Vastu Tips: ದೇವರ ಮನೆಯಲ್ಲಿ ಈ ವಸ್ತು ಇದ್ರೆ ಲಕ್ಷ್ಮೀ ನಿಮ್ಮ ಮನೆ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ
Vastu Tips for Pooja Room: ಅಡುಗೆ ಮನೆಯಂತೆ ದೇವರ ಕೋಣೆಯು ಮನೆಯ ಬಹುಮುಖ್ಯ ಭಾಗ. ದೇವರ ಮನೆ ಕಟ್ಟುವಾಗ ವಾಸ್ತು ನಿಯಮ ಪಾಲಿಸಬೇಕಾಗುತ್ತದೆ. ಹಾಗೇ ದೇವರ ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಟ್ಟರೆ ಮನೆಯ ಸಂಪತ್ತು ಹೆಚ್ಚಾಗುತ್ತದೆ. ಜತೆಗೆ ಅನಾರೋಗ್ಯ ಬಾಧಿಸುವುದಿಲ್ಲ. ಐಶ್ವರ್ಯ ವೃದ್ಧಿಯಾಗುತ್ತದೆ. ನಿಮ್ಮ ಮನೆಯನ್ನು ಅಭಿವೃದ್ಧಿ ಮಾಡುವ ದೇವರ ಮನೆ ನಿಯಮಗಳನ್ನು ಇಲ್ಲಿ ತಿಳಿಯೋಣ.
-
ಬೆಂಗಳೂರು: ವಾಸ್ತು ಶಾಸ್ತ್ರದ (Vastu Shastra) ಪ್ರಕಾರ ಮನೆಯಲ್ಲಿನ ಪ್ರತಿಯೊಂದು ಮೂಲೆಯೂ ತುಂಬಾ ಮುಖ್ಯವಾಗುತ್ತೆ. ಮನೆಯ ಅತ್ಯಂತ ಪ್ರಮುಖ ಭಾಗವಾಗಿರುವ ದೇವರ ಮನೆಯೂ ಇದಕ್ಕೆ ಹೊರತಾಗಿಲ್ಲ. ಮನೆಯಲ್ಲಿ ಸಮೃದ್ಧಿ- ಸಂಪತ್ತು ವೃದ್ಧಿಯಾಗಬೇಕಾದರೆ ದೇವರ ಕೋಣೆಯ ವಾಸ್ತುವೂ ಪ್ರಮುಖವಾಗುತ್ತದೆ. ಒಂದು ವೇಳೆ ದೇವರ ಮನೆಯಲ್ಲಿ ವಾಸ್ತು ದೋಷವಿದ್ದರೆ, ಕುಟುಂಬದಲ್ಲಿ ಕೌಟುಂಬಿಕ ಕಲಹಗಳು, ಸಮಸ್ಯೆಗಳು ಹೆಚ್ಚಾಗಬಹದು. ಇದೇ ರೀತಿ ದೇವರ ಕೋಣೆಯಲ್ಲಿ ವಾಸ್ತು ದೋಷ ಉಂಟಾದರೆ ಆ ಮನೆಯಲ್ಲಿ ತಾಯಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಎನ್ನಲಾಗುತ್ತೆ. ಹೀಗಾಗಿ ದೇವರ ಮನೆಯ ವಾಸ್ತು ಹೇಗಿರಬೇಕು ಎನ್ನುವುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ವಾಸ್ತು ಪ್ರಕಾರ, ಯಾವುದೇ ಮನೆಯಲ್ಲಿ ದೇವರ ಕೋಣೆ ಅಥವಾ ಪೂಜೆಯ ಮಂದಿರ ಪ್ರಮುಖವಾದುದು. ಇದಕ್ಕೆ ಸಂಬಂಧಿಸಿದಂತೆ ವಾಸ್ತುದಲ್ಲಿ ಕೆಲವು ನಿಯಮಗಳನ್ನು ಹೇಳಲಾಗಿದೆ. ಈ ನಿಯಮಗಳ ಪ್ರಕಾರ, ಶುಭವೆಂದು ಪರಿಗಣಿಸಲಾದ ಕೆಲವು ವಸ್ತುಗಳನ್ನು ಮನೆಯ ದೇವರ ಕೋಣೆಯೊಳಗೆ ಇಡುವುದರಿಂದ ಮನೆಯಲ್ಲಿನ ಸಂಪತ್ತು ಹೆಚ್ಚಾಗುತ್ತದೆ. ಇದರಿಂದ ಕುಟುಂಬ ಸದಸ್ಯರ ಆದಾಯವೂ ದುಪ್ಪಟ್ಟು ಆಗಲಿದ್ದು, ಧನಹಾನಿ ಮತ್ತು ಆಸ್ತಿಪಾಸ್ತಿ ನಷ್ಟವಾಗುವಂತಹ ಸನಿವೇಶಗಳು ದೂರ ಆಗುತ್ತದೆ ಎಂದು ಹೇಳಲಾಗುತ್ತದೆ.
ಘಂಟೆ
ವಾಸ್ತು ಶಾಸ್ತ್ರದ ಪ್ರಕಾರ, ದೇವರ ಮನೆಯಲ್ಲಿ ಘಂಟೆಯನ್ನು ಇಟ್ಟು, ಪ್ರತಿದಿನ ಅದನ್ನು ಬಾರಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚುತ್ತದೆ ಮತ್ತು ನಕಾರಾತ್ಮಕತೆಯನ್ನು ದೂರ ಮಾಡುತ್ತವೆ. ಇದರ ಧ್ವನಿ ಅಥವಾ ನಾದಕ್ಕೆ ಮನೆಯಲ್ಲಿ ಯಾವುದೇ ಕೆಟ್ಟ ಶಕ್ತಿ ನಿರ್ಮೂಲನೆ ಆಗುತ್ತದೆ ಮತ್ತು ಮನೆಗೆ ಸಮೃದ್ಧಿ ತರೆಯುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಮನೆಯ ದೇವರ ಕೋಣೆಯಲ್ಲಿ ಇಡಬೇಕು.
ಈ ಸುದ್ದಿಯನ್ನು ಓದಿ: Vastu Tips: ಮನೆಯಲ್ಲಿ ಗೂಬೆ ವಿಗ್ರಹ ಇಡಬಹುದೇ? ಈ ಬಗ್ಗೆ ವಾಸ್ತು ಶಾಸ್ತ್ರ ಏನು ಹೇಳುತ್ತದೆ?
ಶಂಖ
ಸಮುದ್ರ ಮಂಥನದ ಸಂದರ್ಭದಲ್ಲಿ ಸಿಕ್ಕಿದ ಹದಿನಾಲ್ಕು ರತ್ನಗಳಲ್ಲಿ ಶಂಖವೂ ಒಂದಾಗಿದ್ದು,
ಇದರ ನಾದಕ್ಕೆ ಮನೆಯಲ್ಲಿರುವ ನಕರಾತ್ಮಕ ಶಕ್ತಿಯನ್ನು ಓಡಿಸುವ ಶಕ್ತಿಯಿದೆ ಎಂಬ ನಂಬಿಕೆ ಇದೆ. ಧಾರ್ಮಿಕ ನೆಲೆಯಲ್ಲಿ ಶಂಖಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದ್ದು, ಶಂಖವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಶಂಖವನ್ನು ದೇವರ ಮನೆಯಲ್ಲಿ ಇಡುವುದರಿಂದ ಶಾಂತಿ, ಸಮೃದ್ಧಿ ಮತ್ತು ಅದೃಷ್ಟ ಬರಲಿದೆ ಎಂಬ ನಂಬಿಕೆ ಇದ್ದು, ಮನೆಯಲ್ಲಿರುವ ಯಾವುದೇ ನಕಾರಾತ್ಮಕ ಶಕ್ತಿಯನ್ನು ಇದು ನಿವಾರಿಸುತ್ತದೆ.
ನವಿಲು ಗರಿಗಳು
ವಾಸ್ತು ಪ್ರಕಾರ, ಮನೆಯಲ್ಲಿ ನವಿಲು ಗರಿಗಳನ್ನು ಇಡುವುದು ಶುಭವೆಂದು ಪರಿಗಣಿಸಲಾಗಿದೆ. ಅದರಲ್ಲೂ ದೇವರ ಮನೆಯಲ್ಲಿ ಇಡುವುದರಿಂದ ಸಾಕಷ್ಟು ಶುಭ ಫಲಗಳು ದೊರೆಯಲಿದ್ದು, ಶ್ರೀ ಕೃಷ್ಣನ ಪ್ರಿಯವಾಗಿರುವ ಈ ನವಿಲುಗರಿಗಳು ಮನೆಯಲ್ಲಿನ ಕೆಟ್ಟ ಶಕುನಗಳನ್ನು ನಿವಾರಿಸಲಿದ್ದು, ಅದೃಷ್ಟವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರೊಂದಿಗೆ ಸಮೃದ್ಧಿ, ಶಾಂತಿ ಹಾಗೂ ಸಂಪತ್ತನ್ನು ತಂದುಕೊಡಲಿದ್ದು, ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಗೋಮೂತ್ರ
ಹಿಂದೂ ಧರ್ಮದಲ್ಲಿ ಗೋಮೂತ್ರವನ್ನೂ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಗಂಗಾ ಜಲದಷ್ಟೇ ಗೋಮೂತ್ರವೂ ಶ್ರೇಷ್ಠ ಎಂಬ ನಂಬಿಕೆ ಇದ್ದು, ಕಾಮಧೇನು ಅಥವಾ ಗೋಮಾತೆಯನ್ನು ಪೂಜಿಸುವುದರಿಂದ ಹೇಗೆ ದೇವರ ಕೃಪೆಗೆ ಪಾತ್ರರಾಗಬಹುದೋ ಹಾಗೇ ದೇವರ ಕೋಣೆಯಲ್ಲಿ ಗೋಮೂತ್ರವನ್ನು ಇಟ್ಟುಕೊಳ್ಳುವುದರಿಂದ ಲಕ್ಷ್ಮೀ ದೇವಿಯ ಆಶೀರ್ವಾದವನ್ನು ಪಡೆಯ ಬಹುದಾಗಿದೆ. ಇದರಿಂದ ಮನೆಯಲ್ಲಿನ ದಾರಿದ್ರ್ಯ, ನಕರಾತ್ಮಕತೆಯೂ ದೂರಾಗುತ್ತದೆ.