ದಿನ ಭವಿಷ್ಯ, ಮಾರ್ಚ್ 13, 2026: ಇಂದು ಈ ರಾಶಿಗೆ ಹಣಕಾಸಿನ ವಿಚಾರದಲ್ಲಿ ನಷ್ಟ ಸಾಧ್ಯತೆ
Horoscope Today March 13: ಇಂದು ವಿಶ್ವಾವಸು ನಾಮ ಸಂವತ್ಸರದ, ಉತ್ತರಾಯಣ, ಶರದೃತು ಫಾಲ್ಗುಣ ಮಾಸೆ, ಕೃಷ್ಣೆ ಪಕ್ಷದ, ದಶಮಿ ತಿಥಿ, ಪೂರ್ವಾಷಡ ನಕ್ಷತ್ರದ ಮಾರ್ಚ್ 13ನೇ ತಾರೀಖಿನ ಶುಕ್ರವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..
ಇಂಟರ್ ನೆಟ್ ಚಿತ್ರ -
ಬೆಂಗಳೂರು: ಇಂದು ವಿಶ್ವಾವಸು ನಾಮ ಸಂವತ್ಸರದ ಉತ್ತರಾಯಣ ಶರದೃತು, ಫಾಲ್ಗುಣ ಮಾಸೆ, ಪೂರ್ವಾಷಡ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಇಂದು ಪೂರ್ವಾಷಡ ನಕ್ಷತ್ರ ಇದ್ದು ಶನಿ ಅಸ್ತ ನಾಗಿರುತ್ತಾನೆ. ಹಾಗಾಗಿ ಹೆಚ್ಚಿನವರಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.
ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಜಾಗೃತಿ ಮಾಡಬೇಕಾಗುತ್ತದೆ. ಆದರೆ ಮನಸ್ಸಿಗೆ ನೆಮ್ಮದಿ ಇದ್ದು ಇಷ್ಟಾರ್ಥ ಸಿದ್ದಿಯಾಗುತ್ತದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಕಾಣಲು ಸರಿಯಾದ ಸಮಯ ತೆಗೆದುಕೊಳ್ಳಬಹುದು. ಅದೇ ರೀತಿ ಆರೋಗ್ಯದಲ್ಲೂ ನೀವು ಜಾಗೃತಿ ವಹಿಸಬೇಕಾಗುತ್ತದೆ
ಕಟಕ ರಾಶಿ: ಕಟಕ ರಾಶಿ ಅವರಿಗೆ ಹಿಂದಿನ ದಿನದಲ್ಲಿ ಇದ್ದ ತೊಂದರೆಗಳಿಗೆ ಮುಕ್ತಿ ಸಿಗುತ್ತದೆ. ಮುಂದೇ ಏನು ಮಾಡಬೇಕು ಎನ್ನುವ ಮಾರ್ಗದರ್ಶನ ನಿಮಗೆ ಸಿಗುತ್ತದೆ.
Vastu Tips: ವಾಸ್ತು ಶಾಸ್ತ್ರದ ಪ್ರಕಾರ ಈ ಉಡುಗೊರೆಗಳನ್ನ ನೀಡಿದರೆ ಬರಲಿದೆ ಸಂಪತ್ತು ಮತ್ತು ಸಮೃದ್ಧಿ
ಸಿಂಹ ರಾಶಿ: ಸಿಂಹ ರಾಶಿಗೆ ಇಂದು ಉತ್ತಮ ಗೋಚರ ಇರುತ್ತದೆ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ. ಆದರೆ ಮಾತಿನ ಮೇಲೆ ನಿಗಾ ವಹಿಸಿದರೆ ಒಳಿತು
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಸಪ್ತಮ ಶನಿಯ ಭಾದೆ ನಿವಾರಿಸಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಈ ಗೋಚರದಿಂದ ಎಲ್ಲ ಕೆಲಸ ಕಾರ್ಯದಲ್ಲಿ ನಿಮಗೆ ಲಾಭ ತರಲಿದೆ.
ತುಲಾ ರಾಶಿ: ತುಲಾ ರಾಶಿಯವರಿಗೆ ಶತ್ರುಗಳ ಭಾದೆ ಕಾಡಬಹುದು. ಕಾರ್ಯಕ್ಷೇತ್ರದಲ್ಲಿ ನೀವು ಜಾಗೃತಿರಾಗಿ ಕೆಲಸ ಮಾಡಬೇಕು. ಆದರೆ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಅತೀ ಉತ್ತಮವಾದ ದಿನವಾಗಿದೆ. ನಿಮ್ಮ ಕ್ರಿಯಾತ್ಮಕ ಕೆಲಸ ಕಾರ್ಯದಿಂದ ನೀವು ಯಶಸ್ಸು ಕಾಣುತ್ತೀರಿ.ಆದರೆ ಹಣಕಾಸಿನ ಬಗ್ಗೆ ಜಾಗೃತಿ ವಹಿಸಬೇಕಾಗುತ್ತದೆ.
ಧನಸ್ಸು ರಾಶಿ: ಧನಸ್ಸು ರಾಶಿಗೆ ಮನಸ್ಸಿಗೆ ನೆಮ್ಮದಿ ಇರಲಿದೆ. ಮನೆಯಲ್ಲಿ ಉಂಟಾದ ತೊಂದರೆಗಳಿಗೆ ಇಂದು ಪರಿಹಾರ ಸಿಗುತ್ತದೆ.
ಮಕರ ರಾಶಿ: ಮಕರ ರಾಶಿಯವರಿಗೆ ಸ್ವಲ್ಪ ಕಷ್ಟಕರವಾದ ದಿನವಾಗಿದೆ. ಕೆಲಸ ಕಾರ್ಯದಲ್ಲಿ ತಡೆ ಉಂಟಾಗುವ ಸಾಧ್ಯತೆ ಇರುತ್ತದೆ. ಒಂದು ತಿಂಗಳ ಬಳಿಕ ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗಬಹುದು.
ಕುಂಭರಾಶಿ: ಈ ರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ತೊಂದರೆ ಉಂಟಾಗಬಹುದು. ಕೆಲವೊಂದು ನಿರ್ಧಾರದಲ್ಲಿ ಅಡೆ ತಡೆ ಎದುರಾಗಬಹುದು. ಆದರೆ ಮನೆಯಲ್ಲಿ ನೆಮ್ಮದಿ ಇರಬಹುದು.
ಮೀನ ರಾಶಿ: ಮೀನ ರಾಶಿಗೆ ಉತ್ತಮ ದಿನವಾಗಿದೆ.ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗಲಿದ್ದು ಯಾರ ಭಾದೆಯೂ ನಿಮಗೆ ಕಾಡುವುದಿಲ್ಲ.