ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Astro Tips: ಶನಿವಾರ ಹೀಗೆ ಮಾಡಿದರೆ ಶನಿ ದೋಷ ದೂರ ಆಗೋದು ಖಂಡಿತ

Shanivara Remedies to Remove Shani Dosha: ಶನಿವಾರದಂದು ಶನಿ ಪೂಜೆಗೆ ವಿಶೇಷ ಮಹತ್ವ ಇದ್ದು, ಶನಿವಾರದಂದು ಶನಿ ದೇವನನ್ನು ಪೂಜಿಸುವುದರಿಂದ ಶನಿ ದೋಷ ದೂರಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾದ್ರೆ ಶನಿದೇವನನ್ನು ಮೆಚ್ಚಿಸಲು ನಾವು ಶನಿವಾರ ಏನು ಮಾಡಬೇಕು..? ಎಂಬ ಮಾಹಿತಿ ಇಲ್ಲಿದೆ

ಶನಿದೇವನನ್ನು ಮೆಚ್ಚಿಸಲು  ಶನಿವಾರ ಏನು ಮಾಡಬೇಕು..?

ಶನಿ ದೇವ -

Profile
Sushmitha Jain Dec 6, 2025 7:33 AM

ಬೆಂಗಳೂರು: ಸನಾತನ ಧರ್ಮದಲ್ಲಿ(Hindu Religion) ಶನಿವಾರದ(Saturday) ದಿನವನ್ನು ನ್ಯಾಯ, ಶಿಸ್ತಿನ ಪ್ರತಿನಿಧಿಯಾದ ಶನಿ ದೇವರಿಗೆ(Shanidev) ಮೀಸಲಿಡಲಾಗುತ್ತದೆ. ಕರ್ಮಫಲದ ದೇವರಾದ ಶನಿ, ವ್ಯಕ್ತಿಯ ನಡವಳಿಕೆ ಮತ್ತು ಕರ್ಮಕ್ಕೆ ಅನುಗುಣವಾಗಿ ಶುಭ–ಅಶುಭ ಫಲಗಳನ್ನು ನೀಡುತ್ತಾನೆ ಎಂದು ಧಾರ್ಮಿಕ ನಂಬಿಕೆ. ಜ್ಯೋತಿಷ್ಯ ಶಾಸ್ತ್ರದಲ್ಲಿಯೂ(Astro Tips) ಶನಿಯ ಪ್ರಭಾವ ಅತಿ ಮಹತ್ವದ್ದಾಗಿದ್ದು, ಶನಿ ವಕ್ರ ದ್ರಷ್ಟಿಯಿಂದಾಗಿ ಜೀವನದಲ್ಲಿ ಅಡೆತಡೆಗಳು, ಹಣಕಾಸಿನ ತೊಂದರೆಗಳು, ಮಾನಸಿಕ ಒತ್ತಡ ಮುಂತಾದವುಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಶನಿವಾರದಂದು ಶನಿದೇವರನ್ನು ಸಮರ್ಪಕವಾಗಿ ಪೂಜಿಸುವುದು ಅತ್ಯಂತ ಶುಭಕರ.

ಹಾಗಾದ್ರೆ ಶನಿಯ ಕೃಪೆಗೆ ಪಾತ್ರರಾಗಲು ಏನು ಮಾಡಬೇಕು..? ಯಾವ ನಿಯಮ ಪಾಲಿಸಿದರೆ ಶನಿ ಸಂತುಸ್ತಗೊಳ್ಳುತಾನೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ

ಕಪ್ಪು ಎಳ್ಳು ಅರ್ಘ್ಯ

ಶನಿವಾರ, ಪ್ರಾತಃಕಾಲದ ಸ್ನಾನದ ನಂತರ ಕಪ್ಪು ಬಟ್ಟೆಯನ್ನು ಧರಿಸುವುದು ಶುಭಕರ. ಈ ನಂತರ ಅರಳಿ ಮರಕ್ಕೆ ಕಪ್ಪು ಎಳ್ಳು ಮಿಶ್ರಿತ ನೀರಿನ ಅರ್ಘ್ಯ ಅರ್ಪಿಸುವುದು ಅತ್ಯಂತ ಫಲಪ್ರದ ಎಂದು ಶಾಸ್ತ್ರ ಹೇಳುತ್ತದೆ. ಅರಳಿ ಮರದಲ್ಲಿ ವಿಷ್ಣು–ಲಕ್ಷ್ಮಿಯ ವಾಸವಿದ್ದಾರೆ ಎಂಬ ನಂಬಿಕೆ ಇದ್ದು, ಇಲ್ಲಿ ದೀಪ ಬೆಳಗಿಸಿ ಪ್ರದಕ್ಷಿಣೆ ಹಾಕುವುದರಿಂದ ಪೂರ್ವ ಜನ್ಮದ ಪಾಪ ಮತ್ತು ಶನಿ ದೋಷ ನಿವಾರಣೆಯಾಗುತ್ತದೆ. ಈ ಕ್ರಮಗಳನ್ನು ಪಾಲಿಸಿದರೆ, ಶನಿಯ ವಕ್ರ ದ್ರಷ್ಟಿಯಿಂದ ರಕ್ಷಣೆ ದೊರೆಯುವುದರ ಜೊತೆಗೆ, ಲಕ್ಷ್ಮಿ–ವಿಷ್ಣುವಿನ ಅನುಗ್ರಹವೂ ಲಭಿಸುತ್ತದೆ.

ಈ ಸುದ್ದಿಯನ್ನು ಓದಿ:Vastu Tips: ನಿಮ್ಮ ಮನೆಯ ಪೂಜಾ ಕೋಣೆಗೆ ಯಾವ ಬಣ್ಣ ಹಾಕಿದ್ದರೆ ಒಳ್ಳೆಯದು? ಇಲ್ಲಿದೆ ಉತ್ತರ

ಹಣಕಾಸಿನ ಸಮಸ್ಯೆ ಪರಿಹಾರಕ್ಕಾಗಿ

ಶನಿ ದೇವನು ಮಹಾದೇವನ ಪರಮಭಕ್ತ ಎಂಬ ಕಾರಣದಿಂದ, ಈ ದಿನ ಶಿವ ಪೂಜೆ ಮಾಡಿದರೆ ಶನಿಯ ಅನುಗ್ರಹ ಹೆಚ್ಚು ದೊರೆಯುತ್ತದೆ. ಸ್ನಾನದ ನಂತರ ಗಂಗಾಜಲಕ್ಕೆ ಕಪ್ಪು ಎಳ್ಳು ಮತ್ತು ಬಿಲ್ವಪತ್ರೆ ಸೇರಿಸಿ ಶಿವನಿಗೆ ಅಭಿಷೇಕ ಮಾಡಿದರೆ, ಜಾತಕದಲ್ಲಿರುವ ಗ್ರಹಚಾರ ದೋಷ ನಿವಾರಣೆಯಾಗಲಿದ್ದು, ಇದರಿಂದ ಹಣಕಾಸಿನ ಅಡಚಣೆಗಳು ಮತ್ತು ಅಗತ್ಯವಿಲ್ಲದ ವೆಚ್ಚಗಳೂ ನಿಯಂತ್ರಣಕ್ಕೆ ಬರುತ್ತವೆ.

ಶನಿ ದೋಷ ನಿವಾರಣೆಗಾಗಿ ಹನುಮಂತನ ಆರಾಧನೆ

ರಾವಣನ ಬಂಧನದಿಂದ ಶನಿಯನ್ನು ಮುಕ್ತಗೊಳಿಸಿದವರು ಹನುಮಂತನೆಂಬ ಉಲ್ಲೇಖ ಇದ್ದು, ಅದರಿಂದಲೇ ಶನಿದೇವನು ಹನುಮ ಭಕ್ತರಿಗೆ ಕೇಡು ಮಾಡುವುದಿಲ್ಲ ಎಂದು ನಂಬಲಾಗಿದೆ. ಆದ್ದರಿಂದ ಶನಿವಾರದಂದು ಹನುಮಾನ್ ಚಾಲೀಸಾ ಪಠಣೆ, ಲಡ್ಡು, ಕೆಂಪು ಹೂವು, ಹಣ್ಣುಗಳ ಅರ್ಪಣೆ ಬಹಳ ಶುಭಕರ. ಇದರಿಂದ ಆರ್ಥಿಕ ಬಿಕ್ಕಟ್ಟುಗಳಿಂದ ಮುಕ್ತವಾಗುವುದರ ಜೊತೆಗೆ ಸಾಲದಿಂದಲೂ ಮುಕ್ತಿ ಪಡೆಯಬಹುದಾಗಿದೆ.

ಒಟ್ಟಾರೆ ಶನಿವಾರದಂದು ಶನಿದೇವ, ಶಿವ ಮತ್ತು ಹನುಮಂತನ ಆರಾಧನೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಪಾಪ ಕ್ಷಯ, ಆರ್ಥಿಕ ಸುಧಾರಣೆ ಮತ್ತು ಸಾಡೇಸಾತಿಯ ಅಶುಭ ಪರಿಣಾಮ ನಿವಾರಣೆಗೆ ಪರಿಣಾಮಕಾರಿ. ನಿಯಮಿತ ಪೂಜೆ ಮತ್ತು ಸರಳ ಪಾರಂಪರಿಕ ಕ್ರಮಗಳು ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ನೀಡುತ್ತವೆ ಎಂದು ಶಾಸ್ತ್ರ ಹೇಳುತ್ತದೆ.