Vastu Tips: ಬೆಳಗ್ಗೆ ಕಸ ಗುಡಿಸುವಾಗ ಈ ನಿಯಮ ಪಾಲಿಸಿ; ಮನೆಗೆ ಸಂಪತ್ತು ಆಕರ್ಷಿಸಿ
ಪ್ರತಿಯೊಂದು ಮನೆಯಲ್ಲೂ ಸಾಮಾನ್ಯವಾಗಿ ಬೆಳಗ್ಗೆ ಕಸ ಗುಡಿಸಿ ಸ್ವಚ್ಛಗೊಳಿಸುವ ವಾಡಿಕೆ ಇದೆ. ಆದರೆ ಈ ಸಂದರ್ಭದಲ್ಲಿ ಕೆಲವೊಂದು ನಿಯಮಗಳನ್ನು ಪಾಲಿಸುವುದರಿಂದ ಮನೆಗೆ ಸುಖ, ಶಾಂತಿ, ಸಮೃದ್ಧಿಯನ್ನು ಆಹ್ವಾನಿಸಬಹುದು. ವಾಸ್ತು ಶಾಸ್ತ್ರದ ಪ್ರಕಾರ ಬೆಳಗ್ಗೆ ಮನೆಯನ್ನು ಸ್ವಚ್ಛಗೊಳಿಸುವುದು ಸಕಾರಾತ್ಮಕ ಶಕ್ತಿಯನ್ನು ಆಹ್ವಾನಿಸಲು ಇರುವ ಒಂದು ಪ್ರಮುಖ ದಾರಿ.


ಬೆಂಗಳೂರು: ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಬೆಳಗ್ಗೆಗೃಹಿಣಿಯರು ಎದ್ದ ತಕ್ಷಣ ಮನೆಯನ್ನು ಸ್ವಚ್ಛಗೊಳಿಸುವುದು (vastu about sweeping) ವಾಡಿಕೆ. ಇದರಲ್ಲಿ ಕೆಲವೊಂದು ನಿಯಮಗಳನ್ನು ಪಾಲಿಸುವುದರಿಂದ ಮನೆಗೆ ಸುಖ, ಶಾಂತಿ, ಸಮೃದ್ಧಿಯನ್ನು ಆಹ್ವಾನಿಸಬಹುದು ಎನ್ನುತ್ತಾರೆ ವಾಸ್ತು (vastu tips) ತಜ್ಞರು. ವಾಸ್ತು ಶಾಸ್ತ್ರದ (vastu for home) ಪ್ರಕಾರ ಬೆಳಗ್ಗೆ ಎದ್ದು ಮನೆಯನ್ನು ಗುಡಿಸಿ, ಒರೆಸಿ ಸ್ವಚ್ಛಗೊಳಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಗೊಳ್ಳುವಂತೆ ಮಾಡಬಹುದು. ಇದು ಮನೆಯಲ್ಲಿ ಬಡತನ, ಮಾನಸಿಕ ಒತ್ತಡ ಮತ್ತು ನಕಾರಾತ್ಮಕತೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಆದರೆ ಈ ಸಂದರ್ಭದಲ್ಲಿ ಪಾಲಿಸಲೇಬೇಕಾದ ಕೆಲವೊಂದು ನಿಯಮಗಳಿವೆ.
ಪ್ರತಿಯೊಂದು ಮನೆಯಲ್ಲೂ ದೈನಂದಿನ ಕಾರ್ಯಗಳು ಮನೆ ಗುಡಿಸಿ, ಒರೆಸುವುದರೊಂದಿಗೆ ಪ್ರಾರಂಭವಾಗುತ್ತದೆ. ಇದು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಮನೆ ಗುಡಿಸಿ ಒರೆಸುವುದು ಕೇವಲ ಮನೆಯನ್ನು ಸ್ವಚ್ಛಗೊಳಿಸುವ ಮಾರ್ಗವಲ್ಲ. ಅದು ಮನೆಯ ಶಕ್ತಿಯ ಹರಿವಿನ ಮೇಲೆ ಪ್ರಭಾವ ಬೀರುವ ಅಭ್ಯಾಸ ಎನಿಸಿಕೊಂಡಿದೆ.
ಮನೆಯಲ್ಲಿ ಕಸ ಗುಡಿಸಲು ಬಳಸುವ ಪೊರಕೆಯನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಮನೆಯನ್ನು ಸ್ವಚ್ಛಗೊಳಿಸುವ ಅಭ್ಯಾಸವು ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾದ ಲಕ್ಷ್ಮೀ ದೇವತೆಯೊಂದಿಗೆ ಸಂಬಂಧವನ್ನು ಹೊಂದಿದೆ.

ವಾಸ್ತು ಶಾಸ್ತ್ರಗಳ ಪ್ರಕಾರ ಬೆಳಗ್ಗೆ ಮನೆಯನ್ನು ಗುಡಿಸುವುದು ಆಧ್ಯಾತ್ಮಿಕ ಶಕ್ತಿಯೊಂದಿಗೆ ಸಂಬಂಧವನ್ನು ಹೊಂದಿರುತ್ತದೆ. ಇದರಿಂದ ಇದು ಲಕ್ಷ್ಮೀ ದೇವಿಯ ಆಶೀರ್ವಾದವನ್ನು ಆಕರ್ಷಿಸುತ್ತದೆ ಎಂದು ನಂಬಲಾಗಿದೆ.
ನಿತ್ಯವೂ ಗುಡಿಸುವಾಗ ನಿರ್ದಿಷ್ಟ ನಿಯಮಗಳನ್ನು ಪಾಲಿಸುವುದು ಸಕಾರಾತ್ಮಕ ನುಡಿಗಟ್ಟುಗಳನ್ನು ಹೇಳುವುದು ಮನೆಯಿಂದ ಬಡತನ, ಒತ್ತಡ ಮತ್ತು ನಕಾರಾತ್ಮಕತೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.
ಮನೆಯ ಕಸ ಗುಡಿಸುವಾಗ "ರೋಗಗಳು ನಮ್ಮ ಮನೆಯನ್ನು ಬಿಟ್ಟು ಹೋಗುತ್ತವೆ", "ಕಸದೊಂದಿಗೆ ಬಡತನವೂ ದೂರವಾಗುತ್ತಿದೆ" ಮತ್ತು "ಎಲ್ಲ ತೊಂದರೆಗಳು ಮತ್ತು ಒತ್ತಡಗಳು ಮನೆಯನ್ನು ಬಿಟ್ಟು ಹೋಗುತ್ತವೆ" ಎಂಬುದನ್ನು ಹೇಳಬೇಕು. ಇದನ್ನು ಯಾರಿಗೂ ಕೇಳದಂತೆ ಮೌನವಾಗಿ ಮನಸ್ಸಿನಲ್ಲೇ ಹೇಳಬೇಕು. ಇದರಿಂದ ಕುಟುಂಬದಲ್ಲಿ ಸಕಾರಾತ್ಮಕ ಮಾನಸಿಕ ವಾತಾವರಣ ನಿರ್ಮಾಣವಾಗುತ್ತದೆ.
ಇದನ್ನೂ ಓದಿ: Vastu Tips: ಮನೆ ಮಂದಿಯ ಪ್ರಗತಿಗೆ ಅಡ್ಡಿಯಾಗಬಹುದು ಈ ಸಸ್ಯಗಳು
ಮನೆಯಲ್ಲಿ ಕೆಲಸದವರು ಇದ್ದರೂ ಬೆಳಗ್ಗೆ ಒಂದು ಹೊತ್ತಾದರೂ ಮನೆಯ ಸದಸ್ಯರು ಮನೆಯನ್ನು ಸ್ವಚ್ಛಗೊಳಿಸುವ ಆಚರಣೆಯನ್ನು ಪಾಲಿಸಲೇಬೇಕು ಎನ್ನುತ್ತದೆ ವಾಸ್ತು ಶಾಸ್ತ್ರ.
ಮನೆ ಸ್ವಚ್ಛಗೊಳಿಸುವುದು ಕೇವಲ ಕೆಲಸವಲ್ಲ. ಪ್ರಾರ್ಥನೆ. ಮನೆಯನ್ನು ಗುಡಿಸುವಾಗ ನಕಾರಾತ್ಮಕತೆಯನ್ನು ತೆಗೆದುಹಾಕಲಾಗುತ್ತಿದೆ ಮತ್ತು ಸಮೃದ್ಧಿಯನ್ನು ಆಹ್ವಾನಿಸಲಾಗುತ್ತಿದೆ ಎಂಬುದು ಮನಸ್ಸಿನಲ್ಲಿರಲಿ ಎನ್ನುತ್ತಾರೆ ವಾಸ್ತು ತಜ್ಞರು.