ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Astro Tips: ಶುಕ್ರವಾರ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡದಿರಿ; ಸಂಪತ್ತು ನಾಶವಾಗುವುದು

ಶುಕ್ರವಾರದಂದು ಕೆಲವು ತಪ್ಪುಗಳನ್ನು ಮಾಡುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹ ಕಡಿಮೆಯಾಗಬಹುದು ಅಥವಾ ದೊರೆಯದೇ ಹೋಗಬಹುದು ಎನ್ನಲಾಗಿದೆ. ಲಕ್ಷ್ಮಿ ದೇವಿಯ ಕೋಪಕ್ಕೆ ಕಾರಣವಾಗುವ ಕೆಲಸಗಳನ್ನು ಮಾಡುವುದರಿಂದ ಸಂಪತ್ತು ಕೈ ತಪ್ಪುವ ಸಾಧ್ಯತೆಯೂ ಇದೆ ಎಂದು ಪುರಾಣಗಳಲ್ಲಿ ಉಲ್ಲೇಖ ಮಾಡಲಾಗಿದೆ. ಹಾಗಾಗಿ ಈ ದಿನ ಯಾವ ಕಾರ್ಯಗಳನ್ನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯ.

ಲಕ್ಷ್ಮೀ ದೇವಿ

ಬೆಂಗಳೂರು: ಶುಕ್ರವಾರವನ್ನು (Friday) ಸನಾತನ ಧರ್ಮದಲ್ಲಿ (Sanatana Dharma) ಐಶ್ವರ್ಯದ ಅಧಿದೇವತೆಯಾದ ಲಕ್ಷ್ಮಿ ದೇವಿಗೆ(Lakshmi Devi) ಸಮರ್ಪಿತ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಉಪವಾಸ(Fasting) ಮಾಡಿ ಲಕ್ಷ್ಮಿ ದೇವಿಯನ್ನು ವಿಧಿ–ವಿಧಾನಗಳೊಂದಿಗೆ ಪೂಜಿಸುವುದರಿಂದ, ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಆರ್ಥಿಕ ಸಮೃದ್ಧಿ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ವಿಶೇಷವಾಗಿ ಶುಕ್ರವಾರದ ಪೂಜೆಯಿಂದ ಹಣಕಾಸು ಸಮಸ್ಯೆಗಳು ದೂರವಾಗುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ(Astro Tips) ಹೇಳುತ್ತದೆ.

ಇದರೊಂದಿಗೆ ಧಾರ್ಮಿಕ ನಂಬಿಕೆಯ ಪ್ರಕಾರ, ಶುಕ್ರವಾರದಂದು ಕೆಲವು ತಪ್ಪುಗಳನ್ನು ಮಾಡುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹ ಕಡಿಮೆಯಾಗಬಹುದು ಅಥವಾ ದೊರೆಯದೇ ಹೋಗಬಹುದು ಎನ್ನಲಾಗಿದೆ. ಲಕ್ಷ್ಮಿ ದೇವಿಯ ಕೋಪಕ್ಕೆ ಕಾರಣವಾಗುವ ಕೆಲಸಗಳನ್ನು ಮಾಡುವುದರಿಂದ ಸಂಪತ್ತು ಕೈ ತಪ್ಪುವ ಸಾಧ್ಯತೆಯೂ ಇದೆ ಎಂದು ಪುರಾಣಗಳಲ್ಲಿ ಉಲ್ಲೇಖ ಮಾಡಲಾಗಿದೆ. ಹಾಗಾಗಿ ಈ ದಿನ ಯಾವ ಕಾರ್ಯಗಳನ್ನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯ.

ಹಾಗಾದ್ರೆ ಬನ್ನಿ ನಾವು ಮಾಡುವ ಯಾವ ಕೆಲಸ ಲಕ್ಷ್ಮೀ ದೇವಿಯ ಕೋಪಕ್ಕೆ ಕಾರಣವಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳೋಣ

ಇಂತಹ ಆಹಾರಗಳನ್ನು ಸೇವಿಸಬೇಡಿ

ಕೆಲವರು ಸೋಮವಾರ ಶುಕ್ರವಾರ ಎಂದು ನೋಡುವುದಿಲ್ಲ ಮಾಂಸಾಹಾರ ತಿಂದು ಬಿಡುತ್ತಾರೆ, ಇದರ ಜೊತೆ ಮದ್ಯವನ್ನು ಸೇವಿಸುತ್ತಾರೆ. ಆದರೆ ಶುಕ್ರವಾರ ದಿನ ನಾನ್ ವೆಜ್ ತಿನ್ನಬಾರದು ಎಂದು ಶಾಸ್ತ್ರಗಳು ಸೂಚಿಸುತ್ತವೆ. ಈ ದಿನ ಮಾಂಸ ಹಾಗೂ ಮದ್ಯ ಸೇವಿಸುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹ ತಪ್ಪಿ, ಆರ್ಥಿಕ ಸಂಕಷ್ಟ ಎದುರಾಗಬಹುದು ಎಂದು ನಂಬಲಾಗಿದೆ.

Astro Tips: ನಿಮ್ಮ ಮೇಲೆ, ಮಕ್ಕಳ ಮೇಲೆ ಕೆಟ್ಟ ದೃಷ್ಟಿ ತಾಗಿದೆಯೇ; ಹಾಗಾದ್ರೆ ಈ ಪರಿಹಾರ ಮಾಡಿ

ಜಗಳ ಮಾಡಬೇಡಿ

ಅದೇ ರೀತಿ, ಈ ದಿನ ನಿಂದನೀಯ ಪದಗಳು, ಕೋಪ ಮತ್ತು ಜಗಳಗಳಿಂದ ದೂರವಿರಬೇಕು. ಯಾರನ್ನಾದರೂ ಅವಮಾನಿಸಿದರೆ ಅಥವಾ ಕಟುವಾಗಿ ಮಾತನಾಡಿದರೆ, ಲಕ್ಷ್ಮಿ ದೇವಿ ಮುನಿಸಿಕೊಳ್ಳುತ್ತಾಳೆ ಎಂಬ ನಂಬಿಕೆ ಇದೆ.

ಈ ವಸ್ತುಗಳನ್ನು ದಾನ ಮಾಡಬೇಡಿ

ಶುಕ್ರವಾರದಂದು ದಾನ ಮಾಡುವುದು ಶುಭಕರವಾದರೂ, ಕೆಲವು ವಸ್ತುಗಳನ್ನು ದಾನ ಮಾಡಬಾರದು. ವಿಶೇಷವಾಗಿ ಬೆಳ್ಳಿ ಮತ್ತು ಸಕ್ಕರೆಯನ್ನು ದಾನ ಮಾಡುವುದು ಅಶುಭವೆಂದು ಪರಿಗಣಿಸಲಾಗಿದೆ. ಇವುಗಳನ್ನು ದಾನ ಮಾಡುವುದರಿಂದ ಶುಕ್ರ ಗ್ರಹ ದುರ್ಬಲವಾಗಿ, ಭೌತಿಕ ಸುಖಗಳಿಂದ ವ್ಯಕ್ತಿ ವಂಚಿತನಾಗುತ್ತಾನೆ ಎನ್ನಲಾಗಿದೆ.

ಸಾಲ ನೀಡಬೇಡಿ

ಈ ದಿನ ಹಣದ ವ್ಯವಹಾರ ಮಾಡುವುದನ್ನೂ ತಪ್ಪಿಸಬೇಕು. ಸಾಲ ನೀಡುವುದು ಅಥವಾ ಸಾಲ ಪಡೆಯುವುದು ಶುಕ್ರವಾರ ಅಶುಭವೆಂದು ಹೇಳಲಾಗಿದೆ. ಜೊತೆಗೆ ಪೂಜೆ ಮತ್ತು ಅಡುಗೆಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸುವುದೂ ಶುಕ್ರವಾರ ತಕ್ಕುದಲ್ಲ ಎಂದು ಶಾಸ್ತ್ರಗಳು ಸೂಚಿಸುತ್ತವೆ.

ಇನ್ನೂ, ಕೊಳಕು ಅಥವಾ ಹರಿದ ಬಟ್ಟೆಗಳನ್ನು ಧರಿಸಿ ಪೂಜೆ ಮಾಡುವುದನ್ನು ತಪ್ಪಿಸಬೇಕು. ಇಂತಹ ಬಟ್ಟೆಗಳನ್ನು ಧರಿಸುವುದರಿಂದ ರಾಹು ಪ್ರಭಾವ ಹೆಚ್ಚಾಗಿ ಜೀವನದಲ್ಲಿ ಅಡಚಣೆಗಳು ಎದುರಾಗುತ್ತವೆ ಎಂಬ ನಂಬಿಕೆ ಇದೆ. ಈ ನಿಯಮಗಳನ್ನು ಭಕ್ತಿಭಾವದಿಂದ ಅನುಸರಿಸಿದರೆ, ಲಕ್ಷ್ಮಿ ದೇವಿಯ ಕೃಪೆಯಿಂದ ಜೀವನದಲ್ಲಿ ಐಶ್ವರ್ಯ, ಸುಖ ಮತ್ತು ಸಮೃದ್ಧಿ ನೆಲೆಸುತ್ತದೆ ಎಂಬ ವಿಶ್ವಾಸ ಇದೆ.