Astro Tips: ಈ ಮಂತ್ರಗಳನ್ನು ಪಠಿಸಿದರೆ ವಿಷ್ಣುವಿನ ಅನುಗ್ರಹ ಶೀಘ್ರ, ಇಷ್ಟಾರ್ಥ ಸಿದ್ಧಿ!
ಗುರುವಾರ ಉಪವಾಸವಿದ್ದು ವಿಷ್ಣು ಮಂತ್ರಗಳು, ಸ್ತೋತ್ರಗಳು ಅಥವಾ ನಾಮಸ್ಮರಣೆ ಮಾಡಿದರೆ, ಜೀವನದಲ್ಲಿ ಎದುರಾಗಿರುವ ಅಡೆತಡೆಗಳು ನಿವಾರಣೆಯಾಗುತ್ತವೆ ಮತ್ತು ಶಾಂತಿ–ಸಂತೋಷ ವೃದ್ಧಿಯಾಗುತ್ತದೆ ಎನ್ನಲಾಗುತ್ತದೆ. ಮನಃಪೂರ್ವಕವಾಗಿ ಭಗವಾನ್ ವಿಷ್ಣುವನ್ನು ಆರಾಧಿಸಿ, ಭಕ್ತಿಭಾವದಿಂದ ಮಂತ್ರ ಜಪ ಅಥವಾ ಸ್ತೋತ್ರ ಪಠಿಸಿದರೆ ದೇವರು ಶೀಘ್ರ ಪ್ರಸನ್ನನಾಗಿ, ಭಕ್ತರ ಮನೋಕಾಮನೆಗಳನ್ನು ಪೂರೈಸುತ್ತಾನೆ.
ವಿಷ್ಣು -
ಬೆಂಗಳೂರು: ಸನಾತನ ಧರ್ಮದ (Sanathana Dharm) ಪರಂಪರೆಯಂತೆ, ವಾರದ ಏಳು ದಿನಗಳನ್ನೂ ವಿಭಿನ್ನ ದೇವತೆಗಳಿಗೆ ಸಮರ್ಪಿಸಲಾಗಿದೆ. ಅವುಗಳಲ್ಲಿ ಗುರುವಾರವು (Thursday) ವಿಶೇಷವಾಗಿ ಶ್ರೀಹರಿಯಾದ ವಿಷ್ಣುವಿಗೆ (Vishnu) ಅರ್ಪಿತವಾದ ದಿನವಾಗಿದ್ದು, ಈ ದಿನ ಭಕ್ತಿಯಿಂದ ಪೂಜೆ ಮತ್ತು ಉಪವಾಸ (Fasting) ಆಚರಿಸುವುದು ಅತ್ಯಂತ ಪುಣ್ಯಕರವೆಂದು ನಂಬಲಾಗಿದೆ. ಗುರುವಾರ ವಿಷ್ಣುವನ್ನು ಆರಾಧಿಸುವುದರಿಂದ ಆತನ ಕೃಪೆ ದೊರೆತು, ಜೀವನದಲ್ಲಿನ ಸಂಕಷ್ಟಗಳು ದೂರವಾಗುತ್ತವೆ ಎಂಬ ಧಾರ್ಮಿಕ ನಂಬಿಕೆ ಇದೆ.
ಜಾತಕದಲ್ಲಿ ಗುರು ಗ್ರಹ ದುರ್ಬಲವಾಗಿರುವವರಿಗೆ ಗುರುವಾರದ ವ್ರತ, ಪೂಜೆ ಹಾಗೂ ದಾನಗಳನ್ನು ಪಾಲಿಸುವುದರಿಂದ ಗುರುವಿನ ಬಲ ವೃದ್ಧಿಯಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ (Astrology) ಹೇಳುತ್ತದೆ.
ಈ ದಿನ ಉಪವಾಸವಿದ್ದು ವಿಷ್ಣು ಮಂತ್ರಗಳು, ಸ್ತೋತ್ರಗಳು ಅಥವಾ ನಾಮಸ್ಮರಣೆ ಮಾಡಿದರೆ, ಜೀವನದ ಅಡೆತಡೆಗಳು ನಿವಾರಣೆಯಾಗುತ್ತವೆ ಮತ್ತು ಶಾಂತಿ–ಸಂತೋಷ ವೃದ್ಧಿಯಾಗುತ್ತದೆ ಎನ್ನಲಾಗುತ್ತದೆ.
ಮನಃಪೂರ್ವಕವಾಗಿ ಭಗವಾನ್ ವಿಷ್ಣುವನ್ನು ಆರಾಧಿಸಿ, ಭಕ್ತಿಭಾವದಿಂದ ಮಂತ್ರ ಜಪ ಅಥವಾ ಸ್ತೋತ್ರ ಪಠಿಸಿದರೆ ದೇವರು ಶೀಘ್ರ ಪ್ರಸನ್ನನಾಗಿ, ಭಕ್ತರ ಮನೋಕಾಮನೆಗಳನ್ನು ಪೂರೈಸುತ್ತಾನೆ ಎಂಬ ನಂಬಿಕೆ ವ್ಯಾಪಕವಾಗಿದೆ.
Astro Tips: ಬದುಕಿನಲ್ಲಿ ಯಶಸ್ಸು ಪಡೆಯಲು ಶನಿವಾರ ಸಂಜೆ ಈ ಮಂತ್ರ ಪಠಿಸಿ
ಹಾಗಾದ್ರೆ ಬನ್ನಿ ಜ್ಯೋತಿಷ್ಯ ಶಾಸ್ತ್ರದ ಸಲಹೆಯಂತೆ(Astro Tips) ಇಂದು ಯಾವ ವಿಷ್ಣು ಮಂತ್ರಗಳನ್ನು ಪಠಿಸಬೇಕು..? ಆತನ ಅನುಗ್ರಹ ಪ್ರಾಪ್ತಿ ಆಗಲು ಹೇಗೆ ಆರಾಧಿಸಬೇಕು..? ಎಂಬಿತ್ಯಾದಿ ಮಾಹಿತಿಯನ್ನು ಇಂದು ತಿಳಿದುಕೊಳ್ಳೋಣ..
ವಿಷ್ಣು ಮಂತ್ರಗಳು:
1. ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
ವಿಶ್ವಾಧಾರಂ ಗಗನಸಧೃಶಂ ಮೇಘವರ್ಣ ಶುಭಾಂಗಂ|
ಲಕ್ಷ್ಮೀಕಾಂತಂ ಕಮಲನಯನಂ ಯೋಗಿಭಿರ್ಧ್ಯಾನಗಮ್ಯಂ
ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಂ||
2. ಓಂ ನಮೋ ಭಗವತೇ ವಾಸುದೇವಾಯ
3. ಓಂ ನಮೋ ನಾರಾಯಣಾಯ ನಮಃ.
4. ಓಂ ವಿಷ್ಣುವೇ ನಮಃ.
5. ಓಂ ಹೂಂ ವಿಷ್ಣವೇ ನಮಃ.
6. ಓಂ ಹ್ರೀಂ ಕಾರ್ತವೀರ್ಯಾರ್ಜುನೋ ನಾಮ ರಾಜಾ ಬಾಹು ಸಹಸ್ತ್ರವಾನ|
ಯಸ್ಯ ಸ್ಮರೇಣ ಮಾತ್ರೇಣ ಹೃತಂ ನಷ್ಟಂ ಚ ಲಭ್ಯತೇ||
ಗುರುವಾರ ಪಾಲಿಸಬೇಕಾದ ಪ್ರಮುಖ ನಿಯಮಗಳು:
ಗುರುವಾರದ ವ್ರತವನ್ನು ಸಾಮಾನ್ಯವಾಗಿ ಪುಷ್ಯ ಮಾಸದ ಶುಕ್ಲ ಪಕ್ಷದ ಗುರುವಾರದಿಂದ ಆರಂಭಿಸುವುದು ಶ್ರೇಷ್ಠ.
ಈ ದಿನ ಉಪವಾಸವಿದ್ದು ಬಾಳೆಗಿಡಕ್ಕೆ ನೀರು ಅರ್ಪಿಸುವುದು ಶುಭಕರವೆಂದು ಪರಿಗಣಿಸಲಾಗುತ್ತದೆ.
ಹಳದಿ ಬಣ್ಣದ ವಸ್ತುಗಳನ್ನು ದಾನ ಮಾಡುವುದರಿಂದ ಪುಣ್ಯ ಫಲ ದೊರೆಯುತ್ತದೆ.
ಗುರುವಾರ ಮರೆತು ಕಿಚಡಿ ಅಥವಾ ಅನ್ನವನ್ನು ಸೇವಿಸದೇ ಇರುವ ಸಂಪ್ರದಾಯ ಇದೆ.
ಉಪವಾಸದ ದಿನ ಹಳದಿ ಬಣ್ಣದ ಆಹಾರ ಸೇವಿಸುವುದು ಗುರು ಕೃಪೆಗೆ ಕಾರಣವಾಗುತ್ತದೆ ಎಂದು ನಂಬಲಾಗುತ್ತದೆ.
ಒಟ್ಟಾರೆ, ಗುರುವಾರದಂದು ಶ್ರದ್ಧೆ, ನಿಯಮ ಮತ್ತು ಭಕ್ತಿಯೊಂದಿಗೆ ವಿಷ್ಣು ಪೂಜೆಯನ್ನು ಮಾಡಿದರೆ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಸಂಭವಿಸುತ್ತವೆ ಎಂಬ ನಂಬಿಕೆ ಸನಾತನ ಧರ್ಮದಲ್ಲಿ ಗಾಢವಾಗಿ ನೆಲೆಸಿದೆ.