ಬೆಂಗಳೂರು: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.
ಮೇಷ ರಾಶಿ: ಈ ರಾಶಿಗೆ ಕೆಲಸ ಕಾರ್ಯದಲ್ಲಿ ಹೊಸ ಅವಕಾಶಗಳು ಸಿಗಬಹುದು. ಆದರೆ ಹಣಕಾಸಿನ ವಿಚಾರದಲ್ಲಿ ನೀವು ಎಚ್ಚರಿಕೆ ಕೈಗೊಳ್ಳುವುದು ಅಗತ್ಯ.
ವೃಷಭ ರಾಶಿ: ಬಹುದಿನಗಳಿಂದ ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ. ಹಣಕಾಸಿನ ವಿಚಾರದಲ್ಲಿ ಅತೀ ಹೆಚ್ಚಿನ ಲಾಭವನ್ನು ನೀವಿಂದುಗಳಿಸುತ್ತೀರಿ.ಆದರೆ ಕೆಲವು ನಿರ್ಧಾರ ಕೈಗೊಳ್ಳುವಾಗ ಜಾಗೃತರಾಗಿರಿ.
ಮಿಥುನ ರಾಶಿ: ಈ ರಾಶಿಗೆ ನಿಮ್ಮ ಮಾತುಕತೆ ಮತ್ತು ಪ್ರಯತ್ನಗಳಿಂದ ಉತ್ತಮ ಫಲಿತಾಂಶವನ್ನು ನೀವು ಪಡೆಯಬಹುದು. ಉದ್ಯೋಗದಲ್ಲಿ ಬಾಸ್ ಗಳಿಂದ ಪ್ರತಿಷ್ಠೆ ಹೆಚ್ಚಾಗುತ್ತದೆ.
ಕಟಕ ರಾಶಿ: ಈ ರಾಶಿಗೆ ಮನೆಯವರೊಂದಿಗೆ ಇಂದು ಜಗಳ ಉಂಟಾಗಬಹುದು. ಆದರೆ ಹೊಸ ಯೋಜನೆ ಆರಂಭಿಸಲು ಅನುಕೂಲಕರ ದಿನವಾಗಿದೆ.
ಸಿಂಹ ರಾಶಿ: ಈ ರಾಶಿಯವರು ಇಂದು ವೃತ್ತಿಜೀವನದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಹಣಕಾಸಿನ ಸುಧಾರಣೆಗಳು ಇಂದು ಆಗುತ್ತವೆ
ಕನ್ಯಾ ರಾಶಿ: ಈ ರಾಶಿಗೆ ಇಂದು ಕೆಲಸದ ಒತ್ತಡ ಹೆಚ್ಚಾಗಬಹುದು, ಆದರೆ ನಿಮ್ಮ ಪರಿಶ್ರಮಕ್ಕೆ ತಕ್ಕ ಮೆಚ್ಚುಗೆ ದೊರೆಯುತ್ತದೆ
Vastu Tips; ಕರ್ಪೂರದಿಂದ ಮನೆಯ ವಾಸ್ತು ದೋಷ ನಿವಾರಣೆ: ಆರ್ಥಿಕ ಸಮಸ್ಯೆ, ಕಲಹಗಳಿಗೆ ಇಲ್ಲಿದೆ ಪರಿಹಾರ
ತುಲಾ ರಾಶಿ: ಈ ರಾಶಿಗೆ ಸಂಬಂಧಗಳಲ್ಲಿ ಉತ್ತಮ ಬಾಂಧವ್ಯ ಹೊಂದುತ್ತೀರಿ. ಹೊಸ ಪರಿಚಯಗಳು ಭವಿಷ್ಯದಲ್ಲಿ ಸಹಕಾರಿಯಾಗಬಹುದು.
ವೃಶ್ಚಿಕ ರಾಶಿ: ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಪಡೆಯುವ ಸಾಧ್ಯತೆ ಇದೆ. ಖರ್ಚು ವೆಚ್ಚಗಳು ಕೂಡ ಇಂದು ಸುಧಾರಣೆಯಾಗುತ್ತದೆ.
ಧನು ರಾಶಿ: ಈ ರಾಶಿಗೆ ಇಂದು ದೂರದ ಪ್ರಯಾಣ ಅಥವಾ ಹೊಸ ಅವಕಾಶ ಎದುರಾಗಬಹುದು. ಆರ್ಥಿಕವಾಗಿ ಉತ್ತಮ ದಿನವಾಗಿದೆ.
ಮಕರ ರಾಶಿ: ವೃತ್ತಿಯಲ್ಲಿ ಪ್ರಗತಿಯ ಸೂಚನೆಗಳಿವೆ. ಬಾಕಿ ಇರುವ ಹಣ ನಿಮಗೆ ವಾಪಸ್ಸು ಬರುತ್ತದೆ.
ಕುಂಭ ರಾಶಿ: ಹೊಸ ವಿಚಾರಗಳು ಮತ್ತು ಯೋಜನೆಗಳು ನೀವು ಅಂದುಕೊಂಡ ರೀತಿ ಆಗುತ್ತದೆ. ಆಸ್ತಿ ವಿಚಾರದಲ್ಲಿ ಲಾಭ ಗಳಿಸುತ್ತೀರಿ
ಮೀನ ರಾಶಿ: ಈ ರಾಶಿಗೆ ಕುಟುಂಬದಲ್ಲಿ ಶುಭ ಸುದ್ದಿ ಕೇಳುವ ಸಾಧ್ಯತೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಅನುಕೂಲಕರ ದಿನವಾಗಿದೆ.