ಬೆಂಗಳೂರು: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.
ಮೇಷ ರಾಶಿ: ಈ ರಾಶಿಗೆ ಇಂದು ಉತ್ತಮವಾದ ದಿನವಾಗಿದ್ದು ಉದ್ಯೋಗದಲ್ಲಿ ಹೊಸ ಅವಕಾಶಗಳು ದೊರೆಯಬಹುದು. ಆದರೆ ಹಣಕಾಸಿನ ವಿಚಾರದಲ್ಲಿ ನೀವು ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.
ವೃಷಭ ರಾಶಿ: ಈ ರಾಶಿಗೆ ಇಂದು ಹಬ್ಬದ ಖುಷಿ,ಸಂಭ್ರಮ ಮನೆ ಮಾಡುತ್ತದೆ. ಆದರೆ ಖರ್ಚು ವೆಚ್ಚಗಳು ಇಂದು ಜಾಸ್ತಿಯಾಗಬಹುದು. ವ್ಯವಹಾರದಲ್ಲಿ ಲಾಭ ದೊರೆಯುವ ಸಾಧ್ಯತೆ.
ಮಿಥುನ ರಾಶಿ: ನಿಮ್ಮ ಮಾತುಕತೆಯಿಂದ ಪ್ರಮುಖ ಕೆಲಸವೊಂದು ಇಂದು ಯಶಸ್ವಿಯಾಗಬಹುದು. ಸ್ನೇಹಿತರ ಸಹಕಾರ ಇಂದು ದೊರೆಯುತ್ತದೆ.
ಕಟಕ ರಾಶಿ: ಈ ರಾಶಿಗೆ ಇಂದು ಕೆಲಸ ಕಾರ್ಯದಲ್ಲಿ ಜವಾಬ್ದಾರಿ ಹೆಚ್ಚಾಗಬಹುದು. ಅದೇ ರೀತಿ ನಿಮ್ಮ ಪರಿಶ್ರಮಕ್ಕೆ ತಕ್ಕ ಯಶಸ್ಸು ಸಿಗುವ ಸಾಧ್ಯತೆ ಕೂಡ ಇದೆ.
ಸಿಂಹ ರಾಶಿ: ವೃತ್ತಿಜೀವನದಲ್ಲಿ ಪ್ರಗತಿಯ ಅವಕಾಶಗಳು ಎದುರಾಗಬಹುದು. ಇಂದು ನೀವೇ ಎಲ್ಲದರಲ್ಲೂ ಮೇಲುಗೈ ಅನ್ನು ಸಾಧಿಸುತ್ತೀರಿ.
Vastu tips: ಶೌಚಾಲಯ ಮನೆಯ ಯಾವ ದಿಕ್ಕಿನಲ್ಲಿ ಇರಬೇಕು? ವಾಸ್ತು ನಿಯಮ ತಪ್ಪಿದ್ರೆ ಸಮಸ್ಯೆಗಳು ಕಾಡೋದು ಖಂಡಿತಾ!
ಕನ್ಯಾ ರಾಶಿ: ಈ ರಾಶಿಗೂ ಇಂದು ಅಂದ ಕೊಂಡ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ. ಹಣಕಾಸಿನಲ್ಲಿ ಅಭಿವೃದ್ಧಿ ಹಾಗೂ ನಿಮ್ಮ ಪರಿಸ್ಥಿತಿ ಸುಧಾರಿಸಬಹುದು.
ತುಲಾ ರಾಶಿ: ಇಂದು ಪ್ರೀತಿಯ ವಿಚಾರದಲ್ಲಿ ಶುಭ ಸುದ್ದಿಯನ್ನು ನೀವು ಕೇಳುತ್ತೀರಿ. ಮದುವೆ ಮಾತುಕತೆಗೆ ಉತ್ತಮ ಸಮಯ ಕೂಡಿ ಬರಲಿದೆ.
ವೃಶ್ಚಿಕ ರಾಶಿ: ಈ ರಾಶಿಗೆ ಉತ್ತಮವಾದ ದಿನವಾಗಿದ್ದು ಪ್ರಮುಖ ಕೆಲಸವೊಂದು ಯಶಸ್ವಿಯಾಗುವ ಸಾಧ್ಯತೆ ಇದೆ. ಆದರೆ ಹೂಡಿಕೆ ಅಥವಾ ಹಣಕಾಸಿನ ನಿರ್ಧಾರಗಳಲ್ಲಿ ಆತುರ ಪಡಬೇಡಿ.
ಧನು ರಾಶಿ: ಪ್ರಯಾಣ ಮತ್ತು ಹೊಸ ಸಂಪರ್ಕಗಳಿಂದ ಲಾಭವಾಗಬಹುದು. ಹೂಡಿಕೆ ಮಾಡಲು ಇಂದು ಉತ್ತಮ ಸಮಯ ನಿಮ್ಮದಾಗಿದೆ.
ಮಕರ ರಾಶಿ: ನಿಮ್ಮ ಕೆಲಸದಲ್ಲಿ ಇಂದು ಒತ್ತಡ ಜಾಸ್ತಿಯಾಗಬಹುದು. ಆದರೂ ನಿಷ್ಠೆಯಿಂದ ಎಲ್ಲರ ಮನವೋಲಿಸುತ್ತಿರಿ.
ಕುಂಭ ರಾಶಿ: ಹೊಸ ಆಲೋಚನೆಗಳು ಯಶಸ್ಸಿಗೆ ದಾರಿ ಕೊಡಬಹುದು. ಸ್ನೇಹಿತರ ನೆರವು ದೊರೆಯಲಿದೆ.ಆದರೆ ಖರ್ಚಿನ ಮೇಲೆ ನಿಯಂತ್ರಣ ಇರಲಿ
ಮೀನ ರಾಶಿ: ಮನಸ್ಸಿನಲ್ಲಿದ್ದ ಕೆಲವು ಗೊಂದಲಗಳು ನಿವಾರಣೆಯಾಗುತ್ತದೆ. ಹಣಕಾಸಿನ ವಿಚಾರದಲ್ಲೂ ಲಾಭಗಳಿಸುತ್ತೀರಿ.