ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Horoscope Today December 8th: ಗುರುವಿನಿಂದ ಈ ರಾಶಿಗೆ ಇಂದು ರಾಜಯೋಗ!

ನಿತ್ಯ ಭವಿಷ್ಯ ಡಿಸೆಂಬರ್ 8, 2025: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು ಮಾರ್ಗಶಿರಾ ಮಾಸೆ, ಕೃಷ್ಣ ಪಕ್ಷದ ,ಚತುರ್ಥಿ ತಿಥಿ, ಪುನರ್ವಸು ನಕ್ಷತ್ರದ ಡಿಸೆಂಬರ್ 8ನೇ ತಾರೀಖಿನ ಸೋಮವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿ ಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..

ದಿನ ಭವಿಷ್ಯ- ಗುರುವಿನಿಂದ ಈ ರಾಶಿಗೆ ಇಂದು ಹೆಜ್ಜೆ ಇಟ್ಟಲ್ಲೆಲ್ಲಾ ಯಶಸ್ಸು!

(ಸಂಗ್ರಹ ಚಿತ್ರ) -

Profile
Pushpa Kumari Dec 8, 2025 6:00 AM

ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು ಮಾರ್ಗಶಿರಾ ಮಾಸೆ ಕೃಷ್ಣ (Horoscope Today December 8th) ಪಕ್ಷದ, ಚತುರ್ಥಿ ತಿಥಿ, ಪುನರ್ವಸು ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಪುನರ್ವಸು ನಕ್ಷತ್ರದ ಅಧಿಪತಿ ಗುರು ಆಗಿದ್ದಾನೆ. ಹಾಗಾಗಿ ಹೆಚ್ಚಿನ ರಾಶಿಗೆ ಒಳಿತು ಆಗುವ ಸಾಧ್ಯತೆ ಇದೆ‌. ಮೇಷ ರಾಶಿಯವರು ನಿಮ್ಮ ತಾಯಿಯ ಆರೋಗ್ಯ ಬಗ್ಗೆ ಮತ್ತು ಸಂಸಾ ರದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಅದೇ ರೀತಿ ಪ್ರೀತಿ- ಪ್ರೇಮ ವಿಚಾರದಲ್ಲೂ ಹೆಚ್ಚಿನ ಗಮನ ಇರಬೇಕಾಗುತ್ತದೆ.

ವೃಷಭ ರಾಶಿ: ಇಂದು ವೃಷಭ ರಾಶಿ ಅವರು ಸಾಮಾಜಿಕ ಚಟುವಟಿಕೆಯಲ್ಲಿ ಹೆಚ್ಚಾಗಿ ಪಾಲ್ಗೊಳ್ಳು ತ್ತೀರಿ. ಅದೇ ರೀತಿ ಸಹೋದರ- ಸಹೋದರಿ ಬಗ್ಗೆ ಗಮನವನ್ನು ನೀಡುತ್ತೀರಿ. ಇಂದು ನಿಮ್ಮ ಆತ್ಮ ವಿಶ್ವಾಸ ಕೂಡ ತುಂಬಾ ಚೆನ್ನಾಗಿ ಇರಲಿದೆ. ಮಾಸ್ ಮೀಡಿಯಾ, ಪತ್ರಿಕೋದ್ಯಮ, ಇತ್ಯಾದಿ ಯಲ್ಲಿ ಕೆಲಸ ಮಾಡೋರಿಗೆ ಅತೀ ಉತ್ತಮವಾದ ದಿನವಾಗಿದೆ.

‌ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಮನೆಯಲ್ಲಿ ನೆಮ್ಮದಿ, ಸಂಸಾರದಲ್ಲಿ ನೆಮ್ಮದಿ ಇರುತ್ತದೆ. ಮನೆಯಲ್ಲಿ ಪೂಜಾ ಕಾರ್ಯಕ್ರಮಗಳು ಇಂದು ನೆರವೇರಬಹುದು. ನಿಮ್ಮ ಅಂದು ಕೊಂಡ ಕೆಲಸ ಕಾರ್ಯಗಳು ಇಂದು ನೇರವೇರಬಹುದು.

ಕಟಕ ರಾಶಿ: ಕಟಕ ರಾಶಿ ಅವರಿಗೆ ನಿಮ್ಮ ರಾಶಿಯಲ್ಲಿ ಚಂದ್ರ ಇರುವುದರಿಂದ ಹಿಂದಿನ ಎರಡು ಮೂರು ದಿನಗಳಲ್ಲಿ ಇದ್ದ ಮನಸ್ಸಿನ ವೇದನೆ ಎಲ್ಲವೂ ಬಗೆಹರಿಯಲಿದೆ. ನಿಮ್ಮ ಕೆಲಸ ಕಾರ್ಯ ದಲ್ಲೂ ಕೂಡ ನೀವು ಜಯವನ್ನು ಕಾಣಲಿದ್ದೀರಿ.

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಸ್ವಲ್ಪ ಕಷ್ಟಕರವಾದ ದಿನ ವಾಗಿದೆ. ಮುಖ್ಯವಾದ ಯಾವುದೇ ನಿರ್ಧಾರಗಳನ್ನು ಮಾಡಲು ಹೋಗಬೇಡಿ.‌ ಉನ್ನತ ಹುದ್ದೆಯಲ್ಲಿ ಇರೋರಿಗೆ ಇಂದು ಸ್ವಲ್ಪ ಕಷ್ಟವೇ ಹೆಚ್ಚಾಗುತ್ತದೆ.

ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ನಿವಾರಿಸಲಿದೆ ಅಡುಗೆ ಮನೆಯ ಈ ಒಂದು ವಸ್ತು

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಉತ್ತಮವಾದ ದಿನವಾಗಿದ್ದು ಇಷ್ಟಾರ್ಥ ಸಿದ್ದಿಯಾಗಲಿದೆ. ಮನಸ್ಸಿಗೆ ‌ನೆಮ್ಮದಿ ಇದ್ದು ಗುಂಪು ಕೆಲಸದಿಂದ ನೀವು ಯಶಸ್ಸು ಕಾಣಲಿದ್ದೀರಿ.

ತುಲಾ ರಾಶಿ: ತುಲಾ ರಾಶಿ ಅವರಿಗೆ ಕಾರ್ಯಕ್ಷೇತ್ರದ ಜವಾಬ್ದಾರಿ ಇಂದು ಹೆಚ್ಚು ಕಾಡಬಹುದು.‌ ಆದರೆ ಮನೆ ಹಾಗೂ ಕೆಲಸವನ್ನು ಸರಿಯಾಗಿ ಸಮತೋಲನದಲ್ಲಿ ಇರಿಸಬೇಕಾಗುತ್ತದೆ. ಹಾಗಾಗಿ ನಿಮಗೆ ಸ್ವಲ್ಪ ಕಷ್ಟವಾಗಬಹುದು.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಭಾಗ್ಯೋದಯವಾದ ದಿನವಾಗಿದ್ದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಇಂದು ಹಿರಿಯರ ಆಶೀರ್ವಾದ ಇಲ್ಲದೆ ಯಾವುದೇ ಭಾಗ್ಯ ನಿಮಗೆ ಸಿಗುವುದಿಲ್ಲ. ಹಾಗಾಗಿ ಹಿರಿಯರ ಆಶೀರ್ವಾದ ಪಡೆಯುವುದನ್ನು ಇಂದು ಮರೆಯಬೇಡಿ.

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಕ್ಲಿಷ್ಟಕರವಾದ ದಿನ‌ ವಾಗಿದೆ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಅದೇ ರೀತಿ ಪ್ರೀತಿ ಪಾತ್ರರಿಂದ ಯಾವುದೇ ಸಹಕಾರ ನಿಮಗೆ ಸಿಗುವುದಿಲ್ಲ.ಅದೇ ರೀತಿ ಧಾನ್ಯದಿಗಳನ್ನು ಮಾಡುವ ಮೂಲಕ ಸಮಯ ಕಳೆಯಬೇಕಾಗುತ್ತದೆ.

ಮಕರ ರಾಶಿ: ಈ ದಿನ ಮಕರ ರಾಶಿ ಅವರಿಗೆ ಸ್ವಲ್ಪ ಕಷ್ಟಕರವಾದ ದಿನವಾಗಿದೆ‌ ಮುಖ್ಯ ವಾದ ವ್ಯವಹಾರ, ಪಾರ್ಟ್ನರ್ ಶೀಪ್ ನಲ್ಲಿ ಒಡಕು ಉಂಟಾಗುವ ಸಾಧ್ಯತೆ ಇರುತ್ತದೆ.‌

ಕುಂಭರಾಶಿ: ಕುಂಭ ರಾಶಿ ಅವರಿಗೆ ಅತ್ಯುತ್ತಮವಾದ ದಿನ ವಾಗಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಎಲ್ಲ ರೀತಿಯಿಂದಲೂ ಸಹಕಾರ ಸಿಗುತ್ತದೆ.‌ ಮನಸ್ಸಿಗೆ ಅತೀ ಉತ್ತಮವಾದ ದಿನವಾಗುತ್ತದೆ.

ಮೀನ ರಾಶಿ: ಮೀನ ರಾಶಿ ಅವರಿಗೆ ಸ್ವಲ್ಪ ಕ್ಲಿಷ್ಟಕರವಾದ ದಿನವಾಗಿದೆ. ಮನಸ್ಸಿಗೆ ಅಷ್ಟೊಂದು ನೆಮ್ಮದಿ ಇರುವುದಿಲ್ಲ. ಆದರೂ ಕೂಡ ನಿಮ್ಮ ಬುದ್ದಿವಂತಿಕೆ ಯಿಂದ ಕೆಲಸ ಕಾರ್ಯಗಳನ್ನು ಮಾಡಿದರೆ ಒಳಿತು ಆಗುತ್ತದೆ.