Vastu Tips: ಮನೆಯಲ್ಲಿ ಈ ಆನೆಯ ಪ್ರತಿಮೆಯನ್ನಿಟ್ಟರೆ ಸಂಪತ್ತು ಐಶ್ವರ್ಯ ವೃದ್ಧಿ ಗ್ಯಾರೆಂಟಿ..!
ಬೆಳ್ಳಿ ಆನೆಯನ್ನ ಮನೆ ಅಥವಾ ಕೆಲಸ ಮಾಡುವ ಸ್ಥಳದಲ್ಲಿ ಇಟ್ಟರೆ ವಾಸ್ತು ದೋಷಗಳು ನಿವಾರಣೆಗೊಳ್ಳುತ್ತವೆ ಹಾಗೂ ಅದೃಷ್ಟ ನಿಮ್ಮ ಮನೆಯ ಬಾಗಿಲನ್ನು ಹುಡುಕಿಕೊಂಡು ಬರುತ್ತದೆ. ಇದರೊಂದಿಗೆ ಪೌರಾಣಿಕ ನಂಬಿಕೆಗಳ ಪ್ರಕಾರ, ಆನೆಯ ಪ್ರತಿಮೆ ಗಣೇಶ ಮತ್ತು ಗೌತಮ ಬುದ್ಧನೊಂದಿಗೆ ನೇರ ಸಂಬಂಧ ಹೊಂದಿದ್ದು, ವಿಶೇಷವಾಗಿ, ಆನೆಯ ಪ್ರತಿಮೆ ಮನೆಯಲ್ಲಿನ ಕಷ್ಟಗಳು ಮತ್ತು ಅಡೆತಡೆಗಳನ್ನು ನಿವಾರಣೆ ಮಾಡುತ್ತದೆ ಎಂದು ನಂಬಲಾಗಿದೆ.
ಆನೆಯ ಪ್ರತಿಮೆ -
ಬೆಂಗಳೂರು: ಹಿಂದೂ ಧರ್ಮ (Hindu Religion) ಮತ್ತು ವಾಸ್ತು ಶಾಸ್ತ್ರದ(Vastu Shastra) ಪ್ರಕಾರ, ಮನೆಯಲ್ಲಿ ಬೆಳ್ಳಿ ಆನೆಯನ್ನು(Silver Elephant) ಇಟ್ಟು ಪೂಜಿಸುವುದು ಅತ್ಯಂತ ಶುಭ ಎಂದು ತಿಳಿಸಲಾಗಿದ್ದು, ಇದು ಆರ್ಥಿಕವಾಗಿ ಬೆಳೆಯಲು ನೆರವಾಗಲಿದೆ ಎಂದು ಹೇಳಲಾಗಿದೆ. ಅಲ್ಲದೇ ಅನೇಕ ಶತಮಾನಗಳಿಂದಲ್ಲೂ ಆನೆಯ ಪ್ರತಿಮೆಯನ್ನು ಪೂಜನೀಯ ಸ್ಥಾನದಲ್ಲಿಟ್ಟುಕೊಂಡು ಆರಾಧಿಸಿಕೊಂಡು ಬಂದಿದ್ದು, ಗಣೇಶನ ರುಂಡವನ್ನು ಹೊಂದಿರುವುದರಿಂದ ಇದು ದೈವ ಶಕ್ತಿಯ ಸಂಕೇತವಾಗಿದೆ ಎಂದು ನಂಬಲಾಗಿದೆ. ಅಲ್ಲದೇ ಆನೆಯ ಪ್ರತಿಮೆಯನ್ನ ಅದೃಷ್ಟ, ಸಮೃದ್ಧಿ ಮತ್ತು ಶಕ್ತಿಯ ಪ್ರಬಲ ಸಂಕೇತವೆಂದು ಪರಿಗಣಿಸಲಾಗಿದ್ದು, ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಿ, ಕುಟುಂಬದ ಸಂತೋಷ, ಆರೋಗ್ಯ ಮತ್ತು ಸಾಮರಸ್ಯ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ.
ವಿಶೇಷವಾಗಿ, ಬೆಳ್ಳಿ ಆನೆಯನ್ನ ಮನೆ ಅಥವಾ ಕೆಲಸ ಮಾಡುವ ಸ್ಥಳದಲ್ಲಿ ಇಟ್ಟರೆ ವಾಸ್ತು ದೋಷಗಳು ನಿವಾರಣೆಗೊಳ್ಳುತ್ತವೆ ಹಾಗೂ ಅದೃಷ್ಟ ನಿಮ್ಮ ಮನೆಯ ಬಾಗಿಲನ್ನು ಹುಡುಕಿಕೊಂಡು ಬರುತ್ತದೆ. ಇದರೊಂದಿಗೆ ಪೌರಾಣಿಕ ನಂಬಿಕೆಗಳ ಪ್ರಕಾರ, ಆನೆಯ ಪ್ರತಿಮೆ ಗಣೇಶ ಮತ್ತು ಗೌತಮ ಬುದ್ಧನೊಂದಿಗೆ ನೇರ ಸಂಬಂಧ ಹೊಂದಿದ್ದು, ವಿಶೇಷವಾಗಿ, ಆನೆಯ ಪ್ರತಿಮೆ ಮನೆಯಲ್ಲಿನ ಕಷ್ಟಗಳು ಮತ್ತು ಅಡೆತಡೆಗಳನ್ನು ನಿವಾರಣೆ ಮಾಡುತ್ತದೆ ಎಂದು ನಂಬಲಾಗಿದೆ. ಹಾಗಾಗಿ ಬೆಳ್ಳಿ ಆನೆಯ ಪ್ರತಿಮೆಯನ್ನು ಸರಿಯಾದ ಸ್ಥಳ ಮತ್ತು ದಿಕ್ಕಿನಲ್ಲಿ ಇಡುವುದು ಅತ್ಯಂತ ಮಹತ್ವ ಪಡೆದುಕೊಳ್ಳುತ್ತದೆ ಎಂದು
ವಾಸ್ತು ತಜ್ಞರು ಸಲಹೆ ನೀಡಲಿದ್ದು, ಈ ವಾಸ್ತು ನಿಯಮವನ್ನ ಪಾಲಿಸಿದರೆ, ಮನೆಯಲ್ಲಿನ ಧನಾತ್ಮಕ ಶಕ್ತಿ ಹೆಚ್ಚುತ್ತದೆ, ಕುಟುಂಬದಲ್ಲಿ ಸಂತೋಷ, ಒಗ್ಗಟ್ಟು ಮತ್ತು ಆರೋಗ್ಯದ ವಾತಾವರಣ ನಿರ್ಮಾಣವಾಗುತ್ತದೆ. ಹಾಗಾದ್ರೆ ಬನ್ನಿ ವಾಸ್ತು ಪ್ರಕಾರ ಮನೆಯ ಯಾವ ದಿಕ್ಕಿನಲ್ಲಿ ಆನೆಯ ಪ್ರತಿಮೆ ಇಟ್ಟರೆ ಒಳ್ಳೆಯದು...? ಈ ಬಗ್ಗೆ ವಾಸ್ತು ಶಾಸ್ತ್ರ ಏನೇಳುತ್ತದೆ..? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಕೆಂಪು ಬಣ್ಣದ ಆನೆ; ಖ್ಯಾತಿ ಮತ್ತು ಯಶಸ್ಸಿನ ಸಂಕೇತ
ವಾಸ್ತು ಶಾಸ್ತ್ರದ ಪ್ರಕಾರ, ಕೆಂಪು ಬಣ್ಣದ ಆನೆಯನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ಇಡುವುದು ಅತ್ಯಂತ ಶುಭವಾಗಿದ್ದು, ಇದು ಕೀರ್ತಿ, ಖ್ಯಾತಿ, ಸಮಾಜದಲ್ಲಿ ಘನತೆ-ಗೌರವ, ಹಾಗೂ ವೃತ್ತಿಜೀವನದಲ್ಲಿ ಯಶಸ್ಸು ತಂದುಕೊಡುತ್ತದೆ ಎಂದು ನಂಬಲಾಗಿದೆ.
Astro Tips: ಗುರುವಾರ ಈ ದೈವ ಸ್ವರೂಪಿ ಗಿಡವನ್ನು ಆರಾಧಿಸಿ; ಸಕಲ ಸಂಕಷ್ಟದಿಂದ ದೂರವಾಗಿ
ಹಿತ್ತಾಳೆ ಆನೆ – ಸಕಾರಾತ್ಮಕ ಶಕ್ತಿ ಮತ್ತು ಸಾಮರಸ್ಯ
ಹಿತ್ತಾಳೆಯಿಂದ ತಯಾರಿಸಿದ ಆನೆ ಭಾರತದಲ್ಲಿ ಬಹಳ ಜನಪ್ರಿಯ. ತಜ್ಞರ ಪ್ರಕಾರ, ಹಿತ್ತಾಳೆ ಆನೆಯನ್ನು ಎಲ್ಲೆಲ್ಲಿ ಇಟ್ಟರೂ ಆ ಸ್ಥಳದಲ್ಲಿ ಸಾಮರಸ್ಯ, ಸ್ಥಿರತೆ ಮತ್ತು ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಮನೆಯಲ್ಲಿ ಅಥವಾ ಕಚೇರಿಯಲ್ಲಿ ಸಕಾರಾತ್ಮಕ ಸ್ಪಂದನ ಬಯಸುವವರಿಗೆ ಇದು ಸೂಕ್ತ.
ಬೆಳ್ಳಿ ಆನೆಯ ಪ್ರತಿಮೆ – ಅದೃಷ್ಟ ಮತ್ತು ಸಮೃದ್ಧಿಯ ಸಂಕೇತ
ಹಿಂದೂ ಧರ್ಮದಲ್ಲಿ ಬೆಳ್ಳಿ ಆನೆ ಅದೃಷ್ಟ, ಆರ್ಥಿಕ ಪ್ರಗತಿ ಮತ್ತು ಶಕ್ತಿಯ ಸಂಕೇತವಾಗಿ ಪರಿಚಿತ. ವಾಸ್ತು ಪ್ರಕಾರ, ಇದನ್ನು ಮನೆಯ ಮಧ್ಯಭಾಗದಲ್ಲಿ ಉತ್ತರ ದಿಕ್ಕಿನತ್ತ ಮುಖಮಾಡಿ ಇಡುವುದು ಉತ್ತಮ. ಇದರ ಮೂಲಕ ಮನೆಗೆ ಯಶಸ್ಸು, ಸಮೃದ್ಧಿ ಹಾಗೂ ಉತ್ತಮ ಅವಕಾಶಗಳು ಬರಲು ಸಾಧ್ಯವೆಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.
ಸೊಂಡಿಲು ಮೇಲಿರುವ ಆನೆ – ಧನಾತ್ಮಕ ಶಕ್ತಿ ಪ್ರವೇಶ
ಆನೆಯ ಸೊಂಡಿಲು ಮೇಲಕ್ಕೆತ್ತಿರುವ ಪ್ರತಿಮೆ ಸುಖ–ಸಮೃದ್ಧಿಯ ಸಂಕೇತವಾಗಿದ್ದು, ಇದು ಸಂತೋಷ ಮತ್ತು ಸಕಾರಾತ್ಮಕ ಶಕ್ತಿಗಳ ಹೆಚ್ಚಿಸಲಿದೆ. ಈ ಪ್ರತಿಮೆಯನ್ನು ಮನೆಯಲ್ಲಿ ಪ್ರವೇಶದ್ವಾರದಲ್ಲಿ ಇಡುವುದು ಸೂಕ್ತವಾಗಿದ್ದು, ಮನೆಯಲ್ಲಿ ಸೊಂಡಿಲು ಮೇಲಿರುವ ಪ್ರತಿಮೆಗಳನ್ನು ಆಯ್ಕೆ ಮಾಡುವುದು ಶುಭಕರ ಎನ್ನಲಾಗುತ್ತದೆ.
ಜೋಡಿ ಆನೆ – ದಾಂಪತ್ಯ ಬಾಂಧವ್ಯಕ್ಕೆ ಬಲ ತುಂಬುತ್ತದೆ
ವಾಸ್ತು ತಜ್ಞರ ಸಲಹೆಯಂತೆ, ಜೋಡಿ ಆನೆಗಳನ್ನು ಮಲಗುವ ಕೋಣೆಯಲ್ಲಿ ಇಟ್ಟರೆ ಗಂಡ–ಹೆಂಡತಿಯ ನಡುವಿನ ಪ್ರೀತಿ, ಬಾಂಧವ್ಯ ಮತ್ತು ಸಂಬಂಧದ ಬಲ ಹೆಚ್ಚಾಗುತ್ತದೆ. ಕೌಟುಂಬಿಕ ಜೀವನದಲ್ಲಿ ಸಾಮರಸ್ಯ ಮತ್ತು ಶಾಂತಿ ನೆಲಸುತ್ತದೆ ಎಂಬ ನಂಬಿಕೆ ಇದೆ.
ಇದರೊಂದಿಗೆ ಹಿತ್ತಾಳೆಯಿಂದ ತಯಾರಿಸಿದ ಆನೆಯೂ ಬಹಳ ಜನಪ್ರಿಯ ಪಡೆದುಕೊಂಡಿದ್ದು, ತಜ್ಞರ ಪ್ರಕಾರ, ಹಿತ್ತಾಳೆ ಆನೆಯನ್ನು ಮನೆಯ ಯಾವ ಭಾಗದಲ್ಲಿಟ್ಟರೂ ಆ ಸ್ಥಳದಲ್ಲಿ ಸಾಮರಸ್ಯ, ಸ್ಥಿರತೆ ಮತ್ತು ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಮನೆಯಲ್ಲಿ ಅಥವಾ ಕಚೇರಿಯಲ್ಲಿ ಸಕಾರಾತ್ಮಕ ಶಕ್ತಿ ಬಯಸುವವರು ಇದು ಸೂಕ್ತ.