಚಿನ ಗಮನವನ್ನು ನೀಡಿದರೆ ಸುಖವಾಗಿ ದಿನವನ್ನು ಕಳೆಯಬಹುದು.

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ನಿಮ್ಮ ರಾಶಿಗೆ ಚಂದ್ರ ಬಂದಿರುವುದರಿಂದ ಇದ್ದಂತಹ ಸಮಸ್ಯೆ ಎಲ್ಲವೂ ಬಗೆಹರಿಯಲಿದೆ. ಮುಂದಿನ ದಿನದ ಬಗ್ಗೆ ಉತ್ತಮ ಮಾರ್ಗ ದರ್ಶನ ನಿಮಗೆ ಸಿಗಲಿದೆ.

ಇದನ್ನು ಓದಿ:Vastu Tips: ದೇವರ ಮನೆಯಲ್ಲಿ ಈ ವಸ್ತು ಇದ್ರೆ ಲಕ್ಷ್ಮೀ ನಿಮ್ಮ ಮನೆ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಕಷ್ಟಕರವಾದ ವಾದ ದಿನ ವಾಗಿದೆ. ಮನಸ್ಸಿಗೆ ನೆಮ್ಮದಿಯ ಜೊತೆ ಕ್ಷೇಷ ಉಂಟಾಗುವ ಸಾಧ್ಯತೆ ಇದೆ. ಮುಖ್ಯವಾದ ಕೆಲಸದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಹೋಗಬೇಡಿ.. ಯಾವುದೇ ಮೇಲ್, ಮೀಟಿಂಗ್, ಇತ್ಯಾದಿಯಲ್ಲಿ ಪಾಲ್ಗೊಳ್ಳಬೇಡಿ

ತುಲಾ ರಾಶಿ: ತುಲಾ ರಾಶಿ ಅವರಿಗೆ ಉತ್ತಮವಾದ ದಿನ ವಾಗಿದೆ. ಮನಸ್ಸಿಗೆ ನೆಮ್ಮದಿ ಪ್ರಾಪ್ತಿ ಯಾಗ ಲಿದ್ದು ಇಷ್ಟಾರ್ಥ ಸಿದ್ದಿ ಆಗಲಿದೆ..ಮಿತ್ರರಿಂದ ಸಂತೋಷ ಕೂಡ ಸಿಗಲಿದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಭಾಗ್ಯೋದಯವಾದ ದಿನ ವಾಗಿದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ. ಆದರೆ ಕಾರ್ಯ ಕ್ಷೇತ್ರದ ಜೊತೆಗೆ ಮನೆಯವರನ್ನು ಕೂಡ ಸರಿಯಾಗಿ ನಿಭಾಯಿಸಬೇಕಾಗುತ್ತದೆ.

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಭಾಗ್ಯೋದಯವಾದ ದಿನ ವಾಗಿದೆ. ಮನಸ್ಸಿಗೆ ನೆಮ್ಮದಿ ಇದೆ.ಆದರೂ ಕೂಡ ಹಿರಿಯರ ಹಾಗೂ ಭಗವಂತನ ಆಶೀರ್ವಾದ ಬಹಳಷ್ಟು ಅಗತ್ಯವಾಗಿ ಬೇಕಾಗುತ್ತದೆ.

ಮಕರ ರಾಶಿ: ಮಕರ ರಾಶಿ ಅವರಿಗೆ ಕಷ್ಟಕರವಾದ ದಿನವಾಗಿದೆ. ಮುಖ್ಯವಾದ ನಿರ್ಧಾರದಲ್ಲಿ ಯಾವುದೇ ಸಹಕಾರ ಸಿಗುವುದಿಲ್ಲ. ಪ್ರೀತಿ ಪಾತ್ರರು ಯಾವುದೇ ಬೆಂಬಲ ನೀಡುವುದಿಲ್ಲ.ಹಾಗಾಗಿ ಧ್ಯಾನಧಿಗಳನ್ನು ಮಾಡಿ ಸಮಯ ಕಳೆಯಬೇಕು.

ಕುಂಭ ರಾಶಿ: ಕುಂಭ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ಬಹಳಷ್ಟು ನೆಮ್ಮದಿ ಇದ್ದು ದಾಂಪತ್ಯದಲ್ಲೂ ನೆಮ್ಮದಿ ಇರುತ್ತದೆ. ಮಿತೃತ್ವದಲ್ಲಿ ಕೂಡ ಸೌಹಾರ್ದ ಪ್ರಾಪ್ತಿಯಾಗುತ್ತದೆ.

ಮೀನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಸಾಮಾಜಿಕ ವ್ಯವಹಾರದಲ್ಲಿ ಮುನ್ನಡೆ ಪ್ರಾಪ್ತಿಯಾಗುತ್ತದೆ. ಮಾಸ್ ಮೀಡಿಯಾ ರೇಡಿಯೊ, ಟಿವಿ, ಜಾಹೀರಾತಿನಲ್ಲಿ ಕೆಲಸ ಮಾಡೋರಿಗೆ ಅತೀ ಹೆಚ್ಚಿನ ಯಶಸ್ಸು ಸಿಗುವ ದಿನವಾಗಿದೆ.