ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Horoscope Today December 3rd: ಇಂದು ಶುಕ್ರ ಮತ್ತು ಕುಜನ ಸಂಗಮ: ಈ ರಾಶಿಗೆ ಕಾದಿದೆ ಭಾರಿ ಅದೃಷ್ಟ

ನಿತ್ಯ ಭವಿಷ್ಯ ಡಿಸೆಂಬರ್ 3, 2025: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಶರದೃತು, ಮಾರ್ಗಶಿರ ಮಾಸೆ, ಶುಕ್ಷ ಪಕ್ಷ, ತ್ರಯೋದಶಿ ತಿಥಿ, ಭರಣಿ ನಕ್ಷತ್ರದ ಡಿಸೆಂಬರ್ 3ನೇ ತಾರೀಖಿನ ಭವಿಷ್ಯ ಹೇಗಿದೆ ಎನ್ನುವುದರ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಸಂಗ್ರಹ ಚಿತ್ರ

ಬೆಂಗಳೂರು, ಡಿ. 3: ವಿಶ್ವವಸುನಾಮ ಸಂವತ್ಸರದ ದಕ್ಷಿಣಾಯನ ಶರದೃತು, ಮಾರ್ಗಶಿರ ಮಾಸೆ, ಶುಕ್ಷ ಪಕ್ಷದ ತ್ರಯೋದಶಿ ತಿಥಿ, ಭರಣಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

ಮೇಷ ರಾಶಿ: ಭರಣಿ ನಕ್ಷತ್ರದ ಅಧಿಪತಿ ಶುಕ್ರ. ಆದ್ದರಿಂದ ಇದರ ಪರಿಣಾಮ ಎಲ್ಲ ರಾಶಿಯ ಮೇಲೂ ಆಗಲಿದೆ. ಇಂದು ಶುಕ್ರ ಮತ್ತು ಕುಜ ಒಟ್ಟಿಗೆ ಸೇರಿದ ಪರಿಣಾಮ ಲಂಪಾಟ ಯೋಗ ಬರಲಿದೆ. ಇಂದು ಮೇಷ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಮುಖ್ಯವಾದ ವಿಚಾರದಲ್ಲಿ ಮುಂದೇನು ಮಾಡಬೇಕು ಎನ್ನುವ ಮಾರ್ಗದರ್ಶನ ನಿಮಗೆ ಪ್ರಾಪ್ತಿ ಯಾಗುತ್ತದೆ.

ವೃಷಭ ರಾಶಿ: ವೃಷಭ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಆದರೂ ಮನಸ್ಸಿಗೆ ಸ್ವಲ್ಪ ಕ್ಷೇಷ ಉಂಟಾಗುತ್ತದೆ‌. ಮಧ್ಯಾಹ್ನ ಬಳಿಕ ನಿಮ್ಮ ಮಿತೃತ್ವದಲ್ಲಿ ಒಡಕು ಉಂಟಾಗುವ ಸಾಧ್ಯತೆ ಇದೆ. ಇಂದು ಯಾವುದೇ ಮುಖ್ಯ ನಿರ್ಧಾರವನ್ನು ತೆಗೆದುಕೊಳ್ಳಲು ಹೋಗಬೇಡಿ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಉತ್ತಮ ದಿನ. ಸಾಮಾಜಿಕವಾಗಿ ನೆಮ್ಮದಿ, ಗುಂಪು ಚಟುವಟಿಕೆಯಿಂದ ಮತ್ತು ಮಿತ್ರರಿಂದ ನೆಮ್ಮದಿ ಕಾಣುತ್ತೀರಿ.

ಕಟಕ ರಾಶಿ: ಕಟಕ ರಾಶಿಗೆ ಉತ್ತಮ ದಿನವಾಗಿದ್ದು ಮನಸ್ಸಿಗೆ ನೆಮ್ಮದಿ ಸಿಗುವ ದಿನವಾಗಿದೆ.‌ ಕಾರ್ಯಕ್ಷೇತ್ರದಲ್ಲಿ ಯಶಸ್ಸು ನೀವು ಕಾಣಲಿದ್ದೀರಿ‌. ಅದೇ ರೀತಿ ನಿಮ್ಮ ಕೆಲಸದ ಬಗ್ಗೆ ಪ್ರಶಂಸೆಯನ್ನು ನೀವು ಪಡೆದುಕೊಳ್ಳುತ್ತೀರಿ‌.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಕಾರ್ಯಕ್ಷೇತ್ರದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಇಂದು ಅದೃಷ್ಟದ ದಿನವಾಗಿದ್ದು ಭಗವಂತನ ಹಾಗೂ ಹಿರಿಯರ ಆಶೀರ್ವಾದ ಬಹಳಷ್ಟು ಮುಖ್ಯವಾಗುತ್ತದೆ. ಹಾಗಾಗಿ ಹಿರಿಯರ ಜತೆ ವಿನಯತೆಯಿಂದ ವರ್ತಿಸಿ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮುಖ್ಯವಾದ ಯಾವುದೇ ನಿರ್ಧಾರಗಳನ್ನು ಇಂದು ಮಾಡಲು ಹೋಗಬೇಡಿ‌. ಆತಂಕ, ನೋವು ಹೆಚ್ಚು ಉಂಟಾಗುವ ಸಾಧ್ಯತೆ ಇಂದು ಹೆಚ್ಚಾಗಿ ಇರುತ್ತದೆ.

Vastu Tips: ಮನೆಯಲ್ಲಿ ದೇವರ ಮೂರ್ತಿ ಹೇಗಿರಬೇಕು? ವಾಸ್ತು ಶಾಸ್ತ್ರ ಈ ಬಗ್ಗೆ ಏನು ಹೇಳುತ್ತದೆ?

ತುಲಾ ರಾಶಿ: ತುಲಾ ರಾಶಿಯವರಿಗೆ ಉತ್ತಮವಾದ ದಿನವಾಗಿದೆ.ಬೇರೆ ಯವರಿಂದ ನಿಮಗೆ ನೆಮ್ಮದಿ ಪ್ರಾಪ್ತಿ ಯಾಗುತ್ತದೆ.ಅದೇ ರೀತಿ ಪ್ರೀತಿ ಪಾತ್ರರಿಂದ ಸಂತೋಷ ಪ್ರಾಪ್ತಿ ಯಾಗುತ್ತದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೂ ಸಾಮಾಜಿಕವಾಗಿ ಅತೀ ಹೆಚ್ಚಿನ ನೆಮ್ಮದಿ ಕಾಣುವ ದಿನವಾಗುತ್ತದೆ.ಶತ್ರುಗಳು ನಿಮ್ಮನ್ನು ಹಿಮ್ಮೆಟ್ಟಲಿದ್ದು ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ.ಕ್ರೀಡೆ, ಫಿಸಿಕಲ್ ಆ್ಯಕ್ಟಿವಿಟೀಸ್ ನಲ್ಲಿ ಕೆಲಸ ಮಾಡೋರಿಗೆ ಉತ್ತಮವಾದ ದಿನವಾಗಿದೆ.

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಕ್ಷಿಷ್ಟಕರವಾದ ದಿನವಾಗಿದೆ. ಪ್ರೇಮ,ಪ್ರೀತಿ ದಾಂಪತ್ಯದಲ್ಲಿ ಇಂದು ಸ್ವಲ್ಪ ಕಷ್ಟ. ಮಕ್ಕಳ ವಿಚಾರದಲ್ಲೂ ಪೋಷಕರಿಗೆ ಹೆಚ್ಚಿನ ಜವಾಬ್ದಾರಿ ಇಂದು ಇರುತ್ತದೆ.

ಮಕರ ರಾಶಿ: ಮಕರ ರಾಶಿಯವರಿಗೆ ಮನೆ, ಆಸ್ತಿ ಪಾಸ್ತಿ ವಿಚಾರ ಬಗ್ಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಹಾಗಾಗಿ ಮನೆಯವರ ಒಳಿತಿನ ಬಗ್ಗೆಯೂ ನೀವೇ ಯೋಚನೆ ಮಾಡಬೇಕಾಗುತ್ತದೆ.

ಕುಂಭರಾಶಿ: ಕುಂಭರಾಶಿಯವರಿಗೂ ಉತ್ತಮ ದಿನವಾಗಲಿದೆ. ನಿಮ್ಮ ಆತ್ಮವಿಶ್ವಾಸ ಇಂದು ಚೆನ್ನಾಗಿ ಇರಲಿದ್ದು ಸಹೋದರ- ಸಹೋದರ ಸಹೋದರಿಯರು ಎಲ್ಲರೂ ಕೂಡ ನಿಮಗೆ ಸಹಕಾರ ನೀಡುತ್ತಾರೆ.

ಮೀನ ರಾಶಿ: ಮೀನ ರಾಶಿಯವರಿಗೆ ನಿಮ್ಮ ಸಂಸಾರದ ಜವಾಬ್ದಾರಿಗಳು ಇಂದು ಹೆಚ್ಚು ಆಗುತ್ತವೆ. ಮನೆಯವರ ಆರೋಗ್ಯ ಬಗ್ಗೆ ಹೆಚ್ಚಿನ ಗಮನ ನೀವು ವಹಿಸಬೇಕಾಗುತ್ತದೆ.