ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು, ಮಾರ್ಗಶಿರಾ ಮಾಸೆ ಕೃಷ್ಣ ಪಕ್ಷದ, ದಶಮಿ ತಿಥಿ , ಹಸ್ತ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಹಸ್ತ ನಕ್ಷತ್ರದ ಅಧಿಪತಿ ಚಂದ್ರ ಆಗಿದ್ದಾನೆ. ಹಾಗಾಗಿ ಎಲ್ಲ ರಾಶಿಗೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಮೇಷ ರಾಶಿಯವರಿಗೆ ಇಂದು ಅತ್ಯುತ್ತಮವಾದ ದಿನವಾಗಿದೆ. ಸಾಮಾಜಿಕ ಚಟುವಟಿಕೆಯಲ್ಲಿ ನೀವು ಜಯವನ್ನು ಕಾಣುತ್ತೀರಿ. ಶತ್ರುಗಳನ್ನು ಕೂಡ ನೀವು ಹಿಮ್ಮೆಟ್ಟಬಹುದು.
ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಬಿಸೆನೆಸ್ ವ್ಯವಹಾರದಲ್ಲಿ ಸ್ವಲ್ಪ ತಲೆಬಿಸಿ ಯಾಗಬಹುದು. ಮಕ್ಕಳ ವಿಚಾರದಲ್ಲಿ ಪೋಷಕರಿಗೂ ಕೂಡ ಕಿರಿಕಿರಿ ಆಗುವ ಸಾಧ್ಯತೆ ಇರುತ್ತದೆ. ಪ್ರೇಮ, ಪ್ರೀತಿ ವಿಚಾರದಲ್ಲೂ ಬೇಸರ ಉಂಟಾಗುವ ಸಾಧ್ಯತೆ ಇರುತ್ತದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೂ ತಾಯಿಯ ವಿಚಾರ,ಮನೆಯ ವಿಚಾರದ ಬಗ್ಗೆ ಗೊಂದಲ ಉಂಟಾಗುವ ಸಾಧ್ಯತೆ ಇರುತ್ತದೆ. ಕೋರ್ಟ್, ಕಛೇರಿ ವ್ಯವಹಾರದಲ್ಲಿ ಕೂಡ ನಿಮಗೆ ತೊಂದರೆ ಆಗುವ ಸಾಧ್ಯತೆ ಇರುತ್ತದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಅತೀ ಉತ್ತಮವಾದ ವಿಚಾರ ವಾಗಿದೆ. ಸೋಷಿಯಲ್ ಮೀಡಿಯಾ, ಮಾರ್ಕೆಟಿಂಗ್ ವ್ಯವಹಾರದಲ್ಲಿ ಇರೋರಿಗೆ ಬಹಳನೇ ಉತ್ತಮವಾದ ದಿನವಾಗಿದೆ. ಕೆಲಸ ಕಾರ್ಯದಲ್ಲಿ ಬಹಳನೇ ಪ್ರಗತಿಯನ್ನು ನೀವು ಕಾಣುತ್ತೀರಿ.
ಸಿಂಹ ರಾಶಿ: ಸಿಂಹ ರಾಶಿ ಅವರು ಕುಟುಂಬದ ಬಗ್ಗೆ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ. ಕುಟುಂಬದ ಕಡೆ ಗಮನ ಕೊಟ್ಟಷ್ಟು ನೀವು ನೆಮ್ಮದಿಯನ್ನು ಕಾಣುತ್ತೀರಿ. ಕೆಲಸ ಕಾರ್ಯ ದಲ್ಲಿ ಕೂಡ ಬಹಳನೇ ಯಶಸ್ಸು ಅನ್ನು ಕಾಣುತ್ತೀರಿ
: ಮನೆಯಲ್ಲಿ ಈ ಆನೆಯ ಪ್ರತಿಮೆಯನ್ನಿಟ್ಟರೆ ಸಂಪತ್ತು ಐಶ್ವರ್ಯ ವೃದ್ಧಿ ಗ್ಯಾರೆಂಟಿ..!
ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಅತೀ ಉತ್ತಮವಾದ ದಿನವಾಗಿದೆ. ಚಂದ್ರ ನಿಮ್ಮ ರಾಶಿಯಲ್ಲಿ ಇರುವುದರಿಂದ ಹಿಂದಿನ ಎರಡು ಮೂರು ದಿನದಲ್ಲಿ ಇದ್ದ ಮನಸ್ಸಿನ ಕ್ಷೇಷ ಎಲ್ಲವೂ ಮಯ ವಾಗುತ್ತದೆ. ಅತೀ ಹೆಚ್ಚಿನ ನೆಮ್ಮದಿಯನ್ನು ನೀವು ಕಾಣುತ್ತೀರಿ.
ತುಲಾ ರಾಶಿ: ತುಲಾ ರಾಶಿ ಅವರಿಗೆ ಲಕ್ಲಿಷ್ಟಕರವಾದ ದಿನವಾಗಿದೆ. ಮನಸ್ಸಿಗೆ ಹೆಚ್ಚಿನ ಕ್ಷೇಷ ಉಂಟಾಗುವ ದಿನ ಆಗಲಿದೆ. ಮುಖ್ಯವಾದ ವಿಚಾರದಲ್ಲಿ ಯಾವುದೇ ಮುಖ್ಯ ನಿರ್ಧಾರಗಳು ಇಂದು ಬೇಡ. ನಿಮ್ಮ ಪರವಾಗಿ ಯಾವುದೇ ಕೆಲಸ ಕಾರ್ಯಗಳು ಇಂದು ನಡೆಯುವುದಿಲ್ಲ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಅತೀ ಉತ್ತಮವಾದ ದಿಮವಾಗಿದೆ. ಇಷ್ಟಾರ್ಥ ಸಿದ್ದಿ ಯಾಗಲಿದ್ದು ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಮಿತ್ರರಿಂದ,ಗುಂಪು ಕೆಲಸಗಳಿಂದ ನಿಮಗೆ ಲಾಭ ಉಂಟಾಗುವ ಸಾಧ್ಯತೆ ಇರುತ್ತದೆ. ಆರ್ಥಿಕ ಪ್ರಗತಿಯನ್ನು ಕೂಡ ನೀವು ಕಾಣಲಿದ್ದೀರಿ.
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಅತೀ ಉತ್ತಮವಾದ ದಿನವಾಗಿದೆ. ಸಾಮಾಜಿಕ ಚಟುವಟಿಕೆ ಹಾಗೂ ಕೆಲಸ ಕಾರ್ಯ ದಲ್ಲಿ ಯಶಸ್ಸು ಕಾಣುತ್ತೀರಿ. ಸಂತಸದ ವಾತಾವರಣವನ್ನು ಇಂದು ಕಾಣಲಿದ್ದೀರಿ.
ಮಕರ ರಾಶಿ: ಈ ದಿನ ಮಕರ ರಾಶಿ ಅವರಿಗೆ ಇಂದು ಭಾಗ್ಯೋದಯ ವಾದ ದಿನವಾಗಿದೆ. ಮನಸ್ಸಿಗೆ ಬಹಳಷ್ಟು ನೆಮ್ಮದಿ ಇದ್ದು ಹಿಂದಿನ ದಿನಗಳಲ್ಲಿ ಇದ್ದ ನೋವು ಮಯ ವಾಗಲಿದೆ. ಅತೀ ಖುಷಿಯಿಂದ ನೀವು ದಿನವನ್ನು ಕಳೆಯಲಿದ್ದೀರಿ.
ಕುಂಭರಾಶಿ: ಕುಂಭ ರಾಶಿ ಅವರಿಗೆ ಸ್ವಲ್ಪ ಕ್ಲಿಷ್ಟಕರವಾದ ದಿನ ವಾಗಿದೆ. ನಿಮ್ಮ ಪ್ರೀತಿ ಪಾತ್ರರಿಂದ ಇಂದು ಸಹಕಾರ ಇಂದು ಸಿಗುವುದಿಲ್ಲ. ಆದ್ದರಿಂದ ಧ್ಯಾನಧಿಗಳನ್ನು ಮಾಡಿ ನೀವು ಸಮಯ ಕಳೆಯಬೇಕಾಗುತ್ತದೆ.
ಮೀನ ರಾಶಿ: ಮೀನ ರಾಶಿ ಅವರಿಗೂ ಉತ್ತಮವಾದ ದಿನ ವಾಗಿದೆ.ಮನಸ್ಸಿಗೆ ಅತೀ ಹೆಚ್ಚು ನೆಮ್ಮದಿ ಸಿಗಲಿದ್ದು ಎಲ್ಲ ಕೆಲಸ ಕಾರ್ಯದಲ್ಲೂ ಯಶಸ್ಸು ಸಿಗುತ್ತದೆ. ಪ್ರೀತಿ ಪಾತ್ರರಿಂದ ಉತ್ತಮ ಸಹಕಾರ ಕೂಡ ಸಿಗುತ್ತದೆ.