ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Sankashti Chaturthi: ದ್ವಿಜಪ್ರಿಯ ಸಂಕಷ್ಟ ಚತುರ್ಥಿ 2026: ಪೂಜೆ ವಿಧಾನ, ಶುಭ ಮುಹೂರ್ತ ಮತ್ತು ಮಹತ್ವ

ದ್ವಿಜಪ್ರಿಯ ಸಂಕಷ್ಟ ಚತುರ್ಥಿಯನ್ನು ಮಾಘ ಮಾಸದ ಕೃಷ್ಣ ಪಕ್ಷದ ಚತುರ್ಥಿ ದಿನದಂದು ಆಚರಿಸಲಾಗುತ್ತದೆ. ಈ ದಿನ ವಿಘ್ನಹರನಾದ ಶ್ರೀ ಗಣೇಶನನ್ನು ಪೂಜಿಸಿ ಉಪವಾಸ ಮಾಡುವುದರಿಂದ ಜೀವನದ ಸಂಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ವಿಧಿವಿಧಾನಗಳಂತೆ ಪೂಜೆ ಸಲ್ಲಿಸಿ, ದೂರ್ವೆ, ಮೋದಕ ಮತ್ತು ಬೆಲ್ಲದ ಲಡ್ಡುಗಳನ್ನು ಅರ್ಪಿಸುವುದು ಶುಭಕರ.

ಗಣೇಶ

ಬೆಂಗಳೂರು: ಹಿಂದೂ ಧರ್ಮದಲ್ಲಿ (Hindu Religion) ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ಥಿ ತಿಥಿಯಂದು ಆಚರಿಸುವ ಪ್ರಮುಖ ವ್ರತವೇ ಸಂಕಷ್ಟ ಚತುರ್ಥಿ (Sankashti Chaturthi 2026) ಈ ದಿನವನ್ನು ಸಂಕಟ ಹರಣ ಚತುರ್ಥಿ ಎಂದೂ ಕರೆಯಲಾಗುತ್ತದೆ. ವಿಘ್ನ ವಿನಾಶಕನಾದ ಶ್ರೀ ಗಣೇಶನನ್ನು ಈ ದಿನ ಭಕ್ತಿಯಿಂದ ಪೂಜಿಸಿದರೆ ಜೀವನದ ಎಲ್ಲಾ ಸಂಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.
ಪಂಚಾಂಗದ ಪ್ರಕಾರ, ಮಾಘ ಮಾಸದ ಕೃಷ್ಣ ಪಕ್ಷದ ಸಂಕಷ್ಟ ಚತುರ್ಥಿ ದ್ವಿಜಪ್ರಿಯ ಸಂಕಷ್ಟ ಚತುರ್ಥಿ (Dwija Priya Sankashti Chaturthi) ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಈ ಪವಿತ್ರ ದಿನದಂದು ಉಪವಾಸ ಆಚರಿಸಿ, ವಿಧಿವಿಧಾನಗಳೊಂದಿಗೆ ಗಣೇಶ ಪೂಜೆ ಮಾಡುವ ಪದ್ಧತಿ ಇದೆ.

ಮಹತ್ವ

ದ್ವಿಜಪ್ರಿಯ ಸಂಕಷ್ಟ ಚತುರ್ಥಿಯಂದು ಬಡವರು ಹಾಗೂ ನಿರ್ಗತಿಕರಿಗೆ ಅನ್ನ, ಬಟ್ಟೆ ಮತ್ತು ಅಗತ್ಯ ವಸ್ತುಗಳನ್ನು ದಾನ ಮಾಡುವುದರಿಂದ ಪುಣ್ಯಫಲ ದೊರೆಯುತ್ತದೆ. ವಿಶೇಷವಾಗಿ ವ್ಯಾಪಾರ ಮತ್ತು ಉದ್ಯೋಗದಲ್ಲಿ ಯಶಸ್ಸು ಪಡೆಯಲು, ಗಣೇಶನಿಗೆ 21 ಗಂಟು ದುರ್ವಾ ಹಾಗೂ ಬೆಲ್ಲದ ಲಡ್ಡುಗಳನ್ನು ಅರ್ಪಿಸುವುದು ಅತ್ಯಂತ ಶುಭಕರವೆಂದು ಶಾಸ್ತ್ರಗಳು ಹೇಳುತ್ತವೆ. ಈ ಪರಿಹಾರವನ್ನು ನಿಷ್ಠೆಯಿಂದ ಅನುಸರಿಸಿದರೆ ವ್ಯವಹಾರದಲ್ಲಿ ವೇಗವಾದ ಪ್ರಗತಿ ಕಾಣಬಹುದು ಎನ್ನಲಾಗುತ್ತದೆ.
ಈ ದಿನವನ್ನು ಗಣೇಶನಿಗೆ ಅತ್ಯಂತ ಪ್ರಿಯವಾದ ದಿನವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಭಕ್ತಿಯಿಂದ ಪೂಜೆ ಸಲ್ಲಿಸಿದವರ ಇಷ್ಟಾರ್ಥಗಳು ನೆರವೇರುತ್ತವೆ. ಮಕ್ಕಳ ಸುಖ, ಕುಟುಂಬದಲ್ಲಿ ಶಾಂತಿ, ಜ್ಞಾನ, ಬುದ್ಧಿವಂತಿಕೆ ಮತ್ತು ಸಮೃದ್ಧಿಗಾಗಿ ಈ ವ್ರತವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ, ಈ ವ್ರತದಿಂದ ಪಾಪ ನಿವಾರಣೆ ಆಗಿ ಮಾನಸಿಕ ಶಾಂತಿ ಮತ್ತು ಸಂತೋಷ ದೊರೆಯುತ್ತದೆ.

ದ್ವಿಜಪ್ರಿಯ ಸಂಕಷ್ಟ ಚತುರ್ಥಿ – ಶುಭ ಮುಹೂರ್ತಗಳು

ದಿನಾಂಕ: 2026ರ ಫೆಬ್ರವರಿ 5, ಗುರುವಾರ
ಸಂಕಷ್ಟ ಚತುರ್ಥಿ ಸಮಯ: ಬೆಳಗ್ಗೆ 5:22 ರಿಂದ ಮಧ್ಯಾಹ್ನ 1:57
ಬ್ರಹ್ಮ ಮುಹೂರ್ತ: ಬೆಳಗ್ಗೆ 5:22 ರಿಂದ 6:15
ಅಭಿಜಿತ್ ಮುಹೂರ್ತ: ಮಧ್ಯಾಹ್ನ 12:13 ರಿಂದ 12:57
ಚಂದ್ರೋದಯ: ರಾತ್ರಿ 9:35 (ಸ್ಥಳಾನುಸಾರ ಬದಲಾವಣೆ ಸಾಧ್ಯ)

Astro Tips: ಈ ರತ್ನಗಳನ್ನು ಒಟ್ಟಿಗೆ ಧರಿಸಿದರೆ ಸಮಸ್ಯೆಗಳು ಎದುರಾಗುತ್ತದೆ ಎಚ್ಚರ!

ಪೂಜೆ ವಿಧಾನ

ಈ ದಿನ ಬೆಳಗ್ಗೆ ಸ್ನಾನಾದಿ ಕ್ರಮಗಳ ನಂತರ, ಮರದ ಪೀಠದ ಮೇಲೆ ಕೆಂಪು ಬಟ್ಟೆಯನ್ನು ಹಾಸಿ ಗಣೇಶನ ಮೂರ್ತಿಯನ್ನು ಸ್ಥಾಪಿಸಿ. ಹಳದಿ ಚೆಂಡು ಹೂವು, ಐದು ಹಸಿರು ದುರ್ವಾ, ವೀಳ್ಯದೆಲೆ, ಹಣ್ಣು ಮತ್ತು ಮೋದಕಗಳನ್ನು ಅರ್ಪಿಸಿ ಪೂಜೆ ನೆರವೇರಿಸಿ. ನಿಮ್ಮ ಮನಸ್ಸಿನ ಆಸೆ ಅಥವಾ ನಿರ್ದಿಷ್ಟ ಗುರಿಯನ್ನು ಸಂಕಲ್ಪಿಸಿಕೊಂಡು ಗಣೇಶನನ್ನು ಪೂಜಿಸಿದರೆ, ಅದರಲ್ಲಿ ಯಶಸ್ಸು ದೊರೆಯುತ್ತದೆ ಎಂಬ ನಂಬಿಕೆ ಇದೆ. ಸಾಧ್ಯವಾದರೆ ಆನೆಗೆ ಹಸಿರು ಮೇವು ಅಥವಾ ಕಬ್ಬು ತಿನ್ನಿಸುವುದೂ ಶುಭಕರ.

ದ್ವಿಜಪ್ರಿಯ ಸಂಕಷ್ಟ ಚತುರ್ಥಿ ಮಂತ್ರಗಳು

ಓಂ ಗಣ ಗಣಪತಯೇ ನಮಃ
ಓಂ ಗಂ ಗಣಪತಯೇ ನಮಃ
ಓಂ ವಕ್ರತುಂಡಾಯ ಹುಂ
ಓಂ ಏಕದಂತಾಯ ನಮಃ
ಓಂ ಲಂಬೋದರಾಯ ನಮಃ
ಓಂ ವಿಘ್ನನಾಶಾಯ ನಮಃ