ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು, ಪೌಸ ಮಾಸೆ, ಕೃಷ್ಣ ಪಕ್ಷದ, ದಶಮಿ ತಿಥಿ, ವಿಶಾಖ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಇಂದು ವಿಶಾಖ ನಕ್ಷತ್ರ ಇದ್ದು ಇದರ ಅಧಿಪತಿ ಗುರು ಆಗಿದ್ದಾನೆ. ಹೀಗಾಗಿ ಎಲ್ಲ ರಾಶಿಗೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಇಂದು ಅತ್ಯುತ್ತಮವಾದ ದಿನವಾಗಿದೆ.ಎಲ್ಲರಿಂದಲೂ ಸಹಕಾರ ಪ್ರಾಪ್ತಿಯಾಗಲಿದ್ದು ಪ್ರೀತಿ ಪಾತ್ರರಿಂದ ಖುಷಿ ಸಿಗುತ್ತದೆ.
ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ..ಸಾಮಾಜಿಕ ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗಲಿದ್ದು ಶತ್ರು ನಾಶ ಆಗಬಹುದು. ಆರೋಗ್ಯದಲ್ಲೂ ಕೂಡ ಸುಧಾರಣೆ ಕಂಡು ಬರುತ್ತದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಸ್ವಲ್ಪ ಕಷ್ಟಕರವಾದ ದಿನವಾಗಿದೆ. ಬುದ್ದಿ ಶಕ್ತಿಯನ್ನು ಉಪಯೋಗಿಸಿ ಕೊಂಡು ಸರಿಯಾದ ರೀರಿಯಲ್ಲಿ ಕೆಲಸ ಮಾಡಬೇಕು.ಇಲ್ಲದೆ ಹೋದಲ್ಲಿ ಮನಸ್ಸಿಗೆ ಕ್ಲೇಷ ಉಂಟಾಗುತ್ತದೆ. ಪೋಷಕರಿಗೆ ಮಕ್ಕಳಿಂದ ಸ್ವಲ್ಪ ಕಿರಿ ಕಿರಿ ಆಗಬಹುದು.
ಕಟಕ ರಾಶಿ: ಕಟಕ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಆದರೂ ಕೂಡ ಹಣಕಾಸಿನ ವಿಚಾರ,ತಾಯಿಯ ಆರೋಗ್ಯ ,ಆಸ್ತಿ ಪಾಸ್ತಿ ವಿಚಾರವಾಗಿ ತಲೆ ನೋವು ಹೆಚ್ಚಾಗಿ ಇರುತ್ತದೆ. ನೀವು ಈ ಬಗ್ಗೆ ಹೆಚ್ಚು ಜಾಗೃತರಾಗಿ ಇರಬೇಕಾಗುತ್ತದೆ.
ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಸೋಷಿಯಲ್ ಮೀಡಿಯಾ, ರೇಡಿಯೊ,ಟಿವಿ ಇತ್ಯಾದಿಯಲ್ಲಿ ಕೆಲಸ ಮಾಡೋರಿಗೆ ಲಾಭದಾಯಕ ದಿನವಾಗಿದೆ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಸಂಸಾರದಲ್ಲಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.ಬಹಳಷ್ಟು ಸುಖಕರವಾದ ವಾತಾವರಣವನ್ನು ನೀವು ಇಂದು ನೋಡಬಹುದು.ಆಧ್ಯಾತ್ಮಿಕ ವಾಗಿ ನೀವು ಹೆಚ್ಚು ಒತ್ತು ನೀಡಬಹುದು.
Vastu Tips: ಈ ವಸ್ತುಗಳನ್ನು ಉತ್ತರ ದಿಕ್ಕಿನಲ್ಲಿ ಇಟ್ಟುಕೊಂಡ್ರೆ ದುಡ್ಡಿನ ಹೊಳೆ ಹರಿಯೋದು ಪಕ್ಕಾ!
ತುಲಾ ರಾಶಿ: ತುಲಾ ರಾಶಿಗೆ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ನಿಮ್ಮ ರಾಶಿಯಲ್ಲೇ ಚಂದ್ರ ಬಂದಿರುವುದರಿಂದ ಗಜಕೇಸರಿ ಯೋಗ ಬಂದಿರಬಹುದು. ಹಾಗಾಗಿ ಮನಸ್ಸಿಗೆ ಬಹಳಷ್ಟು ನೆಮ್ಮದಿ ಸಿಗುತ್ತದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಕಷ್ಟಕರವಾದ ದಿನವಾಗಿದೆ. ಮುಖ್ಯವಾದ ಯಾವುದೇ ನಿರ್ಧಾರಗಳು ಬೇಡ. ಎರಡು ಮೂರು ದಿನಗಳವರೆಗೆ ಧನ್ಯಾಧಿಗಳನ್ನು ಮಾಡುವ ಮೂಲಕ ಸಮಯ ಕಳೆಯಬೇಕಾಗುತ್ತದೆ
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಉತ್ತಮವಾದ ದಿನ ವಾಗಿದೆ..ಇಷ್ಟಾರ್ಥ ಸಿದ್ದಿಯಾಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಗುಂಪು ಕೆಲಸದಿಂದ ಗೌರವ ಯಶಸ್ಸು ಪ್ರಾಪ್ತಿಯಾಗುತ್ತದೆ.
ಮಕರ ರಾಶಿ: ಮಕರ ರಾಶಿಯವರಿಗೆ ಅತೀ ಉತ್ತಮವಾದ ದಿನವಾಗಿದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಲಿದ್ದು ಮುಂದಿನ ದಿನಗಳಿಗೆ ಉತ್ತಮವಾಗಲಿದೆ.
ಕುಂಭರಾಶಿ: ಈ ರಾಶಿಯವರಿಗೆ ಭಾಗ್ಯೋದಯವಾದ ದಿನ ವಾಗುತ್ತದೆ.ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಹಿಂದಿನ ಎರಡು ಮೂರು ದಿನಗಳಲ್ಲಿ ಇದ್ದ ಮನಸ್ಸಿನ ಕ್ಷೇಷ ಎಲ್ಲವೂ ಮಯವಾಗುತ್ತದೆ
ಮೀನ ರಾಶಿ: ಮೀನ ರಾಶಿ ಅವರಿಗೆ ಕಷ್ಟಕರವಾದ ದಿನವಾಗಿದೆ.ಮುಖ್ಯವಾದ ಯಾವುದೇ ನಿರ್ಧಾರಗಳು ಬೇಡ.ಅದೇ ರೀತಿ ಮನಸ್ಸಿಗೆ ಕ್ಲೇಷ ಜಾಸ್ತಿಯಾಗುವ ಸಾಧ್ಯತೆ ಇರುತ್ತದೆ. ಆಧ್ಯಾತ್ಮಿಕವಾಗಿ ಹೆಚ್ಚಿನ ಪ್ರಗತಿ ಕಾಣುತ್ತೀರಿ.