ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Horoscope Today January 9th: ಇಂದು ರವಿಯ ಪ್ರಭಾವ: ಈ ರಾಶಿಯವರ ಇಷ್ಟಾರ್ಥ ಸಿದ್ಧಿ, ಅಪಾರ ಧನ ಲಾಭ

ನಿತ್ಯ ಭವಿಷ್ಯ ಜನವರಿ 9, 2026: ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು, ಪೌಸ ಮಾಸೆ, ಕೃಷ್ಣ ಪಕ್ಷ, ಷಷ್ಠಿ ತಿಥಿ, ಉತ್ತರ ಪಾಲ್ಗುಣಿ ನಕ್ಷತ್ರದ ಜನವರಿ 9ನೇ ತಾರೀಖಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ರವಿಯಿಂದ ಈ ರಾಶಿಯವರಿಗೆ ಧನ ಲಾಭ

ಸಂಗ್ರಹ ಚಿತ್ರ -

Profile
Pushpa Kumari Jan 9, 2026 6:00 AM

ಬೆಂಗಳೂರು, ಜ. 8: ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು, ಪೌಸ ಮಾಸೆ, ಕೃಷ್ಣ ಪಕ್ಷ, ಷಷ್ಠಿ ತಿಥಿ, ಉತ್ತರ ಪಾಲ್ಗುಣಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಗಳ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಮೇಷ ರಾಶಿ: ಇಂದು ಉತ್ತರ ಪಾಲ್ಗುಣಿ ನಕ್ಷತ್ರ ಇದ್ದು, ಇದರ ಅಧಿಪತಿ ರವಿ. ಹೀಗಾಗಿ ಎಲ್ಲ ರಾಶಿಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಮಧ್ಯಾಹ್ನವರೆಗೂ ಸ್ವಲ್ಪ ಕಿರಿ ಕಿರಿ ಅನುಭವವಾಗುತ್ತದೆ. ಹಣಕಾಸಿನ ವಿಚಾರವಾಗಿ ಚಿಂತೆ ಹೆಚ್ಚಾಗಿಯೆ ಇರುತ್ತದೆ. ಮಧ್ಯಾಹ್ನ ಬಳಿಕ ಶತ್ರುನಾಶ ಆಗಲಿದ್ದು, ಇಷ್ಟಾರ್ಥ ಸಿದ್ದಿಯಾಗುತ್ತದೆ.

ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಮಧ್ಯಾಹ್ನವರೆಗೂ ಸಂಸಾರದ ತಾಪತ್ರಯಗಳು ಜಾಸ್ತಿ ಇರುತ್ತವೆ. ಮಧ್ಯಾಹ್ನ ಬಳಿಕ ಹಣಕಾಸಿನ ಜವಾಬ್ದಾರಿ ಹೆಚ್ಚಾಗುತ್ತವೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಮಧ್ಯಾಹ್ನವರೆಗೆ ಬಹಳ ಅನುಕೂಲದ ಸಮಯ. ಸೋಶಿಯಲ್ ಮೀಡಿಯಾ, ಬರವಣಿಗೆ, ಮಾರ್ಕೆಂಟಿಗ್ ವ್ಯವಹಾರ ಮಾಡುವವರಿಗೆ ಉತ್ತಮ ದಿನವಾಗಲಿದೆ. ಮಧ್ಯಾಹ್ನದ ಬಳಿಕ ಸಂಸಾರದ ತಾಪತ್ರಯಗಳ ಬಗ್ಗೆ ಗಮನ‌ ನೀಡಬೇಕಾಗುತ್ತದೆ.

ಕಟಕ ರಾಶಿ: ಕಟಕ ರಾಶಿಯವರು ಮಧ್ಯಾಹ್ನವರೆಗೂ ಮನೆಯ ಬಗ್ಗೆ ಗಮನ ನೀಡಬೇಕಾಗುತ್ತದೆ. ಮಧ್ಯಾಹ್ನ ಬಳಿಕ ಸಾಮಾಜಿಕ ಚಟುವಟಿಕೆಗಳ ಮೂಲಕ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಸೋಶಿಯಲ್ ಮೀಡಿಯಾ, ಪತ್ರಿಕೋದ್ಯಮದಲ್ಲಿ ಇರುವವರಿಗೆ ಉತ್ತಮ ದಿನ.

ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ ದಿನ ಭವಿಷ್ಯ:



ಸಿಂಹ ರಾಶಿ: ಸಿಂಹ ರಾಶಿಯವರು ಮಧ್ಯಾಹ್ನವರೆಗೂ ನಿಮ್ಮಲ್ಲೇ ನೀವು ತೃಪ್ತಿ ಕಾಣುತ್ತೀರಿ.‌ ಹಿಂದಿನ ಎರಡು ಮೂರು ದಿನಗಳ ತೊಂದರೆಗಳೆಲ್ಲವೂ ಬಗೆಹರಿದು ಸೂಕ್ತ ಮಾರ್ಗದರ್ಶನ ಸಿಗುತ್ತದೆ. ಮಧ್ಯಾಹ್ನ ಬಳಿಕ ಮನೆಯವರ ಬಗ್ಗೆ ಹೆಚ್ಚಿನ ಗಮನ ನೀಡಿ ಕುಟುಂಬದ ಬಗ್ಗೆ ಯೋಚಿಸಬೇಕಾಗುತ್ತದೆ.

ಮಲಗುವ ಕೋಣೆಯಲ್ಲಿ ಈ ಒಂದು ಮೂರ್ತಿ ಇಟ್ಟರೆ ದಾಂಪತ್ಯ ಜೀವನ ಸುಖಕರವಾಗುತ್ತದೆ

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಮಧ್ಯಾಹ್ನವರೆಗೂ ಸ್ವಲ್ಪ ಕಷ್ಟದ ದಿನವಾಗಲಿದೆ. ಮಧ್ಯಾಹ್ನ ಬಳಿಕ ಮನಸ್ಸಿಗೆ ಮಾರ್ಗದರ್ಶನ ಪ್ರಾಪ್ತಿಯಾಗಲಿದ್ದು ನೆಮ್ಮದಿ ಸಿಗುತ್ತದೆ. ಮುಂದೇನು ಮಾಡಬೇಕು ಎನ್ನುವ ಬಗ್ಗೆ ಯೋಜನೆಯನ್ನು ಮಾಡಿಕೊಳ್ಳಬಹುದು.

ತುಲಾ ರಾಶಿ: ತುಲಾ ರಾಶಿಯವರಿಗೆ ಮಧ್ಯಾಹ್ನವರೆಗೂ ನೆಮ್ಮದಿ ಸಿಗಲಿದ್ದು, ಮಿತ್ರರಿಂದ ಸಂತೋಷವನ್ನು ಕಾಣುತ್ತೀರಿ. ಮಧ್ಯಾಹ್ನ ಬಳಿಕ ಪ್ರೀತಿ ಪಾತ್ರರಿಂದ ಬೇಸರವಾಗಬಹುದು‌. ಒಡಕು ಉಂಟಾಗಿ ಕ್ಲೇಶ ಕಂಡು ಬರುವ ಸಾಧ್ಯತೆ ಕೂಡ ಇದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಮಧ್ಯಾಹ್ನವರೆಗೂ ಕೂಡ ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿ ಹೆಚ್ಚಾಗಬಹುದು‌. ಮಧ್ಯಾಹ್ನ ಬಳಿಕ ಮಿತ್ರರ ಜತೆ ಸಂತೋಷದಿಂದ ಸಮಯ ಕಳೆಯಬಹುದು.

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಮಧ್ಯಾಹ್ನವರೆಗೂ ಅದೃಷ್ಟ ಅಷ್ಟು ಚೆನ್ನಾಗಿಲ್ಲ. ಮಧ್ಯಾಹ್ನ ಬಳಿಕ ಕಾರ್ಯಕ್ಷೇತ್ರದಲ್ಲಿ ಅದೃಷ್ಟ, ಯಶಸ್ಸು ಪ್ರಾಪ್ತಿಯಾಗುತ್ತದೆ.

ಮಕರ ರಾಶಿ: ಮಕರ ರಾಶಿಯವರಿಗೆ ಮಧ್ಯಾಹ್ನವರೆಗೂ ಮನಸ್ಸಿಗೆ ನಾನಾ ರೀತಿಯ ಕ್ಷೇಷ ಬರಬಹುದು. ಮಧ್ಯಾಹ್ನದ ಬಳಿಕ ಅದೃಷ್ಟ ಗೋಚರವಾಗುತ್ತದೆ.

ಕುಂಭರಾಶಿ: ಈ ರಾಶಿಯವರ ಸಮಯ ಮಧ್ಯಾಹ್ನವರೆಗೂ ತುಂಬ ಚೆನ್ನಾಗಿದೆ. ಎಲ್ಲ ಕಡೆಯಿಂದಲೂ ಸಹಕಾರ ಪ್ರಾಪ್ತಿಯಾಗುತ್ತದೆ. ಆದರೆ ಸಂಜೆ ಬೇಸರ ಮೂಡಬಹುದು.

ಮೀನ ರಾಶಿ: ಮೀನ ರಾಶಿಯವರಿಗೆ ಮಧ್ಯಾಹ್ನವರೆಗೆ ಉತ್ತಮ ದಿನವಾಗಲಿದೆ. ಇಂದು ಸಾಮಾಜಿಕ ಚಟುವಟಿಕೆಗಳಲ್ಲಿ ಬ್ಯುಸಿಯಾಗಿ ಇರುತ್ತೀರಿ‌. ಮಧ್ಯಾಹ್ನ ಬಳಿಕ ಮಿತ್ರರಿಂದ, ಮನೆಯಲ್ಲಿ ಪ್ರೀತಿ ಪಾತ್ರರಿಂದ ನೆಮ್ಮದಿ ಸಿಗುತ್ತದೆ.