Vastu Tips; ಕರ್ಪೂರದಿಂದ ಮನೆಯ ವಾಸ್ತು ದೋಷ ನಿವಾರಣೆ: ಆರ್ಥಿಕ ಸಮಸ್ಯೆ, ಕಲಹಗಳಿಗೆ ಇಲ್ಲಿದೆ ಪರಿಹಾರ
ಕರ್ಪೂರವನ್ನು ಬಳಸಿ ಮನೆಯ ವಾಸ್ತು ದೋಷಗಳನ್ನು ನಿವಾರಿಸಿ, ಆರ್ಥಿಕ ಸಮಸ್ಯೆಗಳು, ಕುಟುಂಬದ ಕಲಹಗಳು ಹಾಗೂ ದಾಂಪತ್ಯ ವೈಮನಸ್ಯವನ್ನು ಕಡಿಮೆ ಮಾಡಬಹುದು ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಹಾಗಾದರೆ, ಕರ್ಪೂರವನ್ನು ಬಳಸಿ ಮನೆಯ ವಾಸ್ತು ದೋಷಗಳನ್ನು ಹೇಗೆ ಸರಿಪಡಿಸಬಹುದು ಎಂಬುದನ್ನು ನೋಡೋಣ.
ವಾಸ್ತು ಶಾಸ್ತ್ರ -
ಬೆಂಗಳೂರು: ಪೂಜೆಯಲ್ಲಿ ಬಳಸುವ ಕರ್ಪೂರವು ಕೇವಲ ಧಾರ್ಮಿಕ ಮಹತ್ವವಷ್ಟೇ ಅಲ್ಲ, ವಾಸ್ತು ಶಾಸ್ತ್ರದಲ್ಲಿಯೂ(Vastu Shastra) ವಿಶೇಷ ಸ್ಥಾನ ಹೊಂದಿದೆ. ಕರ್ಪೂರದ ಸಣ್ಣ ತುಂಡು ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಯನ್ನು(Negative Energy) ದೂರ ಮಾಡಿ ಧನಾತ್ಮಕ ವಾತಾವರಣವನ್ನು ನಿರ್ಮಿಸುತ್ತದೆ ಎಂದು ನಂಬಲಾಗಿದೆ. ಅನೇಕ ವಾಸ್ತು ದೋಷಗಳನ್ನು ನಿವಾರಿಸುವ ಶಕ್ತಿಯು ಕರ್ಪೂರಕ್ಕಿದೆ ಎನ್ನಲಾಗುತ್ತದೆ. ಜೊತೆಗೆ, ಆರ್ಥಿಕ ಸಮಸ್ಯೆಗಳು, ಕುಟುಂಬದ ಕಲಹಗಳು ಹಾಗೂ ದಾಂಪತ್ಯ ವೈಮನಸ್ಯವನ್ನು ಕಡಿಮೆ ಮಾಡಲು ಸಹ ಇದು ಉಪಯುಕ್ತವೆಂದು ಹೇಳಲಾಗುತ್ತದೆ. ಹಾಗಾದರೆ, ಕರ್ಪೂರವನ್ನು ಬಳಸಿ ಮನೆಯ ವಾಸ್ತು ದೋಷಗಳನ್ನು(Vastu Dosha) ಹೇಗೆ ಸರಿಪಡಿಸಬಹುದು, ಈ ಕುರಿತು ವಾಸ್ತು ಸಲಹೆ (Vastu Tips) ಎಂಬುದನ್ನು ನೋಡೋಣ.
ಉದ್ಯೋಗ ಮತ್ತು ವ್ಯವಹಾರದಲ್ಲಿ
ಪ್ರಗತಿಗಾಗಿ ಉದ್ಯೋಗದಲ್ಲಿ ಬಡ್ತಿ ಅಥವಾ ವ್ಯವಹಾರದಲ್ಲಿ ಬೆಳವಣಿಗೆ ಬಯಸುವವರು ಅಡುಗೆ ಕೆಲಸಗಳನ್ನೆಲ್ಲ ಮುಗಿಸಿದ ನಂತರ ಒಂದು ಪಾತ್ರೆಯಲ್ಲಿ ಕರ್ಪೂರ ಮತ್ತು ಲವಂಗವನ್ನು ಉರಿಸಬೇಕು. ಇದರಿಂದ ಮನೆಯ ಸದಸ್ಯರ ಜೀವನದಲ್ಲಿ ಪ್ರಗತಿ ಉಂಟಾಗಿ, ಹೊಸ ಅವಕಾಶಗಳು ದೊರೆಯಲು ಸಹಾಯಕವಾಗುತ್ತದೆ ಎಂದು ನಂಬಲಾಗುತ್ತದೆ.
ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಲು
ಆದಾಯಕ್ಕಿಂತ ಖರ್ಚು ಹೆಚ್ಚು ಆಗುವುದು, ಸಾಲದ ಬಾಧೆ ಹೆಚ್ಚಾಗುವುದು ಇತ್ಯಾದಿ ಸಮಸ್ಯೆಗಳು ಮನೆಯ ಅಡುಗೆಮನೆಯ ವಾಸ್ತು ದೋಷದಿಂದಲೂ ಆಗಬಹುದು ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಇದಕ್ಕಾಗಿ ಅಡುಗೆಮನೆಯಲ್ಲಿ ಬೆಳ್ಳಿಯ ಪಾತ್ರೆಯಲ್ಲಿ ಕರ್ಪೂರ ಮತ್ತು ಲವಂಗವನ್ನು ಸುಟ್ಟುಹಾಕುವುದು ಉತ್ತಮ. ಪ್ರತಿದಿನ ಹೀಗೆ ಮಾಡಿದರೆ ತಾಯಿ ಲಕ್ಷ್ಮಿಯ ಕೃಪೆ ದೊರೆಯುತ್ತದೆ ಮತ್ತು ಆರ್ಥಿಕ ಸಂಕಷ್ಟಗಳು ಕಡಿಮೆಯಾಗುತ್ತವೆ ಎನ್ನಲಾಗುತ್ತದೆ. ಆಗ್ನೇಯ ದಿಕ್ಕಿನಲ್ಲಿ ಕರ್ಪೂರ ಹಚ್ಚುವುದು ವಿಶೇಷ ಫಲ ನೀಡುತ್ತದೆ.
Vastu Tips: Vastu Tips: ಈ ವಾಸ್ತು ನಿಯಮಗಳನ್ನು ಪಾಲಿಸಿದ್ರೆ ಮನೆಯಲ್ಲಿ ಅತ್ತೆ-ಸೊಸೆ ಜಗಳವೇ ಇರೊಲ್ಲ!
ಕುಟುಂಬದ ಕಲಹಗಳನ್ನು ದೂರ ಮಾಡಲು
ಕುಟುಂಬದಲ್ಲಿ ಅನಾವಶ್ಯಕ ಜಗಳಗಳು, ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತಿದ್ದರೆ ಕರ್ಪೂರವನ್ನು ದೇಸಿ ತುಪ್ಪದಲ್ಲಿ ನೆನೆಸಿ ಪ್ರತಿದಿನ ಉರಿಸಬೇಕು. ಅದರ ಪರಿಮಳ ಮನೆ ತುಂಬ ಹರಡುವಂತೆ ನೋಡಿಕೊಳ್ಳಬೇಕು. ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಿ ಶಾಂತಿ ಮತ್ತು ಸಂತೋಷ ನೆಲೆಸುತ್ತದೆ ಎಂದು ನಂಬಲಾಗಿದೆ.
ಪತಿ-ಪತ್ನಿಯರ ನಡುವೆ ಪ್ರೀತಿ ಹೆಚ್ಚಿಸಲು
ದಾಂಪತ್ಯ ಜೀವನದಲ್ಲಿ ಕಲಹಗಳು ಹೆಚ್ಚಾದರೆ ರಾತ್ರಿ ವೇಳೆ ಕರ್ಪೂರವನ್ನು ಗಂಡನ ದಿಂಬಿನ ಕೆಳಗೆ ಇಟ್ಟು, ಮರುದಿನ ಬೆಳಿಗ್ಗೆ ಅದನ್ನು ಯಾರಿಗೂ ತಿಳಿಯದಂತೆ ಸುಡಬೇಕು. ಹೀಗೆ ಮಾಡುವುದರಿಂದ ಪತಿ-ಪತ್ನಿಯರ ನಡುವೆ ಇರುವ ವೈಮನಸ್ಯ ಕಡಿಮೆಯಾಗುತ್ತದೆ ಹಾಗೂ ಪರಸ್ಪರ ಪ್ರೀತಿ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ ರಾಹುವಿನ ದುಷ್ಪರಿಣಾಮವೂ ಶಮನವಾಗುತ್ತದೆ.
ಮನೆಯ ವಾಸ್ತು ದೋಷ ನಿವಾರಣೆಗೆ ಮನೆಯ ಪ್ರತಿಯೊಂದು ಕೋಣೆಯಲ್ಲೂ ಕರ್ಪೂರದ ಸಣ್ಣ ತುಂಡುಗಳನ್ನು ಇಡಬೇಕು. ಅವು ಕರಗಿದ ನಂತರ ಹೊಸ ಕರ್ಪೂರವನ್ನು ಅದೇ ಸ್ಥಳದಲ್ಲಿ ಇಡಬೇಕು. ಈ ಕ್ರಮವನ್ನು ನಿರಂತರವಾಗಿ ಮಾಡಿದರೆ ಮನೆಯ ಮೇಲಿರುವ ವಾಸ್ತು ದೋಷಗಳ ಪರಿಣಾಮ ಕಡಿಮೆಯಾಗುತ್ತದೆ ಮತ್ತು ಮನೆಯ ವಾತಾವರಣ ಶುಭಕರವಾಗುತ್ತದೆ ಎಂದು ನಂಬಲಾಗಿದೆ.