ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Horoscope Today December 6th: ಬುಧ ವೃಶ್ಚಿಕ ರಾಶಿಗೆ ಪ್ರವೇಶ: ಈ ರಾಶಿಗೆ ಇಂದು ಶುಭದಾಯಕ ಫಲ

ನಿತ್ಯ ಭವಿಷ್ಯ ಡಿಸೆಂಬರ್ 6,2025: ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು ಮಾರ್ಗಶಿರಾ ಮಾಸೆ ಕೃಷ್ಣ ಪಕ್ಷದ ದ್ವೀತಿಯ ತಿಥಿ, ಮೃಗಶಿರಾ ನಕ್ಷತ್ರದ ಡಿಸೆಂಬರ್ 6ನೇ ತಾರೀಖಿನ ಶನಿವಾರದ ಈ ದಿನ ವೃಶ್ಚಿಕ ರಾಶಿಯನ್ನು ಬುಧ ಪ್ರವೇಶ ಮಾಡಲಿದ್ದಾನೆ.‌ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ದಿನ ಭವಿಷ್ಯ- ಇಂದು ಬುಧನ ಪ್ರವೇಶದಿಂದ ನಿಮ್ಮ ರಾಶಿ ಭವಿಷ್ಯ ಹೇಗಿದೆ?

ಸಂಗ್ರಹ ಚಿತ್ರ -

Profile
Pushpa Kumari Dec 6, 2025 8:52 AM

ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು ಮಾರ್ಗಶಿರಾ ಮಾಸೆ ಕೃಷ್ಣ ಪಕ್ಷದ ದ್ವೀತಿಯ ತಿಥಿ, ಮೃಗಶಿರಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಬುಧ ವೃಶ್ಚಿಕ ರಾಶಿಗೆ ಪ್ರವೇಶ ಮಾಡುವುದರಿಂದ ಮೇಷ ಅವರಿಗೆ ಮನಸ್ಸಿಗೆ ನೆಮ್ಮದಿ ಪ್ರಾಪ್ತಿ ಯಾಗುತ್ತದೆ. ಹಿಂದಿನ ಕೆಲವು ದಿನಗಳಲ್ಲಿ ಇದ್ದ ಮನಸ್ಸಿನ ಕ್ಷೇಷ ಎಲ್ಲವೂ ಮಯ ವಾಗುತ್ತದೆ. ಕೆಲವೊಂದಿಷ್ಟು ಬದಲಾವಣೆಗಳನ್ನು ನೀವು ನೋಡ‌ ಲಿದ್ದು ಮಿತೃತ್ವದಲ್ಲಿ ಖುಷಿ ಸಿಗಲಿದೆ. ಹಾಗೆಯೇ ದಾಂಪತ್ಯದಲ್ಲಿ ಕೂಡ ನೆಮ್ಮದಿ ಸಿಗುತ್ತದೆ..ಇಂದಿನಿಂದ 20ದಿನಗಳ ವರೆಗೆ ಈ ಶುಭದಾಯಕ ಫಲ ನಿಮಗೆ ಸಿಗಲಿದೆ.

ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಇಂದು ಮುಖ್ಯ ವಾದ ವಿಚಾರದಲ್ಲಿ ಒಡಕು ಉಂಟಾಗುವ ಸಾಧ್ಯತೆ ಇರುತ್ತದೆ. ನಿಮ್ಮ ಪ್ರೀತಿ ಪಾತ್ರರೊಡನೆ ಕೂಡ ಇಂದು ಜಗಳ ಉಂಟಾ ಗುತ್ತದೆ‌. ಇದಕ್ಕಾಗಿ ನಿಮ್ಮ ಮಾತಿನಲ್ಲಿ ನಿಗಾ ಇರಿಸಿಕೊಂಡರೆ ಬಹಳಷ್ಟು ಒಳಿತು

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಈ ದಿನ ಅನುಕೂಲಕರ ಗೋಚರ ಇರಲಿದೆ. ಸಾಮಾಜಿಕ ಚಟುವಟಿಕೆ ಯಲ್ಲಿ ಜಯ ಪ್ರಾಪ್ತಿಯಾಗುತ್ತದೆ. ಶತ್ರುಗಳನ್ನು ಹಿಮ್ಮೆಟ್ಟಲಿದ್ದು ಆರೋಗ್ಯದಲ್ಲಿ ಸುಧಾರಣೆಯನ್ನು ನೀವು ಕಾಣುತ್ತೀರಿ. ಆದರೆ ಮಾತಿನಲ್ಲಿ ಬಹಳಷ್ಟು ನಿಗಾವನ್ನು ವಹಿಸಬೇಕಾಗುತ್ತದೆ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಈ ಗೋಚರ ಅಷ್ಟು ಅನುಕೂಲಕರ ವಾಗಿಲ್ಲ.‌.ಮುಖ್ಯವಾದ ವಿಚಾರದಲ್ಲಿ ಹಾಗೂ ದಾಂಪತ್ಯ ವಿಚಾರದಲ್ಲಿ ಒಡಕು ಉಂಟಾಗುವ ಸಾಧ್ಯತೆ ಇರುತ್ತದೆ.‌ ಎಲ್ಲ ಕೆಲಸ ಕಾರ್ಯದಲ್ಲಿ ಸೋಲು ಉಂಟಾಗಬಹುದು.‌ ಹಾಗೆಯೇ ನಿಮ್ಮ ಮಾತಿನಿಂದಲೇ ಮಿತೃತ್ವ ವನ್ನು ಕಳೆದು ಕೊಳ್ಳಬಹುದು. ಹಣವನ್ನು ಕೂಡ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಈ ಗೋಚರ ಅನುಕೂಲವಾಗಿದೆ. ಮನೆಯಲ್ಲಿ ನೆಮ್ಮದಿ ಹಾಗೂ ಆಸ್ತಿ ಪಾಸ್ತಿ ವಿಚಾರವಾಗಿ ಯಶಸ್ಸು ಕಾಣಬಹುದು.‌ ಕೋರ್ಟ್ ,ಕಛೇರಿ ವ್ಯವಹಾರದಲ್ಲಿ ಕೂಡ ನೆಮ್ಮದಿ ಸಿಗುತ್ತದೆ. ‌

Vastu Tips: ತಪ್ಪಿಯೂ ಇಂತಹ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಕಾಡಲಿದೆ ದಾರಿದ್ರ್ಯ

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಈ ಗೋಚರ ಅಷ್ಟೊಂದು ಅನುಕೂಲವಾಗಿಲ್ಲ.‌ ನಿಮ್ಮ ಸಹೋದರ,‌ ಸಹೋದರಿ ಯಿಂದ ,ಬಂಧು ಬಾಂಧವರಿಂದ ಕ್ಷೇಷ ವನ್ನು ಎದುರಿಸ ಬೇಕಾಗುತ್ತದೆ. ಹಾಗಾಗಿ ಬಹಳಷ್ಟು ಎಚ್ಚರಿಕೆಯಿಂದ ನೀವು ಕೆಲಸ ಕಾರ್ಯವನ್ನು ಮಾಡಬೇಕಾಗುತ್ತದೆ.

ತುಲಾ ರಾಶಿ: ತುಲಾ ರಾಶಿ ಅವರಿಗೆ ಈ ಗೋಚರ ಅನೂಕಲಕರ ವಾಗಿದೆ. ಮುಂದಿನ 25 ದಿನಗಳ ವರೆಗೆ ಧನಾತ್ಮಕ ಫಲಿತಾಂಶ ಸಿಗಲಿದೆ.ಅದೇ ರೀತಿ ನಿಮ್ಮ ಕುಟುಂಬದಲ್ಲಿ ಕೂಡ ನೆಮ್ಮದಿ ಯನ್ನು ನೀವು ಕಾಣುತ್ತೀರಿ. ಉತ್ತಮವಾದ ದಿನ ನಿಮ್ಮದು ಆಗುತ್ತದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ನಿಮ್ಮ ರಾಶಿಯಲ್ಲೇ ಬುಧ ಪ್ರವೇಶ ಮಾಡುವುದರಿಂದ ನಿಮ್ಮ ಮಾತುಗಳು ಇತರರಿಗೆ ಕಠೋರವಾಗಿ ಕೇಳಬಹುದು‌‌‌. ಬೇರೆಯವರು ಏನೇ ಹೇಳಿದರೂ ನೀವು ಒಪ್ಪಿಕೊಳ್ಳದಂತಹ ಸಂದರ್ಭ ಬರಬಹುದು.‌ ಆದ್ದರಿಂದ ಮಾತಿನಲ್ಲಿ ನಿಗಾ ವಹಿಸಿದರೆ ಒಳಿತು.

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಈ ದಿನ ಕಷ್ಟಕರವಾದ ದಿನ ಆಗಿದೆ. ನೀವು ಆಡುವ ಮಾತುಗಳು ಬೇರೆಯವರಿಗೆ ಕೆಟ್ಟದೇ ಕಾಣಬಹುದು. ಹಾಗಾಗಿ ನಿಮ್ಮ ಮಾತುಗಳನ್ನು ಇತರರು ತಪ್ಪಾಗಿ ಅರ್ಥೈಸಿಕೊಳ್ಳಬಹುದು‌. ಇದರಿಂದ ಜಾಗೃತರಾಗಿ ಇರಬೇಕಾಗುತ್ತದೆ.

ಮಕರ ರಾಶಿ: ಈ ದಿನ ಮಕರ ರಾಶಿ ಅವರಿಗೆ ಉತ್ತಮವಾದ ಗೋಚರ ಇರಲಿದ್ದು ಮನಸ್ಸಿಗೆ ನೆಮ್ಮದಿ ಹಾಗೂ ಇಷ್ಟಾರ್ಥ ಸಿದ್ದಿಯಾಗುವ ದಿನವಾಗಿದೆ. ಸ್ನೇಹಿತರ ಜೊತೆಗೂ ಉತ್ತಮ ಬಾಂಧವ್ಯ ವನ್ನು ನೀವು ಇಂದು ಹೊಂದುತ್ತೀರಿ. ಗುಂಪು ಕೆಲಸದಿಂದ ಮನಸ್ಸಿಗೆ ನೀವು ನೆಮ್ಮದಿಯನ್ನು ಕಾಣುತ್ತೀರಿ.

ಕುಂಭರಾಶಿ: ಕುಂಭ ರಾಶಿ ಅವರಿಗೆ ಒಳ್ಳೆಯ ಗೋಚರ ಆಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಅದೇ ರೀತಿ ಈ ದಿನ ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿಯ ದಿನವಾಗಿದೆ. ಮಾತಿ ನಿಂದ ಜಯವನ್ನು ಕಾಣಲಿದ್ದು ಧನ ಆಗಮನ ಕೂಡ ಆಗುತ್ತದೆ.

ಮೀನ ರಾಶಿ: ಮೀನ ರಾಶಿ ಅವರಿಗೆ ಈ ದಿನ ಕ್ಲಿಷ್ಟಕರವಾದ ದಿನವಾಗಿದೆ. ನೀವು ಆಡುವ ಮಾತಿ ನಿಂದ ಬೇರೆಯವರಿಗೆ ಬೇಸರ ಉಂಟು ಮಾಡಬಹುದು. ಅದೇ ರೀತಿ ಬೇರೆಯವರು ನಿಮ್ಮನ್ನು ಟೀಕೆ ಮಾಡಬಹುದು‌. ಆದರೆ ರವಿಯ ಗೋಚರ ಉತ್ತಮ ಇರುವುದರಿಂದ ಯಾವುದೇ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು.