Vastu Tips: ಎಷ್ಟೇ ದುಡ್ಡಿದ್ದರೂ ಕೈಯಲ್ಲಿ ಹಣ ನಿಲ್ಲುತ್ತಿಲ್ಲ ಎಂಬ ಚಿಂತೆಯೇ? ಈ ಸಿಂಪಲ್ ಟಿಪ್ಸ್ ಪಾಲಿಸಿ ನೋಡಿ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಕೆಲವು ದಿಕ್ಕುಗಳಲ್ಲಿ ಉಂಟಾಗುವ ದೋಷಗಳು ಸಂಪತ್ತು ಹಾಗೂ ಆ ಮನೆಯ ಹಣಕಾಸಿನ ಮೇಲೆ ಪರಿಣಾಮ ಬೀರಬಹುದು. ಇದರಿಂದ ಕೈ ತುಂಬಾ ಹಣ ದುಡಿದರೂ, ಅದು ನಿಮ್ಮ ಕೈಯಲ್ಲಿ ನಿಲ್ಲದಂತೆ ತಡೆಯುತ್ತದೆ. ಹಾಗಾdre ಈ ಸಮಸ್ಯೆಗೆ ಪರಿಹಾರ ಇಲ್ವಾ ಎಂದು ನೀವು ಯೋಚಿಸಿದ್ದರೆ ಖಂಡಿತಾ ಇದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ಎಷ್ಟೇ ದುಡಿದರೂ, ಲಕ್ಷಗಟ್ಟಲೇ ಸಂಬಳ ಸಿಕ್ಕಿದ್ದರೂ ತಿಂಗಳ ಕೊನೆಯಲ್ಲಿ ಜೇಬು ಖಾಲಿಯಾಗುತ್ತದೆ ಎಂದು ಹಲವರು ಗೋಳಾಡುತ್ತಾರೆ. ಹಗಲು ರಾತ್ರಿ ಎನ್ನದೆ ಶ್ರಮಿಸಿದರೂ ಅಂದುಕೊಂಡಿದ್ದನ್ನು ಸಾಧಿಸಲು ಆಗುತ್ತಿಲ್ಲ... ಯಶಸ್ಸು ಸಿಗುತ್ತಿಲ್ಲ ಎಂದು ಕೊರಗುತ್ತಾರೆ...ಹೀಗೆ ಆದಾಯ ಉತ್ತಮವಾಗಿದ್ದರೂ ಉಳಿತಾಯ ಮಾಡಲು ಸಾಧ್ಯವಾಗದೇ ಇರುವುದು, ಮನೆಯ ಅಭಿವೃದ್ಧಿ ಕುಂಠಿತವಾಗುವುದು ಕೇವಲ ಫೈನಾನ್ಸಿಯಲ್ ಪ್ಲಾನಿಂಗ್ ಕೊರತೆಯಿಂದ ಆಗಿರುವುದಿಲ್ಲ. ಮನೆಯಲ್ಲಿರುವ ವಾಸ್ತು ಸಮಸ್ಯೆಯೂ (Vastu Problem) ಅಥವಾ ವಾಸ್ತು ದೋಷದ (Vastu Doshas) ಪರಿಣಾಮವೂ ಆಗಿರಬಹುದು ಎಂದು ವಾಸ್ತು ತಜ್ಞರು ಹೇಳುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಕೆಲವು ದಿಕ್ಕುಗಳಲ್ಲಿ ಉಂಟಾಗುವ ದೋಷಗಳು ಸಂಪತ್ತು ಹಾಗೂ ಆ ಮನೆಯ ಹಣಕಾಸಿನ ಮೇಲೆ ಪರಿಣಾಮ ಬೀರಬಹುದು. ಇದರಿಂದ ಕೈ ತುಂಬಾ ಹಣ ದುಡಿದರೂ, ಅದು ನಿಮ್ಮ ಕೈಯಲ್ಲಿ ನಿಲ್ಲದಂತೆ ತಡೆಯುತ್ತದೆ.
ಹಾಗಾದರೆ ಈ ಸಮಸ್ಯೆಗೆ ಪರಿಹಾರ ಇಲ್ವಾ ಎಂದು ನೀವು ಯೋಚಿಸಿದ್ದರೆ? ಖಂಡಿತಾ ಇದೆ. ನಾವು ಹೇಳುವ ಈ ಸರಳ ವಾಸ್ತು ನಿಯಮ ಪಾಲಿಸಿದ್ದರೆ ಮನೆಯಲ್ಲಿ ಹಣ ಉಳಿಯುವಂತೆ ಹಾಗೂ ಸಂಪತ್ತು ವೃದ್ಧಿಸುವಂತೆ ಮಾಡಲಿದ್ದು, ಅನಗತ್ಯ ವೆಚ್ಚಗಳನ್ನು ನಿಯಂತ್ರಿಸುತ್ತದೆ.
ಸಂಪತ್ತಿನ ದಿಕ್ಕಾದ ಉತ್ತರದ ಶಕ್ತಿ
ಧನಾಧಿಪತಿ ಕುಬೇರನ ದಿಕ್ಕು ಎನ್ನಲಾದ ಉತ್ತರ ದಿಕ್ಕಿನಲ್ಲಿ ನಿಮ್ಮ ಮನೆಯ ಸಂಪತ್ತನ್ನು ಹೆಚ್ಚಿಸುವ ಶಕ್ತಿ ಇದ್ದು, ಆ ಜಾಗವನ್ನು ಸದಾ ಸ್ವಚ್ಛ ಹಾಗೂ ಶುದ್ಧತೆಯಿಂದ ಇಟ್ಟುಕೊಳ್ಳುವುದು ವಾಸ್ತು ಪ್ರಕಾರ ಅತ್ಯಂತ ಮುಖ್ಯ. ಹಾಗೇ ಇಲ್ಲಿ ಸುಂದರ ನೀರಿನ ಕಾರಂಜಿಯನ್ನು ಇಡುವುದು ಶುಭ ಸೂಚಕ. ಹರಿಯುವ ನೀರು ನಿರಂತರ ಸಂಪತ್ತಿನ ಸಂಕೇತ. ಈ ನಿಯಮವನ್ನು ಪಾಲಿಸುವುದರಿಂದ ಧನದ ಹರಿವು ಹೆಚ್ಚಾಗಲಿದ್ದು, ಉತ್ತರ ದಿಕ್ಕು ಮನೆಯ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಿಸುವಲ್ಲಿ ಪ್ರಮುಖವಾಗಿದೆ.
ಸೋಮವಾರ ಈ ವಸ್ತುಗಳನ್ನು ಶಿವನಿಗೆ ಅರ್ಪಿಸಿದರೆ ಮನೆಯಲ್ಲಿ ಹಣದ ಮಳೆಯೇ ಸುರಿಯುತ್ತದೆ!
ಅಡುಗೆಮನೆ ಮತ್ತು ಆರ್ಥಿಕ ಲಾಭ
ಒಂದು ಮನೆಯ ಏಳಿಗೆಗೆ ಆ ಗೃಹದ ಅಡುಗೆಮನೆಯೂ ಪ್ರಮುಖ ಪಾತ್ರವಹಿಸಲಿದ್ದು, ಯಶಸ್ಸು ಹಾಗೂ ಕೀರ್ತಿಯನ್ನು ಹೆಚ್ಚಿಸುವಲ್ಲಿ ಅಡುಗೆಮನೆಯ ವಾಸ್ತು ಬಹಳ ಮುಖ್ಯ ಅಗುತ್ತದೆ. ಹಾಗಾಗಿ ನಿಮ್ಮ ಮನೆಯ ಅಡುಗೆ ಮನೆ ಆಗ್ನೇಯ ದಿಕ್ಕಿನಲ್ಲಿ ಇರುವಂತೆ ನೋಡಿಕೊಳ್ಳಿ. ಈ ದಿಕ್ಕು ಅಗ್ನಿ ತತ್ವವನ್ನು ಪ್ರತಿನಿಧಿಸಲಿದ್ದು, ಆರೋಗ್ಯವನ್ನು ಸುಧಾರಿಸುತ್ತದೆ. ಹಾಗೇ ತಪ್ಪಿಯೂ ಅಡುಗೆಮನೆ ಉತ್ತರ ದಿಕ್ಕಿನಲ್ಲಿ ಬಾರದಂತೆ ನೋಡಿಕೊಳ್ಳಿ, ಇದು ಹಣದ ಸ್ಥಿರತೆಯನ್ನು ದುರ್ಬಲಗೊಳಿಸಲಿದ್ದು, ಖರ್ಚು ವೆಚ್ಚವನ್ನು ಹೆಚ್ಚಿಸುತ್ತದೆ.
ಮನೆಯಲ್ಲಿ ಸಸಿಗಳು ಇರಲಿ
ವಾಸ್ತು ಶಾಸ್ತ್ರದಲ್ಲಿ ಹಸಿರು ಸಸ್ಯಗಳು ವಿಶೇಷ ಸ್ಥಾನ ಪಡೆದಿವೆ. ಆಗ್ನೇಯ ಮೂಲೆಯಲ್ಲಿ ಹಸಿರು ಸಸ್ಯಗಳನ್ನು ಇಡುವುದರಿಂದ ಮನೆಗೆ ಸಕಾರಾತ್ಮಕ ಶಕ್ತಿ ಆಕರ್ಷಿತವಾಗುತ್ತದೆ. ಮನಿ ಪ್ಲಾಂಟ್ ಸಂಪತ್ತಿನ ಸಂಕೇತವಾಗಿದ್ದು, ಇದನ್ನು ಶುಭದ ಮೂಲೆಯಲ್ಲಿ ಇಡುವುದು ಉತ್ತಮವಾಗಿದ್ದು, ಇದರೊಂದಿಗೆ ಒಣಗಿದ ಸಸ್ಯಗಳನ್ನು ಮನೆಯಲ್ಲಿ ಇರದಂತೆ ನೋಡಿಕೊಳ್ಳುವುದು ಒಳ್ಳೆಯದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಹೀಗಾಗಿ ಹಣಕಾಸಿನ ಸಮಸ್ಯೆ ಎದುರಾಗುತ್ತಿದ್ದರೆ ಅದಕ್ಕೆ ನಿಮ್ಮ ಆದಾಯ ಅಥವಾ ಸೇವಿಂಗ್ ಪ್ಲಾನಿಂಗ್ ಅಲ್ಲಿ ನೀವು ವಿಫಲ ಆಗುತ್ತಿದ್ದೀರಾ ಎಂದರ್ಥ ಅಲ್ಲ, ಬದಲಾಗಿ ವಾಸ್ತುವಿನ ಸಮಸ್ಯೆಯೂ ಇರುವುದು. ಅದಕ್ಕೆ ಈ ವಾಸ್ತು ಪರಿಹಾರಗಳನ್ನು ಪಾಲನೆಮಾಡುವುದರಿಂದ ಧನದ ಹರಿವು ಸುಧಾರಿಸಿ, ಆರ್ಥಿಕ ಸ್ಥಿರತೆ ಮತ್ತು ಸಮೃದ್ಧಿ ಜೀವನ ನಿಮ್ಮ ಪಾಲಾಗಲಿದೆ.