Vastu Tips: ಮನೆಯಲ್ಲಿ ದೇವರ ಮೂರ್ತಿ ಹೇಗಿರಬೇಕು? ವಾಸ್ತು ಶಾಸ್ತ್ರ ಈ ಬಗ್ಗೆ ಏನು ಹೇಳುತ್ತದೆ?
ಪೂಜಾ ಸ್ಥಳವನ್ನು ನಿರ್ಮಿಸುವಾಗ ದಿಕ್ಕಿನ ಆಯ್ಕೆ ವಿಶೇಷ ಮಹತ್ವ ಹೊಂದಿದೆ. ವಾಸ್ತು ಶಾಸ್ತ್ರ ತಜ್ಞರ ಪ್ರಕಾರ ದೇವರ ಕೋಣೆ ಯೋಗ್ಯ ದಿಕ್ಕಿನಲ್ಲಿ ಇರುವುದರಿಂದ ಮನೆಯಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ. ಜತೆಗೆ ಧನಾತ್ಮಕತೆ ಹೆಚ್ಚುತ್ತದೆ. ಹಾಗಾಗಿ ದೇವರ ಕೋಣೆಯಲ್ಲಿ ನಾವು ಯಾವೆಲ್ಲ ನಿಯಮಗಳನ್ನು ಪಾಲಿಸಬೇಕು? ದೇವರ ಕೋಣೆಯಲ್ಲಿ ದೇವರ ವಿಗ್ರಹಗಳನ್ನು ಹೇಗೆ ಮತ್ತು ಯಾವ ವಿಗ್ರಹಗಳನ್ನು ಇಡಬೇಕು? ಇಲ್ಲಿದೆ ಮಾಹಿತಿ.
ಪೂಜೆ ಕೋಣೆ -
ಬೆಂಗಳೂರು, ಡಿ. 2: ಮನೆಯಲ್ಲಿನ ದೇವರ ಕೋಣೆ ಸರಿಯಾಗಿಲ್ಲದಿದ್ದರೆ ಕುಟುಂಬ ಸದಸ್ಯರ ಜೀವನದ ಮೇಲೆ, ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಮತ್ತು ಮನೆಯ ಶಾಂತಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಾಸ್ತು ಶಾಸ್ತ್ರದಲ್ಲಿ (Vastu Shastra) ಉಲ್ಲೇಖಿಸಲಾಗಿದೆ. ಹೌದು ಮನೆ ಕಟ್ಟುವಾಗ ಹೆಚ್ಚಿನವರು ವಾಸ್ತು ಶಾಸ್ತ್ರದ ನಿಯಮಗಳನ್ನು ಪಾಲಿಸುತ್ತಿದ್ದು, ಮನೆಯ ವಿನ್ಯಾಸ, ಕೊಠಡಿಗಳ ವ್ಯವಸ್ಥೆ, ಕಿಟಕಿಗಳು, ಬಾಗಿಲುಗಳ ಸ್ಥಾನ — ಇವೆಲ್ಲವೂ ವಾಸ್ತು ಪ್ರಕಾರವೇ ಇರಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಆದರೆ ಬಹುತೇಕರು ಗಮನಿಸದೇ ಬಿಡುವ ಒಂದು ಮುಖ್ಯ ಅಂಶವೆಂದರೆ ಮನೆಯ ಪೂಜಾ ಕೋಣೆ.
ಮನೆಯಲ್ಲಿ ದೇವರ ಆರಾಧನೆಗೆ ಒಂದು ವಿಶೇಷ ಸ್ಥಾನವಿದೆ. ಕೆಲವರು ಪ್ರತ್ಯೇಕ ಪೂಜಾ ಕೋಣೆಯನ್ನೇ ನಿರ್ಮಿಸುತ್ತಾರೆ. ಮನೆ ಮಂದಿಯವರ ನಂಬಿಕೆ ಮತ್ತು ಇಷ್ಟ ದೈವದ ಆಸ್ಥೆ ಅನ್ವಯ, ವಿಧ ವಿಧ ಮೂರ್ತಿಗಳು ಮತ್ತು ಫೋಟೊಗಳನ್ನು ಪೂಜಾ ಜಾಗದಲ್ಲಿ ಇಡುವುದು ಸಾಮಾನ್ಯ. ಆದರೆ ವಾಸ್ತು ಪ್ರಕಾರ ದೇವರ ವಿಗ್ರಹಗಳನ್ನು ಮನೆಯಲ್ಲಿ ಇಡುವಾಗ ಕೆಲವು ಮುಖ್ಯ ನಿಯಮಗಳನ್ನು ಪಾಲಿಸಬೇಕು. ಇಲ್ಲವಾದರೆ ಅದು ನಕಾರಾತ್ಮಕತೆ ಮತ್ತು ಸಮಸ್ಯೆಗಳನ್ನು ತರಬಹುದು.
ದೇವರ ಆರಾಧನೆ, ದೈನಂದಿನ ಪೂಜೆ, ಶ್ರದ್ಧಾ–ಭಕ್ತಿಗಳಲ್ಲಿ ದೇವರ ಸಾನ್ನಿಧ್ಯ ಅತ್ಯಂತ ಮುಖ್ಯವಾದರೂ, ದೇವರನ್ನು ಎಲ್ಲಿ ಇಡಬೇಕು, ಯಾವ ದಿಕ್ಕಿನಲ್ಲಿ ಇರಬೇಕು, ಮೂರ್ತಿಯ ರೂಪ–ಭಂಗಿ ಹೇಗಿರಬೇಕು ಎಂಬುದನ್ನು ತಪ್ಪದೆ ಪಾಲಿಸಬೇಕು ಎಂದು ವಾಸ್ತು ತಜ್ಞರು ಸೂಚಿಸುತ್ತಾರೆ.
ದೇವರ ಕೋಣೆಯಲ್ಲಿ ವಿಗ್ರಹಗಳನ್ನು ಇಡುವಾಗ ಮಾಡಬಾರ ನಿಯಮಗಳು
ರೌದ್ರ ಅವತಾರದ ಹಾಗೂ ಹಿಂಸಾತ್ಮಕ ಭಂಗಿಯ ಮೂರ್ತಿಗಳನ್ನು ಇಡಬೇಡಿ: ಹಿಂಸಾತ್ಮಕ ಅಥವಾ ವಿಧ್ವಂಸಕ ಸ್ಥಿತಿಯಲ್ಲಿರುವ ದೇವರ ವಿಗ್ರಹಗಳು ಮನೆಯಲ್ಲಿ ನೆಗಟಿವಿಟಿ ಉಂಟು ಮಾಡುತ್ತವೆ. ಇಂತಹ ಮೂರ್ತಿಗಳು ಮನೆಯಲ್ಲಿನ ಶಾಂತಿಗೆ ಧಕ್ಕೆಯಾಗಿ ಜಗಳ-ತಕರಾರು ಹೆಚ್ಚಾಗುವ ಸಾಧ್ಯತೆ ಇದೆ.
ಒಡೆದ ಮೂರ್ತಿಗಳು ಮತ್ತು ಹಾಳಾದ ಫೋಟೋಗಳನ್ನು ದೂರವಿಡಿ: ಒಡೆದ ಅಥವಾ ಬಿರುಕು ಮೂಡಿದ ವಿಗ್ರಹಗಳನ್ನು ಮನೆಯಲ್ಲಿ ಇಡುವುದು ಅಶುಭ. ಇಂತಹ ವಿಗ್ರಹಗಳು ಇದ್ದರೆ ಅವುಗಳನ್ನು ಮನೆಯಿಂದ ತೆಗೆದು, ಮರದ ಕೆಳಗೆ ಇರಿಸುವುದು ಅಥವಾ ನದಿಗೆ ಸಮರ್ಪಿಸುವುದು ಉತ್ತಮ.
ಸೋಮವಾರ ಈ ಶಿವ ಮಂತ್ರ ಪಠಿಸಿದರೆ ನಿಮ್ಮ ಆಸೆಗಳೆಲ್ಲಈಡೇರುತ್ತೆ
ಕುಳಿತ ಭಂಗಿಯ ಮೂರ್ತಿಗಳು ಶ್ರೇಷ್ಠ: ವಾಸ್ತು ಪ್ರಕಾರ ನಿಂತಿರುವ ಮೂರ್ತಿಗಳಿಗಿಂತ ಕುಳಿತ ಸ್ಥಿತಿಯ ಮೂರ್ತಿಗಳು ಶುಭಕರ. ಮೂರ್ತಿಯ ಮುಖವು ಶಾಂತ ಮತ್ತು ನಗುತ್ತಿರುವಂತಿರಬೇಕು. ದೇವರ ಕೈ ಆಶೀರ್ವಾದ ಮುದ್ರೆಯಲ್ಲಿ ಯಲ್ಲಿದ್ದರೆ ಇನ್ನೂ ಉತ್ತಮ.
ಮೂರ್ತಿಗಳನ್ನು ಇಡುವ ದಿಕ್ಕು ಹೇಗಿರಬೇಕು?
ದೇವರ ಬೆನ್ನು ಕಾಣುವಂತೆ ಇರಿಸಬೇಡಿ: ಮೂರ್ತಿ ಹಿಂಭಾಗವು ಹೊರಗೆ ಕಾಣುವಂತಿದ್ದರೆ ದಾರಿದ್ರ್ಯ ಮತ್ತು ಅಡೆತಡೆಗಳು ಹೆಚ್ಚಾಗುತ್ತವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ವಿಶೇಷವಾಗಿ ಗಣೇಶನ ಮೂರ್ತಿಗೆ ಈ ನಿಯಮ ಅನಿವಾರ್ಯ.
ಒಂದೇ ದೇವರ ಅನೇಕ ಮೂರ್ತಿಗಳನ್ನು ಇಡಬೇಡಿ: ಪೂಜಾ ಕೋಣೆಯಲ್ಲಿ ಒಂದೇ ದೇವರ ಎರಡು ಅಥವಾ ಮೂರು ಮೂರ್ತಿಗಳು/ಫೋಟೊ ಇಡುವುದು ವಾಸ್ತು ಪ್ರಕಾರ ಗೊಂದಲ ಮತ್ತು ಕಷ್ಟವನ್ನು ಆಹ್ವಾನಿಸುತ್ತದೆ. ಒಂದೇ ರೂಪದ ದೇವರ ವಿಗ್ರಹ ಒಂದು ಸಾಕು.