ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Horoscope Today December 4th: ಇಂದು ರವಿಯ ಪ್ರವೇಶ: ಈ ರಾಶಿಯ ಜೀವನದಲ್ಲಿ ದೊಡ್ಡ ಏರುಪೇರು

ನಿತ್ಯ ಭವಿಷ್ಯ ಡಿಸೆಂಬರ್ 4, 2025: ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಶರದೃತು, ಮಾರ್ಗಶಿರ ಮಾಸೆ, ಶುಕ್ಷ ಪಕ್ಷ, ಪೌರ್ಣಮಿ ತಿಥಿ, ಕೃತಿಕಾ ನಕ್ಷತ್ರದ ಡಿಸೆಂಬರ್ 4ನೇ ತಾರೀಖಿನ ಈ ದಿನದ ಭವಿಷ್ಯದ ಹೇಗಿದ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಗುರುವಾರ ನಿಮ್ಮ ರಾಶಿ ಭವಿಷ್ಯ ಹೇಗಿದೆ?

ಸಂಗ್ರಹ ಚಿತ್ರ -

Profile
Pushpa Kumari Dec 4, 2025 6:00 AM

ಬೆಂಗಳೂರು: ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಶರದೃತು, ಮಾರ್ಗಶಿರ ಮಾಸೆ, ಶುಕ್ಷ ಪಕ್ಷದ ಪೌರ್ಣಮಿ ತಿಥಿ, ಕೃತಿಕಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯ ಹೇಗಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಮೇಷ ರಾಶಿ: ಕೃತಿಕಾ ನಕ್ಷತ್ರದ ಅಧಿಪತಿ ರವಿ. ಆದ್ದರಿಂದ ಇದು ಎಲ್ಲ ರಾಶಿಯ ಮೇಲೂ ಇಂದು ಪರಿಣಾಮ ಬೀರುವ ಸಾಧ್ಯತೆ ಇದೆ‌. ಇಂದು ಮೇಷ ರಾಶಿಯವರು ಮಧ್ಯಾಹ್ನವರೆಗೂ ನಿಮ್ಮ ಬಗ್ಗೆ ನೀವು ಯೋಚನೆ ಮಾಡುತ್ತೀರಿ‌‌. ಮಧ್ಯಾಹ್ನ ಬಳಿಕ ನಿಮ್ಮ ಕುಟುಂಬ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತೀರಿ. ಆದರೆ ಬಹಳ ವಿವೇಕವಾಗಿ ಎಲ್ಲರ ಜತೆ ನೀವು ವರ್ತಿಸಬೇಕಾಗುತ್ತದೆ.

ವೃಷಭ ರಾಶಿ: ವೃಷಭ ರಾಶಿಯವರಿಗೆ ಮಧ್ಯಾಹ್ನವರೆಗೂ ಮನಸ್ಸಿಗೆ ನಾನಾ ಕ್ಷೇಷ ಉಂಟಾಗುತ್ತದೆ. ಮಧ್ಯಾಹ್ನ ಬಳಿಕ ಮಾರ್ಗದರ್ಶನ ಪ್ರಾಪ್ತಿಯಾಗಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಮಧ್ಯಾಹ್ನವರೆಗೂ ನೀವು ಹೇಳಿದ್ದೆಲ್ಲ ನಡೆಯುತ್ತದೆ. ಮಧ್ಯಾಹ್ನ ಬಳಿಕ ಮಿತ್ರರಿಂದ ಮನಸ್ತಾಪ, ಮನಸ್ಸಿಗೆ ಬೇಸರ ಆಗಲಿದೆ. ಹಾಗಾಗಿ ಯಾವುದೇ ಮುಖ್ಯ ನಿರ್ಧಾರಗಳು ಇಂದು ಬೇಡ‌.

ಕಟಕ ರಾಶಿ: ಕಟಕ ರಾಶಿಗೆ ಮಧ್ಯಾಹ್ನವರೆಗೂ ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿಗಳು ಹೆಚ್ಚಾಗಿ ಇರುತ್ತದೆ. ಮಧ್ಯಾಹ್ನ ಬಳಿಕ‌ ಮನಸ್ಸಿಗೆ ನೆಮ್ಮದಿ ಸಿಗುವ ದಿನವಾಗಿದೆ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಮಧ್ಯಾಹ್ನವರೆಗೂ ಮನಸ್ಸಿಗೆ ಕ್ಷೇಷ ಇರುತ್ತದೆ. ಮಧ್ಯಾಹ್ನ ಬಳಿಕ ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿ ಗಳು ಹೆಚ್ಚು ಆಗುತ್ತವೆ. ಕೆಲಸ ಕಾರ್ಯದಲ್ಲಿ ಮುನ್ನಡೆಯನ್ನು ಕಾಣಲಿದ್ದೀರಿ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಮಧ್ಯಾಹ್ನವರೆಗೂ ಕೂಡ ಮನಸ್ಸಿಗೆ ನಾನಾ ರೀತಿಯ ಕ್ಷೇಷ ಇರುತ್ತದೆ.‌ ಮುಖ್ಯವಾದ ಯಾವುದೇ ನಿರ್ಧಾರಗಳನ್ನು ಇಂದು ಮಾಡಲು ಹೋಗಬೇಡಿ‌. ಮಧ್ಯಾಹ್ನ ನಂತರ ಅದೃಷ್ಟ ಪ್ರಾಪ್ತಿಯಾಗಲಿದ್ದು, ನೆಮ್ಮದಿ ಸಿಗಲಿದೆ.

ತುಲಾ ರಾಶಿ: ತುಲಾ ರಾಶಿಯವರಿಗೆ ಮಧ್ಯಾಹ್ನವರೆಗೂ ನೀವು ಅಂದುಕೊಂಡದ್ದೆಲ್ಲ ನಡೀತಾ ಇರುತ್ತದೆ. ಎಲ್ಲರ ಸಹಕಾರ ನಿಮಗೆ ಸಿಗುತ್ತದೆ. ಆದರೆ ಮಧ್ಯಾಹ್ನ ಬಳಿಕ ಯಾರು ಇಲ್ಲ ಎನ್ನುವ ಭಾವನೆ ಕಾಡಬಹುದು.

ಕಾರ್ಯಕ್ಷೇತ್ರದಲ್ಲಿ ಯಶಸ್ಸು ಬೇಕೇ? ಹಾಗಾದ್ರೆ ತಪ್ಪದೇ ಈ ವಾಸ್ತು ನಿಯಮ ಪಾಲಿಸಿ

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೂ ಮಧ್ಯಾಹ್ನವರೆಗೂ ಮನಸ್ಸಿಗೆ ನೆಮ್ಮದಿ ಕಾಣುವ ದಿನವಾಗುತ್ತದೆ. ಸಾಮಾಜಿಕ ಚಟುವಟಿಕೆ ಬಗ್ಗೆ ಹೆಚ್ಚಿನ ಗಮನ ನೀಡುತ್ತೀರಿ. ಮಧ್ಯಾಹ್ನ ಬಳಿಕ ನಿಮ್ಮ ಪ್ರೀತಿ ಪಾತ್ರರಿಂದ ಮನಸ್ಸಿಗೆ ಅತೀ ಹೆಚ್ಚಿನ ನೆಮ್ಮದಿ ಸಿಗುತ್ತದೆ.

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಮಧ್ಯಾಹ್ನವರೆಗೂ ಕಷ್ಟದ ದಿನವಾಗಲಿದೆ. ಹಣಕಾಸು ವಿಚಾರವಾಗಿ ದಾಂಪತ್ಯದಲ್ಲಿ ತಲೆ ಕೆಡಿಸಿಕೊಳ್ಳುತ್ತೀರಿ‌‌. ಮಧ್ಯಾಹ್ನ ಬಳಿಕ ಜಯ ಪ್ರಾಪ್ತಿಯಾಗಲಿದ್ದು, ಶತ್ರುಗಳನ್ನು ನೀವು ಹಿಮ್ಮೆಟ್ಟಿಸುತ್ತೀರಿ.

ಮಕರ ರಾಶಿ: ಮಕರ ರಾಶಿಯವರಿಗೆ ಮಧ್ಯಾಹ್ನವರೆಗೂ ಮನಸ್ಸಿಗೆ ನಾನಾ ರೀತಿಯ ಕ್ಷೇಷಗಳು ಉಂಟಾಗುತ್ತದೆ. ಮಧ್ಯಾಹ್ನ ಬಳಿಕ ನಿಮ್ಮ ಬುದ್ದಿ ಶಕ್ತಿ ಬಹಳ ಚುರುಕಾಗಿ ಯಶಸ್ಸು ಪಡೆಯಬಹುದು.

ಕುಂಭರಾಶಿ: ಕುಂಭರಾಶಿಯವರಿಗೆ ಮಧ್ಯಾಹ್ನವರೆಗೂ ಸಹೋದರ-ಸಹೋದರಿಯರು ಬಹಳ ಚೆನ್ನಾಗಿ ವರ್ತಿಸುತ್ತಾರೆ. ಮಧ್ಯಾಹ್ನ ಬಳಿಕ ಕೌಟುಂಬಿಕ ಯೋಚನೆಯೊಂದು ನಿಮಗೆ ಕಾಡಬಹುದು.

ಮೀನ ರಾಶಿ: ಮೀನ ರಾಶಿಯವರಿಗೆ ಮಧ್ಯಾಹ್ನವರೆಗೂ ಮನೆ ಸಂಸಾರ ವಿಚಾರದಲ್ಲಿ ಯೋಚನೆ ಕಾಡಬಹುದು.‌ ಮಧ್ಯಾಹ್ನ ಬಳಿಕ ನಿಮ್ಮ ಸಹೋದರ-ಸಹೋದರಿ ಜತೆ ಉತ್ತಮ ದಿನ ಕಳೆಯುತ್ತೀರಿ.