ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Horoscope Today December 17th: ಗುರುವಿನ‌ ಪ್ರಭಾವ: ಈ ರಾಶಿಯವರು ಇಂದು ಮುಟ್ಟಿದ್ದೆಲ್ಲ ಚಿನ್ನ

ನಿತ್ಯ ಭವಿಷ್ಯ ಡಿಸೆಂಬರ್ 17, 2025: ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು ಮಾರ್ಗಶಿರಾ ಮಾಸೆ, ಕೃಷ್ಣ ಪಕ್ಷದ, ತ್ರಯೋದಶಿ ತಿಥಿ, ವಿಶಾಖ ನಕ್ಷತ್ರದ ಡಿಸೆಂಬರ್ 17ನೇ ತಾರೀಖಿನ ಈ ದಿನ ರವಿ ಧನು ರಾಶಿಯನ್ನು ಪ್ರವೇಶ ಮಾಡ್ತಾ ಇದ್ದಾನೆ.‌ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಗುರುವಿನ ಪ್ರಭಾವದಿಂದ ತೆರೆಯಲಿದೆ ಅದೃಷ್ಟದ ಬಾಗಿಲು

ಸಾಂದರ್ಭಿಕ ಚಿತ್ರ -

Profile
Pushpa Kumari Dec 17, 2025 6:00 AM

ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು, ಮಾರ್ಗಶಿರ ಮಾಸೆ ಕೃಷ್ಣ ಪಕ್ಷದ, ತ್ರಯೋದಶಿ ತಿಥಿ, ವಿಶಾಖ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಮೇಷ ರಾಶಿ: ವಿಶಾಖ ನಕ್ಷತ್ರದ ಅಧಿಪತಿ ವಕ್ರಿ ಗುರು. ಹೀಗಾಗಿ ಹೆಚ್ಚಿನ ರಾಶಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.‌ ಮೇಷ ರಾಶಿಯವರಿಗೆ ಇಂದು ಅತ್ಯುತ್ತಮ ದಿನವಾಗಿದ್ದು ಮನಸ್ಸಿಗೆ ನೆಮ್ಮದಿ ಇರಲಿದೆ. ನಿಮಗೆ ಎಲ್ಲರಿಂದಲೂ ಸಂಪೂರ್ಣ ಸಹಕಾರ ಪ್ರಾಪ್ತಿಯಾಗುತ್ತದೆ.

ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಯಶಸ್ಸು ಕಂಡು ಬರುತ್ತದೆ.‌ ಮನಸ್ಸಿಗೆ ಬಹಳಷ್ಟು ‌ನೆಮ್ಮದಿ ಇದ್ದು ಜಯ ಕೂಡ ಪ್ರಾಪ್ತಿಯಾಗುತ್ತದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಸ್ವಲ್ಪ ಕಷ್ಟದ ದಿನವಾಗಿದೆ. ಪ್ರೀತಿ, ಪ್ರೇಮ, ದಾಂಪತ್ಯ ಹಾಗೂ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ.

ಹಣ ಬರುತ್ತಿಲ್ಲ, ಬಂದ ಹಣ ಉಳಿಯುತ್ತಿಲ್ಲವೆಂಬ ಚಿಂತೆಯೇ? ಈ ಸಿಂಪಲ್ ಪರಿಹಾರಗಳನ್ನು ಮಾಡಿ

ಕಟಕ ರಾಶಿ: ಕಟಕ ರಾಶಿಯವರು ತಾಯಿ ಮತ್ತು ಮನೆಯ ಬಗ್ಗೆ ಹೆಚ್ಚಿನ ಯೋಚನೆ ಮಾಡುತ್ತಾರೆ. ಕೋರ್ಟ್, ಕಚೇರಿ ವಿಚಾರದಲ್ಲಿ ಕೂಡ ಬಹಳಷ್ಟು ತೊಂದರೆ ಆಗಬಹುದು.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಉತ್ತಮ ದಿನವಾಗಿದ್ದು ಮನಸ್ಸಿಗೆ ನೆಮ್ಮದಿ ಇರುತ್ತದೆ. ಅದೇ ರೀತಿ ನಿಮಗೆ ಸಾಮಾಜಿಕ ಚಟುವಟಿಕೆಯಲ್ಲಿ ಕೂಡ ಯಶಸ್ಸು ಸಿಗುತ್ತದೆ. ಹಾಗೆಯೇ ಮೀಡಿಯಾ, ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ಯಶಸ್ಸು ಸಿಗುತ್ತದೆ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಮನೆಯ ವ್ಯವಹಾರಗಳು ಮುಖ್ಯವಾಗುತ್ತವೆ. ಹಾಗಾಗಿ ಸಂಸಾರದ ಸುಖ ನೆಮ್ಮದಿ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ.

ತುಲಾ ರಾಶಿ: ತುಲಾ ರಾಶಿಯವರಿಗೆ ಹಿಂದಿನ ಎರಡು ಮೂರು ದಿನಗಳಲ್ಲಿ ಇದ್ದ ಮನಸ್ಸಿನ ನೋವು ಎಲ್ಲವೂ ಬಗೆಹರಿಯಲಿದೆ. ಮುಂದಿನ ಕೆಲಸ ಕಾರ್ಯಗಳಿಗೆ ಉತ್ತಮ ಮಾರ್ಗದರ್ಶನ ಕೂಡ ನಿಮಗೆ ಸಿಗುತ್ತದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಸ್ವಲ್ಪ ಕಷ್ಟದ ದಿನವಾಗಲಿದೆ. ಮುಖ್ಯವಾದ ವಿಚಾರದಲ್ಲಿ ಯಾವುದೇ ನಿರ್ಧಾರ ಮಾಡಲು ಇಂದು ಹೋಗಬೇಡಿ. ಮೀಟಿಂಗ್ ಮುಂದಕ್ಕೆ ಹಾಕಿದರೆ ಒಳಿತು.

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಅತೀ ಉತ್ತಮ ದಿನ. ಇಷ್ಟಾರ್ಥ ಸಿದ್ದಿಯಾಗಲಿದ್ದು ಮನಸ್ಸಿಗೆ ನೆಮ್ಮದಿ ಇರುತ್ತದೆ. ಮನಸ್ಸಿಗೆ ಅತೀ ಹೆಚ್ಚು ಸಂತೋಷ ಸಿಗಲಿದೆ.

ಮಕರ ರಾಶಿ: ಈ ದಿನ ಮಕರ ರಾಶಿಯವರಿಗೆ ಕೆಲಸ ಕಾರ್ಯದಲ್ಲಿ ಯಶಸ್ಸು ಹಾಗೂ ಮನೆಯ ವಿಚಾರದಲ್ಲೂ ಸಮಾಧಾನ ಸಿಗುತ್ತದೆ.

ಕುಂಭರಾಶಿ: ಕುಂಭ ರಾಶಿಯವರಿಗೆ ಅದೃಷ್ಟ ದಿನವಾಗಿದ್ದು ಹಿಂದಿನ ಎರಡು ಮೂರು ದಿನಗಳಲ್ಲಿ ಇದ್ದ ನೋವೆಲ್ಲ ಮಾಯವಾಗುತ್ತದೆ.

ಮೀನ ರಾಶಿ: ಮೀನ ರಾಶಿಯವರಿಗೆ ಸ್ವಲ್ಪ ಕಷ್ಟದ ದಿನವಾಗಲಿದೆ. ಯಾವುದೇ ಮುಖ್ಯ ನಿರ್ಧಾರಗಳನ್ನು ಇಂದು ಕೈಗೊಳ್ಳಬೇಡಿ. ಹಾಗಾಗಿ ಸ್ವಲ್ಪ ದಿನ ಕಾದರೆ ಉತ್ತಮ.