ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ಆಷಾಢ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷೆಯ ಈ ದಿನ ನವಮಿ ತಿಥಿ, ಭರಣಿ ನಕ್ಷತ್ರದಲಿದ್ದು, ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ಇಂದು ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಇಂದು ಭರಣಿ ನಕ್ಷತ್ರ ಇದ್ದು ಮೇಷ ರಾಶಿಯವರಿಗೆ ಚಂದ್ರ ಇರುವುದರಿಂದ ಅತ್ಯುತ್ತಮ ದಿನವಾಗಿದೆ. ಕೆಲಸದಿಂದ ಹಿಡಿದು ಹಿಂದೆ ಇದ್ದಂತಹ ಮಾನಸಿಕ ಕಿರಿಕಿರಿಗೆ ನೆಮ್ಮದಿ ಸಿಗುವ ಸಮಯ. ಕೆಲಸವನ್ನು ಏಕಾಗ್ರತೆಯಿಂದ ಮಾಡಿದರೆ ಉತ್ತಮ.
ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಆದರೂ ಕೂಡ ಕೆಲವು ಮಿತ್ರರಿಂದ ತೊಂದರೆ ಉಂಟಾಗಲಿದ್ದು ಉದ್ಯೋಗ ಬಿಸಿನೆಸ್ ಕಾಂಟ್ರ್ಯಾಕ್ಟ್‌ಗಳಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇದ್ದು, ಸ್ನೇಹಿತರಿಂದ ದೂರ ಇರಬೇಕಾದ ಸಂದರ್ಭ ಬರಬಹುದು. ಆದರೆ ಎರಡು ದಿನಗಳಲ್ಲಿ ಎಲ್ಲವೂ ಪರಿಹಾರ ಸಿಗಲಿದ್ದು ಯಾರಿದಂಲೂ ಬೇರೆಯಾಗುವ ನಿರ್ಧಾರ ಮಾಡಬೇಡಿ.
ಮಿಥುನ ರಾಶಿ: ಮಿಥುನ ರಾಶಿಯವರಿಗೆ ಅತ್ಯುತ್ತಮವಾದ ದಿನ ಇಂದು ಆಗಿದೆ. ನಿಮ್ಮೆಲ್ಲ ಅಂದು ಕೊಂಡ ಕೆಲಸಗಳಿಗೆ ಇಷ್ಟಾರ್ಥ ಸಿದ್ಧಿಯಾಗಲಿದೆ. ಅದೇ ರೀತಿ ಮಿತ್ರರಿಂದ ಧನಾಗಮನ ಸಿದ್ಧಿಯಾಗಲಿದ್ದು ಮಾನಸಿಕ ನೆಮ್ಮದಿಯೂ ಸಿಗಲಿದೆ. ಯಾರು ಟೀಮ್ ವರ್ಕ್ , ಗುಂಪುಗಳಲ್ಲಿ ಕೆಲಸ ಮಾಡುತ್ತೀರಾ ಅವರಿಗೆ ಕಾರ್ಯಕ್ಷೇತ್ರದಲ್ಲಿ ತುಂಬಾ ಯಶಸ್ಸು ಕಾಣುವ ದಿನವಾಗಲಿದೆ.
ಕಟಕ ರಾಶಿ: ಕಟಕರಾಶಿ ಅವರಿಗೆ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದ್ದು ಉತ್ತಮ ಎಂಬ ಬಿರುದು ಕೂಡ ಸಿಗಲಿದೆ. ನೀವು ತೆಗೆದುಕೊಂಡ ನಿರ್ಧಾರಗಳು ಸರಿ ಎಂದು ಪ್ರೋತ್ಸಾಹ ನೀಡುವವರು ನಿಮಗೆ ಸಿಗಲಿದ್ದಾರೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಭಾಗ್ಯ ಸ್ಥಾನದಲ್ಲಿ ಚಂದ್ರ ಇರಲಿದ್ದು, ನೀವು ಮಾಡುವ ಕೆಲಸದ ಬಗ್ಗೆ ಜವಾಬ್ದಾರಿ ಇರಬೇಕಾಗುತ್ತದೆ. ಇಂದು ನಿಮ್ಮ ಕೆಲಸಕ್ಕೆ ಟೀಕೆ ಮಾಡುವವರು ಬಹಳಷ್ಟು ಮಂದಿ ಇರಲಿದ್ದು ಈ ಬಗ್ಗೆ ಹುಷಾರಾಗಿರಿ. ಯಾವುದೇ ಮುಖ್ಯ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಜಾಗೃತರಾಗಿರಿ. ವಿನಯದಿಂದ ಕೆಲಸ ಮಾಡಿದರೆ ಎಲ್ಲವು ಸುಗಮ.
ಕನ್ಯಾ ರಾಶಿ: ಈ ದಿನ ಕನ್ಯಾ ರಾಶಿ ಅವರಿಗೆ ಮನಸ್ಸಿಗೆ ನೆಮ್ಮದಿ ಕಡಿಮೆ ಇರಲಿದೆ. ಅನೇಕ ವಿಚಾರಗಳಲ್ಲಿ ನೆಮ್ಮದಿ ಇಲ್ಲದೆ ತೊಂದರೆಗಳು ಮತ್ತು ಯೋಚನೆಗಳು ಜಾಸ್ತಿ ಆಗುತ್ತವೆ. ಆದರೆ ಈ ಬಗ್ಗೆ ಧೃತಿ ಕೆಡದೆ ಭಗವಂತನ ಧಾನ್ಯ ಮಾಡಿದರೆ ಪರಿಹಾರ ಸಿಗಲಿದೆ.
ತುಲಾ ರಾಶಿ: ತುಲಾ ರಾಶಿ ಅವರಿಗೆ ಇಂದು ಉತ್ತಮ ದಿನವಾಗಲಿದೆ. ಬೇರೆಯವರಿಂದ ನಿಮಗೆ ಸಹಕಾರ ಪ್ರಾಪ್ತಿಯಾಗಲಿದೆ. ಪಾರ್ಟ್ನರ್‌ಶಿಪ್ ವ್ಯವಹಾರಗಳಲ್ಲಿ ಲಾಭ ಉಂಟಾಗುವ ಸಾಧ್ಯತೆ ಇರಲಿದೆ. ದಾಂಪತ್ಯ ಜೀವನದಲ್ಲೂ ನೆಮ್ಮದಿ ಸಿಗಲಿದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಇಂದು ವಿರೋಧಿಗಳು ಹೆಚ್ಚಿದ್ದರೂ ಅದು ಯಾವುದು ನಡೆಯುವುದಿಲ್ಲ. ನೀವು ಹೇಳುವ ನಿರ್ಧಾರಗಳೇ ನಡೆಯುತ್ತದೆ. ಆದರೆ ಅತಿಯಾದ ಅತ್ಮವಿಶ್ವಾಸ ಬೇಡ, ಎಚ್ಚರಿಕೆಯಿಂದಿರುವುದು ಅವಶ್ಯಕವಾಗಿದೆ.
ಇದನ್ನು ಓದಿ:Daily Horoscope: ದಿನ ಭವಿಷ್ಯ- ಬುಧನ ವಕ್ರಸ್ಥಾನ ಯಾವೆಲ್ಲ ರಾಶಿಗೆ ಪರಿಣಾಮ ಬೀರಲಿದೆ?
ಧನಸ್ಸು: ಈ ರಾಶಿ ಅವರಿಗೆ ಉತ್ತಮ ದಿನ. ಮಾನಸಿಕ ನೆಮ್ಮದಿ ಇರಲಿದೆ. ಆದರೆ ಮಕ್ಕಳ ಬಗ್ಗೆ ಪೋಷಕರು ಇಂದು ಜವಾಬ್ದಾರಿ ವಹಿಸುವುದು ಮುಖ್ಯವಾಗಲಿದೆ. ಮಕ್ಕಳಿಗೆ ಕಿರಿ ಕಿರಿ ಆತಂಕ ಇತ್ಯಾದಿ ಹೆಚ್ಚಾಗಿ ಇರಲಿದ್ದು, ಗಮನ ವಹಿಸುವುದು ಅಗತ್ಯ. ದೊಡ್ಡವರಿಗೂ ಮನಸ್ಸಿನ ನೆಮ್ಮದಿ ಹಾಗೂ ಭಾವುಕತೆಯ ವಿಚಾರವಾಗಿ ಸ್ವಲ್ಪ ಕ್ಲೇಶ ಉಂಟಾಗುವ ಸಾಧ್ಯತೆ ಇದೆ.
ಮಕರ ರಾಶಿ: ಮಕರ ರಾಶಿಯವರಿಗೆ ಇಂದು ಆಸ್ತಿ ಪಾಸ್ತಿ ವಿಚಾರ ತಾಯಿಯ ಆರೋಗ್ಯ ವಿಚಾರ ಇವುಗಳೇ ಮುಖ್ಯವಾಗುತ್ತದೆ. ಯಾರು ಹೃದಯ ಸಂಬಂಧಿ ತೊಂದರೆಯಿಂದ ಬಳಲುತ್ತಿದ್ದೀರಿ ಅಂತವರು ಜಾಗೃತಿ ವಹಿಸಿವುದು ಉತ್ತಮ.
ಕುಂಭ ರಾಶಿ: ಕುಂಭರಾಶಿ ಅವರಿಗೆ ಈ ದಿನ ಉತ್ತಮ ದಿನವಾಗಿದೆ. ಮಲ್ಟಿ ಮೀಡಿಯಾ ಉದ್ಯೋಗಿಗಳು, ಭಾಷಣಕಾರರು, ಮಾತುಗಾರರಿಗೆ ಉತ್ತಮ ದಿನವಾಗಲಿದೆ. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ.
ಮೀನ ರಾಶಿ: ಮೀನ ರಾಶಿ ಅವರಿಗೆ ಸಂಸಾರದ ಜವಾಬ್ದಾರಿ ಹೆಚ್ಚು ಇರಲಿದೆ. ಸಂಸಾರದಲ್ಲಿ ಸಮತೋಲನವನ್ನು ನೀವೇ ಕಾಪಾಡಬೇಕಾಗುತ್ತದೆ. ಹಣಕಾಸಿದ ಬದ್ಧತೆ ಬಗ್ಗೆಯೂ ನೀವು ಯೋಚಿಸಬೇಕಾಗುತ್ತದೆ. ಭಗವಂತನನ್ನು ಹಾಗೂ ಇಷ್ಟ ದೇವರನ್ನು ಧ್ಯಾನಿಸಿದರೆ ಉತ್ತಮ.