Horoscope Today December 9th: ಇಂದು ಶನೇಶ್ವರನ ಕೃಪೆಯಿಂದ ಈ ರಾಶಿಗೆ ಕಾರ್ಯ ಕ್ಷೇತ್ರದಲ್ಲಿ ಮುನ್ನಡೆ!
ನಿತ್ಯ ಭವಿಷ್ಯ ಡಿಸೆಂಬರ್ 9, 2025: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು ಮಾರ್ಗಶಿರಾ ಮಾಸೆ, ಕೃಷ್ಣ ಪಕ್ಷದ , ಪಂಚಮಿ ತಿಥಿ, ಪುಷ್ಯ ನಕ್ಷತ್ರದ ಡಿಸೆಂಬರ್ 9ನೇ ತಾರೀಖಿನ ಮಂಗಳವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
(ಸಂಗ್ರಹ ಚಿತ್ರ) -
ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು ಮಾರ್ಗಶಿರಾ ಮಾಸೆ ಕೃಷ್ಣ ಪಕ್ಷದ, ಪಂಚಮಿ ತಿಥಿ, ಪುಷ್ಯ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಪುಷ್ಯ ನಕ್ಷತ್ರದ ಅಧಿಪತಿ ಶನಿ ಆಗಿದ್ದಾನೆ. ಹಾಗಾಗಿ ಶನೇಶ್ವರನ ಪ್ರಭಾವ ಹೆಚ್ಚಿನ ರಾಶಿಗೆ ಇರುತ್ತದೆ. ಮೇಷ ರಾಶಿಯವರು ನಿಮ್ಮ ತಾಯಿಯ ಆರೋಗ್ಯ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಾಗುತ್ತದೆ. ಸಂಸಾರದ ಬಗ್ಗೆಯೂ ಹೆಚ್ಚಿನ ಗಮನವನ್ನು ನೀವು ವಹಿಸಬೇಕಾಗುತ್ತದೆ.
ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಅತ್ಯುತ್ತಮವಾದ ದಿನವಾಗಿದೆ. ನಿಧಾನವಾಗಿ ದಿನ ಕಳೆದಂತೆ ನಿಮಗೆ ಯಶಸ್ಸು ಪ್ರಾಪ್ತಿಯಾಗುತ್ತದೆ. ಎಲ್ಲರಿಂದಲೂ ಉತ್ತಮ ಸಹಕಾರವನ್ನು ಕೂಡ ನೀವು ಪಡೆಯಲಿದ್ದೀರಿ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಮನೆಯಲ್ಲಿ ಸ್ವಲ್ಪ ಗೊಂದಲದ ವಾತಾವರಣ ಉಂಟಾಗುತ್ತದೆ. ಹಾಗಾಗಿ ಮನೆಯ ಬಗ್ಗೆಯೇ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ನಿಮ್ಮ ರಾಶಿಯಲ್ಲಿ ಚಂದ್ರ ಇರುವುದರಿಂದ ಆಲಸಿತನ ಇಂದು ಹೆಚ್ಚಾಗಿ ಇರುತ್ತದೆ. ಆದರೂ ಕೂಡ ನಿಮ್ಮ ಕೆಲಸ ಕಾರ್ಯಗಳನ್ನು ನೀವು ಪೂರೈಸಿಕೊಳ್ಳುತ್ತೀರಿ.
ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಸ್ವಲ್ಪ ಕಷ್ಟಕರವಾದ ದಿನವಾಗಿದೆ. ಮಿತೃತ್ವದಲ್ಲಿ ಒಡಕು ಉಂಟಾಗುವ ಸಾಧ್ಯತೆ ಇರುತ್ತದೆ. ಮುಖ್ಯವಾದ ಯಾವುದೇ ನಿರ್ಧಾರಗಳನ್ನು ಇಂದು ಮಾಡಲು ಹೋಗಬೇಡಿ. ಮೀಟಿಂಗ್, ಇಮೇಲ್ ಇತ್ಯಾದಿಯನ್ನು ಯಾವುದೇ ಕಳುಹಿಸಲು ಹೋಗಬೇಡಿ.
Vastu Tips: ಎಷ್ಟೇ ದುಡ್ಡಿದ್ದರೂ ಕೈಯಲ್ಲಿ ಹಣ ನಿಲ್ಲುತ್ತಿಲ್ಲ ಎಂಬ ಚಿಂತೆಯೇ? ಈ ಸಿಂಪಲ್ ಟಿಪ್ಸ್ ಪಾಲಿಸಿ ನೋಡಿ
ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಉತ್ತಮವಾದ ದಿನವಾಗಿದ್ದು ಇಷ್ಟಾರ್ಥ ಸಿದ್ದಿಯಾಗಲಿದೆ. ಮನಸ್ಸಿಗೆ ನೆಮ್ಮದಿ ಇದ್ದು ನಿಧಾನವಾಗಿ ಯಶಸ್ಸು ಅನ್ನು ಕಾಣುತ್ತೀರಿ.
ತುಲಾ ರಾಶಿ: ತುಲಾ ರಾಶಿ ಅವರಿಗೆ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಲಿದ್ದು ಮನಸ್ಸಿಗೆ ನೆಮ್ಮದಿ ಇರುತ್ತದೆ. ಆದರೂ ಕೂಡ ಎಲ್ಲವೂ ನಿಧಾನವಾಗಿ ಸಾಗುತ್ತದೆ.ಆದರೂ ಕೂಡ ಬಹಳಷ್ಟು ತಾಳ್ಮೆ ನಿಮಗೆ ಅಗತ್ಯವಾಗಿ ಇರಬೇಕಾಗುತ್ತದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಭಾಗ್ಯೋದಯವಾದ ದಿನವಾಗಿದ್ದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಮುಖ್ಯವಾದ ಕೆಲಸ ಕಾರ್ಯದಲ್ಲಿ ಇಂದು ಮುನ್ನಡೆಯನ್ನು ಕಾಣುತ್ತೀರಿ.
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಕ್ಲಿಷ್ಟಕರವಾದ ದಿನವಾಗಿದೆ. ಮುಖ್ಯವಾದ ಕೆಲಸ ಕಾರ್ಯದಲ್ಲಿ ಯಾವುದೇ ನಿರ್ಧಾರಗಳು ಬೇಡ. ಮನಸ್ಸಿಗೆ ಅಷ್ಟೊಂದು ನೆಮ್ಮದಿ ಇರುವುದಿಲ್ಲ. ನಿಮ್ಮ ಪರವಾಗಿ ಇಂದು ಯಾವುದೇ ಕೆಲಸ ಕಾರ್ಯಗಳು ನಡೆಯುವುದಿಲ್ಲ.
ಮಕರ ರಾಶಿ: ಈ ದಿನ ಮಕರ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ.ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ.ವೈಯಕ್ತಿಕ ಜೀವನದಲ್ಲೂ ಕೂಡ ಬೇರೆಯವರು ಎಲ್ಲರಿಂದ ನಿಮಗೆ ಸಹಕಾರ ಸಿಗುತ್ತದೆ.
ಕುಂಭರಾಶಿ: ಕುಂಭ ರಾಶಿ ಅವರಿಗೂ ಸಾಮಾಜಿಕವಾಗಿ ಬಹಳಷ್ಟು ಉತ್ತಮವಾದ ದಿನವಾಗಿದೆ. ನಿಮ್ಮ ಆತ್ಮವಿಶ್ವಾಸ ಚೆನ್ನಾಗಿ ಇರಲಿದ್ದು ಆರೋಗ್ಯದಲ್ಲಿ ಕೂಡ ಸುಧಾರಣೆ ಯನ್ನು ಕಾಣುತ್ತೀರಿ.
ಮೀನ ರಾಶಿ: ಮೀನ ರಾಶಿ ಅವರಿಗೆ ಸ್ವಲ್ಪ ಕ್ಲಿಷ್ಟಕರವಾದ ದಿನವಾಗಿದೆ. ಆದರೂ ಕೂಡ ನಿಮ್ಮ ಬುದ್ದಿವಂತಿಕೆಯಿಂದ ಕೆಲಸ ಕಾರ್ಯಗಳನ್ನು ಮಾಡಿದರೆ ಯಶಸ್ಸು ಸಿಗುತ್ತದೆ.