ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾ ಯನ ಹಿಮದೃತು, ಪೌಸ ಮಾಸೆ, ಕೃಷ್ಣ ಪಕ್ಷದ,ನವಮಿ ತಿಥಿ, ಸ್ವಾತಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಇಂದು ಸ್ವಾತಿ ನಕ್ಷತ್ರ ಇದ್ದು ಶುಕ್ರ ಮಕರ ರಾಶಿಯನ್ನು ಪ್ರವೇಶ ಮಾಡ್ತಾ ಇದ್ದಾನೆ. ಮೇಷ ರಾಶಿಯವರಿಗೆ ಇಂದು ಅನುಕೂಲವಾದ ದಿನವಾಗಿಲ್ಲ.ದಶಮ ಸ್ಥಾನದಲ್ಲಿ ಶುಕ್ರ ಬಂದಾಗ ಹೆಂಗಸರಿಂದ ತೊಂದರೆ ಉಂಟಾಗುವ ದಿನವಾಗುತ್ತದೆ. ಹಾಗಾಗಿ ಕಾರ್ಯಕ್ಷೇತ್ರದಲ್ಲಿ ಹೆಂಗಸರ ಜೊತೆ ಗೌರವಯುತವಾಗಿ ನಡೆದುಕೊಳ್ಳಬೇಕಾಗುತ್ತದೆ.
ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಇಂದು ಭಾಗ್ಯೋದಯ ವಾದ ದಿನವಾಗಿದ್ದು ಮುಂದಿನ ದಿನದಲ್ಲಿ ಗೌರವ ಪ್ರಾಪ್ತಿಯಾಗುತ್ತದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಶುಕ್ರ ಅಷ್ಟಮ ಸ್ಥಾನಕ್ಕೆ ಬರುವುದರಿಂದ ಹಿಂದಿನ ದಿನದಲ್ಲಿ ಇದ್ದ ಕ್ಷೇಷ ಎಲ್ಲವೂ ಮಯವಾಗುತ್ತದೆ. ಅದರ ಜೊತೆ ಮನಸ್ಸಿಗೆ ಬಹಳಷ್ಟು ನೆಮ್ಮದಿ ಪ್ರಾಪ್ತಿ ಯಾಗುತ್ತದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಈ ಗೋಚರ ಅಷ್ಟು ಶುಭಕರವಾಗಿಲ್ಲ. ಮುಖ್ಯವಾದ ಕೆಲಸ, ಪಾರ್ಟ್ನರ್ ಶೀಪ್ ವ್ಯವಹಾರದಲ್ಲಿ ಕಲಹ ಉಂಟಾಗುವ ಸಾಧ್ಯ ಇರುತ್ತದೆ.
ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಇಂದು ತೊಂದರೆ ಉಂಟಾಗುವ ದಿನವಾಗುತ್ತದೆ. ಅದರಲ್ಲೂ ಹೆಂಗಸರಿಂದ ನಿಮಗೆ ಹೆಚ್ಚಿನ ಸಮಸ್ಯೆ ಬರಬಹುದು..ಮನಸ್ಸಿಗೂ ಕೂಡ ನಾನಾ ರೀತಿಯ ಕ್ಷೇಷ ಉಂಟಾಗಬಹುದು.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಅತ್ಯುತ್ತಮವಾದ ಗೋಚರ ವಾಗಿದೆ.ಮನಸ್ಸಿಗೆ ನೆಮ್ಮದಿ ಕೂಡ ಪ್ರಾಪ್ತಿ ಯಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಕೂಡ ಮುನ್ನಡೆ ಪ್ರಾಪ್ತಿಯಾಗುತ್ತದೆ. ಬುದ್ದಿ ಶಕ್ತಿ ಯೋಚನೆಯ ಮೂಲಕ ಕೆಲಸ ಕಾರ್ಯದಲ್ಲಿ ಯಶಸ್ಸು ಕಾಣುತ್ತೀರಿ.
Vastu Tips: ಈ ವಸ್ತುಗಳನ್ನು ಉತ್ತರ ದಿಕ್ಕಿನಲ್ಲಿ ಇಟ್ಟುಕೊಂಡ್ರೆ ದುಡ್ಡಿನ ಹೊಳೆ ಹರಿಯೋದು ಪಕ್ಕಾ!
ತುಲಾ ರಾಶಿ: ತುಲಾ ರಾಶಿಗೆ ಈ ಗೋಚರ ಅನುಕೂಲ ವಾಗಿದೆ. ಮನಸ್ಸಿಗೆ ನೆಮ್ಮದಿ ಪ್ರಾಪ್ತಿ ಯಾಗ ಲಿದ್ದು ಹೊಸ ಮನೆಗೆ ಪ್ರವೇಶ ನೀಡುವ ಸಂದರ್ಭ ಬರಬಹುದು.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಮಾಸ್ ಮೀಡಿಯಾ, ಸೋಷಿಯಲ್ ಮೀಡಿಯಾ, ಮಾರುಕಟ್ಟೆ ವ್ಯವಹಾರದಲ್ಲಿ ಇರೋರಿಗೆ ಉತ್ತಮವಾದ ದಿನವಾಗಿದೆ.
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಉತ್ತಮವಾದ ದಿನ ವಾಗಿದೆ. ಆದರೆ ಕುಟುಂಬದಲ್ಲಿ ಯಾವುದೇ ಶುಭ ಸಮಾರಂಭಗಳು ನಡೆಯುವ ಸಾಧ್ಯತೆ ಕೂಡ ಇರುತ್ತದೆ. ಹಣಕಾಸಿನಲ್ಲಿ ಕೂಡ ಅಭಿವೃದ್ಧಿಯಾಗುತ್ತದೆ.
ಮಕರ ರಾಶಿ: ಮಕರ ರಾಶಿಯವರಿಗೆ ಅತೀ ಉತ್ತಮವಾದ ದಿನವಾಗಿದೆ. ಶುಕ್ರ ನಿಮ್ಮ ರಾಶಿಗೆ ಬರುವುದರಿಂದ ಶತ್ರು ದ್ವಂಸ ಆಗಬಹುದು. ಮನಸ್ಸಿಗೆ ನೆಮ್ಮದಿಯ ಜೊತೆಗೆ ಮಿತೃತ್ವದಲ್ಲಿ ಕೂಡ ಖುಷಿ ಸಿಗಬಹುದು
ಕುಂಭರಾಶಿ: ಈ ರಾಶಿಯವರಿಗೆ ಸ್ವಲ್ಪ ಕಷ್ಟಕರವಾದ ದಿನವಾಗಿದೆ. ಹೆಂಗಸರಿಂದ ಸ್ವಲ್ಪ ಕ್ಷೇಷ ಉಂಟಾಗುವ ದಿನವಾಗುತ್ತದೆ. ಮುಖ್ಯವಾದ ಸಂಬಂಧದಲ್ಲೂ ಒಡಕು ಉಂಟಾಗುವ ಸಾಧ್ಯತೆ ಇದೆ.
ಮೀನ ರಾಶಿ: ಮೀನ ರಾಶಿ ಅವರಿಗೆ ಅತೀ ಉತ್ತಮವಾದ ದಿನವಾಗಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಮನಸ್ಸಿಗೆ ಖುಷಿ ಸಿಗುತ್ತದೆ. ಬೇರೆಯವರಿಂದ ಗೌರವ ಪ್ರಾಪ್ತಿ ಯಾಗಲಿದ್ದು ಧನ ಆಗಮನ ಕೂಡ ಆಗುತ್ತದೆ.