ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶರದೃತು, ಪಾಲ್ಗುಣಿ ಮಾಸೆ, ಆಶ್ವಿನಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಇಂದು ಅಶ್ವಿನಿ ನಕ್ಷತ್ರ ಇದ್ದು ಅಧಿಪತಿ ಕೇತು ಆಗಿದ್ದಾನೆ. ಹಾಗಾಗಿ ಹೆಚ್ಚಿನವರಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಹಿಂದಿನ ಎರಡು ಮೂರು ದಿನದಲ್ಲಿ ಇದ್ದ ಕ್ಲೇಶ ಎಲ್ಲವೂ ಮಾಯವಾಗುತ್ತೆ.
ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಕಷ್ಟಕರವಾದ ದಿನವಾಗಿದೆ. ಮುಖ್ಯವಾದ ನಿರ್ಧಾರಗಳು ಯಾವುದೇ ನಿಮ್ಮ ಪರವಾಗಿ ನಡೆಯುವುದಿಲ್ಲ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಇಷ್ಟಾರ್ಥ ಸಿದ್ದಿಯಾಗಲಿದ್ದು ಮಿತ್ರರಿಂದ ಉತ್ತಮವಾಗಲಿದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಕಾರ್ಯಕ್ಷೇತ್ರದಲ್ಲಿ ಅತೀ ಹೆಚ್ಚಿನ ಯಶಸ್ಸು ಸಿಗುತ್ತದೆ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಅತೀ ಹೆಚ್ಚಿನ ಯಶಸ್ಸು ನಿಮ್ಮದು ಆಗುತ್ತದೆ.
ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಭಾಗ್ಯೋದಯವಾದ ದಿನ ವಾಗಿದ್ದು ಹಿಂದಿನ ಎರಡು ಮೂರು ದಿನದಲ್ಲಿ ಇದ್ದ ಮನಸ್ಸಿನ ಕ್ಲೇಶ ಎಲ್ಲವೂ ಇಂದು ಬಗೆಹರಿಯುತ್ತದೆ.
Vastu Tips: ಮನೆಯ ಸಮೃದ್ಧಿಗೆ ಬೆಸ್ಟ್ ಈ ದಿಕ್ಕು; ಆದ್ರೆ ಅಲ್ಲಿ ಮಲಗುವ ಕೋಣೆ ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ಇಂದು ಆತಂಕಗಳು ಜಾಸ್ತಿಯಾಗುವ ಸಾಧ್ಯತೆ ಇರುತ್ತದೆ. ಧನ್ಯಾದಿಗಳನ್ನು ಮಾಡುವ ಮೂಲಕ ಸಮಯ ಕಳೆಯಬೇಕಾಗುತ್ತದೆ.
ತುಲಾ ರಾಶಿ: ತುಲಾ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಪ್ರೀತಿ ಪಾತ್ರರಿಂದ ಇಂದು ಮನಸ್ಸಿಗೆ ಅಕ್ಕರೆ ಪ್ರಾಪ್ತಿ ಯಾಗುತ್ತದೆ. ಆದ್ದರಿಂದ ಬೇರೆಯವರ ಸಹಕಾರದಿಂದ ನಿಮಗೆ ಖುಷಿ ಸಿಗುತ್ತದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಸಾಮಾಜಿಕ ಚಟುವಟಿಕೆಯಲ್ಲಿ ಶತ್ರುಗಳು ಹಿಮ್ಮೆಟ್ಟಬಹುದು. ಖುಷಿಯಿಂದ ನೀವು ದಿನವನ್ನು ಕಳೆಯಲಿದ್ದೀರಿ.
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಸ್ವಲ್ಪ ಕಷ್ಟಕರವಾದ ದಿನವಾಗಿದೆ. ಆದ್ದರಿಂದ ನಿಮ್ಮ ಬುದ್ಧಿಶಕ್ತಿಯನ್ನು ಬಳಸಿಕೊಂಡು ನೀವು ಕೆಲಸ ಕಾರ್ಯಗಳನ್ನು ಮಾಡಬೇಕಾಗುತ್ತದೆ.ಎಲ್ಲ ಕೆಲಸದಲ್ಲೂ ನೀವು ಜಯವನ್ನು ಕಾಣಬಹುದು. ಮಕ್ಕಳು ಇರುವ ಪೋಷಕರಿಗೆ ಇಂದು ಕಿರಿಕಿರಿ ಆಗಬಹುದು.
ಮಕರ ರಾಶಿ: ಮಕರ ರಾಶಿಯವರಿಗೆ ಆಸ್ತಿ ಪಾಸ್ತಿ ವಿಚಾರವಾಗಿ ಹಾಗೂ ತಾಯಿಯ ಆರೋಗ್ಯದ ಬಗ್ಗೆ ಬೇಸರ ವಾಗಬಹುದು. ಇಂದು ಯಾವುದೇ ಮುಖ್ಯ ನಿರ್ಧಾರಗಳು ಬೇಡ.
ಕುಂಭರಾಶಿ: ಈ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಮೀಡಿಯಾ, ಸೇಲ್ಸ್, ಮಾರುಕಟ್ಟೆ ಕೆಲಸದಲ್ಲಿ ಇರೋರಿಗೆ ಅತೀ ಉತ್ತಮವಾದ ದಿನವಾಗಿದೆ. ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸು ಸಿಗುತ್ತದೆ.
ಮೀನ ರಾಶಿ: ಮೀನ ರಾಶಿಗೆ ಅತೀ ಉತ್ತಮವಾದ ದಿನವಾಗಿದೆ.. ಕುಟುಂಬದಲ್ಲಿ ನೆಮ್ಮದಿ ಇದ್ದು ಸುಖಕರವಾಗಿ ನೀವು ದಿನವನ್ನು ಕಳೆಯುತ್ತೀರಿ.